ಬೆಂಗಳೂರು ಬಳಿ ಗುಹೆಯೊಂದರಿಂದ 188 ವರ್ಷದ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ ಎಂದು ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಅನೇಕ ಮಾಧ್ಯಮಗಳು ಈ ಕುರಿತು ವರದಿ ಮಾಡಿವೆ.
Concerned Citizen (@BGatesIsaPyscho) ಎಂಬ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡ ಬಳಿಕ ಅದು ಎಲ್ಲೆಡೆ ಹರಿದಾಡಿದೆ. “ಈ ಭಾರತೀಯ ವ್ಯಕ್ತಿ ಈಗಷ್ಟೇ ಗುಹೆಯಲ್ಲಿ ಪತ್ತೆಯಾಗಿದ್ದಾರೆ. ಅವರು 188 ವರ್ಷ ವಯಸ್ಸಿನವರು ಎಂದು ಹೇಳಲಾಗ್ತಿದೆ” ಎಂದು ಅಕ್ಟೋಬರ್ 30ರಂದು ಹಂಚಿಕೊಂಡ ಎಕ್ಸ್ ಪೋಸ್ಟ್‌ನಲ್ಲಿ ಬರೆಯಲಾಗಿತ್ತು.
🇮🇳 This Indian Man has just been found in a cave.
It’s alleged he’s 188 years old. Insane. pic.twitter.com/a7DgyFWeY6
— Concerned Citizen (@BGatesIsaPyscho) October 3, 2024
24 ಸೆಕೆಂಡುಗಳ ವೈರಲ್ ಕ್ಲಿಪ್‌ನಲ್ಲಿ, ಇಬ್ಬರು ವ್ಯಕ್ತಿಗಳು ವೃದ್ದರೊಬ್ಬರನ್ನು ಕೈ ಕೈ ಹಿಡಿದು ಕರೆದುಕೊಂಡು ಬರುವುದು. ವೃದ್ದ ವಾಕಿಂಗ್ ಸ್ಟಿಕ್ ಬಳಸಿ ನಡೆಯುತ್ತಿರುವುದನ್ನು ನೋಡಬಹುದು.
ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಬೆಂಗಳೂರಿನದ್ದಲ್ಲ. ಅದು ಮಧ್ಯ ಪ್ರದೇಶದ ವಿಡಿಯೋ. ಅದರಲ್ಲಿರುವ ವ್ಯಕ್ತಿಯ ಹೆಸರು ಸಿಯರಾಮ್ ಬಾಬಾ. ಅವರ ವಯಸ್ಸು 180 ಅಲ್ಲ,110.
ಜುಲೈ 2,2024 ರಂದು ನವಭಾರತ್ ಟೈಮ್ಸ್ ಪ್ರಕಟಿಸಿದ ವರದಿಯಲ್ಲಿ ವೈರಲ್ ವಿಡಿಯೋ ಕುರಿತು ಉಲ್ಲೇಖಿಸಿ, ಅದರಲ್ಲಿರುವ ವ್ಯಕ್ತಿಯ ಬಗ್ಗೆ ವಿವರಿಸಿದೆ. ವರದಿಯ ಪ್ರಕಾರ, ವಯಸ್ಸಾದ ವ್ಯಕ್ತಿಯ ಹೆಸರು ಸಿಯಾರಾಮ್ ಬಾಬಾ. ಅವರ ವಯಸ್ಸು 109 ವರ್ಷ. ರಾಮ ಭಕ್ತರಾಗಿರುವ ಸಿಯಾರಾಮ್ ಬಾಬಾ ಪ್ರಸ್ತುತ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ. ಆ ಪ್ರದೇಶದಲ್ಲಿ ಅವರು ಬಹಳ ಪ್ರಸಿದ್ದಿಯನ್ನು ಹೊಂದಿದ್ದಾರೆ.
ಇದೇ ಮಾಹಿತಿಯೊಂದಿಗೆ ಇನ್ನೂ ಅನೇಕ ಇಂಗ್ಲಿಷ್, ಹಿಂದಿ, ಕನ್ನಡ ಮಾಧ್ಯಮಗಳು ಬಾಬಾ ಕುರಿತು ವರದಿ ಮಾಡಿವೆ. ಹಾಗಾಗಿ, 188 ವರ್ಷದ ವ್ಯಕ್ತಿ ಬೆಂಗಳೂರು ಬಳಿ ಗುಹೆಯಲ್ಲಿ ಪತ್ತೆಯಾಗಿದ್ದಾರೆ ಎಂಬ ಸುದ್ದಿ ಸುಳ್ಳು. ಸಾಮಾಜಿಕ ಜಾಲತಾಣ ಪೋಸ್ಟ್‌ನಿಂದ ತಪ್ಪು ಮಾಹಿತಿ ಹರಿದಾಡಿದೆ.
ಇದನ್ನೂ ಓದಿ : FACT CHECK : ಹೆಜ್ಬುಲ್ಲಾ ನಾಯಕನ ಹತ್ಯೆ ಬಳಿಕ ಲೆಬನಾನ್‌ನಲ್ಲಿ ಸುನ್ನೀ-ಶಿಯಾ ಸಂಘರ್ಷ ಶುರುವಾಗಿದೆಯಾ?


