ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳ ಮೀಸಲಾತಿಯಲ್ಲಿ ಅಸ್ತಿತ್ವದಲ್ಲಿರುವ 50% ಮಿತಿಯನ್ನು ಹೆಚ್ಚಿಸಲು ಸಾಂವಿಧಾನಿಕ ತಿದ್ದುಪಡಿಯನ್ನು ತರಬೇಕು ಎಂದು ಎನ್‌ಸಿಪಿ (ಎಸ್‌ಪಿ) ಅಧ್ಯಕ್ಷ ಶರದ್ ಪವಾರ್ ಶುಕ್ರವಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶರದ್, ಮೀಸಲಾತಿ ಆಂದೋಲನ ನಡೆಸುತ್ತಿರುವ ಮರಾಠರಿಗೆ ಮೀಸಲಾತಿ ನೀಡುವಾಗ, ಇತರ ಸಮುದಾಯಗಳಿಗೆ ಇರುವಂತಹ ಮಿತಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಮೀಸಲಾತಿಯ 50% ಮಿತಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಪ್ರಸ್ತುತ, ಮೀಸಲಾತಿಯ ಮಿತಿ 50% ಆಗಿದ್ದು, ಆದರೆ ತಮಿಳುನಾಡಿನಲ್ಲಿ 78% ಮೀಸಲಾತಿಯಿದೆ. ಅವರಿಗೆ ಅದು ಸಾಧ್ಯವಾಗುವುದಾದರೆ ಮಹಾರಾಷ್ಟ್ರದಲ್ಲಿ 75% ದಷ್ಟು ಮೀಸಲಾತಿ ಏಕೆ ಸಾಧ್ಯವಿಲ್ಲ” ಎಂದು ಶರದ್ ಅವರು ಹೇಳಿದ್ದಾರೆ. ಕೇಂದ್ರ ಸರ್ಕಾರವೆ ಮುಂದಾಳತ್ವ ವಹಿಸಿ ಮೀಸಲಾತಿಯ ಮಿತಿ ಹೆಚ್ಚಿಸಲು ಸಂವಿಧಾನಿಕ ತಿದ್ದುಪಡಿ ತರಬೇಕು ಎಂದು ಅವರು ಹೇಳಿದ್ದು, ಈ ತಿದ್ದುಪಡಿಗೆ ಬೆಂಬಲ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು ಮಹಾರಾಷ್ಟ್ರ ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ (ಎಂವಿಎ) ನಾಯಕರ ನಡುವೆ ಸೀಟು ಹಂಚಿಕೆ ಮಾತುಕತೆ ಮುಂದಿನ ವಾರ ಮುಂದುವರಿಯಲಿದೆ ಎಂದು ಹೇಳಿದ್ದಾರೆ. “ಮಾತುಕತೆಗಳನ್ನು ಆದಷ್ಟು ಬೇಗ ಮುಗಿಸಲು ನಾನು ನಾಯಕರಿಗೆ ಸಲಹೆ ನೀಡುತ್ತೇನೆ. ಇದರಿಂದ ನಾವು ಬದಲಾವಣೆಯನ್ನು ಬಯಸುತ್ತಿರುವ ಜನರ ಬಳಿಗೆ ಬೇಗನೆ ಹೋಗಬಹುದು” ಎಂದು ಅವರು ಹೇಳಿದ್ದಾರೆ.
ಇದನ್ನೂಓದಿ: ‘ಇಸ್ರೇಲಿ ಟೈಮ್ ಮೆಷಿನ್’ ಬಳಿಸಿ ಯುವಕರನ್ನಾಗಿ ಮಾಡುತ್ತೇವೆ ಎಂದು ₹35 ಕೋಟಿ ವಂಚನೆ: ಉತ್ತರ ಪ್ರದೇಶದಲ್ಲಿ ಘಟನೆ!
ಎಂವಿಎ ಮೈತ್ರಿ ಪಕ್ಷವಾದ ಎನ್‌ಸಿಪಿ (ಎಸ್‌ಪಿ), ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಮತ್ತು ಕಾಂಗ್ರೆಸ್ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಾಗಿ ಹೋರಾಡಿ ಉತ್ತಮ ಫಲಿತಾಂಶ ಕಂಡುಕೊಂಡಿತ್ತು. ರಾಜ್ಯದ 48 ಸ್ಥಾನಗಳಲ್ಲಿ 30 ಸ್ಥಾನಗಳನ್ನು ಈ ಮೈತ್ರಿ ಗೆದ್ದಿವೆ. ನವೆಂಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದೆ.ಮೀಸಲಾತಿಯ 50% ಮಿತಿ
ಸರ್ಕಾರದಲ್ಲಿ ಬದಲಾವಣೆ ಆಗಬೇಕು ಎಂದು ಜನರು ಸಕಾರಾತ್ಮಕ ಮಾತನಾಡುತ್ತಿದ್ದಾರೆ. ಎಂವಿಎ ಮೈತ್ರಿ ಅವರ ಭಾವನೆಗಳನ್ನು ಗೌರವಿಸಬೇಕು ಎಂದು ಶರದ್ ಹೇಳಿದ್ದಾರೆ. ಮರಾಠಿಗೆ ‘ಶಾಸ್ತ್ರೀಯ ಭಾಷೆ’ ಸ್ಥಾನಮಾನ ನೀಡುವ ನಿರ್ಧಾರವನ್ನು ಸ್ವಾಗತಿಸಿರುವ ಅವರು, ಇದಕ್ಕಾಗಿ ಕೇಂದ್ರ ಸರ್ಕಾರವನ್ನು ಅಭಿನಂದಿಸಿದ್ದಾರೆ.
ಆದಾಗ್ಯೂ, ಮರಾಠಿ ಕಲಿಯಲು ಆಯ್ಕೆ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿರುವ ಬಗ್ಗೆ ಮತ್ತು ರಾಜ್ಯದಲ್ಲಿ ಮರಾಠಿ ಭಾಷಾ ಶಾಲೆಗಳನ್ನು ಮುಚ್ಚುವ ಬಗ್ಗೆ ಮಹಾರಾಷ್ಟ್ರ ಸರ್ಕಾರವು ಕಾಳಜಿ ವಹಿಸಬೇಕು ಎಂದು ಪವಾರ್ ಹೇಳಿದ್ದಾರೆ. ಈ ಅಂಶಗಳ ಕುರಿತು ಚರ್ಚೆಗಳ ಅಗತ್ಯವಿದ್ದು, ಸಮಸ್ಯೆ ಪರಿಹಾರಕ್ಕೆ ಮಾರ್ಗೋಪಾಯ ಕಂಡುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಬದ್ಲಾಪುರ್ ಪ್ರಕರಣದಂತಹ ಘಟನೆಗಳ ಬಗ್ಗೆ ಮಹಾರಾಷ್ಟ್ರದಲ್ಲಿ ಆಕ್ರೋಶವಿದೆ. ಈ ಘಟನೆಯಲ್ಲಿ ಅರೋಪಿಯಾಗಿದ್ದ ಗುತ್ತಿಗೆ ಸ್ವೀಪರ್ ಅನ್ನು ಪೊಲೀಸರು ಶೂಟೌಟ್ ಮಾಡಿ ಹತ್ಯೆ ಮಾಡಿದ್ದರು. ಆರೋಪಿಯು ಶಾಲೆಯ ಆವರಣದಲ್ಲಿ ಇಬ್ಬರು ಶಿಶುವಿಹಾರದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅರೋಪಿಸಲಾಗಿತ್ತು. “ಮಹಿಳೆಯರಿಗೆ ಆರ್ಥಿಕ ನೆರವು ನೀಡಿದರೂ ಅವರ ಸುರಕ್ಷತೆ ಮತ್ತು ಭದ್ರತೆಯನ್ನು ಕಡೆಗಣಿಸಲಾಗುತ್ತಿದೆ ಎಂದು ಜನರು ಭಾವಿಸುತ್ತಿದ್ದಾರೆ” ಎಂದು ಶರದ್ ಹೇಳಿದ್ದಾರೆ.
ವಿಡಿಯೊ ನೋಡಿ: ‘ಅಂಬೇಡ್ಕರ್ ರಚಿಸಲಿದ್ದ ಸಂವಿಧಾನವನ್ನು ಗುರಿಯಾಗಿಸಿಕೊಂಡಿದ್ದವರ ಮೊದಲ ಗುಂಡು ಬಿದ್ದಿದ್ದು ಗಾಂಧಿ ಎದೆಗೆ’: ಎ ನಾರಾಯಣ


