‘ಲೆಬನಾನಿನ ಆರೋಗ್ಯ ಮತ್ತು ರಕ್ಷಣಾ ಅಧಿಕಾರಿಗಳ ಪ್ರಕಾರ, ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಕನಿಷ್ಠ 12 ರಕ್ಷಣಾ ಕಾರ್ಯಕರ್ತರು ಗುರುವಾರ ಪೂರ್ವ ನಗರವಾದ ಬಾಲ್ಬೆಕ್‌ನಲ್ಲಿರುವ ನಾಗರಿಕ ರಕ್ಷಣಾ ಕೇಂದ್ರದೊಳಗೆ ಸಾವನ್ನಪ್ಪಿದ್ದಾರೆ’ ಎಂದು ಸಿರಿಯಾದ ಸರ್ಕಾರಿ ಮಾಧ್ಯಮಗಳು ಹೇಳಿವೆ. ಈ ಘೋಷಣೆಯ ಕೆಲವೇ ಗಂಟೆಗಳ ನಂತರ ಇಸ್ರೇಲಿ ಪಡೆಯು ರಾಜಧಾನಿಯಲ್ಲಿ ಮತ್ತು ಅದರ ಸುತ್ತಮುತ್ತಲಿನ ದಾಳಿಯಿಂದ ಕನಿಷ್ಠ 15 ಜನರು ಬಲಿಯಾಗಿದ್ದಾರೆ ಎಂದು ಮಾಹಿತಿ ಮಾಧ್ಯಮಗಳು ವರದಿ ಮಾಡಿವೆ.
ದಾಳಿಯಿಂದ ಹಾನಿಗೊಳಗಾದ ರಕ್ಷಣಾ ಕೇಂದ್ರದ ಅಡಿಯಲ್ಲಿ ಇನ್ನೂ ಸಿಕ್ಕಿಬಿದ್ದಿರುವ ತಮ್ಮ ಸಹೋದ್ಯೋಗಿಗಳನ್ನು ಹುಡುಕಲು ಲೆಬನಾನಿನ ತುರ್ತು ಕಾರ್ಯಕರ್ತರು ಗುರುವಾರ ಸಂಜೆ ಅವಶೇಷಗಳನ್ನು ಅಗೆಯುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕನಿಷ್ಠ ಮೂವರು ನಾಗರಿಕ ರಕ್ಷಣಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಈ ಬಗ್ಗೆ ಇಸ್ರೇಲಿ ಸೇನೆಯಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಲೆಬನಾನ್‌ನ ನಾಗರಿಕ ರಕ್ಷಣಾ ಪಡೆಗಳು ಹಿಜ್ಬುಲ್ಲಾದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಮತ್ತು ಅವರು ವಿಶ್ವದ ಅತ್ಯಂತ ಯುದ್ಧ-ಹಾನಿಗೊಳಗಾದ ರಾಷ್ಟ್ರಗಳಲ್ಲಿ ನಿರ್ಣಾಯಕ ರಕ್ಷಣಾ ಕಾರ್ಯಾಚರಣೆ ಮತ್ತು ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಾರೆ.
ಆರೋಗ್ಯ ಸಚಿವಾಲಯವು, “ಲೆಬನಾನಿನ ಸರ್ಕಾರಿ ಆರೋಗ್ಯ ಕೇಂದ್ರದ ಮೇಲೆ ಅನಾಗರಿಕ ದಾಳಿ” ಎಂದು ಖಂಡಿಸಿದೆ. “ಇದು ಎರಡು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಆರೋಗ್ಯ ತುರ್ತು ಸೌಲಭ್ಯದ ಮೇಲೆ ಎರಡನೇ ಇಸ್ರೇಲಿ ದಾಳಿಯಾಗಿದೆ” ಎಂದು ಹೇಳಿದೆ.
ದಕ್ಷಿಣ ಲೆಬನಾನ್‌ನಲ್ಲಿ, ಅರಬ್ಸಲಿಮ್ ಗ್ರಾಮದ ಮೇಲೆ ಇಸ್ರೇಲಿ ನಡೆಸಿದ ದಾಳಿಯಿಂದ ಹೆಜ್ಬೊಲ್ಲಾಹ್‌ಗೆ ಸಂಬಂಧಿಸಿದ ನಾಗರಿಕ ರಕ್ಷಣಾ ಗುಂಪು ಹೆಲ್ತ್ ಅಥಾರಿಟಿ ಅಸೋಸಿಯೇಷನ್ ಅನ್ನು ಗುರಿಯಾಗಿಸಿಕೊಂಡಿದೆ. ನಾಲ್ಕು ಅರೆವೈದ್ಯರು ಸೇರಿದಂತೆ ಆರು ಜನರನ್ನು ಕೊಂದಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಇದಕ್ಕೂ ಮೊದಲು, ಇಸ್ರೇಲ್ ಡಮಾಸ್ಕಸ್‌ನ ಪಶ್ಚಿಮ ಮಜ್ಜೆ ನೆರೆಹೊರೆಯಲ್ಲಿ ಕನಿಷ್ಠ ಎರಡು ವೈಮಾನಿಕ ದಾಳಿಗಳನ್ನು ನಡೆಸಿದೆ. ಸಿರಿಯಾದ ರಾಜಧಾನಿ ಕುದ್ಸಯಾ ಉಪನಗರಗಳಲ್ಲಿ ಒಂದರಲ್ಲಿ ಕನಿಷ್ಠ 15 ಮಂದಿ ಸಾವನ್ನಪ್ಪಿ, 16 ಮಂದಿ ಗಾಯಗೊಂಡಿದ್ದಾರೆ ಎಂದು ಸಿರಿಯಾದ ರಾಜ್ಯ ಸುದ್ದಿ ಸಂಸ್ಥೆ ತಿಳಿಸಿದೆ.
ಈ ದಾಳಿಯ ಬಗ್ಗೆ, “ಇದು ಇಸ್ಲಾಮಿಕ್ ಜಿಹಾದ್ ಉಗ್ರಗಾಮಿ ಗುಂಪಿನ ಮೂಲಸೌಕರ್ಯ ತಾಣಗಳು ಮತ್ತು ಕಮಾಂಡ್ ಸೆಂಟರ್‌ಗಳನ್ನು ಹೊಡೆದಿದೆ” ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.
ಇದನ್ನೂ ಓದಿ; ಮಣಿಪುರ | ಜಿರಿಬಾಮ್ ಸೇರಿದಂತೆ 6 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪುನಃ AFSPA ಹೇರಿದ ಕೇಂದ್ರ ಸರ್ಕಾರ


