ಮಣಿಪುರದ ಕಣಿವೆ ಪ್ರದೇಶಗಳ ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆಯನ್ನು (AFSPA) ಮರು ಜಾರಿಗೊಳಿಸಿ ಕೇಂದ್ರ ಗೃಹ ಸಚಿವಾಲಯ (ಎಂಎಚ್‌ಎ) ಗುರುವಾರ ಆದೇಶ ಹೊರಡಿಸಿದೆ. ಸುಮಾರು 19 ತಿಂಗಳುಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದ ಹಿನ್ನಲೆ ಈ ಪ್ರದೇಶಗಳನ್ನು ಕಾಯಿದೆ ಜಾರಿಯಾಗುವಂತೆ ‘ಅಡಚಣೆಯ ಪ್ರದೇಶಗಳು’ (Disturbed Areas)’ ಎಂದು ಘೋಷಿಸಲಾಗಿದೆ. ಮಣಿಪುರ
ರಾಜ್ಯದ ಮೈತೇಯಿ ಪ್ರಾಬಲ್ಯವಿರುವ ಕಣಿವೆ ಪ್ರದೇಶಗಳಲ್ಲಿನ 19 ಪೊಲೀಸ್ ಠಾಣೆಗಳನ್ನು ಹೊರತುಪಡಿಸಿ ಮಣಿಪುರದಾದ್ಯಂತ ಜಾರಿಯಲ್ಲಿದ್ದ ‘ಡಿಸ್ಟರ್ಬ್ಡ್ ಏರಿಯಾಸ್’ ಸ್ಥಿತಿಯನ್ನು ಈಗ ವಿಸ್ತರಿಸಲಾಗಿದೆ. ಇಂಫಾಲ್ ಪಶ್ಚಿಮದ ಸೆಕ್ಮಾಯಿ ಮತ್ತು ಲಮ್ಸಾಂಗ್ ಪೊಲೀಸ್ ಠಾಣೆಗಳು, ಇಂಫಾಲ್ ಪೂರ್ವದ ಲಾಮ್ಲೈ, ಬಿಷ್ಣುಪುರದಲ್ಲಿ ಮೊಯಿರಾಂಗ್, ಲೀಮಾಖೋಂಗ್ ಕಾಂಗ್ಪೊಕ್ಪಿ, ಮತ್ತು ಜಿರಿಬಾಮ್ ಪೊಲೀಸ್ ಠಾಣೆ ಈ ವಿಸ್ತರಣೆಯಲ್ಲಿ ಸೇರಿದೆ ಎಂದು ಅಧಿಸೂಚನೆಯಲ್ಲಿ ಗೃಹ ಸಚಿವಾಲಯ ಹೇಳಿದೆ. ಮಣಿಪುರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಯಾವುದೇ ಕಾನೂನು ಅಥವಾ ಸುವ್ಯವಸ್ಥೆಗೆ ವಿರುದ್ಧವಾಗಿ ವರ್ತಿಸುವ ಯಾವುದೇ ವ್ಯಕ್ತಿಯ ವಿರುದ್ಧ ಗುಂಡು ಹಾರಿಸಲು ಅಥವಾ ಬಲವನ್ನು ಪ್ರಯೋಗಿಸಲು ಸಶಸ್ತ್ರ ಪಡೆಗಳ ಅಧಿಕಾರಿಗೆ AFSPA ಕಾಯಿದೆಯು ಅಧಿಕಾರ ನೀಡುತ್ತದೆ. ಗುಂಡು ಹಾರಿಸುವಾಗ ವ್ಯಕ್ತಿಯು ಸಾವಿಗೀಡಾದರೂ ಕೂಡಾ ಕಾಯಿದೆಯು ಗುಂಡು ಹಾರಿಸಲು ಪಡೆಗಳಿಗೆ ಅಧಿಕಾರ ನೀಡುತ್ತದೆ. ಅದೇ ವೇಳೆ ಕಾಯಿದೆಯ ಅಡಿಯಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಯನ್ನು ಕಾನೂನು ಕ್ರಮದಿಂದ ಕಾಯಿದೆಯು ರಕ್ಷಿಸುತ್ತದೆ.
ಭದ್ರತಾ ಪರಿಸ್ಥಿತಿಯನ್ನು ಕಾಪಾಡಿಕೊಳ್ಳಲು ಈ ಆರು ಪ್ರದೇಶಗಳಲ್ಲಿ ‘ಡಿಸ್ಟರ್ಬ್ಡ್ ಏರಿಯಾಸ್’ ಸ್ಥಾನಮಾನವನ್ನು ಹೇರಲಾಗುತ್ತಿದೆ. ಜೊತೆಗೆ ಈ ಪ್ರದೇಶಗಳಲ್ಲಿ ದಂಗೆಕೋರ ಗುಂಪುಗಳ ಚಟುವಟಿಕೆಗಳನ್ನು ನಿಗ್ರಹಿಸಲು ಭದ್ರತಾ ಪಡೆಗಳ ಸುಸಂಘಟಿತ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಇದನ್ನು ಖಾತರಿಪಡಿಸಲಾಗಿದೆ ಎಂದು ಅದು ಹೇಳಿದೆ.
1980 ರಿಂದ ಮಣಿಪುರವು AFSPA ಅಡಿಯಲ್ಲಿ ‘ಡಿಸ್ಟರ್ಬ್ಡ್ ಏರಿಯಾ’ ಸ್ಥಾನಮಾನವನ್ನು ಹೊಂದಿದೆ. 2004 ರಲ್ಲಿ 32 ವರ್ಷದ ತಂಗ್ಜಮ್ ಮನೋರಮಾ ಹತ್ಯೆಯ ನಂತರ ಇಂಫಾಲ್ನ ಕೆಲವು ಭಾಗಗಳಿಂದ ಅದನ್ನು ಹಿಂತೆಗೆದುಕೊಳ್ಳಲಾಯಿತು. 2022 ರಿಂದ, ‘ಡಿಸ್ಟರ್ಬ್ಡ್ ಏರಿಯಾ’ ಎಂದು ಸೂಚಿಸಲಾದ ಪ್ರದೇಶಗಳನ್ನು ಹೆಚ್ಚಿಸಲಾಗಿದ್ದು, ಏಪ್ರಿಲ್ 1, 2023 ರಿಂದ ಜಾರಿಗೆ ತರಲಾಗಿತ್ತು. ಆದರೆ ಮೈತೇಯಿ ಪ್ರಾಬಲ್ಯದ ಕಣಿವೆಯ 19 ಪೊಲೀಸ್ ಠಾಣೆಗಳನ್ನು ಈ ವ್ಯಾಪ್ತಿಯಿಂದ ಹಿಂತೆಗೆದುಕೊಳ್ಳಲಾಗಿತ್ತು.
ಇದನ್ನೂ ಓದಿ: ‘ಸಿಆರ್‌ಪಿಎಫ್ ಪಕ್ಷಪಾತ ಪ್ರದರ್ಶಿಸಿದೆ’ | ಮಣಿಪುರ ಹತ್ಯೆಯ ಕುರಿತು ಮಿಜೋ ನ್ಯಾಷನಲ್ ಫ್ರಂಟ್ ಹೇಳಿಕೆ
‘ಸಿಆರ್‌ಪಿಎಫ್ ಪಕ್ಷಪಾತ ಪ್ರದರ್ಶಿಸಿದೆ’ | ಮಣಿಪುರ ಹತ್ಯೆಯ ಕುರಿತು ಮಿಜೋ ನ್ಯಾಷನಲ್ ಫ್ರಂಟ್ ಹೇಳಿಕೆ


