ಮೂವರು ದುಷ್ಕರ್ಮಿಗಳು 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಗುಜರಾತ್‌ನ ಸೂರತ್ ಜಿಲ್ಲೆಯ ಮಂಗ್ರೋಲ್ ತಾಲೂಕಿನ ಬೋರ್ಸರನ್ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬಾಲಕಿಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಓಡಿಸಿ ಮೂವರು ಆರೋಪಿಗಳು ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಒಂದು ವಾರದಲ್ಲಿ ಇಂತಹ ಎರಡನೇ ಘಟನೆ ನಡೆದಿದ್ದು, ಇದೆ ರೀತಿಯ ಘಟನೆ ಇತ್ತೀಚೆಗೆ ವಡೋದರಾದಲ್ಲಿ ಕೂಡಾ ನಡೆದಿತ್ತು.ಗುಜರಾತ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸಂತ್ರಸ್ತೆಯ ಸ್ನೇಹಿತನ ಕೂಗಾಟಕ್ಕೆ ಎಚ್ಚರಗೊಂಡ ಗ್ರಾಮಸ್ಥರು ಅರೆಬೆತ್ತಲೆ ಮತ್ತು ಗಾಯಗೊಂಡ ಅಪ್ರಾಪ್ತೆ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ದಾಳಿಕೋರರು ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತನ ಮೊಬೈಲ್ ಫೋನ್‌ಗಳನ್ನು ಕದ್ದಿದ್ದಾರೆ. ಪೊಲೀಸರು ಹೇಯ ಕೃತ್ಯದಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳನ್ನು ಗುರುತಿಸಿದ್ದಾರೆ ಎಂದು ವರದಿಯಾಗಿದೆ.
ಕಿಮ್‌ನಲ್ಲಿರುವ ತನ್ನ ಸಹಪಾಠಿ ಸ್ನೇಹಿತನನ್ನು ಭೇಟಿಯಾಗಲು ಹುಡುಗಿ ಬಂದಿದ್ದರು ಎಂದು ಸಂತ್ರಸ್ತೆಯ ಕುಟುಂಬ ಹೇಳಿದೆ. ರಾತ್ರಿ 10:30 ರ ಸುಮಾರಿಗೆ, ಇತರ ಇಬ್ಬರು ಸ್ನೇಹಿತರೊಂದಿಗೆ ಐಸ್ ಕ್ರೀಮ್ ಸೇವಿಸಿದ ನಂತರ, ಅವರು ಇಂಧನ ತುಂಬಿಸಲು ಬಿಗ್ ಬೊರ್ಸಾರಾ ಬಳಿಯ ಹೆದ್ದಾರಿ ಪೆಟ್ರೋಲ್ ಪಂಪ್‌ಗೆ ತೆರಳಿದ್ದರು. ಇದರ ನಂತರ ಅವರು ಸ್ವಲ್ಪ ಸಮಯ ರಸ್ತೆಯ ಪಕ್ಕದ ಹೊಲದಲ್ಲಿ ಕುಳಿತಿದ್ದಾಗ, ದಾಳಿಕೋರರು ಆಗಮಿಸಿ ಅಪರಾಧವನ್ನು ನಡೆಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರ: ಭಯೋತ್ಪಾದಕರಿಂದ ಇಬ್ಬರು ಯೋಧರ ಅಪಹರಣ, ಒಬ್ಬರ ಮೃತದೇಹ ಮತ್ತೆ
ಸೂರತ್ ಗ್ರಾಮೀಣ ಪೊಲೀಸ್ ಅಧೀಕ್ಷಕ (ಗ್ರಾಮೀಣ) ಹಿತೇಶ್ ಜೋಯ್ಸರ್ ಮಾತನಾಡಿ, ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಕೊಸಾಂಬಾ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗ್ರೋಲ್ ತಾಲೂಕಿನ ಮೋಟಾ ಬೋರಸರ ಗ್ರಾಮದ ಹೊರವಲಯದಲ್ಲಿರುವ ನಿರ್ಜನ ಸ್ಥಳದಲ್ಲಿ 17 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಹೇಳಿದ್ದಾರೆ.
“ಬಾಲಕಿಯು ತನ್ನ ಕೋಚಿಂಗ್ ಕ್ಲಾಸ್‌ಗೆ ಹಾಜರಾದ ನಂತರ ತನ್ನ ಸ್ನೇಹಿತರನ್ನು ಭೇಟಿ ಮಾಡಲು ಕಿಮ್‌ಗೆ ಹೋಗಿದ್ದರು. ರಾತ್ರಿ 10.30ರ ಸುಮಾರಿಗೆ ತನ್ನ ಇಬ್ಬರು ಸ್ನೇಹಿತರೊಂದಿಗೆ ಐಸ್ ಕ್ರೀಮ್ ಸೇವಿಸಿದ್ದಾಳೆ. ಅವಳು ಮತ್ತು ಅವಳ ಸ್ನೇಹಿತ ಮೋಟಾ ಬೋರ್ಸಾರಾ ಗ್ರಾಮದ ಬಳಿ ಹೆದ್ದಾರಿಯ ಉದ್ದಕ್ಕೂ ಪೆಟ್ರೋಲ್ ಪಂಪ್‌ಗೆ ಹೋಗುವ ದಾರಿಯಲ್ಲಿ ನಿರ್ಜನ ಸ್ಥಳದಲ್ಲಿ ಕುಳಿತಿದ್ದಾಗ ಮೂವರು ದುಷ್ಕರ್ಮಿಗಳು ಅವರ ಬಳಿಗೆ ಬಂದಿದ್ದರು ಎಂದು ಎಸ್‌ಪಿ ಹೇಳಿದ್ದಾರೆ.
“ಮೂವರು ಬಾಲಕಿಯ ಮೇಲೆ ದೌರ್ಜನ್ಯ ನಡೆಸುತ್ತಿದ್ದಾಗ ಆಕೆಯ ಸ್ನೇಹಿತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ದುಷ್ಕರ್ಮಿಗಳು ಬಾಲಕಿ ಮತ್ತು ಅವರ ಸ್ನೇಹಿತನ ಮೊಬೈಲ್ ಫೋನ್‌ಗಳೊಂದಿಗೆ ಸ್ಥಳದಿಂದ ಪರಾರಿಯಾಗುವ ಮೊದಲು ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾರೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂಓದಿ: ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ: ಆರೋಪಿ ರಾಯ್ ವಿರುದ್ಧ 11 ಸಾಕ್ಷ್ಯಗಳನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ ಸಿಬಿಐ
“ಅಪರಾಧದಲ್ಲಿ ಭಾಗಿಯಾಗಿದ್ದ ಒಂದು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಇಬ್ಬರು ಶಂಕಿತರನ್ನು ಗುರುತಿಸಲಾಗಿದೆ. ಅವರು ಬಂಧಿಸಲ್ಪಟ್ಟ ನಂತರ, ನಾವು ಮೂರನೇ ಆರೋಪಿಯನ್ನೂ ಪತ್ತೆಹಚ್ಚುತ್ತೇವೆ” ಎಂದು ಅವರು ಹೇಳಿದ್ದಾರೆ.ಗುಜರಾತ್
ಹುಡುಗಿಯ ಸ್ನೇಹಿತ ಸ್ಥಳೀಯರನ್ನು ಎಚ್ಚರಿಸಿದ್ದು, ಅವರು ಅರ್ಧ ಗಂಟೆಯೊಳಗೆ ಘಟನಾ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. “ಅದರ ನಂತರ ಪೊಲೀಸರಿಗೂ ಸೂಚನೆ ನೀಡಲಾಗಿದ್ದು, ಅವರು ಕೂಡಾ ಸ್ವಲ್ಪ ಸಮಯದಲ್ಲೆ ಗ್ರಾಮಸ್ಥರ ಪ್ರಯತ್ನಗಳೊಂದಿಗೆ ಸೇರಿಕೊಂಡರು” ಎಂದು ಅವರು ಹೇಳಿದ್ದಾರೆ.
ಕೊಸಾಂಬ ಪೊಲೀಸರು BNS ಕಾಯಿದೆಯ ಸೆಕ್ಷನ್ 70(2), 115(2), 54, ಮತ್ತು 309(4) ಸೇರಿದಂತೆ ಅನೇಕ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಗಳನ್ನು ದಾಖಲಿಸಿದ್ದಾರೆ. ಪ್ರಕರಣವು ದರೋಡೆಯನ್ನು ಸಹ ಒಳಗೊಂಡಿದ್ದು ಸೆಕ್ಷನ್ 352 ಮತ್ತು 351(3) ಸೆಕ್ಷನ್ ಕೂಡಾ ದಾಖಲಿಸಲಾಗಿದೆ. ಹೆಚ್ಚುವರಿಯಾಗಿ, ಪೋಕ್ಸೋ ಕಾಯ್ದೆಯ ಸೆಕ್ಷನ್ 4 ಮತ್ತು 6 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಅಕ್ಟೋಬರ್ 4 ರಂದು ವಡೋದರದ ಹೊರವಲಯದಲ್ಲಿರುವ ನಿರ್ಜನ ಸ್ಥಳದಲ್ಲಿ ಮೂವರು ದುಷ್ಕರ್ಮಿಗಳು ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದರು.
ವಿಡಿಯೊ ನೋಡಿ: ‘ಭ್ರಷ್ಟಾಚಾರವನ್ನು ನಾವು ಮರು ವ್ಯಾಖ್ಯಾನಿಸಬೇಕಾಗಿದೆ’ : ವಿ ಎಲ್ ನರಸಿಂಹಮೂರ್ತಿ


