ಸಾರ್ವಜನಿಕ ಸಭೆಯೊಂದರಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಲಪಂಥೀಯ ಸಂಘಟನೆ ಬಜರಂಗದಳದ ಇಬ್ಬರು ನಾಯಕರ ವಿರುದ್ಧ ಪ್ರಕರಣ ದಾಖಲಿಸಿರುವ ಘಟನೆ ಪಿಲಿಭಿತ್‌ನಲ್ಲಿ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಸಂಜಯ್ ಮಿಶ್ರಾ ಮತ್ತು ವಿವೇಕ್ ಮಿಶ್ರಾ ಎಂದು ಗುರುತಿಸಲಾಗಿದೆ.
ಅಫ್ಜಲ್ ಖಾನ್ ಎಂಬುವವರು ಸಲ್ಲಿಸಿದ ದೂರಿನ ಪ್ರಕಾರ, ಅಕ್ಟೋಬರ್ 13 ರಂದು ಇಲ್ಲಿನ ಮಾಧೋತಂಡ ಪಟ್ಟಣದಲ್ಲಿ ಘಟನೆ ಸಂಭವಿಸಿದೆ.
ಸಭೆಯಲ್ಲಿ ಬಜರಂಗದಳದ ಮುಖಂಡರಾದ ಸಂಜಯ್ ಮಿಶ್ರಾ ಮತ್ತು ವಿವೇಕ್ ಮಿಶ್ರಾ ಅವರು ಮುಸ್ಲಿಂ ಸಮುದಾಯಕ್ಕೆ ಪ್ರಚೋದನಕಾರಿ, ಆಕ್ರಮಣಕಾರಿ ಭಾಷಣ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ಪು ರನ್‌ಪುರ್ ವಿಶಾಲ್ ಚೌಧರಿ ತಿಳಿಸಿದ್ದಾರೆ.
ಅವಹೇಳನಕಾರಿ ಹೇಳಿಕೆಗಳಿಂದ ಕೋಪಗೊಂಡ ಮುಸ್ಲಿಂ ಸಮುದಾಯದ ಕೆಲವು ಜನರು ಘಟನೆಯನ್ನು ಖಂಡಿಸಲು ಕಾರ್ಯಕ್ರಮದ ಸ್ಥಳದ ಹೊರಗೆ ಜಮಾಯಿಸಿದರು. ಆದರೆ, ಸ್ಥಳೀಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು ಮತ್ತು ಸೂಕ್ತ ಕ್ರಮದ ಭರವಸೆ ನೀಡಿದರು. ಇವರಿಬ್ಬರ ಭಾಷಣದ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಖಾನ್ ಅವರ ಲಿಖಿತ ದೂರು ಮತ್ತು ಘಟನೆಯ ವೈರಲ್ ವೀಡಿಯೊವನ್ನು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ; ಮದ್ರಸಾಗಳನ್ನು ಮುಚ್ಚುವಂತೆ ನಾನು ಯಾವತ್ತೂ ಹೇಳಿಲ್ಲ : ಎನ್‌ಸಿಪಿಸಿಆರ್ ಅಧ್ಯಕ್ಷ


