ಬಿಲ್ಕಿಸ್ ಬಾನೋ ಪ್ರಕರಣದ ಅಪರಾಧಿಗಳ ಬಿಡುಗಡೆಗೆ ಸಂಬಂಧಿಸಿದ ಆದೇಶದಲ್ಲಿ ಮಾಡಲಾದ ಗುಜರಾತ್ ಸರ್ಕಾರದ ವಿರುದ್ಧ ಹೇಳಿಕೆಗಳನ್ನು ತೆಗೆದುಹಾಕಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದ್ದು, ರಾಜ್ಯದ ಬಿಜೆಪಿ ಸರ್ಕಾರ ತೀವ್ರ ಮುಖಭಂಗ ಅನುಭಿಸಿದೆ. ”ರಾಜ್ಯ ಸರ್ಕಾರವು ಒಪ್ಪಂದ ಮಾಡಿಕೊಂಡಂತೆ ವರ್ತಿಸಿದೆ ಮತ್ತು ಅಪರಾಧಿಗಳೊಂದಿಗೆ ಸಹಕರಿಸಿದೆ” ಎಂಬ ಹೇಳಿಕೆ ಸೇರಿದಂತೆ ಕೆಲವು ತೀಕ್ಷ್ಣ ಹೇಳಿಕೆಯನ್ನು ಸುಪ್ರಿಂಕೋರ್ಟ್ ಆದೇಶದಲ್ಲಿ ಹೇಳಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಇಂತಹ ಕೆಲವು ಹೇಳಿಕೆಗಳನ್ನು ತೆಗೆದು ಹಾಕುವಂತೆ ಕೇಳಿಕೊಂಡಿದ್ದ ಗುಜರಾತ್ ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಸುಪ್ರೀಂಕೋರ್ಟ್‌ನ ಈ ಹೇಳಿಕೆ ಸೂಕ್ತವಲ್ಲ ಮತ್ತು ಪ್ರಕರಣದ ದಾಖಲೆಗೆ ವಿರುದ್ಧವಾಗಿದೆ ಮತ್ತು ಅರ್ಜಿದಾರರ ವಿರುದ್ಧ ಪಕ್ಷಪಾತ ಮಾಡುತ್ತದೆ ಎಂದು ಸರ್ಕಾರ ವಾದಿಸಿತ್ತು.
ಇದನ್ನೂಓದಿ: ಸಿಬಿಐಗೆ ನೀಡಿದ್ದ ‘ಸಾಮಾನ್ಯ ಒಪ್ಪಿಗೆ’ ಹಿಂಪಡೆದ ಕರ್ನಾಟಕ : ಇದೇ ರೀತಿಯ ನಿರ್ಧಾರ ಕೈಗೊಂಡ ಇತರ ರಾಜ್ಯಗಳು ಯಾವುವು?
2002ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರವೆಸಗಿ ಅವರ ಕುಟುಂಬವನ್ನು ಕೊಂದ ಅಪರಾಧಿಗಳಾದ 11 ಮಂದಿಯ ಅಕಾಲಿಕ ಬಿಡುಗಡೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಈ ವೇಳೆ ಗುಜರಾತ್‌ನ ಬಿಜೆಪಿ ಸರ್ಕಾರವು ಆದೇಶದಲ್ಲಿ ಇರುವ ತನ್ನ ವಿರುದ್ಧದ ಕೆಲವು ಟೀಕೆಗಳನ್ನು ತೆಗೆದುಹಾಕುವಂತೆ ಮನವಿ ಮಾಡಿತ್ತು.
ಸರ್ಕಾರದ ಮನವಿಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ಪೀಠ ಒಪ್ಪದೆ ನಿರಾಕರಿಸಿದೆ. “ಪರಿಶೀಲನಾ ಅರ್ಜಿಗಳು, ಸುಪ್ರಿಂಕೋರ್ಟ್‌ನ ಆದೇಶ ಮತ್ತು ಅದಕ್ಕೆ ಲಗತ್ತಿಸಲಾದ ಪೇಪರ್‌ಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ್ದು, ದಾಖಲೆಯಲ್ಲಿ ಯಾವುದೇ ದೋಷವಿಲ್ಲ ಅಥವಾ ಪರಿಶೀಲನಾ ಅರ್ಜಿಗೆ ಅರ್ಹತೆ ಇಲ್ಲ” ಎಂದು ಪೀಠ ಹೇಳಿದೆ.
ಬಿಲ್ಕೀಸ್ ಬಾನೋ ಅತ್ಯಾಚಾರ ಪ್ರಕರಣದ ಇಬ್ಬರು ಅಪರಾಧಿಗಳಾದ ರಾಧೇಶ್ಯಾಮ್ ಭಗವಾನದಾಸ್ ಮತ್ತು ರಾಜುಭಾಯ್ ಬಾಬುಲಾಲ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಗಳನ್ನು ಜುಲೈನಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.
“ಉತ್ತಮ ನಡವಳಿಕೆ”ಗಾಗಿ ಗುಜರಾತ್ ಸರ್ಕಾರದಿಂದ ಬಿಡುಗಡೆಯಾದ 11 ಮಂದಿ ಜೈಲಿಗೆ ಮರಳಬೇಕೆಂದು ಜನವರಿಯಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ಅಪರಾಧಿಗಳನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ” ಎಂದು ದೇಶದಾದ್ಯಂತ ತೀವ್ರ ಆಕ್ರೋಶ ಉಂಟುಮಾಡಿದ ಸರ್ಕಾರದ ನಿರ್ಧಾರದ ಕುರಿತು ನೀಡಿದ್ದ ಮಹತ್ವದ ಆದೇಶದಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು. ಜೊತೆಗೆ ಅಂತಹ ಆದೇಶವನ್ನು ಜಾರಿಗೊಳಿಸಿದ್ದಕ್ಕಾಗಿ ಗುಜರಾತ್ ಸರ್ಕಾರವನ್ನು ತೀವ್ರವಾಗಿ ಖಂಡಿಸಿತ್ತು.
ಇದನ್ನೂಓದಿ: ಲೈಂಗಿಕ ದೌರ್ಜನ್ಯ; ಶಾಲೆಯಲ್ಲಿ ಆಯೋಜಿಸಿದ್ದ ಜಾಗೃತಿ ಸಮಾವೇಶದಲ್ಲಿ ಕೃತ್ಯದ ಬಗ್ಗೆ ಹೇಳಿಕೊಂಡ ಅಪ್ರಾಪ್ತ ಬಾಲಕಿ
ಅಪರಾಧಿಗಳನ್ನು ವಿಚಾರಣೆ ಮಾಡಿದ ರಾಜ್ಯ ಸರ್ಕಾರಕ್ಕೆ ಮಾತ್ರ ಬಿಡುಗಡೆ ಮಾಡು ಅಧಿಕಾರ ಇದೆ ಎಂದು ಸುಪ್ರಿಂಕೋರ್ಟ್ ಹೇಳಿತ್ತು. ಬಿಲ್ಕೀಸ್ ಬಾನೋ ಅವರ ಅತ್ಯಾಚಾರ ಪ್ರಕರಣವನ್ನು ಮಹಾರಾಷ್ಟ್ರ ಸರ್ಕಾರ ವಿಚಾರಣೆ ಮಾಡಿತ್ತು. “ಗುಜರಾತ್ ಸರ್ಕಾರವು ಅಧಿಕಾರವನ್ನು ಚಲಾಯಿಸುವುದು ಅಧಿಕಾರವನ್ನು ಕಿತ್ತುಕೊಳ್ಳುವ ಮತ್ತು ಅಧಿಕಾರದ ದುರುಪಯೋಗದ ನಿದರ್ಶನವಾಗಿದೆ” ಎಂದು ನ್ಯಾಯಾಲಯ ಹೇಳಿತ್ತು. “ಅಪರಾಧಿಗಳು ಮೋಸದ ಮಾರ್ಗಗಳ ಮೂಲಕ ಸರ್ಕಾರದ ಆದೇಶವನ್ನು ಪಡೆದಿದ್ದಾರೆ” ಎಂದು ನ್ಯಾಯಾಲಯ ಹೇಳಿದ್ದು, ಗುಜರಾತ್ ಸರ್ಕಾರವು 2022 ರ ಆದೇಶವನ್ನು ಮರುಪರಿಶೀಲಿಸಬೇಕು ಎಂದು ತಿಳಿಸಿತ್ತು.
ಬಿಜೆಪಿ ನೇತೃತ್ವದ ಗುಜರಾತ್ ಸರ್ಕಾರ ಅಪರಾಧಿಗಳಿಗೆ ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಮಾಡಿದ ನಂತರ ಅವರನ್ನು ಜೈಲಿನ ಆವರಣದಲ್ಲಿ ಮಹಿಳೆಯರು ಸೇರಿದಂತೆ ಬಿಜೆಪಿ ಬೆಂಬಲಿಗರ ಗುಂಪು ಆರತಿ ಬೆಳಗಿ, ಹೂವುನ ಹಾರ ಹಾಕಿ ಮತ್ತು ಸಿಹಿ ತಿಂಡಿಗಳು ನೀಡಿ ಸ್ವಾಗತಿಸಿದ್ದರು. ಅಲ್ಲದೆ ನಂತರದ ದಿನಗಳಲ್ಲಿ ಬಿಜೆಪಿ ಸಂಸದರು ಮತ್ತು ಶಾಸಕರೊಂದಿಗೆ ಅವರು ವೇದಿಕೆ ಹಂಚಿಕೊಂಡಿದ್ದು ಕೂಡಾ ವರದಿಯಾಗಿತ್ತು. ಜೊತೆಗೆ ಚುನಾವಣಾ ಪ್ರಚಾರದಲ್ಲೂ ಭಾಗವಹಿಸಿದ್ದರು. ಕಂಡುಬಂದಿತು.
ಗುಜರಾತ್ ಗಲಭೆ ವೇಳೆ 21 ವರ್ಷದ ಬಿಲ್ಕಿಸ್ ಬಾನೊ ಅವರು ಐದು ತಿಂಗಳ ಗರ್ಭಿಣಿಯಾಗಿದ್ದರು. ತಮ್ಮ ಮನೆ ಕಳೆದುಕೊಂಡು ಪರಾರಿಯಾಗುತ್ತಿದ್ದ ವೇಳೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು. ದುಷ್ಕರ್ಮಿಗಳು ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೆ, ಅವರ ಮೂರು ವರ್ಷದ ಮಗಳನ್ನು ನೆಲಕ್ಕೆ ಬಡಿದುಕೊಳ್ಳಲಾಗಿತ್ತು. ನಂತರ ಅವರ ಕುಟುಂಬದ ಇತರ 6 ಜನರನ್ನು ಕೊಲೆ ಮಾಡಲಾಗಿತ್ತು. ಬಿಲ್ಕೀಸ್ ಬಾನೋ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದ ದುಷ್ಕರ್ಮಿಗಳು ಅವರು ಕೂಡಾ ಸಾವಿಗೀಡಾಗಿದ್ದಾರೆ ಎಂದು ಭಾವಿಸಿ ಅಲ್ಲಿಂದ ತೆರಳಿದ್ದರು.
ವಿಡಿಯೊ ನೋಡಿ: ಗುರುಪ್ರಸಾದ್ ಕಂಟಲಗೆರೆ ಅವರ ‘ಅಟ್ರಾಸಿಟಿ’ ಕಾದಂಬರಿ ಕುರಿತ ಚರ್ಚೆಯಲ್ಲಿ ಲೇಖಕಿ ದು.ಸರಸ್ವತಿ ಅವರ ಮಾತುಗಳು


