ಕಬ್ಬಿಣದ ಅದಿರಿಗೆ ನೀಡಲಾಗಿರುವ ಅರಣ್ಯ ಉತ್ಪನ್ನ ಎಂಬ ವರ್ಗೀಕರಣದ ಟ್ಯಾಗ್ ಅನ್ನು ತೆಗೆದುಹಾಕುವ ಬಗ್ಗೆ ರಾಜ್ಯ ಸರ್ಕಾರ ಪ್ರಸ್ತಾಪಿಸಿದ್ದು, ಈ ಬಗ್ಗೆ ಬಗ್ಗೆ ವನ್ಯಜೀವಿ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಅಂತಹ ಕ್ರಮವು ಕಾನೂನುಬದ್ಧವಾಗಿ ಅನೂರ್ಜಿತವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಕಬ್ಬಿಣದ ಅದಿರಿನ
ಖನಿಜಗಳು ಮತ್ತು ಗಣಿ ಮತ್ತು ಕ್ವಾರಿಗಳ ಎಲ್ಲಾ ಉತ್ಪನ್ನಗಳು ಅರಣ್ಯ ಉತ್ಪನ್ನಗಳ ಅಡಿಯಲ್ಲಿ ಬರುತ್ತವೆ ಎಂದು ‘ಭಾರತೀಯ ಅರಣ್ಯ ಕಾಯಿದೆ-1927’ ಹೇಳುತ್ತದೆ. ಇದನ್ನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಈ ಟ್ಯಾಗ್ ಅನ್ನು ತಿದ್ದುಪಡಿ ಮಾಡಲು ರಾಜ್ಯಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ತಜ್ಞರು ಪ್ರತಿಪಾದಿಸಿದ್ದಾರೆ. ಕಬ್ಬಿಣದ ಅದಿರಿನ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಇಷ್ಟೆ ಅಲ್ಲದೆ, ವನ್ಯಜೀವಿ ಪ್ರದೇಶಗಳಿಗೆ ಒಳಪಡದ ಪ್ರದೇಶಗಳಲ್ಲಿ 24/7 ಗಣಿಗಾರಿಕೆಯನ್ನು ಪ್ರಸ್ತಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಎರಡೂ ಪ್ರಸ್ತಾವನೆಗಳನ್ನು ನವೆಂಬರ್ 14 ರಂದು ಸಚಿವ ಸಂಪುಟದ ಮುಂದೆ ಇಡಲಾಗಿದೆ ಎಂದು ವರದಿಯಾಗಿದೆ.
ಖನಿಜಗಳು ಮತ್ತು ಗಣಿ ಮತ್ತು ಕ್ವಾರಿಗಳ ಎಲ್ಲಾ ಉತ್ಪನ್ನಗಳು ಅರಣ್ಯ ಉತ್ಪನ್ನಗಳಾಗಿವೆ ಎಂಬ ವ್ಯಾಖ್ಯಾನವನ್ನು ಒಳಗೊಂಡಿರುವ ಭಾರತೀಯ ಅರಣ್ಯ ಕಾಯಿದೆದೆ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ವೈಲ್ಡ್‌ಲೈಫ್ ಫಸ್ಟ್ ಮತ್ತು ವನ್ಯಜೀವಿ ರಾಷ್ಟ್ರೀಯ ಮಂಡಳಿಯ ಮಾಜಿ ಸದಸ್ಯ ಪ್ರವೀಣ್ ಭಾರ್ಗವ್ ಹೇಳಿದ್ದಾರೆ ಎಂದು TNIE ವರದಿ ಮಾಡಿದೆ.
“ರಾಜ್ಯ ಸರ್ಕಾರ ಅರಣ್ಯ ಕಾಯಿದೆಗೆ ತಿದ್ದುಪಡಿ ಮಾಡಿದರೂ, ಅದು ಚಾಲ್ತಿಯಲ್ಲಿರುವ ಕೇಂದ್ರದ ಕಾಯ್ದೆಗೆ ಹೊಂದಿಕೆಯಾಗುವುದಿಲ್ಲ. ರಾಜ್ಯ ಸರ್ಕರದ ಅಂತಹ ಯಾವುದೇ ಪ್ರಯತ್ನವನ್ನು ನಿಷ್ಪರಿಣಾಮಕಾರಿಯಾಗಿದೆ. ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ಸರ್ಕಾರವು ಈ ಪ್ರಯತ್ನವನ್ನು ಕೈಬಿಡಲು ನಾವು ಸಲಹೆ ನೀಡುತ್ತೇವೆ. ಇದು ಸಮರ್ಥನೀಯವಲ್ಲ, ಮಾತ್ರವಲ್ಲದೆ 48-ಎ ವಿಧಿಯ ಅಡಿಯಲ್ಲಿ ಸಾಂವಿಧಾನಿಕ ಆದೇಶವನ್ನು ಉಲ್ಲಂಘಿಸುತ್ತದೆ” ಎಂದು ಭಾರ್ಗವ್ ಹೇಳಿದ್ದಾರೆ.
ರಾಜ್ಯದ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ತುಮಕೂರು ಎಂಬ ನಾಲ್ಕು ಗಣಿ ಸಮೃದ್ಧ ಜಿಲ್ಲೆಗಳಿದ್ದು, ಇಲ್ಲಿ ನಿರಂತರ ಗಣಿಗಾರಿಕೆ ನಡೆಸುವ ಉದ್ದೇಶದಿಂದ ಸರ್ಕಾರ ಮಾಡಿರುವ ಮತ್ತೊಂದು ಪ್ರಸ್ತಾಪದ ಬಗ್ಗೆ ಕೂಡಾ ಗಣಿಗಾರಿಕೆ ತಜ್ಞರು ಕೂಡ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಗಣಿ ಸುರಕ್ಷತಾ ಮಾರ್ಗಸೂಚಿಗಳ ಅಡಿಯಲ್ಲಿ ಸಮಯಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಗಳಿವೆ ಎಂದು ಬಳ್ಳಾರಿಯ ಗಣಿಗಾರಿಕೆ ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ: ಯುಪಿ: ದಲಿತ ವ್ಯಕ್ತಿಯ ಶವಸಂಸ್ಕಾರಕ್ಕೆ ಅಡ್ಡಿಪಡಿಸಿದ ಗ್ರಾಮಸ್ಥರು; ಜಾತಿ ನಿಂದನೆ ಪ್ರಕರಣ ದಾಖಲು
ಯುಪಿ: ದಲಿತ ವ್ಯಕ್ತಿಯ ಶವಸಂಸ್ಕಾರಕ್ಕೆ ಅಡ್ಡಿಪಡಿಸಿದ ಗ್ರಾಮಸ್ಥರು; ಜಾತಿ ನಿಂದನೆ ಪ್ರಕರಣ ದಾಖಲು


