ಜಾರ್ಖಂಡ್ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ಹಾರಾಟವನ್ನು ತೆಯಲಾಗಿದೆ ಎಂದು ಪಕ್ಷವೂ ಆರೋಪಿಸಿದ್ದು, ”ಚುನಾವಣಾ ಪ್ರಚಾರವನ್ನು ನಿಲ್ಲಿಸಲು ಇದು ಹೊಸ ಮಾರ್ಗವೇ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಜಾರ್ಖಂಡ್
ಟೇಕಾಫ್‌ಗೆ ಏರ್ ಟ್ರಾಫಿಕ್ ಕಂಟ್ರೋಲ್ ಅನುಮತಿ ನೀಡದ ಹಿನ್ನೆಲೆಯಲ್ಲಿ ಶುಕ್ರವಾರ ಜಾರ್ಖಂಡ್‌ನ ಗೊಡ್ಡಾದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಲಿಕಾಪ್ಟರ್ ಅನ್ನು ತಡೆಯಲಾಗಿದೆ. ಇದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ್ದು, ಅಂತಿಮ ಹಂತದ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ರಾಹುಲ್ ಗಾಂಧಿ ಅವರ ಚುನಾವಣಾ ಪ್ರಚಾರವನ್ನು ದಿಕ್ಕು ತಪ್ಪಿಸುವ ಉದ್ದೇಶಪೂರ್ವಕ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಹೆಲಿಕಾಪ್ಟರ್‌ಗೆ ಸುಮಾರು 45 ನಿಮಿಷಗಳವರೆಗೆ ಕ್ಲಿಯರೆನ್ಸ್ ಸಿಗಲಿಲ್ಲ ಮತ್ತು ಇನ್ನೂ ಅವರ ಹೆಲಿಕಾಪ್ಟರ್ ಅಲ್ಲಿಯೆ ಇದೆ ಎಂದು ಟೈಮ್ಸ್ ಆಫ್ ಇಂಡಿಯಾ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಮಾಡಿರುವ ವರದಿಯಲ್ಲಿ ಹೇಳಿದೆ. ಗೊಡ್ಡಾದಿಂದ ಸುಮಾರು 150 ಕಿಮೀ ದೂರದಲ್ಲಿರುವ ಚಕೈಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕಾರಣ ಇದು ಏರ್ ಟ್ರಾಪಿಕ್ ಕಂಟ್ರೋಲ್ ಮಾಡುವವರ ಉದ್ದೇಶಪೂರ್ವಕ ಕೃತ್ಯ ಎಂದು ಕಾಂಗ್ರೆಸ್ ಆರೋಪಿಸಿದೆ. ಜಾರ್ಖಂಡ್
आखिर नेता विपक्ष राहुल गांधी जी के हेलीकॉप्टर को झारखंड में उड़ने से क्यों रोका जा रहा है?
चुनाव प्रचार रोकने का ये नया तरीका है?? pic.twitter.com/asSa9nhX4K
— Srinivas BV (@srinivasiyc) November 15, 2024
“ಪ್ರಧಾನಿ ದಿಯೋಗರ್‌ನಲ್ಲಿದ್ದಾರೆ ಎಂಬ ಕಾರಣಕ್ಕಾಗಿ, ರಾಹುಲ್ ಗಾಂಧಿ ಅವರಿಗೆ ಆ ಪ್ರದೇಶವನ್ನು ದಾಟಲು ಅವಕಾಶ ನೀಡಲಿಲ್ಲ … ಈ ಬಗ್ಗೆ ಪ್ರೋಟೋಕಾಲ್ ಇದೆ ಎಂಬುವುದು ನಮಗೆ ತಿಳಿದಿದೆ. ಆದರೆ ಕಾಂಗ್ರೆಸ್ 70 ವರ್ಷಗಳ ಕಾಲ ದೇಶವನ್ನು ಆಳಿತ್ತು. ಆದರೆ, ಯಾವುದೇ ವಿರೋಧ ಪಕ್ಷದ ನಾಯಕನಿಗೆ ಎಂದಿಗೂ ಹೀಗೆ ಸಂಭವಿಸಿಲ್ಲ… ಇದು ಸ್ವೀಕಾರಾರ್ಹವಲ್ಲ” ಎಂದು ಮಹಾಗಾಮಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದೀಪಿಕಾ ಪಾಂಡೆ ಸಿಂಗ್ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಬಿವಿ ಶ್ರೀನಿವಾಸ್ ಅವರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, “ಅಷ್ಟಕ್ಕೂ ಜಾರ್ಖಂಡ್‌ನಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ಹಾರಾಟವನ್ನು ತಡೆಯಲು ಕಾರಣವೇನು?ಚುನಾವಣಾ ಪ್ರಚಾರವನ್ನು ನಿಲ್ಲಿಸಲು ಇದು ಹೊಸ ಮಾರ್ಗವೇ?” ಎಂದು ಪ್ರಶ್ನಿಸಿದ್ದಾರೆ.
आखिर नेता विपक्ष राहुल गांधी जी के हेलीकॉप्टर को झारखंड में उड़ने से क्यों रोका जा रहा है?
चुनाव प्रचार रोकने का ये नया तरीका है?? pic.twitter.com/asSa9nhX4K
— Srinivas BV (@srinivasiyc) November 15, 2024
ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯ ಕಾರಣಕ್ಕೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಹೆಲಿಕಾಪ್ಟರ್ ಟೇಕ್ ಆಫ್ ಆಗುವುದನ್ನು ಇತ್ತಿಚೆಗೆ ವಿಳಂಬ ಮಾಡಲಾಗಿತ್ತು. ಈ ಬಗ್ಗೆ ಅವರು ರಾಷ್ಟ್ರಪತಿಗಳ ಮಧ್ಯಸ್ಥಿಕೆಯನ್ನು ಕೋರಿದ್ದರು.
ಹೇಮಂತ್ ಸೊರೇನ್ ಅವರ ಪತ್ನಿ ಕಲ್ಪನಾ ಸೊರೆನ್ ಅವರು ಲತೇಹರ್‌ನಲ್ಲಿ ಪ್ರಚಾರಕ್ಕೆ ತೆರಳದಂತೆ ತಡೆಯಲಾಗಿದೆ ಎಂದು ಇತ್ತಿಚೆಗೆ ಆರೋಪಿಸಿದ್ದರು. ವಿರೋಧ ಪಕ್ಷವು ಜನರನ್ನು ತಲುಪುವ ತನ್ನ ಪ್ರಯತ್ನಗಳಿಗೆ ಬಿಜೆಪಿ ಅಡ್ಡಿ ಮಾಡುತ್ತಿವೆ ಎಂದು ಅವರು ಆರೋಪಿಸಿದ್ದರು.
ಇದನ್ನೂ ಓದಿ: ಮಹಾರಾಷ್ಟ್ರ | 12 ಲಕ್ಷ ಕಬ್ಬು ಕಡಿಯುವವರು ಮತದಾನದಿಂದ ವಂಚಿತರಾಗುವ ಭೀತಿ; ಕೋರ್ಟ್‌ಗೆ ಅರ್ಜಿ
ಮಹಾರಾಷ್ಟ್ರ | 12 ಲಕ್ಷ ಕಬ್ಬು ಕಡಿಯುವವರು ಮತದಾನದಿಂದ ವಂಚಿತರಾಗುವ ಭೀತಿ; ಕೋರ್ಟ್‌ಗೆ ಅರ್ಜಿ


