ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಒಂದು ಭಾಗ ಕುಸಿದಿರುವ ಘಟನೆ ಬಿಹಾರದ ಪಾಟ್ನಾ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಘಟನೆ ಭಾನುವಾರ ರಾತ್ರಿ ನಡೆದಿದ್ದು ಯಾರಿಗೂ ಗಾಯಗಳಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಿಹಾರದ ಹಲವಾರು ಜಿಲ್ಲೆಗಳಲ್ಲಿ ಹತ್ತಕ್ಕೂ ಹೆಚ್ಚು ಸೇತುವೆಗಳು ಕುಸಿದಿದ್ದು ದೇಶದ ಗಮನ ಸೆಳೆದಿತ್ತು.ಬಿಹಾರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
‘ಭಕ್ತಿಯಾರಪುರ-ತಾಜಪುರ ಗಂಗಾ ಮಹಾಸೇತು’ ನಿರ್ಮಾಣವನ್ನು ಬಿಹಾರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಲಿಮಿಟೆಡ್ (BSRDCL) ಮೇಲ್ವಿಚಾರಣೆ ಮಾಡಿತ್ತು. ಭಕ್ತಿಯಾರ್‌ಪುರ-ತಾಜ್‌ಪುರ ಗಂಗಾ ಮಹಾಸೇತುವಿನ ಗರ್ಡರ್‌ಗಳ ಬೇರಿಂಗ್‌ಗಳನ್ನು ಬದಲಾಯಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಂಬಗಳ ಮೇಲೆ ಗರ್ಡರ್‌ಗಳನ್ನು ಹಾಕುವಾಗ, ಅವುಗಳಲ್ಲಿ ಒಂದು ಕುಸಿದಿದೆ ಎಂದು ವರದಿಯಾಗಿದೆ.
ಇದನ್ನೂಓದಿ: ರಾಜ್ಯಪಾಲರು ಸರ್ಕಾರದ ಪ್ರತಿದಿನದ ಆಡಳಿತದ ಬಗ್ಗೆ ಮಾಹಿತಿ ಕೇಳಿದರೆ ಹೇಗೆ? ಗೃಹ ಸಚಿವ ಪರಮೇಶ್ವರ್
“ಬೇರಿಂಗ್‌ಗಳನ್ನು ಬದಲಾಯಿಸುವುದು ದಿನನಿತ್ಯದ ಪ್ರಕ್ರಿಯೆಯಾಗಿದೆ. ಯಾವುದೇ ಸಾವು ನೋವು ಸಂಭವಿಸಿದ ವರದಿಗಳಿಲ್ಲ. ನಡೆಯುತ್ತಿರುವ ಕೆಲಸವನ್ನು ಪರಿಶೀಲಿಸಲು ನಾವು ಸ್ಥಳಕ್ಕೆ ಹೋಗುತ್ತಿದ್ದೇವೆ” ಎಂದು ಬಿಎಸ್‌ಆರ್‌ಡಿಸಿಎಲ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಪ್ರಬಿನ್ ಚಂದ್ರ ಗುಪ್ತಾ ಪಿಟಿಐಗೆ ತಿಳಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಯೋಜನೆಯ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜೂನ್ 2011 ರಲ್ಲಿ 5.57 ಕಿಲೋಮೀಟರ್ ಉದ್ದದ ಭಕ್ತಿಯಾರ್ಪುರ್-ತಾಜಪುರ ಗಂಗಾ ಮಹಾಸೇತು ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು. ಯೋಜನೆಯ ಒಟ್ಟು ವೆಚ್ಚ 1,602.74 ಕೋಟಿ ರೂ. ಆಗಿದೆ.
“ನಿರ್ಮಾಣ ಹಂತದಲ್ಲಿರುವ ಸೇತುವೆಯ ಗರ್ಡರ್ ದಿನನಿತ್ಯದ ಕೆಲಸದ ಸಮಯದಲ್ಲಿ ಭಕ್ತಿಯಾರ್‌ಪುರ ಭಾಗದಲ್ಲಿ ಬಿದ್ದಿದೆ” ಎಂದು ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ. ಯೋಜನೆಯು ಪೂರ್ಣಗೊಂಡ ನಂತರ, ಸೇತುವೆಯು ಸಮಸ್ತಿಪುರದ ರಾಷ್ಟ್ರೀಯ ಹೆದ್ದಾರಿ 28 ಮತ್ತು ಪಾಟ್ನಾದ NH 31 ಅನ್ನು ಸಂಪರ್ಕಿಸುತ್ತದೆ.
ಈ ಯೋಜನೆಯು ಪಾಟ್ನಾದ ಮಹಾತ್ಮ ಗಾಂಧಿ ಸೇತು ಮತ್ತು ಮೊಕಾಮಾದಲ್ಲಿನ ರಾಜೇಂದ್ರ ಸೇತುಗಳಲ್ಲಿ ಟ್ರಾಫಿಕ್ ಹೊರೆ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಪೂರ್ಣಗೊಂಡಾಗ, ಇದು ಉತ್ತರ ಮತ್ತು ದಕ್ಷಿಣ ಬಿಹಾರದ ನಡುವಿನ ಮತ್ತೊಂದು ಪ್ರಮುಖ ರಸ್ತೆ ಸಂಪರ್ಕವಾಗಿಯೂ ಕಾರ್ಯನಿರ್ವಹಿಸುತ್ತದೆ.
ವಿಡಿಯೊ ನೋಡಿ: ನಂಗ ಜೇನು ಕುರುಬ ಮಕ್ಕಾಳು.. ದೂರಿ ದೂರಿ, ನಂಗ ಕಾಡಿನ ಅರಸಾರು.. ದೂರಿ ದೂರಿ – ಜೇನು ಕುರುಬರ ಹಾಡು ಕೇಳಿ


