ತಮಿಳುನಾಡಿನ ಥೇಣಿಯಲ್ಲಿ 2014 ರ ಪೋಕ್ಸೋ ಪ್ರಕರಣದಲ್ಲಿ ಅಕಾಲಿಕವಾಗಿ ಬಿಡುಗಡೆಗೊಂಡ 32 ವರ್ಷದ ವ್ಯಕ್ತಿಯನ್ನು ಶಿವಗಂಗಾ ತಾಲೂಕು ಪೊಲೀಸರು ಶನಿವಾರ ಮಧುರೈನ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪದಲ್ಲಿ ಬಂಧಿಸಿದ್ದಾರೆ. ಆರೋಪಿಯು ಬಾಲಕಿಯ ಶವವನ್ನು ಶಿವಗಂಗೆಯ ಒಂದು ಬಾವಿಯಲ್ಲಿ ಎಸೆದಿದ್ದಾಗಿ ಆರೋಪಿಸಲಾಗಿದೆ. ಪೋಕ್ಸೋ ಅಪರಾಧಿಯಿಂದ
ಆರೋಪಿಯನ್ನು ಶಿವಗಂಗೆಯ ಕಟ್ಟಾನಿಕುಲಂನ ಜಿ ಸತೀಶ್‌ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿಯು ತನ್ನ ಪತ್ನಿ ಹೆರಿಗೆಗಾಗಿ ದಾಖಲಾಗಿದ್ದ ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ (ಜಿಆರ್‌ಎಚ್) ಹುಡುಗಿಯೊಂದಿಗೆ ಸ್ನೇಹ ಬೆಳೆಸಿದ್ದ. ಇದರ ನಂತರ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಆರೋಪಿಯ 2014ರ ಪೋಕ್ಸೊ ಪ್ರಕರಣದಲ್ಲಿ ಸಂತ್ರಸ್ತ ಬಾಲಕಿಯ ಹೇಳಿಕೆ ಕಾರಣಕ್ಕೆ ಶಿಕ್ಷೆಗೆ ಗುರಿಯಾಗಿದ್ದನು. ಆದ್ಧರಿಂದ ಈ ಬಾರಿ ಲೈಂಗಿಕ ದೌರ್ಜನ್ಯದ ಬಗ್ಗೆ ಪೊಲೀಸರಿಗೆ ದೂರು ನೀಡುವುದರಿಂದ ತಪ್ಪಿಸಿಕೊಳ್ಳಲು ಆರೋಪಿ ಸತೀಶ್ ಕುಮಾರ್ ಬಾಲಕಿಯನ್ನು ಕೊಲೆ ಮಾಡಿದ್ದಾಗಿ ಪೊಲೀಸರು ಹೇಳಿದ್ದಾರೆ. ಪೋಕ್ಸೋ ಅಪರಾಧಿಯಿಂದ
ಗುರುವಾರ ಬೆಳಗ್ಗೆ ಶಿವಗಂಗಾ ಸಮೀಪದ ಕಲ್ಕುಲಂ ಎಂಬಲ್ಲಿ ಬಾವಿಯೊಳಗೆ ಅಪರಿಚಿತ ಬಾಲಕಿಯ ಶವ ಪತ್ತೆಯಾಗಿದ್ದು, ಆಗ ಘಟನೆ ಬೆಳಕಿಗೆ ಬಂದಿದೆ. 2014ರ ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಮುಗಿಯುವ ಮುನ್ನವೇ ಪೋಕ್ಸೋ ಅಪರಾಧಿಯನ್ನು ಬಿಡುಗಡೆ ಮಾಡಲಾಗಿತ್ತು ವರದಿಯಾಗಿದೆ.
ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ಬಾಲಕಿಯ ಮೃತದೇಹವನ್ನು ಹೊರತೆಗೆದಿದ್ದರು. ಮೃತ ಬಾಲಕಿಯ ಒಂದು ಕೈ ಮುರಿದಿದ್ದು, ಅದನ್ನು ಶಿವಗಂಗೈ GMCH ಗೆ ಕಳುಹಿಸಿದ್ದಾರೆ. ನಂತರ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.
ಮಧುರೈ ನಗರ ವ್ಯಾಪ್ತಿಯಲ್ಲಿ ದಾಖಲಾಗಿರುವ ನಾಪತ್ತೆ ಪ್ರಕರಣದ ಬಗ್ಗೆ ಮಾಹಿತಿ ಪಡೆದ ಪೊಲೀಸರ ವಿಶೇಷ ತಂಡವು, ಇತ್ತೀಚೆಗೆ ಸರ್ಕಾರಿ ರಾಜಾಜಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಎರಡನೇ ಮಗಳ ಶವ ಇದು ಎಂದು ಪತ್ತೆ ಮಾಡಿದೆ. ಆರೋಪಿಯು ಬುಧವಾರ ಬಾಲಕಿಯನ್ನು ಅಪರಾಧ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ್ದಾನೆ.
ಪೊಲೀಸರು ಇದೀಗ ಪ್ರಕರಣವನ್ನು ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಎಂದು ಬದಲಾಯಿಸಿದ್ದಾರೆ.
2014ರ ಪ್ರಕರಣದಲ್ಲಿ ತೇಣಿಯ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಸತೀಶ್‌ಕುಮಾರ್‌ಗೆ 11 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ಘಟನೆಯಲ್ಲಿ ಹುಡುಗಿಯ ಹೇಳಿಕೆಯು ನಿರ್ಣಾಯಕ ಸಾಕ್ಷ್ಯವಾಗಿ ಕಾರ್ಯನಿರ್ವಹಿಸಿತ್ತು. ಆದರೆ ಎಂಟು ವರ್ಷಗಳ ನಂತರ ಸತೀಶ್‌ಕುಮಾರ್‌ಗೆ ಅವಧಿಪೂರ್ವ ಬಿಡುಗಡೆ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂಓದಿ: ‘ದೊಡ್ಡವರನ್ನು ಉಳಿಸಲು’ ಮಾಧಬಿ ಬುಚ್‌ರನ್ನು ಕೇಂದ್ರ ಸರ್ಕಾರ ರಕ್ಷಿಸುತ್ತಿದೆ: ಕಾಂಗ್ರೆಸ್ ಆರೋಪ
‘ದೊಡ್ಡವರನ್ನು ಉಳಿಸಲು’ ಮಾಧಬಿ ಬುಚ್‌ರನ್ನು ಕೇಂದ್ರ ಸರ್ಕಾರ ರಕ್ಷಿಸುತ್ತಿದೆ: ಕಾಂಗ್ರೆಸ್ ಆರೋಪ


