19 ವರ್ಷದ ದಲಿತ ವಿದ್ಯಾರ್ಥಿನಿಯನ್ನು ಆಕೆಯ ಗೆಳೆಯ ಮತ್ತು ಇತರ ಐವರು ಹಲವು ದಿನಗಳ ಕಾಲ ಸಾಮೂಹಿಕ ಅತ್ಯಾಚಾರವೆಸಗಿರುವ ಭೀಕರ ಘಟನೆ ಒರಿಸ್ಸಾದ ಕಟಕ್ ಜಿಲ್ಲೆಯಲ್ಲಿ ನಡೆದಿದೆ ಎಂದು ಶುಕ್ರವಾರ ವರದಿಯಾಗಿದೆ. ಘಟನೆಯು ಕಳೆದ ತಿಂಗಳು ದಸರಾ ವೇಳೆ ನಡೆದಿದ್ದು, ಎರಡು ದಿನಗಳ ಹಿಂದೆ ಯುವತಿ ಬಾದಂಬಾಡಿ ಠಾಣೆಗೆ ದೂರು ನೀಡಿದ ಬಳಿಕವಷ್ಟೇ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ದಲಿತ ವಿದ್ಯಾರ್ಥಿನಿ
ಘಟನೆಗೆ ಸಂಬಂಧಿಸಿ ಸಂತ್ರಸ್ತೆ ಯುವತಿಯ ಗೆಳೆಯ, ಕೆಫೆ ಮಾಲೀಕ ಮತ್ತು ಅಪ್ರಾಪ್ತ ಬಾಲಕ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಯುವತಿ ಪ್ಲಸ್ III ವಾಣಿಜ್ಯ ವಿದ್ಯಾರ್ಥಿನಿಯಾಗಿದ್ದು, ದಸರಾ ಸಮಯದಲ್ಲಿ ಅವರ ಹುಟ್ಟುಹಬ್ಬವನ್ನು ಆಚರಿಸಲು ಗೆಳೆಯ ಆಹ್ವಾನಿಸಿದ್ದನು ಎಂದು ಪೊಲೀಸರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ತನ್ನ ಗೆಳೆಯನ ಆಹ್ವಾನದಂತೆ, ಸಂತ್ರಸ್ತೆ ಪುರಿಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕಥಗಡ ಸಾಹಿಯಲ್ಲಿರುವ ಕೆಫೆಗೆ ಬಂದಿದ್ದರು. ಅಲ್ಲಿ ಅವರು ಯುವತಿಯ ಹುಟ್ಟುಹಬ್ಬವನ್ನು ಆಚರಿಸಿದ ನಂತರ, ಆರೋಪಿಯು ಯುವತಿಯೊಂದಿಗೆ ದೈಹಿಕ ಸಂಬಂಧ ಮಾಡಿದ್ದ ಎಂದು ವರದಿಯಾಗಿದೆ. ದಲಿತ ವಿದ್ಯಾರ್ಥಿನಿ
“ಈ ವೇಳೆ ಯುವತಿಯ ಗೆಳೆಯ, ಕೆಫೆಯ ಮಾಲೀಕನ ಸಹಾಯದಿಂದ, ಅವರ ಕೆಲವು ಖಾಸಗಿ ಕೃತ್ಯಗಳನ್ನು ತನ್ನ ಫೋನ್‌ನಲ್ಲಿ ರಹಸ್ಯವಾಗಿ ಸೆರೆಹಿಡಿದಿದ್ದನು. ಇದರ ನಂತರ ಅವರು ಆ ವಿಡಿಯೊವನ್ನು ಬಳಸಿ ಯುವತಿಯನ್ನು ಬ್ಲ್ಯಾಕ್‌ಮೇಲ್ ಮಾಡಿ ಪದೇ ಪದೇ ಅತ್ಯಾಚಾರ ಮಾಡಿದ್ದಾರೆ. ಅಪ್ರಾಪ್ತ ಹುಡುಗ ಮತ್ತು ಯುವತಿಯ ಗೆಳೆಯನ ಸ್ನೇಹಿತರು ಸೇರಿದಂತೆ ನಾಲ್ವರು ಕೂಡಾ ಅಪರಾಧದಲ್ಲಿ ಸೇರಿಕೊಂಡಿದ್ದಾರೆ” ಎಂದು ಪೊಲೀಸರು ಹೇಳಿದ್ದಾರೆ.
ಆರಂಭದಲ್ಲಿ ಸಂತ್ರಸ್ತೆ ಭಯದಿಂದ ಯಾರೊಂದಿಗೂ ವಿಷಯವನ್ನು ಬಹಿರಂಗಪಡಿಸದಿದ್ದರೂ, ಲೈಂಗಿಕ ದೌರ್ಜನ್ಯವನ್ನು ಸಹಿಸಲಾರದೆ ಪೊಲೀಸ್ ಠಾಣೆಗೆ ತೆರಳಿ ಆರೋಪಿಯನ್ನು ಬಂಧಿಸುವಂತೆ ಕೋರಿದ್ದಾರೆ.
ದೂರಿನ ಆಧಾರದ ಮೇಲೆ ಬಾದಂಬಾಡಿ ಪೊಲೀಸ್ ಠಾಣೆಯಲ್ಲಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಕಲಂ 3, ಬಿಎನ್‌ಎಸ್ ಸೆಕ್ಷನ್ 70, 351 ಮತ್ತು 296 ಮತ್ತು ಐಟಿ ಕಾಯ್ದೆಯ ಕಲಂ 67(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
“ಪ್ರಾಥಮಿಕ ತನಿಖೆಯ ನಂತರ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಎಲ್ಲಾ ಆರೋಪಿಗಳ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಲ್ಲಾ ವೀಡಿಯೊಗಳನ್ನು ಅಗತ್ಯ ಪರಿಶೀಲನೆಗಾಗಿ ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು” ಎಂದು ಕಟಕ್ ಡಿಸಿಪಿ ಜಗಮೋಹನ್ ಮೀನಾ ತಿಳಿಸಿದ್ದಾರೆ.
ಇದನ್ನೂ ಓದಿ: ಹರಿಯಾಣ | ದಲಿತ ಗುತ್ತಿಗೆ ಕಾರ್ಮಿಕ ವ್ಯಕ್ತಿಗೆ ಬಂದೂಕು ತೋರಿಸಿ ಲೈಂಗಿಕ ಶೋಷಣೆ
ಹರಿಯಾಣ | ದಲಿತ ಗುತ್ತಿಗೆ ಕಾರ್ಮಿಕ ವ್ಯಕ್ತಿಗೆ ಬಂದೂಕು ತೋರಿಸಿ ಲೈಂಗಿಕ ಶೋಷಣೆ


