ತನಿಖೆಗಳು ನಡೆಯುತ್ತಿರುವ ವೇಳೆ ಕ್ರಿಮಿನಲ್ ಪ್ರಕರಣಗಳ ಕುರಿತು ವರದಿ ಮಾಡುವಾಗ ಮಾಧ್ಯಮಗಳು ತನಿಖಾ ಅಥವಾ ನ್ಯಾಯಾಂಗ ಅಧಿಕಾರಿಗಳ ಪಾತ್ರವನ್ನು ವಹಿಸಿಕೊಳ್ಳುವುದರಿಂದ ದೂರವಿರಬೇಕು ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ಸಂವಿಧಾನದ 19(1)(ಎ) ವಿಧಿಯ ಅಡಿಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮೂಲಭೂತವಾಗಿದೆ ಎಂಬುವುದು ನಿಜ. ಆದರೆ, ಕೋರ್ಟ್ ತೀರ್ಪು ಪ್ರಕಟಿಸುವ ಮೊದಲು ಆರೋಪಿಯನ್ನು ಅಪರಾಧಿ ಅಥವಾ ನಿರಪರಾಧಿ ಎಂದು ತೀರ್ಪು ನೀಡಲು ಮಾಧ್ಯಮಕ್ಕೆ ಈ ವಿಧಿ ‘ಪರವಾನಗಿ’ ನೀಡುವುದಿಲ್ಲ ಎಂದು ಐವರು ನ್ಯಾಯಮೂರ್ತಿಗಳು ಹೇಳಿದ್ದಾರೆ. ಮಾಧ್ಯಮ ಸ್ವಾತಂತ್ರ್ಯವೆಂದರೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ನ್ಯಾಯಮೂರ್ತಿಗಳಾದ ಎಕೆ ಜಯಶಂಕರನ್ ನಂಬಿಯಾರ್, ಕೌಸರ್ ಎಡಪ್ಪಗತ್, ಮೊಹಮ್ಮದ್ ನಿಯಾಸ್ ಸಿಪಿ, ಸಿಎಸ್ ಸುಧಾ ಮತ್ತು ಶ್ಯಾಮ್ ಕುಮಾರ್ ವಿಕೆ ಅವರನ್ನೊಳಗೊಂಡ ಪೀಠವು ಈ ಹೇಳಿಕೆ ನೀಡಿದೆ. ಯಾವುದೆ ನಿರ್ಬಂಧವಿಲ್ಲದ ವರದಿಯ ಕಾರಣಕ್ಕೆ ಅಭಿಪ್ರಾಯಗಳಲ್ಲಿ ಪೂರ್ವಾಗ್ರಹ ಮತ್ತು ನ್ಯಾಯಾಂಗದ ತೀರ್ಪಿನ ಮೇಲೆ ಸಾರ್ವಜನಿಕರು ಅಪನಂಬಿಕೆ ಪಡುವುದಕ್ಕೆ ಕಾರಣವಾಗಲಿದೆ ಎಂದು ಪೀಠವು ತೀರ್ಪಿನಲ್ಲಿ ಹೇಳಿದೆ.
ಮಾಧ್ಯಮಗಳ ಈ ‘ವಿಚಾರಣೆ’ಯು ಸಾರ್ವಜನಿಕರ ಅಭಿಪ್ರಾಯವನ್ನು ತಪ್ಪಾಗಿ ಪ್ರಭಾವಿಸುತ್ತದೆ ಮತ್ತು ಶಂಕಿತರ ಬಗ್ಗೆ “ಮೊದಲೆ ತೀರ್ಮಾನ”ಕ್ಕೆ ಬರಲು ಕಾರಣವಾಗುತ್ತದೆ. ಇದರ ಪರಿಣಾಮ ಮಾಧ್ಯಮ “ಕಾಂಗರೂ ನ್ಯಾಯಾಲಯ”ವಾಗಿ ಪರಿವರ್ತನೆಯಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ. ಮಾಧ್ಯಮ ಸ್ವಾತಂತ್ರ್ಯವೆಂದರೆ
ಪ್ರಕರಣವೊಂದರ ಬಗ್ಗೆ ತನಿಖೆ ನಡೆಯುತ್ತಿರುವ ವೇಳೆ ಮಾಧ್ಯಮಗಳು ‘ವಿಚಾರಣೆ’ ನಡೆಸುತ್ತಿರುವುದರ ವಿರುದ್ಧ ಮಾಧ್ಯಮಗಳ ಅಧಿಕಾರವನ್ನು ನಿರ್ಬಂಧಿಸಲು ಕೋರಿ ಸಲ್ಲಿಕೆಯಾಗಿದ್ದ ಮೂರು ರಿಟ್ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಈ ತೀರ್ಪು ನೀಡಲಾಗಿದೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣ; ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ಡಿಕೆ ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣ; ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್


