ದೇಶದಾದ್ಯಂತ ಕಳೆದ ಮೂರು ದಿನಗಳಲ್ಲಿ ಸತತವಾಗಿ 12ನೇ ವಿಮಾನಕ್ಕೆ ಬಾಂಬ್ ದಾಳಿ ಬೆದರಿಕೆ ಕರೆಗಳು ಬಂದಿವೆ ಮಾಧ್ಯಮಗಳು ವರದಿ ಮಾಡಿವೆ. ಬುಧವಾರದಂದು ಆಕಾಶ ಏರ್ ಮತ್ತು ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆಗಳನ್ನು ಮಾಡಲಾಗಿದ್ದು, ತೀವ್ರ ಆತಂಕ ಸೃಷ್ಟಿಯಾಗಿತ್ತು. ಆದರೆ ತನಿಖೆಯ ವೇಳೆ ಇದು ಸುಳ್ಳು ಕರೆಗಳು ಎಂದು ತಿಳಿದುಬಂದಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಇದಕ್ಕೂ ಮುನ್ನ ಮುಂಬೈನಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಹುಸಿ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಅಹಮದಾಬಾದ್‌ಗೆ ಮಾರ್ಗ ಬದಲಿಸಲಾಗಿತ್ತು. ಸುಮಾರು 200 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತ ವಿಮಾನ ಮಂಗಳವಾರ ರಾತ್ರಿ ಮುಂಬೈನಿಂದ ಹೊರಟಿತ್ತು. ಬುಧವಾರ ಈ ಬೆದರಿಕೆ ಸುಳ್ಳು ಎಂದು ದೃಢಪಟ್ಟಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಇಂದು ಬೆಂಗಳೂರಿಗೆ ಹೊರಟಿದ್ದ ಆಕಾಶ ಏರ್ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದ್ದರಿಂದ ದೆಹಲಿಗೆ ವಾಪಸ್ ಕಳುಹಿಸಲಾಯಿತು. 184 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಫ್ಲೈಟ್ QP1335, ದೆಹಲಿಯಿಂದ ಟೇಕ್ ಆಫ್ ಆಗಿದ್ದು, ಮಧ್ಯಾಹ್ನ 1:15 ಕ್ಕೆ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು. ನಂತರ ವಿಮಾನವನ್ನು ರಾಷ್ಟ್ರ ರಾಜಧಾನಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಅದಾಗ್ಯೂ ಈ ಬೆದರಿಕೆ ಕರೆ ಕೂಡಾ ಸುಳ್ಳು ಎಂದು ತನಿಖೆಯ ವೇಳೆ ತಿಳಿದು ಬಂದಿದೆ.
“ಅಕಾಸ ಏರ್ ಫ್ಲೈಟ್ QP 1335, ಅಕ್ಟೋಬರ್ 16, 2024 ರಂದು ದೆಹಲಿಯಿಂದ ಬೆಂಗಳೂರಿಗೆ ಹಾರುತ್ತಿದ್ದಾಗ ಬೆದರಿಕೆ ಕರೆ ಸ್ವೀಕರಿಸಲಾಗಿತ್ತು. ಅದರಲ್ಲಿ 174 ಪ್ರಯಾಣಿಕರು, ಮೂರು ಶಿಶುಗಳು ಮತ್ತು ಏಳು ಸಿಬ್ಬಂದಿ ಇದ್ದರು. ಈ ವೇಳೆ ಆಕಾಶ ಏರ್ ತುರ್ತು ಪ್ರತಿಕ್ರಿಯೆ ತಂಡಗಳು ಎಲ್ಲಾ ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಿದೆ. ಕಾರ್ಯಾಚರಣಾ ತಂಡಗಳಿಗೆ ಒದಗಿಸಲಾಗಿದೆ ಮತ್ತು ಸಂಬಂಧಿತ ಮಧ್ಯಸ್ಥಗಾರರಿಗೆ ಮಾಹಿತಿಯನ್ನು ಪಾರದರ್ಶಕವಾಗಿ ಪ್ರಸಾರ ಮಾಡಲಾಗಿದೆ” ಎಂದು ಆಕಾಶ ಏರ್ ವಕ್ತಾರರು ತಿಳಿಸಿದ್ದಾರೆ.
“ಕ್ಯಾಪ್ಟನ್ ಅಗತ್ಯವಿರುವ ಎಲ್ಲಾ ತುರ್ತು ವಿಧಾನಗಳನ್ನು ಅನುಸರಿಸಿದರು, ವಿಮಾನವನ್ನು ದೆಹಲಿಗೆ ಹಿಂತಿರುಗಿಸಿದರು ಮತ್ತು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 1:48 ಕ್ಕೆ ಸುರಕ್ಷಿತವಾಗಿ ಇಳಿದರು” ಎಂದು ಅದು ಹೇಳಿದೆ.
“ನಿಗದಿತ ಸುರಕ್ಷತೆ ಮತ್ತು ಭದ್ರತಾ ಕಾರ್ಯವಿಧಾನಗಳ ಪ್ರಕಾರ, ವಿಮಾನವನ್ನು ಲ್ಯಾಂಡಿಂಗ್ ನಂತರ ಪ್ರತ್ಯೇಕ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಅಗತ್ಯ ಸುರಕ್ಷತೆ ಮತ್ತು ಭದ್ರತೆಯನ್ನು ಕೈಗೊಂಡ ಸ್ಥಳೀಯ ಅಧಿಕಾರಿಗಳ ಸಮನ್ವಯದಲ್ಲಿ ಎಲ್ಲಾ ಪ್ರಯಾಣಿಕರನ್ನು ಮಧ್ಯಾಹ್ನ 1:57 ಕ್ಕೆ ಇಳಿಸಲಾಯಿತು” ಎಂದು ಕಂಪನಿ ಹೇಳಿದೆ.
ಕಳೆದ 48 ಗಂಟೆಗಳಲ್ಲಿ 10 ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ
ಮಂಗಳವಾರ, ದೆಹಲಿ-ಶಿಕಾಗೋ ಏರ್ ಇಂಡಿಯಾ ವಿಮಾನ, ಜೈಪುರ-ಬೆಂಗಳೂರು ಏರ್ ಇಂಡಿಯಾ ಎಕ್ಸ್‌ಪ್ರೆಸ್, ದಮಾಮ್-ಲಕ್ನೋ ಇಂಡಿಗೋ ವಿಮಾನ, ದರ್ಭಾಂಗ-ಮುಂಬೈ ಸ್ಪೈಸ್‌ಜೆಟ್ ವಿಮಾನ, ಸಿಲಿಗುರಿ-ಬೆಂಗಳೂರು ಆಕಾಶ ಏರ್ ವಿಮಾನ, ಅಲಯನ್ಸ್ ಏರ್ ಅಮೃತಸರ-ಡೆಹ್ರಾಡೂನ್-ದೆಹಲಿ ವಿಮಾನ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಮಧುರೈನಿಂದ ಸಿಂಗಾಪುರಕ್ಕೆ ಹೊರಟಿದ್ದ ಏಳು ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿತ್ತು.
ಸೋಮವಾರ ಎರಡು ಇಂಡಿಗೋ ವಿಮಾನಗಳು ಮತ್ತು ಏರ್ ಇಂಡಿಯಾ ವಿಮಾನಕ್ಕೆ ಇದೇ ರೀತಿಯ ಹುಸಿ ಬಾಂಬ್ ಬೆದರಿಕೆ ಬಂದಿತ್ತು. ಅವುಗಳಲ್ಲಿ ಒಂದು ಮುಂಬೈ-ನ್ಯೂಯಾರ್ಕ್ ಏರ್ ಇಂಡಿಯಾ ವಿಮಾನ, ಇನ್ನೊಂದು ಮಸ್ಕತ್‌ಗೆ ಹೋಗುವ ಇಂಡಿಗೋ ವಿಮಾನ ಮತ್ತು ಮತ್ತೊಂದು ಇಂಡಿಗೋ ವಿಮಾನ ಜಿದ್ದಾಕ್ಕೆ ಹೋಗುತ್ತಿತ್ತು.
ಇದನ್ನೂ ಓದಿ: ಉತ್ತರ ಪ್ರದೇಶ | ಬಾರ್ ಮಾಲೀಕನಿಂದ ಬಿಜೆಪಿ ಶಾಸಕನಿಗೆ ಹಲ್ಲೆ


