ಹರಿಯಾಣದ ಸಾರ್ವಜನಿಕ ಆರೋಗ್ಯ ಇಲಾಖೆಯ ದಲಿತ ಗುತ್ತಿಗೆ ಕಾರ್ಮಿಕರೊಬ್ಬರು ರಾಜ್ಯ ನಾಗರಿಕ ಸೇವಾ ಅಧಿಕಾರಿ ಗನ್‌ಪಾಯಿಂಟ್‌ನಲ್ಲಿ ಲೈಂಗಿಕ ಶೋಷಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಆರೋಪದ ಬಳಿಕ ಹಿಸಾರ್‌ನಲ್ಲಿ ನಿಯೋಜಿಸಲಾಗಿದ್ದ ಹರಿಯಾಣ ನಾಗರಿಕ ಸೇವಾ ಅಧಿಕಾರಿಯನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ. ಆದರೆ, ಕಾರಣ ಉಲ್ಲೇಖಿಸಿಲ್ಲ.
ಅಧಿಕಾರಿಯಿಂದ ಲೈಂಗಿಕ ಕಿರುಕುಳ ಆರೋಪಿಸಿ, ದಲಿತ ಗುತ್ತಿಗೆ ನೌಕರ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ (ಎನ್‌ಸಿಎಸ್‌ಸಿ), ಪಂಜಾಬ್ ಹಾಗೂ ಹರಿಯಾಣ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಡಿಜಿಪಿಗೆ ಅಂಚೆಯ ಮೂಲಕ ದೂರು ರವಾನಿಸಿದ್ದಾರೆ.
“ಸರ್ಕಾರಿ ಅಧಿಕಾರಿ ತನ್ನನ್ನು ಗುತ್ತಿಗೆ ಆಧಾರದ ಮೇಲೆ ಸಹಾಯಕನಾಗಿ ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದರು. ಅವರು ತಮ್ಮ ಅಧಿಕೃತ ನಿವಾಸದಲ್ಲಿ ಆಗಾಗ ಮಸಾಜ್ ಮಾಡಲು ನನ್ನನ್ನು ಕರೆಯುತ್ತಿದ್ದರು. ನಾನು ಹೋಗಿ ಮಸಾಜ್ ಮಾಡುವಾಗ, ಅವರು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಲು ಪ್ರಾರಂಭಿಸಿದರುಯ. ನಾನು ಹಲವಾರು ಬಾರಿ ನಿರಾಕರಿಸಿದೆ, ಆದರೆ ಅವರು ಪಿಸ್ತೂಲ್ ತೋರಿಸಿ ನನ್ನನ್ನು ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ನಂತರ, ನಾನು ಸಾಕ್ಷ್ಯ ಸಂಗ್ರಹಿಸಲು ಅವರ ಶೋಷಣೆಯ ವಿಡಿಯೋ ಮಾಡಿಕೊಂಡೆ. ನಾನು ಅಲ್ಲಿಗೆ (ಅಧಿಕಾರಿಯ ಮನೆಗೆ) ಹೋಗುವುದನ್ನು ನಿಲ್ಲಿಸಿದೆ. ಸಾಯೋದಾ..ದೂರು ಕೊಡೋದಾ? ಎಂದು ಯೋಚಿಸಿದೆ. ಬಳಿಕ ಅಂಚೆ ಮೂಲಕ ದೂರು ನೀಡಿದೆ” ಎಂದು ಸಂತ್ರಸ್ತ ನೌಕರ ಹೇಳಿದ್ದಾರೆ.
ಅಧಿಕಾರಿ ಜಾತಿ ನಿಂದನೆ ಕೂಡ ಮಾಡಿದ್ದಾರೆ ಎಂದು ದಲಿತ ನೌಕರ ಆರೋಪಿಸಿದ್ದಾರೆ.
“ನಾನು ಅಂಚೆ ಮೂಲಕ ದೂರು ಸ್ವೀಕರಿಸಿದ್ದೇವೆ. ಸಂತ್ರಸ್ತನ ಹೇಳಿಕೆ ಪಡೆಯಲು ಅವರು ಆಹ್ವಾನಿಸಿದ್ದೇವೆ” ಎಂದು ಹಿಸಾರ್ ಪೊಲೀಸ್ ವರಿಷ್ಠಾಧಿಕಾರಿ ಶಶಾಂಕ್ ಕುಮಾರ್ ಸಾವನ್ ತಿಳಿಸಿದ್ದಾರೆ.
ಇದನ್ನೂ ಓದಿ : ಒರಿಸ್ಸಾ | ದಲಿತ ವಿದ್ಯಾರ್ಥಿನಿ ಮೇಲೆ ಪದೇ ಪದೇ ಸಾಮೂಹಿಕ ಅತ್ಯಾಚಾರ


