ಪ್ಯಾಲೆಸ್ತೀನ್‌ನ ಗಾಜಾ ಸರ್ಕಾರದ ಮುಖ್ಯಸ್ಥ ರೌಹಿ ಮುಶ್ತಾಹಾ ಸೇರಿದಂತೆ ಹಮಾಸ್‌ನ ಮೂವರು ಹಿರಿಯ ನಾಯಕರನ್ನು ಕೊಂದಿರುವುದಾಗಿ ಇಸ್ರೇಲ್ ರಕ್ಷಣಾ ಪಡೆಗಳು ಗುರುವಾರ ಹೇಳಿಕೊಂಡಿದೆ. ಗಾಜಾದಲ್ಲಿ ಬಂಡುಕೋರ ಹಮಾಸ್ ಸಂಘಟನೆಯ ಸರ್ಕಾರ ಆಡಳಿತ ನಡೆಸುತ್ತಿದ್ದು, ಇಸ್ರೇಲ್‌ಗೆ ತೀವ್ರ ಪ್ರತಿರೋಧ ಒಡ್ಡುತ್ತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಕಾರ್ಯಾಚರಣೆಯ ವಿವರಗಳನ್ನು ಹಂಚಿಕೊಂಡಿರುವ ಇಸ್ರೇಲ್ ಸೇನೆ, ಉತ್ತರ ಗಾಜಾದಲ್ಲಿ ಭೂಗತ ಕಾಂಪೌಂಡ್‌ನ ಮೇಲೆ ನಡೆದ ದಾಳಿಯಲ್ಲಿ ರಾವಿ ಮುಶ್ತಾಹಾ ಮತ್ತು ಇತರ ಇಬ್ಬರು ಹಮಾಸ್ ಕಮಾಂಡರ್‌ಗಳಾದ ಸಮೇಹ್ ಸಿರಾಜ್ ಮತ್ತು ಸಮೇಹ್ ಔದೆಹ್ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಅದಾಗ್ಯೂ, ಹಮಾಸ್‌ನಿಂದ ತಕ್ಷಣವೇ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮೂವರು ಕಮಾಂಡರ್‌ಗಳು ಉತ್ತರ ಗಾಜಾದಲ್ಲಿ ಭಾರೀ ಭದ್ರತೆ ಹೊಂದಿರುವ ಭೂಗತ ಕಾಂಪೌಂಡ್‌ನಲ್ಲಿ ಆಶ್ರಯ ಪಡೆದಿದ್ದರು ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಈ ಕಾಂಪೌಂಡ್ ಅವರ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿತ್ತು ಎಂದು ಅದು ಹೇಳಿದೆ. ಗಾಜಾ
ಇದನ್ನೂಓದಿ: ನಾನು ತಪ್ಪು ಮಾಡಿದ್ದಿದ್ರೆ ದೀರ್ಘಕಾಲ ರಾಜಕಾರಣದಲ್ಲಿ ಇರಲು ಸಾಧ್ಯವಿರಲಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
ಸರಿಸುಮಾರು 3 ತಿಂಗಳ ಹಿಂದೆ, ಇಸ್ರೇಲ್ ಸೇನೆ ಮತ್ತು ಇಸ್ರೇಲ್ ರಕ್ಷಣಾ ಪ್ರಾಧಿಕಾರ ನಡೆಸಿದ ಜಂಟಿ ದಾಳಿಯಲ್ಲಿ ಗಾಜಾದಲ್ಲಿ ಹಮಾಸ್ ಸರ್ಕಾರದ ಮುಖ್ಯಸ್ಥ ರೌಹಿ ಮುಶ್ತಾಹಾ, ಹಮಾಸ್ ರಾಜಕೀಯ ಬ್ಯೂರೋದಲ್ಲಿ ಭದ್ರತಾ ಖಾತೆ ಮತ್ತು ಹಮಾಸ್‌ನ ಲೇಬರ್ ಕಮಿಟಿ ಖಾತೆಯನ್ನು ಹೊಂದಿದ್ದ ಸಮೆಹ್ ಅಲ್-ಸಿರಾಜ್, ಹಮಾಸ್‌ನ ಜನರಲ್ ಸೆಕ್ಯುರಿಟಿ ಮೆಕ್ಯಾನಿಸಂನ ಕಮಾಂಡರ್ ಸಮಿ ಔದೆಹ್ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಹೇಳಿದೆ. ಅವರು ಉತ್ತರ ಗಾಜಾದಲ್ಲಿ ಭದ್ರವಾದ ಮತ್ತು ಸುಸಜ್ಜಿತ ಭೂಗತ ಕಾಂಪೌಂಡ್‌ನಲ್ಲಿ ಅಡಗಿಕೊಂಡಿದ್ದರು ಎಂದು ಅದು ಹೇಳಿದೆ.
“ಈ ಕಾಂಪೌಂಡ್ ಹಮಾಸ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಆಗಿ ಕಾರ್ಯನಿರ್ವಹಿಸುತ್ತಿತ್ತು. ಜೊತೆಗೆ ಹಮಾಸ್‌ನ ಹಿರಿಯ ಹೋರಾಟಗಾರರಿಗೆ ದೀರ್ಘಕಾಲದವರೆಗೆ ಅದರೊಳಗೆ ಇರಲು ಅನುವು ಮಾಡಿಕೊಟ್ಟಿತ್ತು. ಇಸ್ರೇಲ್ ಸೇನೆ ಅಕ್ಟೋಬರ್ 7 ರ ಹತ್ಯಾಕಾಂಡಕ್ಕೆ ಕಾರಣವಾದ ಎಲ್ಲರನ್ನೂ ಹಿಂಬಾಲಿಸುತ್ತದೆ ಮತ್ತು ಇಸ್ರೇಲ್‌ಗೆ ಬೆದರಿಕೆ ಹಾಕುವ ಎಲ್ಲರ ವಿರುದ್ಧವೂ ಕಾರ್ಯನಿರ್ವಹಿಸುತ್ತದೆ” ಎಂದು ಇಸ್ರೇಲ್ ಸೇನೆ ಹೇಳಿದೆ.
ಪ್ಯಾಲೆಸ್ತೀನಿನ ಪ್ರತಿರೋಧ ಗುಂಪಾದ ಹಮಾಸ್ ಸಂಘಟನೆಯು ಇಸ್ರೇಲ್ ದಬ್ಬಾಳಿಕೆ ವಿರೋಧಿಸಿ 2023ರ ಅಕ್ಟೋಬರ್ 7ರಂದು ಇಸ್ರೇಲ್ ವಿರುದ್ಧ ರಾಕೇಟ್ ದಾಳಿ ನಡೆಸಿತ್ತು. ಈ ವೇಳೆ 1,200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಈ ದಾಳಿಯ ನಂತರ ಇಸ್ರೇಲ್ ಸೇನೆಯು ಹಮಾಸ್ ಹೆಸರಿನಲ್ಲಿ ಗಾಜಾದ ಸುಮಾರು 50 ಸಾವಿರಕ್ಕೂ ಹೆಚ್ಚಿನ ಜರನ್ನು ಹತ್ಯೆ ಮಾಡಿದೆ. ಇದರಲ್ಲಿ ಹೆಚ್ಚಿನವರು ಮಹಿಳೆ ಮತ್ತು ಮಕ್ಕಳು ಸೇರಿದ್ದಾರೆ.
ಕಳೆದ ವಾರ ಲೆಬನಾನ್‌ನ ಬೈರುತ್ ಮೇಲೆ ದಾಳಿ ಮಾಡಿದ್ದ ಇಸ್ರೇಲ್ ಸೇನೆಯು ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರನ್ನು ಕೊಂದಿತ್ತು.
ವಿಡಿಯೊ ನೋಡಿ: ‘ಗಾಂಧೀಜಿ ಹಂತಕ ಗೋಡ್ಸೆ ಎಂಬ ವ್ಯಕ್ತಿ ಮತ್ತು ಆತನ ದೃಷ್ಟಿಯ ಭಾರತ’ ಪುಸ್ತಕ ಬಿಡುಗಡೆ: ದಿನೇಶ್ ಗುಂಡೂರಾವ್ ಅವರ ಮಾತು


