50 ದಿನಗಳ ತಿಹಾರ್ ಜೈಲುವಾಸ ಮುಗಿಸಿ, ಇಂದು ಬೆಂಗಳೂರಿಗೆ ಬಂದಿಳಿದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು.
ಕೆಂಪೇಗೌಡ ವಿಮಾನ ನಿಲ್ದಾಣದಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಡಿಕೆಶಿ ಅವರನ್ನು ಕರೆತರಲಾಯಿತು. ಬಹುದೊಡ್ಡ ಪ್ರಮಾಣದಲ್ಲಿ ನೆರೆದಿದ್ದ ಜನ ಡಿಕೆಶಿ ಅವರನ್ನು ಬರಮಾಡಿಕೊಂಡರು. 7 ಕಿ.ಮೀ ದೂರದವರೆಗೆ ನಡೆದ ಮೆರವಣಿಗೆಯಲ್ಲಿ ಡಿಕೆಶಿ ಮೇಲೆ ಹೂವಿನ ಹಾರ ಮತ್ತು ಹೂಗಳ ಸುರಿಮಳೆಗೈದರು. ತೆರೆದ ವಾಹನದಲ್ಲಿ ಬಂದ ಡಿಕೆಶಿ ಜನರತ್ತ ಕೈ ಬೀಸಿದರು.
ಸಾದಹಳ್ಳಿ ಗೇಟ್ ನಲ್ಲಿ ಮಾತನಾಡಿದ ಡಿಕೆಶಿ, ಇದು ಅಂತ್ಯವಲ್ಲ, ಆರಂಭ ಎಂದು ಹೇಳುವ ಮೂಲಕ ಜೈಲು ಶಿಕ್ಷೆ ನಂತರವೂ ತಮ್ಮ ಖದರ್ ಮತ್ತು ವರ್ಚಸ್ಸು ಕಡಿಮೆಯಾಗಿಲ್ಲ ಎನ್ನುವುದನ್ನು ತೋರಿಸಿದರು. ನಾನು ಅಳುವ ಮಗ ಅಲ್ಲ, ಆಳುವ ಮಗ. ನಾಉ ಅತ್ತಿದ್ದರೆ ಅದು ನೋವಿನಿಂದ ಅಲ್ಲ, ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಸೋತು ಕಣ್ಣೀರು ಹಾಕಿದ್ದೇನೆ ಎಂದರು. ನಂತರ ನೇರವಾಗಿ ಕೆಪಿಸಿಸಿ ಕಚೇರಿಯತ್ತ ಹೆಜ್ಜೆ ಹಾಕಿದರು.
ಕನ್ನಡ ಸಂಘಟನೆಗಳ ಪ್ರಮುಖರು, ಕಾಂಗ್ರೆಸ್ ನ ಕೃಷ್ಣಬೈರೇಗೌಡ, ಮುನಿಯಪ್ಪ, ಡಿ.ಕೆ.ಸುರೇಶ್ ಸೇರಿದಂತೆ ಹಲವು ಮುಖಂಡರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ಇತ್ತ ಡಿಕೆಶಿ ಅವರನ್ನು ಮೆರವಣಿಗೆ ಮೂಲಕ ಕರೆತಂದಿರುವುದನ್ನು ಬಿಜೆಪಿ ಖಂಡಿಸಿದೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಬಿಜೆಪಿ ಸಚಿವ ಆರ್.ಅಶೋಕ್ ಮಾತನಾಡಿ, ಡಿಕೆಶಿ ಅವರಿಗೆ ಅದ್ಧೂರಿ ಸ್ವಾಗತ ನೀಡಿರುವುದು ಸರಿಯಲ್ಲ. ಅವರೇನು ಯುದ್ಧ ಗೆದ್ದು ಬಂದಿದ್ದಾರಾ ಎಂದು ಪ್ರಶ್ನಿಸಿದರು. ಡಿಕೆಶಿ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ ಹೀಗಿರುವಾಗ ಅವರಿಗೆ ಅದ್ಧೂರಿ ಸ್ವಾಗತ ಮತ್ತು ಮೆರವಣಿಗೆಯಲ್ಲಿ ಕರೆತಂದಿರುವುದು ಸರಿಯಲ್ಲ ಎಂದು ಕಿಡಿಕಾರಿದರು.



Public Prbm agirodu ನಾನುಗೌರಿ ಡೆಸ್ಕ್ ENU HELUTE ?