ಡಿಸೆಂಬರ್ 31 ರೊಳಗೆ ಮುಸ್ಲಿಂ ಕುಟುಂಬಗಳನ್ನು ಪಟ್ಟಣದಿಂದ ಹೊರಹೋಗುವಂತೆ ನಿರ್ಣಯ ಅಂಗೀಕರಿಸುವ ಆತಂಕಕಾರಿ ಬೆಳವಣಿಗೆ ಉತ್ತರಾಖಂಡದ ಚಮೋಲಿಯಲ್ಲಿ ನಡೆದಿದೆ. ಇತ್ತಿಚೆಗೆ ರಾಜ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ಕೋಮು ಉದ್ವಿಗ್ನತೆ ಹೆಚ್ಚುತ್ತಿದ್ದು, ಕೆಲವು ದುಷ್ಕರ್ಮಿಗಳ ಗುಂಪುಗಳು ಸ್ಥಳೀಯ ಮುಸ್ಲಿಂ ಸಮುದಾಯವನ್ನು ಗುರಿ ಮಾಡುವುದನ್ನು ಪ್ರಾರಂಭಿಸಿವೆ. ಉತ್ತರಾಖಂಡ
ಚಮೋಲಿಯ ಖಾನಸರ್ ಪಟ್ಟಣದಲ್ಲಿ ವರ್ತಕರ ಮಂಡಳಿಯು ಡಿಸೆಂಬರ್ 31 ರೊಳಗೆ 15 ಮುಸ್ಲಿಂ ಕುಟುಂಬಗಳನ್ನು ಪಟ್ಟಣವನ್ನು ಖಾಲಿ ಮಾಡುವಂತೆ ನಿರ್ಣಯವನ್ನು ಅಂಗೀಕರಿಸಿದೆ ಎಂದು ವರದಿಯಾಗಿದೆ. ಕೋಮು ಸೌಹಾರ್ದತೆಯ ಬಗ್ಗೆ ಆತಂಕ ವ್ಯಕ್ತಪಡಿಸಿ ಪ್ರದೇಶದಲ್ಲಿನ ಎಲ್ಲಾ “ಹೊರಗಿನವರನ್ನು” ಪರಿಶೀಲಿಸುವಂತೆ ಗುಂಪುಗಳು ಒತ್ತಾಯಿಸಿದೆ.
ದುಷ್ಕರ್ಮಿಗಳ ಈ ನಿರ್ಧಾರದಿಂದ ಪಟ್ಟಣದಲ್ಲಿ ದೀರ್ಘಕಾಲದಿಂದಲೂ ವಾಸಿಸುತ್ತಿರುವ ಮುಸ್ಲಿಂ ನಿವಾಸಿಗಳನ್ನು ಕೂಡಾ ಆಘಾತ ಮತ್ತು ದಿಗ್ಭ್ರಮೆಗೊಳಿಸಿದೆ. ಉತ್ತರಾಖಂಡ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಇತ್ತಿಚಿನ ವಿಡಿಯೊದಲ್ಲಿ ವ್ಯಾಪಾರಿಗಳ ರ‍್ಯಾಲಿಯ ವೇಳೆ ಮೆರವಣಿಗೆಯಲ್ಲಿ ಹೆಚ್ಚಾಗಿ ಸ್ಥಳೀಯ ಉದ್ಯಮಿಗಳು ಭಾಗವಹಿಸಿದ್ದರು. ಇದರಲ್ಲಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗುತ್ತಿರುವುದು ದಾಖಲಾಗಿದೆ. ಎತ್ತುತ್ತಿರುವುದನ್ನು ತೋರಿಸುತ್ತದೆ. ಮುಸ್ಲಿಮರಿಗೆ ನಿಷೇಧ ಹೇರುವ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪವಾಗಿದ್ದು, ಈ ಕ್ರಮವನ್ನು ಮುಸ್ಲಿಂ ಸಮುದಾಯದ ವಿರುದ್ಧ ತಾರತಮ್ಯದ ಘೋರ ಕೃತ್ಯ ಎಂದು ಬಣ್ಣಿಸಿದ್ದಾರೆ.
ಹೆಸರು ಹೇಳಲು ಇಚ್ಛಿಸದ ಸ್ಥಳೀಯ ಹೋರಾಟಗಾರರೊಬ್ಬರು, “ಈ ನಿರ್ಧಾರವು ಸ್ವೀಕಾರಾರ್ಹವಲ್ಲ. ಇದು ಸಮಾನತೆ ಮತ್ತು ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ. ನಾವು ಈ ಪ್ರಸ್ತಾಪದ ವಿರುದ್ಧ ಹೋರಾಡುತ್ತೇವೆ ಮತ್ತು ಎಲ್ಲಾ ನಾಗರಿಕರ ಹಕ್ಕುಗಳನ್ನು ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.
ಮತ್ತೊಬ್ಬ ಸ್ಥಳೀಯ ನಿವಾಸಿ, “ಇದು ಕೇವಲ 15 ಕುಟುಂಬಗಳ ವಿಚಾರವಲ್ಲ. ಇದು ನಮ್ಮ ಸಮಾಜದ ರಚನೆಗೆ ಸಂಬಂಧಿಸಿದ ವಿಚಾರವಾಗಿದೆ. ಇಂತಹ ವಿಭಜಕ ಕ್ರಮಗಳ ವಿರುದ್ಧ ನಾವು ಒಟ್ಟಾಗಿ ನಿಲ್ಲಬೇಕು.” ಎಂದು ಹೇಳಿದ್ದಾರೆ. ಅದಾಗ್ಯೂ, ಹತ್ತಾರು ವರ್ಷಗಳಿಂದ ಪಟ್ಟಣದಲ್ಲಿ ನೆಲೆಸಿರುವ ಸಂತ್ರಸ್ತ ಕುಟುಂಬಗಳು ತಮ್ಮ ಭವಿಷ್ಯದ ಬಗ್ಗೆ ಆತಂಕದಲ್ಲಿದ್ದಾರೆ.
“ವರ್ತಕರ ಸಂಘದ ಈ ಹಠಾತ್ ನಿರ್ಧಾರದಿಂದ ನಾವು ತೀವ್ರವಾಗಿ ವಿಚಲಿತರಾಗಿದ್ದೇವೆ. ನಾವು ದಶಕಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ ಮತ್ತು ನಮ್ಮ ಕುಟುಂಬಗಳು ಈ ಸಮುದಾಯದ ಅವಿಭಾಜ್ಯ ಅಂಗವಾಗಿದೆ. ನಮ್ಮನ್ನು ಏಕೆ ಇಲ್ಲಿಂದ ಹೊರಹೋಗುವಂತೆ ಒತ್ತಾಯಿಸುತ್ತಿದ್ದಾರೆ?” ಎಂದು ಹೆಸರು ಹೇಳಲು ಇಚ್ಛಿಸದ ಪಟ್ಟಣದಲ್ಲೆ ಉಳಿಯಲು ಬಯಸುವ ಸ್ಥಳೀಯ ಮುಸ್ಲಿಂ ನಿವಾಸಿಯೊಬ್ಬರು ಹೇಳಿದ್ದಾರೆ.
ಹಿಂದೂ ಮಹಿಳೆಯರು ಮತ್ತು ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ನಡುವೆ ನಡೆಯುವ ಅಪರಾಧ ಘಟನೆಗಳನ್ನು ತಡೆಯುವ ಉದ್ದೇಶದಿಂದ ಈ ನಿರ್ಧಾನ ಕೈಗೊಳ್ಳಲಾಗಿದೆ ಎಂದು ಮೈಥಾನ್ ಸೇವಾ ಸಮಿತಿಯ ಅಧ್ಯಕ್ಷ ವೀರೇಂದ್ರ ಸಿಂಗ್ ಹೇಳಿದ್ದಾರೆ. ಮೈಥಾನ್ ಮಾರುಕಟ್ಟೆಯಲ್ಲಿ ನಡೆದ ‘ಜಾಗೃತ’ ರ‍್ಯಾಲಿಯ ನಂತರ ವರ್ತಕರ ಸಂಘದ ಸಭೆಯಲ್ಲಿ ಈ ಪ್ರಸ್ತಾಪವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು ಎಂದು ಅವರು ಹೇಳಿದ್ದಾರೆ.
ಅಷ್ಟೆ ಅಲ್ಲದೆ, ಈ ಸಭೆಯಲ್ಲಿ ಖಾನ್ಸರ್ ಕಣಿವೆಯ ಗ್ರಾಮದ ಪ್ರದೇಶಗಳಿಗೆ ಎಲ್ಲಾ ಮಾರಾಟಗಾರರನ್ನು ಪ್ರವೇಶಿಸುವುದನ್ನು ನಿಷೇಧಿಸಲು ನಿರ್ಧರಿಸಲಾಯಿತು ಎಂದು ಸಿಂಗ್ ಹೇಳಿದ್ದಾರೆ. ಒಂದು ವೇಳೆ ವ್ಯಾಪಾರಿಗಳು ಸಿಕ್ಕಿಬಿದ್ದರೆ ಅವರು 10,000 ರೂಪಾಯಿ ದಂಡ ಮತ್ತು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಖಾನ್ಸರ್ ಪಟ್ಟಣದಲ್ಲಿರುವ ಮೈಥಾನ್ ಮಾರುಕಟ್ಟೆ ಗೈರ್‌ಸೈನ್‌ನ ಪ್ರಮುಖ ಭಾಗವಾಗಿದ್ದು, 21 ಗ್ರಾಮ ಪಂಚಾಯತ್‌ಗಳೊಂದಿಗೆ ಸುಮಾರು 40,000 ಜನಸಂಖ್ಯೆಯನ್ನು ಹೊಂದಿದೆ. ಮೈಥಾನ್ ಟ್ರೇಡ್ ಅಸೋಸಿಯೇಷನ್ ಅಧ್ಯಕ್ಷ ಬಲದೇವ್ ಸಿಂಗ್ ನೇಗಿ ಮಾತನಾಡಿ, “ನಾವು ಯಾವುದೇ ಸಂದರ್ಭದಲ್ಲೂ ದೇವಭೂಮಿಯ ವಾತಾವರಣವನ್ನು ಹದಗೆಡಲು ಬಿಡುವುದಿಲ್ಲ. ಅನುಮಾನಾಸ್ಪದ ವ್ಯಕ್ತಿಗಳು ಈ ಪ್ರದೇಶದಲ್ಲಿ ವ್ಯಾಪಾರ ಮಾಡಲು ಅನುಮತಿಸುವುದಿಲ್ಲ” ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಚಮೋಲಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸರ್ವೇಶ್ ಪನ್ವಾರ್, “ನಾವು ಶನಿವಾರ ವರ್ತಕರ ಸಂಘದ ಸದಸ್ಯರು ಮತ್ತು ಸ್ಥಳೀಯ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಈ ಸಭೆಯಲ್ಲಿ ಪ್ರದೇಶದಲ್ಲಿ ವ್ಯಾಪಾರ ಮಾಡುವ ಹೊರಗಿನವರ ಪರಿಶೀಲನೆ ಮತ್ತು ಕಣ್ಗಾವಲು ನಿರ್ಣಾಯಕವಾಗಿದೆ ಎಂದು ನಾವು ತೀರ್ಮಾನಕ್ಕೆ ಬಂದಿದ್ದೇವೆ. ತನಿಖೆಯು ನಿರ್ಣಾಯಕವಾಗಿದ್ದು ಪ್ರಸ್ತುತ ನಡೆಯುತ್ತಿದೆ.” ಎಂದು ಹೇಳಿದ್ದಾರೆ.
ಗೈರ್‌ಸೈನ್ ಎಸ್‌ಎಚ್‌ಒ ಜೈಪಾಲ್ ಸಿಂಗ್ ನೇಗಿ ಮಾತನಾಡಿ, “ಪೊಲೀಸರು ಸ್ಥಳೀಯ ಗುಪ್ತಚರ ಘಟಕದ ಸಹಾಯದಿಂದ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗುಜರಾತ್: ಹೈಕೋರ್ಟ್ ನಿರ್ದೇಶನದ ನಂತರ ಬಿಜೆಪಿ ಶಾಸಕನ ಮೇಲೆ ಅತ್ಯಾಚಾರ ಪ್ರಕರಣ ದಾಖಲು
ಗುಜರಾತ್: ಹೈಕೋರ್ಟ್ ನಿರ್ದೇಶನದ ನಂತರ ಬಿಜೆಪಿ ಶಾಸಕನ ಮೇಲೆ ಅತ್ಯಾಚಾರ ಪ್ರಕರಣ ದಾಖಲು


