ಶಂಕಿತ ಕುಕಿ ಉಗ್ರಗಾಮಿಗಳಿಂದ ಅಪಹರಣಕ್ಕೊಳಗಾಗಿದ್ದ ಇಬ್ಬರು ಮೈತೆಯಿ ಸಮುದಾಯದ ಯುವಕರನ್ನು ಗುರುವಾರ ಬೆಳಗ್ಗೆ ಯಾವುದೇ ಹಾನಿಯಿಲ್ಲದೆ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ. ಸಮುದಾಯದ ಮೂವರು ಯುವಕರನ್ನು ಅಪಹರಣ ಮಾಡಲಾಗಿದೆ ಎಂದು ಈ ಹಿಂದೆ ವರದಿಯಾಗಿತ್ತು. ಕುಕಿ ಬಂಡುಕೋರರಿಂದ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
11 ಕುಕಿ ಖೈದಿಗಳನ್ನು ಇಂಫಾಲ್‌ನ ಸಜಿವಾ ಜೈಲಿನಿಂದ ಚುರಾಚಂದ್‌ಪುರ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಬಿಡುಗಡೆಯ ಸಂಧಾನದ ವೇಳೆ ಕೇಳಿಕೊಳ್ಳಲಾಗಿತ್ತು. ಅಪಹರಣಕಾರರು ಬಿಡುಗಡೆಗಾಗಿ ನಿಗದಿಪಡಿಸಿದ ಹಲವಾರು ಪೂರ್ವಾಪೇಕ್ಷಿತ ಷರತ್ತುಗಳಲ್ಲಿ ಈ ಷರತ್ತು ಕೂಡಾ ಒಂದಾಗಿದೆ.
The two young men abducted in Kangpokpi on 27th September, 2024 have been safely brought back to the custody of @manipur_police . I sincerely appreciate everyone from both the state and central government who worked tirelessly to ensure their safe return. Your efforts are deeply…
— N. Biren Singh (@NBirenSingh) October 3, 2024
ಮೈತೇಯಿ ಯುವಕರ ಬಿಡುಗಡೆಗಾಗಿ ಶ್ರಮಿಸಿದವರಿಗೆ ಮುಖ್ಯಮಂತ್ರಿ ಎಕ್ಸ್‌ನಲ್ಲಿ ಕೃತಜ್ಞತೆ ಸಲ್ಲಿಸಿದ್ದು, “ಸೆಪ್ಟೆಂಬರ್ 27 ರಂದು ಕಾಂಗ್‌ಪೋಕ್ಪಿಯಲ್ಲಿ ಅಪಹರಣಕ್ಕೊಳಗಾದ ಇಬ್ಬರು ಯುವಕರನ್ನು ಸುರಕ್ಷಿತವಾಗಿ ಮಣಿಪುರ ಪೊಲೀಸರ ಕಸ್ಟಡಿಗೆ ಹಿಂತಿರುಗಿಸಲಾಗಿದೆ. ಅವರ ಸುರಕ್ಷಿತ ಮರಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಅವಿರತವಾಗಿ ಶ್ರಮಿಸಿದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪ್ರತಿಯೊಬ್ಬರನ್ನು ನಾನು ಪ್ರಾಮಾಣಿಕವಾಗಿ ಶ್ಲಾಘಿಸುತ್ತೇನೆ” ಎಂದು ಹೇಳಿದ್ದಾರೆ.
ಯುವಕರ ಬಿಡುಗಡೆಗಾಗಿ ಕುಕಿ ನಾಯಕರೊಂದಿಗೆ ಮಾತುಕತೆ ನಡೆಸಲು ರಾಜ್ಯ ಸರ್ಕಾರವು ಪೊಲೀಸ್ ಮಹಾನಿರ್ದೇಶಕ ರಾಜೀವ್ ಸಿಂಗ್ ಅವರನ್ನು ಕಾಂಗ್ಪೊಕ್ಪಿಗೆ ಕಳುಹಿಸಿತ್ತು.ಕುಕಿ ಬಂಡುಕೋರರಿಂದ
ಮೈತೇಯಿ ಸಮುದಾಯದ ನಿಂಗೋಂಬಮ್ ಜಾನ್ಸನ್ ಸಿಂಗ್, ಓನಮ್ ಥೋಯಿಥೋಯ್ ಸಿಂಗ್ ಮತ್ತು ಥೋಕ್ಚೋಮ್ ಥೋಯಿಥೋಯ್ಬಾ ಸಿಂಗ್ ಇಂಫಾಲ್ ಪಶ್ಚಿಮದ ನ್ಯೂ ಕೀಥೆಲ್ಮನ್ಬಿಯಲ್ಲಿ ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು ತೌಬಲ್ ಜಿಲ್ಲೆಯ ತಮ್ಮ ಮನೆಗಳಿಂದ ತೆರಳಿದ್ದರು. ಅದರ ನಂತರ ಅವರು ಕಾಣೆಯಾಗಿದ್ದರು ಎಂದು ವರದಿಯಾಗಿದೆ.
ಅದರಲ್ಲಿ ಮೊದಲ ಯುವಕ ನಿಂಗೊಂಬಮ್ ಜಾನ್ಸನ್ ಸಿಂಗ್ ಅವರನ್ನು ಅದೇ ದಿನ ಯಾವುದೇ ಹಾನಿಯಿಲ್ಲದೆ ಬಿಡುಗಡೆ ಮಾಡಲಾಗಿತ್ತು.
ವಿಡಿಯೊ ನೋಡಿ: ಕೇರಳ ಸಿನಿಮಾ ರಂಗದಲ್ಲಿ ಲೈಂಗಿಕ ದೌರ್ಜನ್ಯದ ಭಯಾನಕ ಕಥೆಗಳನ್ನು ಬಿಚ್ಚಿಟ್ಟ ಹೇಮಾ ಸಮಿತಿ ವರದಿ


