“ಪುನರಾವರ್ತಿತ” ಲೈಂಗಿಕ ಕಿರುಕುಳ ಎಸಗಿದ್ದ ವಿದ್ಯಾರ್ಥಿಯನ್ನು ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯ ಅನಿರ್ದಿಷ್ಟಾವಧಿಗೆ ಹೊರಹಾಕಿದ್ದು, ಇದು ಅವರ “ಶೈಕ್ಷಣಿಕ ಸಾವಿಗೆ” ಕಾರಣವಾಗುತ್ತದೆ ಎಂದು ಬಾಂಬೆ ಹೈಕೋರ್ಟ್ ಗುರುವಾರ ಹೇಳಿದೆ ಎಂದು ಲೈವ್ ಲಾ ವರದಿ ಮಾಡಿದೆ. ವಿದ್ಯಾರ್ಥಿಯ ಅನಿರ್ದಿಷ್ಟಾವಧಿ ಉಚ್ಚಾಟನೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ವಿಶ್ವವಿದ್ಯಾನಿಲಯದ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡುವಾಗ ನ್ಯಾಯಮೂರ್ತಿಗಳಾದ ಅತುಲ್ ಚಂದೂರ್ಕರ್ ಮತ್ತು ರಾಜೇಶ್ ಪಾಟೀಲ್ ಅವರ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದನ್ನೂಓದಿ: ಜಮ್ಮು ಕಾಶ್ಮೀರ | ನ್ಯಾಷನಲ್ ಕಾನ್ಫರೆನ್ಸ್ ಸರ್ಕಾರಕ್ಕೆ ಆಮ್ ಆದ್ಮಿ ಪಕ್ಷ ಬೆಂಬಲ
ಸಂಸ್ಥೆಯ ಆಂತರಿಕ ದೂರುಗಳ ಸಮಿತಿಯ ಸಂಶೋಧನೆಗಳ ಆಧಾರದ ಮೇಲೆ ಅವರನ್ನು ಉಚ್ಚಾಟಿಸಿ ಜೂನ್ 21 ರಂದು ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿಗಳು ಹೊರಡಿಸಿದ ಆದೇಶದ ವಿರುದ್ಧ ವಿದ್ಯಾರ್ಥಿಯು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ವಿದ್ಯಾರ್ಥಿಯು ಎರಡು ವರ್ಷಗಳಿಂದ ವಿಶ್ವವಿದ್ಯಾನಿಲಯದಲ್ಲಿ ಹಲವಾರು ಹುಡುಗಿಯರಿಗೆ ಪದೇ ಪದೇ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ತರುವಾಯ, ಆಂತರಿಕ ದೂರುಗಳ ಸಮಿತಿಯು ಎರಡು ವಿಚಾರಣೆಗಳಲ್ಲಿ ಅವರನ್ನು ತಪ್ಪಿತಸ್ಥರೆಂದು ಕಂಡುಕೊಂಡಿದ್ದು, ಹಾಗಾಗಿ ಅವರನ್ನು ಉಚ್ಚಾಟನೆ ಮಾಡಲಾಗಿತ್ತು ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ. ವಿದ್ಯಾರ್ಥಿಯ ಅನಿರ್ದಿಷ್ಟಾವಧಿ ಉಚ್ಚಾಟನೆ
ಗುರುವಾರ ಪೀಠವು, ಅನಿರ್ದಿಷ್ಟ ಅವಧಿಗೆ ವಿದ್ಯಾರ್ಥಿಯನ್ನು ಉಚ್ಚಾಟನೆ ಮಾಡುವ ಆದೇಶವು ಕಠಿಣವಾಗಿದ್ದು, ಇದು ಅವರ ‘ಶೈಕ್ಷಣಿಕ ಮರಣ’ಕ್ಕೆ ಕಾರಣವಾಗುತ್ತದೆ. ಅಂತಹ ಉಚ್ಚಾಟನೆಯ ಪರಿಣಾಮವು ವಿದ್ಯಾರ್ಥಿಯ ಶೈಕ್ಷಣಿಕ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಹೇಳಿದೆ. “ಈ ರೀತಿಯ ಉಚ್ಛಾಟನೆ ಶಿಕ್ಷಣದ ನಿರಾಕರಣೆಗೆ ಕಾರಣವಾಗುತ್ತದೆ … ಅನಿರ್ದಿಷ್ಟ ಅವಧಿಗೆ ಹೊರಹಾಕುವ ಆದೇಶದಿಂದ ಪರಿಣಾಮಗಳು ತೀವ್ರವಾಗಿದೆ” ಎಂದು ನ್ಯಾಯಾಲಯ ಹೇಳಿದೆ.
ಇದನ್ನೂಓದಿ: ಲೆಬನಾನ್ ಮೇಲೆ ಇಸ್ರೇಲ್ ದಾಳಿ | 600 ಭಾರತೀಯ ಸೈನಿಕರು ಅಪಾಯದಲ್ಲಿ!
ವಿಶ್ವವಿದ್ಯಾನಿಲಯವು ವಿಧಿಸಿರುವ ಅನಿರ್ದಿಷ್ಟ ಅವಧಿಗೆ ವಿರುದ್ಧವಾಗಿ ಕೇವಲ ಒಂದು ಶೈಕ್ಷಣಿಕ ವರ್ಷಕ್ಕೆ ಉಚ್ಚಾಟನೆ ಮಾಡಬೇಕು ಎಂದು ಪೀಠವು ಆದೇಶಿಸಿದೆ. ಅರ್ಜಿದಾರರಿಗೆ 2024-25ರ ಶೈಕ್ಷಣಿಕ ವರ್ಷದಲ್ಲಿ ಸಮುದಾಯ ಸೇವೆ ಮಾಡುವಂತೆ ಆದೇಶ ನೀಡಿದ್ದು, ವಿಶ್ವವಿದ್ಯಾಲಯವು ಪೂರ್ಣಗೊಂಡ ನಂತರ ಅವರ ಫಲಿತಾಂಶಗಳನ್ನು ಪ್ರಕಟಿಸಬೇಕು ಎಂದು ಹೇಳಿದೆ.
ತನ್ನ ಅರ್ಜಿಯಲ್ಲಿ ವಿದ್ಯಾರ್ಥಿಯು ತಾನು ಅತ್ಯುತ್ತಮ ಶೈಕ್ಷಣಿಕ ದಾಖಲೆಯನ್ನು ಹೊಂದಿದ್ದೇನೆ ಎಂದು ವಾದಿಸಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ. “ತನ್ನ ವಿರುದ್ಧದ ವಿಚಾರಣೆ ಪ್ರಕ್ರಿಯೆಯು ದೋಷಪೂರಿತ, ಪಕ್ಷಪಾತ ಮತ್ತು ಸಹಜ ನ್ಯಾಯದ ತತ್ವಗಳನ್ನು ಉಲ್ಲಂಘಿಸಿದೆ” ಎಂದು ಅವರು ಆರೋಪಿಸಿದ್ದಾರೆ.
ಆದಾಗ್ಯೂ, ದೂರುದಾರರೊಬ್ಬರ ಪರ ವಕೀಲರು, ವಿದ್ಯಾರ್ಥಿಯು “ಪುನರಾವರ್ತಿತ ಅಪರಾಧಿ”ಯಾಗಿದ್ದು, ಎರಡು ವರ್ಷಗಳಲ್ಲಿ “ಅನೇಕ ಹುಡುಗಿಯರಿಗೆ ಕಿರುಕುಳ” ನೀಡಿದ್ದಾರೆ ಎಂದು ಹೇಳಿದ್ದಾರೆ. 2022 ರಲ್ಲಿ ಬೇರೊಬ್ಬ ಹುಡುಗಿ ಸಲ್ಲಿಸಿದ ದೂರಿನ ಮೇಲೆ ಆಂತರಿಕ ದೂರುಗಳ ಸಮಿತಿಯಿಂದ ವಿಚಾರಣೆಯನ್ನು ಎದುರಿಸಿದ್ದರು ಎಂದು ವಕೀಲರು ಉಲ್ಲೇಖಿಸಿದ್ದಾರೆ.
ವಿಡಿಯೊ ನೋಡಿ: ನಮ್ಮನ್ನು ಬಂಧಿಸಿ ಎಷ್ಟು ಬಾರಿ ಠಾಣೆಯಲ್ಲಿ ಕೂರಿಸಿದ್ರು ಕೂಡಾ ನಾವು ಮತ್ತೆ ಮತ್ತೆ ಬರುತ್ತೇವೆ
ವಿಡಿಯೊ ನೋಡಿ: ನಮ್ಮನ್ನು ಬಂಧಿಸಿ ಎಷ್ಟು ಬಾರಿ ಠಾಣೆಯಲ್ಲಿ ಕೂರಿಸಿದ್ರು ಕೂಡಾ ನಾವು ಮತ್ತೆ ಮತ್ತೆ ಬರುತ್ತೇವೆ
ವಿಡಿಯೊ ನೋಡಿ: ನಮ್ಮನ್ನು ಬಂಧಿಸಿ ಎಷ್ಟು ಬಾರಿ ಠಾಣೆಯಲ್ಲಿ ಕೂರಿಸಿದ್ರು ಕೂಡಾ ನಾವು ಮತ್ತೆ ಮತ್ತೆ ಬರುತ್ತೇವೆ


