ಬುಡಕಟ್ಟು ಹಕ್ಕುಗಳ ಬಗ್ಗೆ ನಾನು ಮಾತನಾಡಿದಾಗೆಲ್ಲಾ ನಾನು ದೇಶವನ್ನು ವಿಭಜಿಸುತ್ತಿದ್ದೇನೆ ಎಂದು ಬಿಜೆಪಿ ಆರೋಪಿಸುತ್ತದೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ. ಬುಡಕಟ್ಟು ಪ್ರಾಬಲ್ಯದ ಜಾರ್ಖಂಡ್‌ನ ಗುಮ್ಲಾ ಮತ್ತು ಲೋಹರ್ಡಗಾದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಸ್‌ಟಿ, ಎಸ್‌ಸಿ ಮತ್ತು ಒಬಿಸಿ ಮೀಸಲಾತಿಯನ್ನು ಕ್ರಮವಾಗಿ 28%, 12% ಮತ್ತು 27%ಕ್ಕೆ ಹೆಚ್ಚಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಬುಡಕಟ್ಟು ಹಕ್ಕುಗಳ
ಆದಿವಾಸಿಗಳು ಎಂದರೆ ಈ ನೆಲದ ಮೊದಲ ಮಾಲೀಕರು, ಈ ದೇಶದ ಜಲ, ಕಾಡು ಮತ್ತು ಜಮೀನಿನ ಮೇಲೆ ಮೊದಲ ಹಕ್ಕು ಹೊಂದಿರುವರು. ಆದರೆ ಬಿಜೆಪಿಯವರು ಅವರನ್ನು ವನವಾಸಿ ಎಂದು ಕರೆಯುತ್ತದೆ. ಅಂದರೆ ಕಾಡಿನಲ್ಲಿ ವಾಸಿಸುವ ಮತ್ತು ಈ ದೇಶದ ಜಲ, ಕಾಡು ಮತ್ತು ಜಮೀನಿನ ಮೇಲೆ ಯಾವುದೇ ಹಕ್ಕು ಇಲ್ಲ ಎಂದು ಪ್ರತಿಪಾದಿಸಲು ಅವರು ಹಾಗೆ ಕರೆಯುತ್ತಾರೆ ಎಂದು ಆದಿವಾಸಿಗಳು ಎಂಬ ಪದದ ಅರ್ಥವನ್ನು ವಿವರಿಸಲು ರಾಹುಲ್ ಗಾಂಧಿ ಪ್ರಯತ್ನಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ನಿಮ್ಮನ್ನು ವನವಾಸಿ ಎಂದು ಕರೆಯುವವರು, ನಿಮ್ಮ ಬಳಿ ಏನಿದ್ದರೂ ಕಸಿದುಕೊಳ್ಳಲು ಬಯಸುತ್ತಾರೆ. ಮೋದಿ ಅವರು ಇಲ್ಲಿಗೆ ಬಂದು ನಿಮ್ಮನ್ನು ವನವಾಸಿ ಎಂದು ಹೇಳುತ್ತಾರೆ. ಅಂದರೆ ನೀವು ಕಾಡಿನಲ್ಲಿ ವಾಸಿಸುವವರು ಮಾತ್ರ, ಈ ಕಾಡು ನಮ್ಮದು, ಭೂಮಿ ನಮ್ಮದು ಮತ್ತು ನಿಮ್ಮ ನೀರು ಕೂಡ ನಮ್ಮದು ಎಂಬುವುದು ಅದರ ಅರ್ಥವಾಗಿದೆ. ಇದು ಆದಿವಾಸಿಗಳಿಗೆ ಸೇರಿದ್ದಲ್ಲ, ಮೋದಿ ಅವರಿಗೆ, ಬಂಡವಾಳಶಾಹಿಗಳು ಮತ್ತು ಅದೇ ರೀತಿ ಅದಾನಿಗಳಿಗೂ ಸೇರಿದೆ ಎಂಬುವುದಾಗಿದೆ ಅವರ ವಾದ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಆದ್ದರಿಂದ, ಅವರು ಎಲ್ಲಿಗೆ ಹೋದರೂ ಅವರು ನಿಮ್ಮ ಭೂಮಿಯನ್ನು ನಿಮ್ಮಿಂದ ಕಸಿದುಕೊಳ್ಳುತ್ತಾರೆ. ಬಿಜೆಪಿ ‘ವಿಕಾಸ’ ಎಂಬ ಹೊಸ ಪದವನ್ನು ಹುಟ್ಟುಹಾಕಿದೆ. ಅದರ ಅರ್ಥ ಆದಿವಾಸಿಗಳ ಭೂಮಿ ಎಲ್ಲಿದ್ದರೂ ಅದನ್ನು ಕಿತ್ತುಕೊಳ್ಳಿ ಎಂಬುದಗಿದ್ದು; ಇದು ಅವರ ವಿಕಾಸ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದರು. ಬುಡಕಟ್ಟು ಹಕ್ಕುಗಳ
“ನಿಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಾದರೆ, ಅದನ್ನು ನಿಮ್ಮ ಒಪ್ಪಿಗೆಯೊಂದಿಗೆ ತೆಗೆದುಕೊಳ್ಳಬೇಕು. ಒಂದು ವೇಳೆ ನೀವು ನಿಮ್ಮ ಭೂಮಿಯನ್ನು ನೀಡಿದ್ದರೆ ಅದಕ್ಕೆ ನೀವು ನ್ಯಾಯಯುತ ಪರಿಹಾರವನ್ನು ನೀವು ಪಡೆಯಬೇಕು. ನಿಮ್ಮ ಭೂಮಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿದರೆ ಆ ಕೈಗಾರಿಕೆಗಳು ನಿಮ್ಮ ಮಕ್ಕಳಿಗೆ ಉದ್ಯೋಗ ನೀಡಬೇಕು ಎಂದು ನಾವು ಬಯಸುತ್ತೇವೆ.” ಎಂದು ರಾಹುಲ್ ಗಾಂಧಿ ಹೇಳಿದದ್ದಾರೆ. ನಿಮ್ಮ ಮಕ್ಕಳು ಇಂಜಿನಿಯರ್, ವೈದ್ಯರು ಮತ್ತು ವಕೀಲರಾಗಬೇಕು ಮತ್ತು ಕಾರ್ಖಾನೆಯನ್ನು ನಡೆಸುವುದನ್ನು ಕಲಿಯಬೇಕೆಂದು ನಾವು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.
8%ದಷ್ಟು ಬುಡಕಟ್ಟು, 15% ದಲಿತ ಮತ್ತು ಸುಮಾರು 50% ಇತರೆ ಹಿಂದುಳಿದ ಜಾತಿಗಳು (OBC) ಇವೆ. ಅದರಲ್ಲಿ 15%ದಷ್ಟು ಅಲ್ಪಸಂಖ್ಯಾತರನ್ನು ಸೇರಿಸಿ ಒಟ್ಟು ಮಾಡಿದರೆ ಒಟ್ಟು ಜನಸಂಖ್ಯೆಯ 90%ದಷ್ಟು ಆಗುತ್ತದೆ ಎಂದು ಅವರು ಹೇಳಿದ್ದಾರೆ. ಸರ್ಕಾರಿ ಸಂಸ್ಥೆಗಳು, ವ್ಯಾಪಾರ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳನ್ನು ನೋಡಿದರೆ, ಈ ಶೇಕಡಾ 90%ದಷ್ಟು ಜನಸಂಖ್ಯೆಗೆ ಸೇರಿದವ ಯಾರನ್ನೂ ಕಂಡುಬರುವುದಿಲ್ಲ ಎಂದು ರಾಹುಲ್ ಹೇಳಿದ್ದಾರೆ.
“ನಾನು ಸಂಸತ್ತಿನಲ್ಲಿ ಜಾತಿ ಗಣತಿಗೆ ಒತ್ತಾಯಿಸಿದಾಗ, ಅವರು ರಾಹುಲ್ ಗಾಂಧಿ ದೇಶವನ್ನು ವಿಭಜಿಸಲು ಬಯಸುತ್ತಿದ್ದಾರೆ ಎಂದು ಹೇಳುತ್ತಾರೆ. ಆದರೆ 90% ದಷ್ಟು ಜನರಿಗೆ ದೇಶವನ್ನು ನಡೆಸುವುದರಲ್ಲಿ ಯಾವುದೇ ಪಾತ್ರವಿಲ್ಲ. ನಾನು ಅವರ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿಲ್ಲ, ಆದರೆ ದೇಶವನ್ನು ನಡೆಸುವಲ್ಲಿ ಅವರ ಸಹಭಾಗಿತ್ವವನ್ನು ಹೊಂದಿರಬೇಕು ಎಂದು ನಾನು ಹೇಳುತ್ತಿದ್ದೇನೆ. ದೇಶದಲ್ಲಿ ಹಲವಾರು ಖಾಸಗಿ ಆಸ್ಪತ್ರೆಗಳಿವೆ, ಅವುಗಳಲ್ಲಿ ಯಾವುದಾದರೂ ಬುಡಕಟ್ಟು ಜನರ ಒಡೆತನದಲ್ಲಿದ್ದರೆ ಹೆಸರಿಸಿ; ಅಂತಹ ಯಾವುದೇ ಆಸ್ಪತ್ರೆಯ ಕೂಡಾ ಕಾಣುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ | ರಾಜಿಗೆ ಒಪ್ಪದ ರೋಹಿಣಿ ಸಿಂಧೂರಿ : ಡಿ.ರೂಪಾಗೆ ಹಿನ್ನಡೆ
ಮಾನನಷ್ಟ ಮೊಕದ್ದಮೆ | ರಾಜಿಗೆ ಒಪ್ಪದ ರೋಹಿಣಿ ಸಿಂಧೂರಿ : ಡಿ.ರೂಪಾಗೆ ಹಿನ್ನಡೆ


