ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಒಂದು ತಿಂಗಳು ಬಾಕಿಯಿದ್ದು, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟದ ಪರವಾಗಿ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವ್ಯಾಪಕ ಪ್ರಚಾರ ಕಾರ್ಯಕ್ರಮವನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ. ಬಿಜೆಪಿಯ ಮಾತೃ ಸಂಘಟನೆಯಾಗಿರುವ ಆರ್‌ಎಸ್‌ಎಸ್ ತನ್ನ ಎಲ್ಲಾ ಅಂಗಸಂಸ್ಥೆಗಳೊಂದಿಗೆ ಸಮನ್ವಯದಿಂದ ಈ ಕ್ರಮವನ್ನು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹರಿಯಾಣ
“ರಾಜ್ಯದಾದ್ಯಂತ ತಂಡಗಳನ್ನು ರಚಿಸಲಾಗಿದೆ ಮತ್ತು ಅವರು ತಮ್ಮ ಪ್ರದೇಶಗಳಲ್ಲಿನ ಜನರನ್ನು ತಲುಪಲು ಪ್ರಾರಂಭಿಸಿದ್ದು, ಸಂದೇಶವನ್ನು ತೆಗೆದುಕೊಳ್ಳುತ್ತಿದ್ದಾರೆ” ಎಂದು ಮೂಲವೊಂದು ಪಿಟಿಐಗೆ ತಿಳಿಸಿದೆ. ಪ್ರತಿ ತಂಡವು 5-10 ಜನರೊಂದಿಗೆ ಸಣ್ಣ ಗುಂಪು ಸಭೆಗಳನ್ನು ನಡೆಸುತ್ತಿದ್ದು, ಆಯಾ ಪ್ರದೇಶಗಳಲ್ಲಿನ ‘ಮೊಹಲ್ಲಾ’ಗಳಲ್ಲಿ ತಮ್ಮ ಸ್ಥಳೀಯ ನೆಟ್‌ವರ್ಕ್ ಮೂಲಕ ಕುಟುಂಬಗಳನ್ನು ತಲುಪುತ್ತಿದೆ ಎಂದು ಮೂಲಗಳು ತಿಳಿಸಿವೆ. ಹರಿಯಾಣ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಈ ಸಭೆಗಳಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಬಿಜೆಪಿಯನ್ನು ಬೆಂಬಲಿಸಿ ಎಂದು ಸ್ಪಷ್ಟವಾಗಿ ಹೇಳುವುದಿಲ್ಲ. ಆದರೆ ರಾಷ್ಟ್ರೀಯ ಹಿತಾಸಕ್ತಿ, ಹಿಂದುತ್ವ, ಉತ್ತಮ ಆಡಳಿತ, ಅಭಿವೃದ್ಧಿ, ಸಾರ್ವಜನಿಕ ಕಲ್ಯಾಣ ಮತ್ತು ಸಮಾಜಕ್ಕೆ ಸಂಬಂಧಿಸಿದ ವಿವಿಧ ಸ್ಥಳೀಯ ವಿಷಯಗಳ ಬಗ್ಗೆ ನಿಕಟ ಚರ್ಚೆಗಳ ಮೂಲಕ ಜನರಲ್ಲಿ ಅಭಿಪ್ರಾಯ ರೂಪಿಸುತ್ತಾರೆ” ಎಂದು ಮೂಲಗಳು ತಿಳಿಸಿವೆ.
ತಂಡಗಳನ್ನು ರಚಿಸುವ ಮೊದಲು, ಆರೆಸ್ಸೆಸ್ ಮತ್ತು ಅದರ ಅಂಗಸಂಸ್ಥೆಗಳ ಪದಾಧಿಕಾರಿಗಳು ರಾಜ್ಯದ ಎಲ್ಲಾ ಹಂತಗಳಲ್ಲಿ ಕಾರ್ಯತಂತ್ರವನ್ನು ರೂಪಿಸಲು ಸಮನ್ವಯ ಸಭೆಗಳನ್ನು ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಇತ್ತಿಚೆಗೆ ಮುಕ್ತಾಯಗೊಂಡ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ನಂತರ ಆರೆಸ್ಸೆಸ್‌ನ ಈ ಕ್ರಮಕ್ಕೆ ಭಾರಿ ಮಹತ್ವ ಸಿಕ್ಕಿದೆ. ಹರಿಯಾಣದಾದ್ಯಂತ ತನ್ನ ಅಂಗಸಂಸ್ಥೆಗಳೊಂದಿಗೆ ನಡೆಸಿದ ಸಮನ್ವಯದೊಂದಿಗೆ ಆರ್‌ಎಸ್‌ಎಸ್ ನಡೆಸಿದ “ಡ್ರಾಯಿಂಗ್ ರೂಮ್ ಸಭೆಗಳು” ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಯಶಸ್ಸಿನ ಹಿಂದಿನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬಿಹಾರದಲ್ಲಿ ಎನ್‌ಡಿಎ ಮೈತ್ರಿಗೆ ಹಿನ್ನೆಡೆ: ಬಿಜೆಪಿ ತೊರೆಯಲು ಮುಂದಾದ ಮಾಜಿ ಕೇಂದ್ರ ಸಚಿವ ಆರ್‌ಸಿಪಿ ಸಿಂಗ್
90 ಸದಸ್ಯ ಬಲದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯಿದ್ದರೂ ಬಿಜೆಪಿ 48 ಸ್ಥಾನಗಳನ್ನು ಗೆದ್ದು ಈ ವರೆಗಿನ ಅತ್ಯಂತ ಸ್ಥಾನಗಳನ್ನು ತನ್ನದಾಗಿಸಿತ್ತು. “ಹರಿಯಾಣದಲ್ಲಿ ರಚಿಸಲಾದ ಆರೆಸ್ಸೆಸ್‌ನ ಕಾರ್ಯಕರ್ತರ ತಂಡ ರಾಜ್ಯಾದ್ಯಂತ 1.25 ಲಕ್ಷಕ್ಕೂ ಹೆಚ್ಚು ಸಣ್ಣ ಗುಂಪು ಸಭೆಗಳನ್ನು ನಡೆಸಿದೆ” ಎಂದು ಮತ್ತೊಂದು ಮೂಲವು ಪಿಟಿಐಗೆ ತಿಳಿಸಿದೆ.
ಈ ಸಭೆಗಳು ಹರಿಯಾಣದ ಹಿಂದಿನ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರದ “ಜಾಟ್-ಕೇಂದ್ರಿತ ನೀತಿಗಳು” ಸೇರಿದಂತೆ ವಿವಿಧ ವಿಷಯಗಳನ್ನು ಹೈಲೈಟ್ ಮಾಡುವ ಮೂಲಕ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ನೆರವಾದವು ಎಂದು ಮೂಲಗಳು ತಿಳಿಸಿವೆ.
“ಈ ತಂಡಗಳು ಅಗ್ನಿಪಥ್ ನೇಮಕಾತಿ ಯೋಜನೆಯ ಬಗ್ಗೆ ಜನರ ಆತಂಕವನ್ನು ನಿವಾರಿಸಿದರು. ಅವರು ರೈತರೊಂದಿಗೆ ತೊಡಗಿಸಿಕೊಂಡಿದ್ದು ಅವರ ಭಾವನೆಗಳನ್ನು ಬಿಜೆಪಿ ಪರವಾಗಿ ತಿರುಗಿಸುವಲ್ಲಿ ಯಶಸ್ವಿಯಾದರು” ಎಂದು ಮೂಲಗಳು ತಿಳಿಸಿವೆ. ಆರೆಸ್ಸೆಸ್ ಕಾರ್ಯಕರ್ತರಲ್ಲಿನ ಉತ್ಸಾಹದ ಕೊರತೆಯಿ ಕಾರಣಕ್ಕೆ ಈ ವರ್ಷದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕಳಪೆ ಪ್ರದರ್ಶನ ಮಾಡುವಂತೆ ಆಗಿತ್ತು ಎಂದು ವ್ಯಾಪಕವಾಗಿ ನಂಬಲಾಗಿದೆ.
ಇದನ್ನೂ ಓದಿ: ಉತ್ತರಾಖಂಡ | ಮುಸ್ಲಿಂ ಕುಟುಂಬಗಳು ಡಿಸೆಂಬರ್ 31 ರೊಳಗೆ ಪಟ್ಟಣದಿಂದ ಹೊರಹೋಗುವಂತೆ ನಿರ್ಣಯ ಅಂಗೀಕರಿಸಿದ ವ್ಯಾಪಾರಿಗಳು!
ಉತ್ತರಾಖಂಡ | ಮುಸ್ಲಿಂ ಕುಟುಂಬಗಳು ಡಿಸೆಂಬರ್ 31 ರೊಳಗೆ ಪಟ್ಟಣದಿಂದ ಹೊರಹೋಗುವಂತೆ ನಿರ್ಣಯ ಅಂಗೀಕರಿಸಿದ ವ್ಯಾಪಾರಿಗಳು!


