ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಬುಲ್ಡೋಜರ್ ಅ’ನ್ಯಾಯ’ದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಒಂದು ದಿನದ ನಂತರ, ಉತ್ತರ ಪ್ರದೇಶದಾದ್ಯಂತ ಈ ಕ್ರಮಗಳಿಂದ ಸಂತ್ರಸ್ತರಾದವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ತಮಗೆ ಆಗಿರುವ ನಷ್ಟಕ್ಕೆ ಪರಿಹಾರವನ್ನು ಪಡೆಯಲು ಕಾನೂನು ಕ್ರಮವನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದು TNIE ವರದಿ ಮಾಡಿದೆ. ತನ್ನ ಬುಲ್ಡೋಜರ್ ಕ್ರಮದ ಬಗ್ಗೆ ವಿವಿಧ ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದರೂ, ಉತ್ತರ ಪ್ರದೇಶ ಸರ್ಕಾರವು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಶ್ಲಾಘಿಸಿದೆ. ಸುಪ್ರೀಂಕೋರ್ಟ್ ತೀರ್ಪು
ಅದಾಗ್ಯೂ, ಸರಿಯಾದ ಪ್ರಕ್ರಿಯೆಯ ನಂತರ ಮತ್ತು ಅತಿಕ್ರಮಿತ ಭೂಮಿಯಲ್ಲಿ ನಿರ್ಮಿಸಲಾದ ಆಸ್ತಿಗಳ ಮೇಲೆ ನೆಲಸಮವನ್ನು ನಡೆಸಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. “ಬುಲ್ಡೋಜರ್ ನ್ಯಾಯ”ವನ್ನು ಕಾನೂನುಬಾಹಿರ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಬುಧವಾರ ದೇಶದಾದ್ಯಂತ ಮಾರ್ಗಸೂಚಿಗಳನ್ನು ನೀಡಿತ್ತು. ಪೂರ್ವ ಶೋಕಾಸ್ ಸೂಚನೆ ಇಲ್ಲದೆ ಯಾವುದೇ ಆಸ್ತಿಯನ್ನು ಕೆಡವಬಾರದು ಮತ್ತು ಸಂತ್ರಸ್ತರಿಗೆ ಪ್ರತಿಕ್ರಿಯಿಸಲು 15 ದಿನಗಳ ಕಾಲಾವಕಾಶ ನೀಡಬೇಕು ಎಂದು ಕೋರ್ಟ್ ಹೇಳಿತ್ತು. ಸುಪ್ರೀಂಕೋರ್ಟ್ ತೀರ್ಪು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪ್ರಯಾಗ್‌ರಾಜ್‌ನಲ್ಲಿ ಪಂಪ್ ಸೆಟ್ ವ್ಯಾಪಾರ ನಡೆಸುತ್ತಿರುವ ಜಾವೇದ್ ಮೊಹಮ್ಮದ್ ಅವರ ಮನೆಯನ್ನು ಜೂನ್ 12, 2022 ರಂದು ಬುಲ್ಡೋಜರ್‌ನಿಂದ ಕೆಡವಲಾಯಿತು. ಪೊಲೀಸರು ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಅವರ ವಿರುದ್ಧ ಐದು ಪ್ರಕರಣಗಳು ದಾಖಲಾಗಿವೆ ಮತ್ತು ಅಟಾಲಾ ಪ್ರದೇಶದಲ್ಲಿ ನಡೆದ ಕಲ್ಲು ತೂರಾಟದ ಘಟನೆಯಲ್ಲಿ ಅವರು ಪ್ರಮುಖ ಆರೋಪಿಯಾಗಿದ್ದಾರೆ ಎಂದು ಹೇಳಿದ್ದರು.
“ನಿರಂಕುಶ ರೀತಿಯಲ್ಲಿ ಮನೆಗಳನ್ನು ಕೆಡವಬಾರದು … ನನ್ನ ಎರಡು ಅಂತಸ್ತಿನ ಮನೆಯನ್ನು ಕೆಡವಿದಾಗ, ನನ್ನ ಹೆಂಡತಿ ಮತ್ತು ಮಗಳನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿತ್ತು” ಎಂದು ಮೊಹಮ್ಮದ್ ಹೇಳಿದ್ದು, ಸುಪ್ರೀಂಕೋರ್ಟ್‌ನ ತೀರ್ಪನ್ನು ಅವರು ಶ್ಲಾಘಿಸಿದ್ದಾರೆ. ಸ್ಥಳೀಯ ಆಡಳಿತವು ರಾತ್ರೋರಾತ್ರಿ ಈ ಕ್ರಮ ಕೈಗೊಂಡಿದ್ದು, ಯಾವುದೇ ಸೂಚನೆಯಿಲ್ಲದೆ ತನ್ನ ಮನೆಯನ್ನು ನೆಲಸಮ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
“ನೋಟಿಸ್ ಕಳುಹಿಸಿದ್ದೇವೆ ಎಂದು ಹೇಳಿರುವ ಸರ್ಕಾರದ ಪ್ರತಿಪಾದನೆ ಸಂಪೂರ್ಣ ಸುಳ್ಳಾಗಿದ್ದು… ಅವರು ಯಾವುದೇ ನೋಟಿಸ್ ಕಳುಹಿಸಿಲ್ಲ” ಎಂದು ಅವರು ಹೇಳಿದ್ದಾರೆ. ಧ್ವಂಸಗೊಂಡ ನಂತರ ನನ್ನ ಕುಟುಂಬವು ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದು, ನಮಗೆ ಯಾರೂ ಸಹಾಯ ಮಾಡಲು ಮುಂದೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ
ಪ್ರಯಾಗರಾಜ್ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅಜಿತ್ ಸಿಂಗ್, ಪ್ರಾಧಿಕಾರವು ಅನುಮೋದನೆ ಪಡೆಯದ ಮನೆ ಅಥವಾ ಅಂಗಡಿಗಳ ವಿರುದ್ಧ ಮಾತ್ರ ಕ್ರಮ ತೆಗೆದುಕೊಳ್ಳುತ್ತದೆ. ಕೆಡವುವ ಮುನ್ನವೇ ನೋಟಿಸ್ ಜಾರಿ ಮಾಡಿ ಆ ವ್ಯಕ್ತಿಗೆ ತನ್ನ ಪರ ವಾದ ಮಂಡಿಸಲು ಅವಕಾಶ ಕಲ್ಪಿಸಲಾಗಿದ್ದು, ಆ ನಂತರವೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಬರೇಲಿಯಲ್ಲಿ ಜುಲೈ 22 ರಂದು ಶಾಹಿ ಪ್ರದೇಶದ ಗೌಸ್‌ಗಂಜ್ ಗ್ರಾಮದಲ್ಲಿ 16 ಜನರ ಮನೆಗಳನ್ನು ನೆಲಸಮಗೊಳಿಸಲಾಗಿತ್ತು. ಇದರಲ್ಲಿ ತಝಿಯಾ ಮೆರವಣಿಗೆಯಲ್ಲಿ ಒಬ್ಬ ವ್ಯಕ್ತಿಯನ್ನು ಕೊಂದ ಘರ್ಷಣೆಯಲ್ಲಿ ಆರೋಪಿಗಳೆಂದು ಹೆಸರಿಸಲಾದ ಮನೆಗಳು ಸೇರಿದ್ದವು. ಸುಪ್ರೀಂ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಗೌಸ್‌ಗಂಜ್‌ನ ರಾಸಿದಾನ್, ನಫೀಸಾ ಮತ್ತು ಸೈರಾ ಖಾತೂನ್ ಅವರ ಮನೆಗಳನ್ನು ನೆಲಸಮಗೊಳಿಸಲಾಗಿದ್ದು, ಪರಿಹಾರಕ್ಕಾಗಿ ನ್ಯಾಯಾಲಯವನ್ನು ಸಂಪರ್ಕಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ‘ಸಿಆರ್‌ಪಿಎಫ್ ಪಕ್ಷಪಾತ ಪ್ರದರ್ಶಿಸಿದೆ’ | ಮಣಿಪುರ ಹತ್ಯೆಯ ಕುರಿತು ಮಿಜೋ ನ್ಯಾಷನಲ್ ಫ್ರಂಟ್ ಹೇಳಿಕೆ


