ಬಿಜೆಪಿ ಟಿಕೆಟ್ ನಿರಾಕರಿಸಿದ ನಂತರ ತೀವ್ರವಾಗಿ ಮುಸ್ಲಿಂ ದ್ವೇಷದ ಮಾತುಗಳನ್ನು ಆಡುತ್ತಾ ಪಕ್ಷದಲ್ಲಿ ಮುನ್ನಲೆಗೆ ಬರಲು ಪ್ರಯತ್ನಿಸುತ್ತಿರುವ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮತ್ತೊಮ್ಮೆ ಮುಸ್ಲಿಂ ವಿರೋಧಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದು, “ಹಿಂದೂಗಳು ಕಲ್ಲುಗಳನ್ನು ಎತ್ತಿಕೊಂಡರೆ ಯಾವುದೇ ಮುಸಲ್ಮಾನರು ಉಳಿಯುವುದಿಲ್ಲ, ಆದ್ದರಿಂದ ಹದ್ದಬಸ್ತಿನಲ್ಲಿ ಇರಿ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಈ ವರ್ಷ ಮೈಸೂರು ಸಮೀಪದ ಚಾಮುಂಡಿ ಬೆಟ್ಟದಲ್ಲಿ ನಡೆಯಲಿರುವ ಸಾಂಪ್ರದಾಯಿಕ ದಸರಾಕ್ಕೆ ಪರ್ಯಾಯವಾದ ಮಹಿಷ ದಸರಾ ಆಚರಣೆ ಕುರಿತು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ.
ಇದನ್ನೂಓದಿ: ಉತ್ತರ ಪ್ರದೇಶ: ಶಿಕ್ಷಕನ ಹೊಡೆತಕ್ಕೆ ದೃಷ್ಟಿ ಕಳೆದುಕೊಂಡ 6ನೇ ತರಗತಿ ವಿದ್ಯಾರ್ಥಿ
ಪುರಾಣಗಳಲ್ಲಿ ರಾಕ್ಷಸನಾಗಿ ಚಿತ್ರಿಸಲಾಗಿರುವ ಮಹಿಷ ಮೇಲ್ಜಾತಿ ಆರ್ಯರಿಂದ ಕೊಲ್ಲಲ್ಪಟ್ಟ ಬೌದ್ಧ ದೊರೆ ಎಂದು ಪ್ರತಿಪಾದಿಸಿ ಜನಪರ ಚಳುವಳಿಗಳು 2015 ರಿಂದ ಮಹಿಷ ದಸರ ಆಚರಿಸಿಕೊಂಡು ಬರುತ್ತಿವೆ. ಈ ಮೂಲಕ ಮಹಿಷನ ಸಾಂಸ್ಕೃತಿಕ ಇತಿಹಾಸವನ್ನು ನೆನಪಿಸುವ ಆಚರಣೆಯನ್ನು ಚಳುವಳಿಗಳು ಮಾಡುತ್ತಿವೆ. ಇದನ್ನು ಸಂಸದ ಪ್ರತಾಪ್ ಸಿಂಹ ತಾನು ಸಂಸದನಾಗಿದ್ದಾಗ ವಿರೋಧಿಸಿದ್ದರು.
ಅಲ್ಲಿ ಮಾತನಾಡಿರುವ ಪ್ರತಾಪ್ ಸಿಂಹ, “ನಾನು ಮುಸಲ್ಮಾನರಿಗೆ ಸ್ಪಷ್ಟವಾಗಿ ಎಚ್ಚರಿಕೆ ನೀಡಲು ಬಯಸುತ್ತೇನೆ. ಮುಸ್ಲಿಂ ಸಮುದಾಯದ ಪುಂಡರು ಮತ್ತು ಗಲಭೆಕೋರರನ್ನು ಖಂಡಿಸುವ ಕೆಲಸವನ್ನು ಯಾವುದೇ ಮುಲ್ಲಾ, ಇಮಾಂ ಮಾಡುತ್ತಿಲ್ಲ. ಆದ್ದರಿಂದ ಇಡೀ ಮುಸ್ಲಿಂ ಸಮಾಜದ ಗುರಿಯಾಗಿ ಇಟ್ಟುಕೊಂಡೆ ಮಾತನಾಡುತ್ತಿದ್ದೇನೆ, ಮುಸಲ್ಮಾನರೆ, ಹಿಂದೂಗಳನ್ನು ನೀವು ಕಡಿಮೆ ಅಂದಾಜು ಮಾಡಿಕೊಳ್ಳಬೇಡಿ” ಎಂದು ಹೇಳಿದ್ದಾರೆ.
“ನ್ಯೂಕ್ಲಿಯರ್ ಬಾಂಬ್ ಮಾಡಿರುವ ಹಿಂದೂಗಳಿಗೆ ಪೆಟ್ರೋಲ್ ಬಾಂಬ್ ಮಾಡಲು ಬರುವುದಿಲ್ಲ ಎಂದು ತಿಳಿದುಕೊಳ್ಳಬೇಡಿ. ಬ್ಯಾಲೆಸ್ಟಿಕ್ ಮಿಸೈಲ್‌ಗಳನ್ನು ಮಾಡಿರುವ ಹಿಂದೂಗಳಿಗೆ ಕಲ್ಲಲ್ಲಿ ಬಿಸಾಕಲು ಬರುವುದಿಲ್ಲ ಎಂದುಕೊಳ್ಳಬೇಡಿ. ವಿಶ್ವದ ಸಾಫ್ಟ್‌ವೇರ್ ಉದ್ಯಮವನ್ನು ನಡೆಸುತ್ತಿರುವ ಹಿಂದೂಗಳಿಗೆ ನಿಮ್ಮ ಮೇಲೆ ಆಕ್ರಮಣ ಮಾಲಡು ಕೈಗೆ ಕಲ್ಲೆತ್ತಲು ಬರುವುದಿಲ್ಲ ಎಂದು ಭಾವಿಸಬೇಡಿ. ಚಂದ್ರನನ್ನು ನೀವು ಆರಾಧನೆ ಮಾಡುತ್ತೀರಿ. ಆದರೆ ಚಂದ್ರನ ಮೇಲೆ ನಾವು ನೌಕೆ ಇಳಿಸಿದ್ದೇವೆ… ನೀವು ಗುಜರಿಗಳು, ಟಾಂಗಾಗಳು ಮಾಡುವಂತಹ ಪೆಟ್ರೋಲ್ ಬಾಂಬ್ ತಯಾರು ಮಾಡಲು ಬರುವುದಿಲ್ಲ ಎಂದು ತಿಳಿಯಬೇಡಿ” ಎಂದು ಹೇಳಿದ್ದಾರೆ. ಹದ್ದಬಸ್ತಿನಲ್ಲಿ ಇರಿ
ಇದನ್ನೂಓದಿ:ಬಾಡಿಗೆದಾರ ಯುವತಿಯ ಮಲಗುವ ಕೋಣೆ, ವಾಶ್‌ರೂಮ್‌ನಲ್ಲಿ ರಹಸ್ಯ ಕ್ಯಾಮೆರಾ: ಆರೋಪಿ ಬಂಧನ
“ನ್ಯೂಕ್ಲಿಯರ್ ಬಾಂಬ್ ಮಾಡಿದ ನಮಗೆ ಗುಜಿರಿ-ಟಾಂಗಾಗಳು ಮಾಡುವ ಪೆಟ್ರೋಲ್ ಬಾಂಬ್ ಮಾಡಲು ನಮಗೂ ಬರುತ್ತದೆ. ಆದರೆ ನಾನು ಈ ದೇಶದ ಶಾಂತಿ ಮತ್ತು ಸುರಕ್ಷತೆಗೋಸ್ಕರ ಸುಮ್ಮನೆ ಇದ್ದೇವೆ. ನಮ್ಮ ಮೌನ, ತಾಳ್ಮೆ ಮತ್ತು ಸೌಹಾರ್ಧ ಭಾವನೆಯನ್ನು ಪಕ್ಕಲುತನ ಎಂದು ತಿಳಿದುಕೊಂಡರೆ, ಒಬ್ಬೊಬ್ಬ ಹಿಂದೂ ಕೂಡಾ ಒಂದೊಂದು ಕೈಯ್ಯಲ್ಲಿ ಕಲ್ಲನ್ನು ಇಟ್ಟುಕೊಂಡರೆ ನಿಮಗೆ ಉಳಿಗಾಲ ಇರಲ್ಲ. ಇದನ್ನು ಅರ್ಥ ಮಾಡಿಕೊಂಡು ಎಚ್ಚರಿಕೆಯಿಂದ, ಗೌರವಯುತವಾಗಿ ಹಾಗೂ ಹದ್ದಬಸ್ತಿನಲ್ಲಿ ಇರುವುದನ್ನು ಕಲಿತುಕೊಳ್ಳಬೇಕು” ಎಂದು ಹೇಳಿದ್ದಾರೆ.
“ಮುಸ್ಲಿಂ ಸಮುದಾಯದ ಪುಂಡರು ಮತ್ತು ಗಲಭೆಕೋರರನ್ನು ಖಂಡಿಸುವ ಕೆಲಸವನ್ನು ಧಾರ್ಮಿಕ ಮುಂಖಡರು ಮತ್ತು ಬುದ್ದಿಜೀವಿಗಳು ಮಾಡಿಲ್ಲವೆಂದರೆ, ಇಡೀ ಸಮಾಜ ಅವರು ಮಾಡುವ ಕೆಟ್ಟ ಹೆಸರನ್ನು ಪಡೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಮೌನವಾಗಿ ನೀವು ಕೂಡಾ ಹೊಣೆಯಾಗಿರುತ್ತೀರಿ” ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಮಹಿಷ ದಸರಾ ಆಚರಣೆಯನ್ನು ಟೀಕಿಸಿದ ಅವರು, ಈ ಹಬ್ಬವು “ತಾಯಿ ಚಾಮುಂಡಿ” ಯನ್ನು ಅಗೌರವಿಸುತ್ತದೆ ಮತ್ತು ಹಿಂದೂ ಸಮಾಜದಲ್ಲಿ ವಿಭಜನೆಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ. ಮಹಿಷನಲ್ಲಿ ನಂಬಿಕೆ ಇರುವವರು ಮನೆಯಲ್ಲಿ ಪೂಜೆ ಸಲ್ಲಿಸಬೇಕು ಎಂದು ಹೇಳಿದ ಅವರು, ಮಹಿಷ ದಸರಾ ಹೆಸರಿನಲ್ಲಿ ಒಡಕು ಸೃಷ್ಟಿಸಬೇಡಿ ಎಂದು ಮನವಿ ಮಾಡಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆ ಮುಂದುವರಿದರೆ ಚಾಮುಂಡಿ ಭಕ್ತರು ಚಾಮುಂಡಿ ಚಲೋ ಹಮ್ಮಿಕೊಂಡು ಆಚರಣೆ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವಿಡಿಯೊ ನೋಡಿ:
— Prathap Simha (@mepratap) September 24, 2024


