ವಿಮಾನಗಳಿಗೆ ಸರಣಿ ಬಾಂಬ್ ಬೆದರಿಕೆಗಳು ಬಂದ ಹಿನ್ನಲೆ ತನಿಖೆ ನಡೆಸಿದ್ದ ಕೇಂದ್ರ ಗುಪ್ತಚರ ಸಂಸ್ಥೆಗಳು, ಬೆದರಿಕೆಗಳು ಲಂಡನ್ ಮತ್ತು ಜರ್ಮನಿಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ ಐಪಿ ವಿಳಾಸಗಳಿಂದ ಬಂದಿದೆ ಎಂದು ಪತ್ತೆ ಹಚ್ಚಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ವಿಮಾನಗಳಿಗೆ ಬಾಂಬ್ ಬೆದರಿಕೆ
ಈ ವಾರ 20ಕ್ಕೂ ಹೆಚ್ಚು ಆಂತರಿಕ ಮತ್ತು ಅಂತರಾಷ್ಟ್ರೀಯ ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿವೆ. ಸೋಮವಾರ ಮೂರು ಅಂತರಾಷ್ಟ್ರೀಯ ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿದ್ದು, ಮಂಗಳವಾರ ಮತ್ತೊಂದು 10 ವಿಮಾನಗಳಿಗೆ ಇದೇ ರೀತಿಯ ಬೆದರಿಕೆಗಳು ಬಂದಿದ್ದವು. ಅದಾಗಿ ಒಂದು ದಿನದ ನಂತರ ಕನಿಷ್ಠ ಆರು ಅಂತಹದ್ದೆ ಬೆದರಿಕೆಗಳು ಬಂದಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಈ ಎಲ್ಲಾ ಬೆದರಿಕೆಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಬಂದಿದ್ದು, ಭದ್ರತಾ ತಪಾಸಣೆಯ ನಂತರ, ಅವುಗಳನ್ನು ಹುಸಿ ಬಾಂಬ್ ಬೆದರಿಕೆ ಎಂದು ಘೋಷಿಸಲಾಗಿದೆ. ಈ ಬಗ್ಗೆ ಕೇಂದ್ರೀಯ ಗುಪ್ತಚರ ಏಜೆನ್ಸಿಗಳು ತನಿಖೆ ನಡೆಸಲು ಪ್ರಾರಂಭಿಸಿದಾಗ, ಮೊದಲಿಗೆ ಎಲ್ಲಾ ಪೋಸ್ಟ್‌ಗಳನ್ನು ರಚಿಸಲಾದ ಐಪಿ ವಿಳಾಸಗಳನ್ನು ಹಂಚಿಕೊಳ್ಳಲು X ಅನ್ನು ಕೇಳಿದ್ದಾರೆ. ಜೊತೆಗೆ ಎಲ್ಲಾ ಖಾತೆಗಳನ್ನು ನಿಷ್ಕ್ರಿಯಗೊಳಿಸಲು ಕೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಮಾನಗಳಿಗೆ ಬಾಂಬ್ ಬೆದರಿಕೆ
“ನಾವು ಪ್ರಾಥಮಿಕ ವರದಿಗಳನ್ನು ಪಡೆದಿದ್ದೇವೆ ಮತ್ತು ಮೂರು ಪ್ರತ್ಯೇಕ ಹ್ಯಾಂಡಲ್‌ಗಳಿಂದ ಈ ಪೋಸ್ಟ್‌ಗಳನ್ನು ಮಾಡಲಾಗಿದೆ ಎಂದು ಅವರು ನಮಗೆ ತಿಳಿಸಿದ್ದಾರೆ. ಈ ಮೂರು ಹ್ಯಾಂಡಲ್‌ಗಳಲ್ಲಿ, ಅವರು ಎರಡು IP ವಿಳಾಸಗಳನ್ನು ಪತ್ತೆಹಚ್ಚಿದ್ದಾರೆ; ಇದು ಲಂಡನ್ ಮತ್ತು ಜರ್ಮನಿಯ ಎರಡು ಸಾಮಾನ್ಯ ಐಪಿಗಳು. ವರ್ಚುವಲ್ ಖಾಸಗಿ ನೆಟ್‌ವರ್ಕ್ (VPN) ಅನ್ನು ಬಳಸಿ ಬಳಕೆದಾರರು ಈ ಟ್ವೀಟ್ ಮಾಡಿದ್ದಾರೆ. ಇನ್ನೊಂದು ಹ್ಯಾಂಡಲ್‌ನ ವಿವರಗಳಿಗಾಗಿ ಇನ್ನೂ ಕಾಯುತ್ತಿದ್ದೇವೆ” ಎಂದು ಮೂಲವೊಂದನ್ನು ಉಲ್ಲೇಖಿಸಿ ಹೇಳಿದ್ದಾರೆ. ಸಾಮಾನ್ಯವಾಗಿ ವಿಪಿಎನ್ ಬಳಕೆದಾರರ ಗುರುತು ಮರೆಮಾಚುತ್ತದೆ.
“ಈ ತಿಂಗಳು ಇಲ್ಲಿಯವರೆಗೆ, ವರದಿಯಾದ ಬಾಂಬ್ ಬೆದರಿಕೆಗಳನ್ನು ಒಳಗೊಂಡ ಏಳು ಘಟನೆಗಳಿಗೆ ಐಜಿಐ ವಿಮಾನ ನಿಲ್ದಾಣ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಸಂಪೂರ್ಣ ಪರಿಶೀಲನೆ ಮತ್ತು ತಪಾಸಣೆಯ ನಂತರ, ಎಲ್ಲಾ ಬೆದರಿಕೆಗಳು ಹುಸಿ ಎಂದು ದೃಢಪಡಿಸಲಾಯಿತು. ಬೆದರಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಪ್ರಾರಂಭಿಸಲಾಗಿದೆ” ಎಂದು ಉಪ ಪೊಲೀಸ್ ಆಯುಕ್ತ (ಐಜಿಐ ವಿಮಾನ ನಿಲ್ದಾಣ) ಉಷಾ ರಂಗನಾನಿ ಹೇಳಿದ್ದಾರೆ.
ಈ ಮಧ್ಯೆ ನಾಗರಿಕ ವಿಮಾನಯಾನ ಸಚಿವಾಲಯದ (MoCA) ಹಿರಿಯ ಅಧಿಕಾರಿಗಳು, ಇಂತಹ ಬೆದರಿಕೆಗಳ ಹಿಂದೆ ಇರುವವರಿಗೆ, ಭಾರತೀಯ ವಿಮಾನಯಾನ ಸಂಸ್ಥೆಗಳ ವಿಮಾನಗಳಲ್ಲಿ ಹಾರಾಟ ನಿಷೇಧ ಪಟ್ಟಿಗೆ ಸೇರಿಸುವುದು ಸೇರಿದಂತೆ ಕಠಿಣ ಶಿಕ್ಷೆಯನ್ನು ಜಾರಿ ಮಾಡಲು ನಿಯಮಗಳ ನ್ನು ಮತ್ತಷ್ಟು ಬಿಗಿಗೊಳಿಸುವ ಬಗ್ಗೆ ಚಿಂತಿಸುತ್ತಿದ್ದಾರೆ.
ಇದನ್ನೂ ಓದಿ: ಅಸ್ಸಾಂ | ಹಳಿತಪ್ಪಿದ ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್‌ನ 8 ಬೋಗಿಗಳು!


