ನವರಾತ್ರಿ ಆಚರಣೆ ಹಿನ್ನಲೆ ಮಾಂಸಾಹಾರಿ ಆಹಾರವನ್ನು ನೀಡುವುದನ್ನು ನಿಲ್ಲಿಸುವ ಸುಪ್ರೀಂ ಕೋರ್ಟ್ ಕ್ಯಾಂಟೀನ್‌ನ ನಿರ್ಧಾರದ ಬಗ್ಗೆ ವಕೀಲರ ಗುಂಪು ಗುರುವಾರ ಅತೃಪ್ತಿ ವ್ಯಕ್ತಪಡಿಸಿದ್ದು, ಈ ಸಂಪ್ರದಾಯವನ್ನು ಮೊದಲ ಬಾರಿಗೆ ಹೇರಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಅದಾಗ್ಯೂ, ವಕೀಲರ ತೀವ್ರ ಪ್ರತಿಭಟನೆಯ ಹಿನ್ನಲೆ ಶನಿವಾರದಿಂದ ಕ್ಯಾಂಟೀನ್‌ನಲ್ಲಿ ಮತ್ತೆ ಮಾಂಸಾಹಾರವನ್ನು ನೀಡಲಾಗುತ್ತಿದೆ ಎಂದು ಲೈವ್ ಲಾ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ನವರಾತ್ರಿ ಆಚರಣೆ ಉಲ್ಲೇಖಿಸಿ ಮಾಂಸಾಹಾರ ನೀಡದಿರುವ ಬಗ್ಗೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (SCBA) ಅಧ್ಯಕ್ಷರಾದ ಕಪಿಲ್ ಸಿಬಲ್ ಮತ್ತು ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಷನ್ (SCAORA) ಅಧ್ಯಕ್ಷರಾದ ವಿಪಿನ್ ನಾಯರ್ ಅವರಿಗೆ ಬರೆದ ಪತ್ರದಲ್ಲಿ ವಕೀಲರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದು, ಇಂತಹ ನಿರ್ಧಾರವು ಅಸಮಂಜಸವಾಗಿದ್ದು, ವಕೀಲ ವೃತ್ತಿಯ “ಬಹುತ್ವದ” ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ನ್ಯಾಯಾಲಯದ ಕ್ಯಾಂಟೀನ್ ಸಾಂಪ್ರದಾಯಿಕವಾಗಿ ವೈವಿಧ್ಯಮಯ ಆಹಾರದ ಆದ್ಯತೆಗಳನ್ನು ಪೂರೈಸುತ್ತಿದೆ. ಕೆಲವರ ಧಾರ್ಮಿಕ ಭಾವನೆಗಳನ್ನು ಪೂರೈಸಲು ಮಾಂಸಾಹಾರಿ ಆಹಾರವನ್ನು ಸ್ಥಗಿತಗೊಳಿಸುವುದು ಸೂಕ್ತವಲ್ಲ ಎಂದು ಅದು ಪತ್ರವೂ ಒತ್ತಿಹೇಳಿತ್ತು. ಇಂತಹ ಕೋರಿಕೆಗಳಿಗೆ ಮನ್ನಣೆ ನೀಡುವುದು ಭವಿಷ್ಯದಲ್ಲಿ ಮತ್ತಷ್ಟು ಹೇರಿಕೆಗೆ ಕಾರಣವಾಗಬಹುದು ಎಂದು ಅದು ಎಚ್ಚರಿಸಿದೆ.
ಅದಾಗ್ಯೂ, ಕ್ಯಾಂಟೀನ್ ಗುತ್ತಿಗೆದಾರರು ಮಾಂಸಾಹಾರಿ ಆಹಾರವನ್ನು ನೀಡುವುದನ್ನು ನಿಲ್ಲಿಸಲು ಯಾವುದೇ ಸರ್ಕಾರಿ ನಿರ್ದೇಶನವನ್ನು ಪಡೆದಿಲ್ಲ ಎಂದು SCBA ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ. ಕೆಲವು ವಕೀಲರ ಮನವಿ ಮೇರೆಗೆ ಗುತ್ತಿಗೆದಾರರು ಸ್ವತಂತ್ರವಾಗಿ ಈ ನಿರ್ಧಾರ ಕೈಗೊಂಡಿದ್ದರು. ಈ ನಡುವೆ SCBA ಮಧ್ಯಪ್ರವೇಶಿಸಿದ್ದು, ನಾಳೆಯಿಂದ ಮಾಂಸಾಹಾರಿ ಆಹಾರವನ್ನು ನೀಡುವುದನ್ನು ಪುನರಾರಂಭಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದೆ ಎಂದು ವರದಿ ಹೇಳಿದೆ.
ದಸರಾ ಪ್ರಾರಂಭವಾದ ಶುಕ್ರವಾರ ಒಂದು ದಿನ ಮಾತ್ರ ಸುಪ್ರೀಂ ಕೋರ್ಟ್ ಕೆಲಸ ನಿರ್ವಹಿಸುತ್ತದೆ. ಇದರ ನಂತರ ನವರಾತ್ರಿ ಅವಧಿ ಮುಗಿದ ನಂತರ ಅಕ್ಟೋಬರ್ 14 ರಂದು ನ್ಯಾಯಾಲಯ ಮತ್ತೆ ತೆರೆಯುತ್ತದೆ. ಅಷ್ಟೆ ಅಲ್ಲದೆ, ವಿವಾದಿತ ಕ್ಯಾಂಟೀನ್ ಸುಪ್ರೀಂಕೋರ್ಟ್‌ನ ವಕೀಲರಿಗೆ ಆಹಾರ ಪೂರೈಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದು, ಅದನ್ನು ಗುತ್ತಿಗೆದಾರರಿಂದ ಖಾಸಗಿಯಾಗಿ ನಿರ್ವಹಿಸಲಾಗುತ್ತಿದೆ.
ವಿವಾದದ ಬಗ್ಗೆ ಮಾತನಾಡಿದ SCBA ಅಧಿಕಾರಿಯೊಬ್ಬರು, ಕ್ಯಾಂಟೀನ್‌ನ ಮೆನು ನಿರ್ಧಾರಗಳನ್ನು ಸಾಮಾನ್ಯವಾಗಿ ಗುತ್ತಿಗೆದಾರರು ಮಾಡುತ್ತಾರೆ. ಅದರಲ್ಲಿ SCBA ಅಥವಾ SCAORA ಯಿಂದ ಯಾವುದೇ ನೇರ ಒಳಗೊಳ್ಳುವಿಕೆ ಇರುವುದಿಲ್ಲ ಎಂದು ಉಲ್ಲೇಖಿಸಿದ್ದಾರೆ.
ವಿಡಿಯೊ ನೋಡಿ: ‘ಗಾಂಧೀಜಿ ಹಂತಕ ಗೋಡ್ಸೆ ಎಂಬ ವ್ಯಕ್ತಿ ಮತ್ತು ಆತನ ದೃಷ್ಟಿಯ ಭಾರತ’ ಪುಸ್ತಕ ಬಿಡುಗಡೆ: ದಿನೇಶ್ ಗುಂಡೂರಾವ್ ಅವರ ಮಾತು


