ಸೋಮವಾರ ಮಹಾರಾಷ್ಟ್ರದ ಅಕೋಲಾದಲ್ಲಿ ಸ್ವರಾಜ್ ಪಕ್ಷದ ನಾಯಕ ಮತ್ತು ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ.
ಸುಮಾರು 40-50 ಜನರ ಗುಂಪು ಅವರು ಮಾತನಾಡದಂತೆ ತಡೆಯಲು ವೇದಿಕೆಗೆ ನುಗ್ಗಿದೆ ಎಂದು ಯೋಗೇಂದ್ರ ಯಾದವ್ ಹೇಳಿದ್ದಾರೆ. ಈ ಘಟನೆ ನಡೆದ ಸ್ವಲ್ಪ ಸಮಯದ ನಂತರ ಪೊಲೀಸರು ಬಂದು ಕಾರ್ಯಕ್ರಮವನ್ನು ನಿಲ್ಲಿಸಲು ಸೂಚಿಸಿದರು ಎಂದಿದ್ದಾರೆ.
ತಮ್ಮ ಮೇಲಿನ ಹಲ್ಲೆಯ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಯಾದವ್, “ಕಾರ್ಯಕ್ರಮದಲ್ಲಿ ‘ಸಂವಿಧಾನ ರಕ್ಷಣೆ ಮತ್ತು ನಮ್ಮ ಮತ’ ಎಂಬ ಚರ್ಚೆ ನಡೆಯುತ್ತಿತ್ತು. ಈ ವೇಳೆ ಭಾರತ್ ಜೋಡೋ ಅಭಿಯಾನದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಮತ್ತು ನನ್ನ ಮೇಲೆ ಹಲ್ಲೆ ನಡೆದಿದೆ. ಪ್ರಜಾಪ್ರಭುತ್ವವನ್ನು ಪ್ರೀತಿಸುವವರ ಮೇಲೆ ಇಂತಹ ಹಲ್ಲೆಗಳು ನಡೆಯುತ್ತಲೇ ಇವೆ. ಪೊಲೀಸರು ಮಧ್ಯಪ್ರವೇಶಿಸಿದರೂ, ದಾಳಿಕೋರರು ತಮ್ಮ ವಿಧ್ವಂಸಕತೆಯನ್ನು ಮುಂದುವರೆಸಿದರು. ಪರಿಣಾಮ ಕಾರ್ಯಕ್ರಮ ರದ್ದುಗೊಳಿಸಬೇಕಾಯಿತು” ಎಂದು ತಿಳಿಸಿದ್ದಾರೆ.
आज अकोला (महाराष्ट्र) में मुझ पर और भारत जोड़ो अभियान के साथियों पर जो हमला हुआ वह हर लोकतंत्रप्रेमी के लिए गंभीर चिंता का विषय है। भारत जोड़ो अभियान के विदर्भ दौरे के तहत हम “संविधान की रक्षा और हमारा वोट” विषय पर सम्मेलन कर रहे थे, तो मुझे बोलने से रोकने के लिए 40-50 लोगों की… pic.twitter.com/59wsdPWVob
— Yogendra Yadav (@_YogendraYadav) October 21, 2024
“ಮಹಾರಾಷ್ಟ್ರಕ್ಕೆ ಕಳೆದ 25 ವರ್ಷಗಳಿಂದ ಆಗಾಗ್ಗೆ ಭೇಟಿ ನೀಡುತ್ತಿದ್ದೇವೆ. ಹಲವು ಕಾರ್ಯಕ್ರಮಗಳಲ್ಲಿ ಮಾತನಾಡಿದ್ದೇನೆ. ಇಂತಹ ಘಟನೆಯನ್ನು ಎಂದಿಗೂ ಎದುರಿಸಿರಲಿಲ್ಲ. ಈ ಘಟನೆಯು ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದೆ. ಇಂತಹ ಘಟನೆಗಳು ನಮ್ಮ ಸಂಕಲ್ಪವನ್ನು ಬಲಪಡಿಸುತ್ತದೆ” ಎಂದಿದ್ದಾರೆ.
‘ವಂಚಿತ್ ಬಹುಜನ್ ಅಘಾಡಿ (ವಿಬಿಎ)’ ಗುಂಪಿನಿಂದ ಹಲ್ಲೆ?
ಹಲ್ಲೆಯ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯೋಗೇಂದ್ರ ಯಾದವ್ “ಹಲ್ಲೆ ನಡೆಸಿದವರು ವಂಚಿತ್ ಬಹುಜನ್ ಅಘಾಡಿ ಪಕ್ಷ (ಎಬಿವಿ)ದ ಕಾರ್ಯಕರ್ತರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ ಮತ್ತು ಕಾರ್ಯಕರ್ತರು ಹೇಳಿದ್ದಾರೆ. ಆದರೆ, ನನಗೆ ಆ ಬಗ್ಗೆ ಮಾಹಿತಿಯಿಲ್ಲ” ಎಂದಿದ್ದಾರೆ.
“ನನಗೆ ದಾಳಿ ನಡೆಸಿದ ಯಾರೊಬ್ಬರೂ ತಿಳಿದಿಲ್ಲ, ಆದರೆ ಸ್ಥಳೀಯ ಸಹೋದ್ಯೋಗಿಗಳು 24 ಹೆಸರುಗಳನ್ನು ಹೇಳಿದ್ದಾರೆ. ಅವರು ವಂಚಿತ್ ಬಹುಜನ್ ಅಘಾಡಿಯ ಕಾರ್ಯಕರ್ತರು ಎಂದಿದ್ದಾರೆ. ಕಾರ್ಯಕ್ರಮಕ್ಕೆ ದಾಳಿ ನಡೆಸಿದಾಗ ನಮ್ಮ ಸಹೋದ್ಯೋಗಿಯೊಬ್ಬರು ಏಕೆ ದಾಳಿ ಮಾಡಿದ್ದೀರಿ? ಎಂದು ಕೇಳಿದ್ದಾರೆ. ಆಗ ದಾಳಿಗೆ ಬಂದ ವ್ಯಕ್ತಿಯೊಬ್ಬರು “ಸಾಬ್ ಆದೇಶ, ನಮಗೆ ಏನೂ ಗೊತ್ತಿಲ್ಲ” ಎಂದಿದ್ದಾರೆ ಎಂದು ಯಾದವ್ ಘಟನೆ ಕುರಿತು ವಿವರಿಸಿದ್ದಾರೆ.
ದಾಳಿಯ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಯಾದವ್, “ವಂಚಿತ್ ಬಹುಜನ್ ಅಘಾಡಿಯ ಕಾರ್ಯಕರ್ತರು ಒಂದು ವೇಳೆ ದಾಳಿ ನಡೆಸಿದ್ದರೆ ತುಂಬಾ ಆಶ್ಚರ್ಯದ ವಿಷಯ. ಯೋಗೇಂದ್ರ ಯಾದವ್ ಬಹಳ ಸಣ್ಣ ಮನುಷ್ಯ; ನೀವು ಅವರ ಮೇಲೆ ದಾಳಿ ಮಾಡಿಲ್ಲ, ಬಾಬಾ ಸಾಹೇಬರ ಸಂವಿಧಾನದ ಮೇಲೆ ದಾಳಿ ಮಾಡಿದ್ದೀರಿ. ಹಗಲಿರುಳು ಮಾತನಾಡುವ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡಿದ್ದೀರಿ ಮತ್ತು ನಿಮ್ಮ ನಾಯಕ ಪ್ರಕಾಶ್ ಅಂಬೇಡ್ಕರ್ ಅವರು ನಾಚಿಕೆ ಪಡುವಂತೆ ಮಾಡಿದ್ದೀರಿ” ಎಂದಿದ್ದಾರೆ.
#WATCH | On being manhandled by a mob in Akola, Maharashtra, Swaraj Party leader Yogendra Yadav says "I do not know anyone, but local colleagues have taken 24 names. They are people of Vanchit Bahujan Aghadi. One of our colleagues asked why did you people do this? Then man said… https://t.co/8RNILhDMVb pic.twitter.com/O1DJJUXHY4
— ANI (@ANI) October 21, 2024
“ಪ್ರಕಾಶ್ ಅಂಬೇಡ್ಕರ್ ಅವರ ಚಿಂತನೆ ಮತ್ತು ನಮ್ಮ ಆಲೋಚನೆಗಳು ವಿಭಿನ್ನವಾಗಿವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಭಿನ್ನಾಭಿಪ್ರಾಯಗಳಿಂದಾಗಿ ಇಂತಹ ದಾಳಿ ನಡೆಸಲಾಗದು. ಇದು ನನ್ನ ಕಲ್ಪನೆಗೂ ಮೀರಿದ್ದು. ಪ್ರಕಾಶ್ ಅಂಬೇಡ್ಕರ್ ಅವರು ಇಂತಹ ಕೃತ್ಯವೆಸಗುವ ವ್ಯಕ್ತಿ ಎಂದು ನಂಬುವುದಿಲ್ಲ” ಎಂದು ಹೇಳಿದ್ದಾರೆ.
ಈ ಗೂಂಡಾಗಿರಿಗೆ ಬಾಬಾಸಾಹೇಬರು ಏನು ಹೇಳುತ್ತಿದ್ದರು?
ಘಟನೆಯ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ “ಫುಲೆ, ಶಾಹು, ಅಂಬೇಡ್ಕರ್, ಗೋಖಲೆ, ತಿಲಕ್, ರಾನಡೆ, ಅಗರ್ಕರ್ ಅವರ ನಾಡಿನಲ್ಲಿ ಇದು ಸಂಭವಿಸಿದೆ. ಅಕೋಲಾದಲ್ಲಿ ವಿಬಿಎ ಕಾರ್ಯಕರ್ತರು ಯೋಗೇಂದ್ರ ಯಾದವ್ ಸಭೆಗೆ ಅಡ್ಡಿಪಡಿಸಿದ್ದಾರೆ. ಅವರಿಂದ ಮೈಕ್ ಕಿತ್ತುಕೊಂಡಿದ್ದಾರೆ. ಕುರ್ಚಿಗಳನ್ನು ಎಸೆದಿದ್ದಾರೆ. ಯಾದವ್ ಭಾಷಣ ಮಾಡಲು ಬಂದಾಗ ಅವರನ್ನು ತಳ್ಳಿದ್ದಾರೆ. ಇದನ್ನು ಪ್ರಶ್ನಿಸುವ ಹಕ್ಕು ಅವರಿಗೆ ಇಲ್ಲವೇ? ನಿಮಗೆ ಇಷ್ಟವಿಲ್ಲದಿದ್ದರೆ ಅವರ ಮಾತನ್ನು ಕೇಳಬೇಡಿ. ಆದರೆ, ಈ ಹಿಂಸೆ ಏಕೆ? ಈ ಗೂಂಡಾಗಿರಿಗೆ ಬಾಬಾಸಾಹೇಬರು ಏನು ಹೇಳುತ್ತಿದ್ದರು ಎಂದು ಆಶ್ಚರ್ಯವಾಗುತ್ತಿದೆ. ಇದು ನಮ್ಮ ಮಹಾರಾಷ್ಟ್ರ ಧರ್ಮವೇ? ಎಂದು ಪ್ರಶ್ನಿಸಿದ್ದಾರೆ.
And this happened in the land of Phule-Shahu-Ambedkar and of Gokhale-Tilak-Ranade-Agarkar. VBA activists disrupting a meeting of @_YogendraYadav in Akola, snatching away his Mike, throwing chairs and shoving/pushing Mr Yadav when he had come to give a speech. Does he not have… pic.twitter.com/UaOMyvyHuA
— Rajdeep Sardesai (@sardesairajdeep) October 22, 2024
ಆರೋಪ ತಳ್ಳಿ ಹಾಕಿದ ವಿಬಿಎ :
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ವಿಬಿಎ “ಭೀಮರಾವ್ ಅಂಬೇಡ್ಕರ್ ಮತ್ತು ಮೀಸಲಾತಿ ನೀತಿಗಳ ಬಗ್ಗೆ ನೀಡಿದ ಹೇಳಿಕೆಗೆ ಅತೃಪ್ತಿ ವ್ಯಕ್ತಪಡಿಸಿ, ವಂಚಿತ್ ಬಹುಜನ್ ಅಘಾಡಿಯ ಬೆಂಬಲಿಗರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ ಎಂದು ವರದಿಯಾಗಿದೆ”.
“ಹಿಂದುಳಿದ ಸಮುದಾಯಗಳಿಂದ ಬೆಂಬಲವನ್ನು ಪಡೆದಿದ್ದರೂ, ಚುನಾವಣೆಯ ನಂತರ ಕಾಂಗ್ರೆಸ್‌ನ ಆಪಾದಿತ ಮೀಸಲಾತಿ ವಿರೋಧಿ ಕ್ರಮಗಳ ಕುರಿತು ಯಾದವ್ ಮತ್ತು ಹೋರಾಟಗಾರ್ತಿ ಉಲ್ಕಾ ಮಹಾಜನ್‌ಗೆ ಪ್ರೇಕ್ಷಕರು ಪ್ರಶ್ನೆಗಳನ್ನು ಹಾಕಿದ್ದಾರೆ ಎಂದು ವಿಬಿಎ ತಿಳಿಸಿದೆ. ಈ ಮೂಲಕ ಹಲ್ಲೆ ಆರೋಪವನ್ನು ತಳ್ಳಿ ಹಾಕಿದೆ.
ವಿಬಿಎಗೆ ಸಂಬಂಧಿಸಿದ ಪತ್ರಿಕೆಯಾದ ಪ್ರಬುದ್ಧ್ ಭಾರತ್‌ನಲ್ಲಿ “ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಬೌದ್ಧರು, ದಲಿತರು, ಬುಡಕಟ್ಟುಗಳು, ಮುಸ್ಲಿಮರು, ಒಬಿಸಿಗಳ ಮತಗಳನ್ನು ತೆಗೆದುಕೊಂಡಿತು. ಆದರೆ, ಕಾಂಗ್ರೆಸ್ ಬಿಜೆಪಿಯ ಕೆಲಸವನ್ನು ಮಾಡುತ್ತಿದೆ. ಯಾವುದೇ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಲು ಸಾಧ್ಯವಾಗದೆ, ಮಹಾರಾಷ್ಟ್ರ ಡೆಮಾಕ್ರಟಿಕ್ ಫ್ರಂಟ್ ಮತ್ತು ಭಾರತ್ ಜೋಡೋ ಅಭಿಯಾನದ ಜನರು ಪ್ರಶ್ನೆಗಳನ್ನು ಕೇಳುವ ಜನರನ್ನು ಮೌನಗೊಳಿಸಲು ಪ್ರಯತ್ನಿಸಿದರು. ಯೋಗೇಂದ್ರ ಯಾದವ್ ಮತ್ತು ಉಲ್ಕಾ ಮಹಾಜನ್ ಯಾವುದೇ ಪ್ರಶ್ನೆಗೆ ಉತ್ತರವಿಲ್ಲದ ಕಾರಣ ಕಾರ್ಯಕ್ರಮದಿಂದ ಹಿಂದೆ ಸರಿದರು” ಎಂದು ವಿಬಿಎ ಬರೆದುಕೊಂಡಿದೆ.
ಇದನ್ನೂ ಓದಿ : ವಕ್ಫ್ ಸಭೆಯಲ್ಲಿ ಅಧ್ಯಕ್ಷರತ್ತ ಬಾಟಲಿ ಎಸೆದ ಕಲ್ಯಾಣ್ ಬ್ಯಾನರ್ಜಿ ಸಮಿತಿಯಿಂದ ಅಮಾನತು


