ಜಮ್ಮು ಕಾಶ್ಮೀರ ವಿಧಾನಸಭೆಯು ಸಂವಿಧಾನದ 370 ನೇ ವಿಧಿಯ ಅಡಿಯಲ್ಲಿ ರಾಜ್ಯಕ್ಕೆ ಈ ಹಿಂದೆ ಇದ್ದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸಲು ಆಗ್ರಹಿಸುವ ನಿರ್ಣಯವನ್ನು ಬುಧವಾರ ಅಂಗೀಕರಿಸಿತ್ತು. ಈ ನಿರ್ಣಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಇದು ಕಾಶ್ಮೀರದ ವಿರುದ್ಧದ ಪಿತೂರಿ ಎಂದು ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿ ಸರ್ಕಾರವನ್ನು ಟೀಕಿಸಿದ್ದಾರೆ. 370ನೇ ವಿಧಿಯ ಪರ ನಿರ್ಣಯ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 2019ರ ಆಗಸ್ಟ್‌ನಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿತು. ಜೊತೆಗೆ ರಾಜ್ಯವನ್ನು ಜಮ್ಮು ಕಾಶ್ಮೀರ ಮತ್ತು ಲಡಾಖ್ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮತ್ತು ಉಪ ಮುಖ್ಯಮಂತ್ರಿ ಸುರೀಂದರ್ ಕುಮಾರ್ ಚೌಧರಿ ಅವರು ಮಂಡಿಸಿದ ನಿರ್ಣಯವು ಕೇಂದ್ರಾಡಳಿತ ಪ್ರದೇಶದ ವಿರುದ್ಧದ ಪಿತೂರಿಯ ಭಾಗವಾಗಿದೆ ಎಂದು ಮೋದಿ ಶುಕ್ರವಾರ ಹೇಳಿದ್ದಾರೆ. 370ನೇ ವಿಧಿಯ ಪರ ನಿರ್ಣಯ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ.
“ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟಕ್ಕೆ ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚಿಸಲು ಅವಕಾಶ ಸಿಕ್ಕ ತಕ್ಷಣ, ಅವರು ಕಾಶ್ಮೀರದ ವಿರುದ್ಧ ತಮ್ಮ ಪಿತೂರಿಗಳನ್ನು ಪ್ರಾರಂಭಿಸಿದರು…” ಎಂದು ಮಹಾರಾಷ್ಟ್ರದ ಧುಲೆಯಲ್ಲಿ ಚುನಾವಣಾ ರ್ಯಾಲಿಯಲ್ಲಿ ಮೋದಿ ಹೇಳಿದ್ದಾರೆ.
“ಕಾಂಗ್ರೆಸ್ ಮೈತ್ರಿಕೂಟವು ಅಲ್ಲಿ ಮತ್ತೆ 370 ನೇ ವಿಧಿಯನ್ನು ಜಾರಿಗೆ ತರಲು ನಿರ್ಣಯವನ್ನು ಅಂಗೀಕರಿಸಿತು … ದೇಶವು ಇದನ್ನು ಒಪ್ಪಿಕೊಳ್ಳುತ್ತದೆಯೇ? ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ 370ನೇ ವಿಧಿಯನ್ನು ಬೆಂಬಲಿಸಿ ಬ್ಯಾನರ್‌ಗಳನ್ನು ಪ್ರದರ್ಶಿಸಲಾಯಿತು. ನಿರ್ಣಯವನ್ನು ವಿರೋಧಿಸಿದ್ದಕ್ಕಾಗಿ ಪ್ರತಿಪಕ್ಷ ಬಿಜೆಪಿಗೆ ಸೇರಿದ ವಿಧಾನಸಭಾ ಸದಸ್ಯರನ್ನು ಸದನದಿಂದ ಹೊರಹಾಕಲಾಯಿತು” ಎಂದು ಮೋದಿ ಹೇಳಿದ್ದಾರೆ.
“ಬಿಜೆಪಿ ಶಾಸಕರು ಇದನ್ನು ವಿರೋಧಿಸಿದಾಗ, ಅವರನ್ನು ಎತ್ತಿಕೊಂಡು ವಿಧಾನಸಭೆಯಿಂದ ಹೊರಹಾಕಲಾಯಿತು. ಇಡೀ ದೇಶವು ಕಾಂಗ್ರೆಸ್ ಮತ್ತು ಅದರ ಮೈತ್ರಿಯ ಸತ್ಯವನ್ನು ಅರ್ಥಮಾಡಿಕೊಳ್ಳಬೇಕು. ಜಮ್ಮು ಕಾಶ್ಮೀರದಲ್ಲಿ ಕೇವಲ ಅಂಬೇಡ್ಕರ್ ಅವರ ಸಂವಿಧಾನವನ್ನು ಅನುಸರಿಸಲಾಗುತ್ತದೆ ಮತ್ತು ವಿಶ್ವದ ಯಾವುದೇ ಶಕ್ತಿಗೆ ಆರ್ಟಿಕಲ್ 370 ಅನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯ ನಂತರ ನಡೆದ ಮೊದಲ ವಿಧಾನಸಭಾ ಅಧಿವೇಶನದಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಯಿತು. ಕಳೆದ 10 ವರ್ಷಗಳ ನಂತರ ನಡೆದ ಮೊದಲ ಚುನಾವಣೆ ಇದಾಗಿದೆ. ಹಾಗೆಯೆ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ನಡೆದ ಮೊದಲ ಚುನಾವಣೆ ಇದಾಗಿತ್ತು.
ಗುರುವಾರ ಸ್ವತಂತ್ರ ಶಾಸಕ ಖುರ್ಷೀದ್ ಅಹ್ಮದ್ ಶೇಖ್, ಸಂವಿಧಾನದ 370 ನೇ ವಿಧಿಯನ್ನು ಮರುಸ್ಥಾಪಿಸಬೇಕು ಮತ್ತು ಎಲ್ಲಾ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಬ್ಯಾನರ್ ಅನ್ನು ಪ್ರದರ್ಶಿಸಿದ ನಂತರ ಗುರುವಾರ ವಿಧಾನಸಭೆಯಲ್ಲಿ ಗದ್ದಲ ನಡೆಯಿತು. ಅವರು ಬಾರಾಮುಲ್ಲಾ ಸಂಸದ, ಪ್ರಸ್ತುತ ಜೈಲಿನಲ್ಲಿರುವ ಇಂಜಿನಿಯರ್ ರಶೀದ್ ಅವರ ಸಹೋದರರಾಗಿದ್ದಾರೆ.
ಪೀಪಲ್ಸ್ ಕಾನ್ಫರೆನ್ಸ್ ನಾಯಕ ಸಜಾದ್ ಲೋನ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕ ವಹೀದ್ ಪಾರಾ ಅವರು ಶೇಖ್ ಅವರನ್ನು ಬೆಂಬಲಿಸಿ ಕಣಕ್ಕಿಳಿಯುತ್ತಿದ್ದಂತೆ ಬಿಜೆಪಿಯ ಶಾಸಕರು ಸದನದ ಬಾವಿಗೆ ನುಗ್ಗಿ ಬ್ಯಾನರ್ ಕಿತ್ತುಕೊಳ್ಳಲು ಯತ್ನಿಸಿದ್ದರು.
ಇದನ್ನೂ ಓದಿ: ದೆಹಲಿ ಗಲಭೆ ಪ್ರಕರಣ | ವಾಟ್ಸಾಪ್‌ನಲ್ಲಿ ಗಲಭೆಗೆ ಕರೆ ನೀಡಿಲ್ಲ – ಕೋರ್ಟ್‌ಗೆ ತಾಹಿರ್ ಹುಸೇನ್
ದೆಹಲಿ ಗಲಭೆ ಪ್ರಕರಣ | ವಾಟ್ಸಾಪ್‌ನಲ್ಲಿ ಗಲಭೆಗೆ ಕರೆ ನೀಡಿಲ್ಲ – ಕೋರ್ಟ್‌ಗೆ ತಾಹಿರ್ ಹುಸೇನ್


