HomeUncategorizedಮಹಾರಾಷ್ಟ್ರ | 12 ಲಕ್ಷ ಕಬ್ಬು ಕಡಿಯುವವರು ಮತದಾನದಿಂದ ವಂಚಿತರಾಗುವ ಭೀತಿ; ಕೋರ್ಟ್‌ಗೆ ಅರ್ಜಿ

ಮಹಾರಾಷ್ಟ್ರ | 12 ಲಕ್ಷ ಕಬ್ಬು ಕಡಿಯುವವರು ಮತದಾನದಿಂದ ವಂಚಿತರಾಗುವ ಭೀತಿ; ಕೋರ್ಟ್‌ಗೆ ಅರ್ಜಿ

- Advertisement -
- Advertisement -

ಮಹಾರಾಷ್ಟ್ರದಲ್ಲಿ ನವೆಂಬರ್ 20ರಂದು ನಡೆಯುವ ವಿಧಾನಸಭಾ ಚುನಾವಣೆಯ ಮತದಾನದ ವೇಳೆ ರಾಜ್ಯದ ಸುಮಾರು 12 ಲಕ್ಷಕ್ಕೂ ಹೆಚ್ಚು ಕಬ್ಬು ಕಡಿಯುವ ವಲಸೆ ಕಾರ್ಮಿಕರು ಮತ ಚಲಾವಣೆಯಿಂದ ವಂಚಿತರಗುವ ಸಂಭವವಿದೆ ಎಂದು ವರದಿಗಳು ಉಲ್ಲೇಖಿಸಿದೆ. ಈ ಮತದಾರರು ತಮ್ಮ ಮತ ಚಲಾಯಿಸುವ ಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳಲು ಚುನಾವಣಾ ಆಯೋಗಕ್ಕೆ ನಿರ್ದೇಶನಗಳನ್ನು ಕೋರಿ  ಮಹಾರಾಷ್ಟ್ರದ ಕಬ್ಬು ಕತ್ತರಿಸುವ ಮತ್ತು ಸಾರಿಗೆ ಅಸೋಸಿಯೇಷನ್ ಸಂಸ್ಥೆಯು  ಔರಂಗಾಬಾದ್ ಹೈಕೋರ್ಟ್ ಪೀಠವನ್ನು ಸಂಪರ್ಕಿಸಿದೆ. ಮಹಾರಾಷ್ಟ್ರ

ವಲಸೆ ಕಾರ್ಮಿಕರು ಮತ ಚಲಾಯಿಸಲು ಮತ್ತು ಅವರ ಕೆಲಸದ ಸ್ಥಳಗಳಿಂದ ಮರಳಲು ಅನುವು ಮಾಡಿಕೊಡಬೇಕು. ಇಲ್ಲವೇ, ಅಂಚೆ ಮತಪತ್ರಗಳು ಅಥವಾ ಸಾರಿಗೆ ವ್ಯವಸ್ಥೆಯನ್ನು ಒದಗಿಸುವಂತಹ ಸೂಕ್ತ ವ್ಯವಸ್ಥೆಗಳನ್ನು ಮಾಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಸಂಘವು ನ್ಯಾಯಾಲಯವನ್ನು ಕೋರಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ

ಮರಾಠವಾಡ, ಉತ್ತರ ಮಹಾರಾಷ್ಟ್ರ ಮತ್ತು ವಿದರ್ಭದಿಂದ ಸುಮಾರು 12 ಲಕ್ಷಕ್ಕೂ ಹೆಚ್ಚು ಕಬ್ಬು ಕಡಿಯುವವರು ಮತ ಚಲಾಯಿಸುವ ಅವಕಾಶವನ್ನು ಕಳೆದುಕೊಳ್ಳಿದ್ದಾರೆ. ನವೆಂಬರ್ 15 ರಿಂದ ಕಬ್ಬು ಕತ್ತರಿಸುವ ಋತು ಪ್ರಾರಂಭವಾಗಲಿದೆ ಎಂದು ಸಂಘವು ಹೇಳಿದೆ.

ರಾಜ್ಯದ ವಿವಿಧ  ಜಿಲ್ಲೆಗಳಿಂದ ಲಕ್ಷಾಂತರ ಜನರು ಪಶ್ಚಿಮ ಮಹಾರಾಷ್ಟ್ರ ಮತ್ತು ಇತರ ಕಬ್ಬು ಬೆಳೆಯುವ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯ ಮತದಾರರು ತಮ್ಮ ಮತ ಚಲಾಯಿಸುವ ಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳಲು ಚುನಾವಣಾ ಆಯೋಗಕ್ಕೆ ನಿರ್ದೇಶನಗಳನ್ನು ಕೋರಿ ಸಂಘವು ಪೀಠವನ್ನು ಸಂಪರ್ಕಿಸಿದೆ.

ಆದಾಗ್ಯೂ, ವೆಸ್ಟ್ ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಷನ್, ನವೆಂಬರ್ 20 ರಂದು ಕಾರ್ಮಿಕರು ತಮ್ಮ ಊರುಗಳಿಗೆ ಕಳುಹಿಸಲು ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿಕೊಂಡಿದೆ.

ಮರಾಠವಾಡ, ಉತ್ತರ ಮಹಾರಾಷ್ಟ್ರ ಮತ್ತು ವಿದರ್ಭದಿಂದ 12-15 ಲಕ್ಷ ಜನರು ಪಶ್ಚಿಮ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕಬ್ಬು ಬೆಳೆಯುವ ಪ್ರದೇಶಗಳಿಗೆ ತೆರಳುತ್ತಾರೆ ಎಂದು ತಮ್ಮ ಅರ್ಜಿಯಲ್ಲಿ ಸಂಘದ ಅಧ್ಯಕ್ಷ ಜೀವನ್ ರಾಥೋಡ್ ಹೇಳಿದ್ದಾರೆ.

ಪ್ರಸ್ತುತ ಕಟಾವು ಋತುವಿನಲ್ಲಿ, ಗಮನಾರ್ಹ ಸಂಖ್ಯೆಯ ಕಬ್ಬು ಕತ್ತರಿಸುವವರು ಈಗಾಗಲೇ ತಮ್ಮ ಮನೆಗಳನ್ನು ತೊರೆದು ಕೆಲಸಕ್ಕಾಗಿ ವಲಸೆ ಹೋಗಿದ್ದಾರೆ. ಹೀಗೆ ವಲಸೆ ಹೋಗಿರುವ ಅವರು 2025ರ ಏಪ್ರಿಲ್ ಅಥವಾ ಮೇ ವರೆಗೆ ಹಿಂತಿರುಗುವುದಿಲ್ಲ. ಇಷ್ಟು ದೊಡ್ಡ ವರ್ಗವು ತಮ್ಮ ಮತ ಚಲಾಯಿಸಲುವಲ್ಲಿ  ಗೈರುಹಾಜರಾದರೆ, ಅದು  ಪ್ರಜಾಪ್ರಭುತ್ವದ ಉದ್ದೇಶಕ್ಕೆ ಸೋಲಾಗುತ್ತದೆ ಎಂದು ರಾಥೋಡ್ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.

ಚುನಾವಣೆಯ ದಿನದಂದು ಈ ಕಾರ್ಮಿಕರಿಗೆ ರಜೆ ಘೋಷಿಸಲು ಮಹಾರಾಷ್ಟ್ರ ರಾಜ್ಯ ಸಹಕಾರಿ ಸಕ್ಕರೆ ಕಾರ್ಖಾನೆಗಳೊಂದಿಗೆ ಸಮನ್ವಯ ಸಾಧಿಸಲು ರಾಜ್ಯದ ಸಕ್ಕರೆ ಆಯುಕ್ತರಿಗೆ ನಿರ್ದೇಶನ ನೀಡಬೇಕು ಎಂದು ಅವರು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.

ದೇಶದ ಅಗ್ರ ಸಕ್ಕರೆ ಉತ್ಪಾದಕ ರಾಜ್ಯವಾಗಿರುವ ಮಹಾರಾಷ್ಟ್ರವು 200ಕ್ಕೂ ಹೆಚ್ಚು ಖಾಸಗಿ ಮತ್ತು ಸಹಕಾರಿ ಕಾರ್ಖಾನೆ ಸಕ್ಕರೆ ಕಾರ್ಖಾನೆಗಳನ್ನು ಹೊಂದಿದೆ. ಕಳೆದ ವರ್ಷ ರಾಜ್ಯವು ಸುಮಾರು 110 ಲಕ್ಷ ಟನ್‌ ಸಕ್ಕರೆ ಉತ್ಪದಿಸಿದೆ.

ಮಹಾರಾಷ್ಟ್ರದ ಪ್ರಮುಖ ಪಕ್ಷವಾಗಿದ್ದ ಶಿವಸೇನೆ, ಎನ್‌ಸಿಪಿ ಈ ಬಾರಿ ವಿಭಜನೆ ಹೊಂದಿದ್ದರಿಂದ, ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್, ಬಿಜೆಪಿ, ಎನ್‌ಸಿಪಿ (ಅಜಿತ್ ಪವಾರ್), ಶಿವಸೇನೆ (ಶಿಂಧೆ), ಎನ್‌ಸಿಪಿ (ಶರದ್ ಪವಾರ್), ಶಿವಸೇನೆ (ಉದ್ಧವ್ ಠಾಕ್ರೆ) ಪಕ್ಷಗಳು ಸೇರಿ 6 ಪ್ರಮುಖ ಪಕ್ಷಗಳು ಹೊಂದಿದೆ. ಹಾಗಾಗಿ ಈ ಬಾರಿ ಅಭ್ಯರ್ಥಿಗಳ ಗೆಲುವಿನ ಅಂತರವು ತೀರಾ ತೆಳುವಾಗಿರುತ್ತದೆ. ಹಾಗಾಗಿಯೆ ಈ ವಲಸೆ ಕಾರ್ಮಿಕರ ಮತಗಳು ಬಹಳ  ಪ್ರಮುಖವಾಗಿವೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಡುತ್ತಾರೆ.

ಗಡಿ ಪ್ರದೇಶಗಳಲ್ಲಿ ನಿಯೋಜಿಸಲಾದ ಸೈನಿಕರು ಮತ್ತು ಸರಕಾರಿ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಕೈಗೊಳ್ಳುವ ಕ್ರಮಗಳಂತೆ, ಕಬ್ಬು ಕಡಿಯುವ ವಲಸೆ ಕಾರ್ಮಿಕರಿಗೆ ಕೂಡಾ ವ್ಯವಸ್ಥೆಗಳನ್ನು ಮಾಡಬಹುದು ಎಂದು ರಾಥೋಡ್‌ ಅವರು ನ್ಯಾಯಾಲಯವನ್ನು ಕೋರಿದ್ದಾರೆ.

ಇದನ್ನೂ ಓದಿ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸೌಜನ್ಯ ಪ್ರಕರಣ: ಸುಪ್ರೀಂ ಆದೇಶದ ಪ್ರತಿ ಸಿಕ್ಕ ತಕ್ಷಣ SIT ರಚನೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅವರ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮರುತನಿಖೆಗೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ, ನ್ಯಾಯಾಲಯದ ಅಧಿಕೃತ ಆದೇಶದ ಪ್ರತಿ ಕೈ ಸೇರಿದ ತಕ್ಷಣ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ...

ದೆಹಲಿ| ಸಾಮೂಹಿಕ ಮತಾಂತರ ಆರೋಪ; ಕ್ರಿಶ್ಚಿಯನ್ನರ ವಾರಾಂತ್ಯದ ಪ್ರಾರ್ಥನೆಗೆ ಅಡ್ಡಿಪಡಿಸಿದ ಹಿಂದುತ್ವ ಗುಂಪು

ದೆಹಲಿಯ ಜನಕಪುರಿಯಲ್ಲಿರುವ ಹಯಾತ್ ಸೆಂಟ್ರಿಕ್ ಹೋಟೆಲ್‌ನಲ್ಲಿ ನಡೆಯುತ್ತಿದ್ದ (ಸೆಪ್ಟೆಂಬರ್ 20 ರಂದು) ಕ್ರಿಶ್ಚಿಯನ್ನರ ಭಾನುವಾರದ ವಾಡಿಕೆಯ ಪ್ರಾರ್ಥನಾ ಸಭೆಗೆ ನುಗ್ಗಿದ ಹಿಂದುತ್ವ ಗುಂಪು ಪ್ರಾರ್ಥನೆಗೆ ಅಡ್ಡಪಿಡಿಸಿದೆ. ಹಿಂದೂಗಳ ಸಾಮೂಹಿಕ ಮತಾಂತರ ನಡೆಯುತ್ತಿದೆ...

ಕಸ್ತೂರಿ ರಂಗನ್ ವರದಿ ತಿರಸ್ಕಾರ, ಮಲೆನಾಡಿನ ಜನರ ಬದುಕಿಗೆ ಶಾಶ್ವತ ಪರಿಹಾರ : ಡಾ. ಜಿ. ಪರಮೇಶ್ವರ್

ಪಶ್ಚಿಮ ಘಟ್ಟದ ಜೀವ ವೈವಿಧ್ಯ ಮತ್ತು ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಕೇಂದ್ರ ಸರ್ಕಾರವು ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆಗಳನ್ನು ಪದೇ ಪದೇ ಹೊರಡಿಸುತ್ತಿರುವುದು ಮಲೆನಾಡಿನ ಜನರ ನೆಮ್ಮದಿ ಕೆಡಿಸಿದೆ. ರಾಜ್ಯ ಸರ್ಕಾರವು...

‘ಇದು ಸಂಸ್ಕೃತಿಯಲ್ಲ, ಪಿತೃಪ್ರಭುತ್ವ’: ಜಮುಯಿ ಅಪ್ರಾಪ್ತ ಬಾಲಕಿ ಮೇಲಿನ ಕಿರುಕುಳದ ವಿಡಿಯೋಗೆ ರಾಹುಲ್ ಗಾಂಧಿ ಆಕ್ರೋಶ 

ಪಾಟ್ನಾ: ಬಿಹಾರದ ಜಮುಯಿ ಜಿಲ್ಲೆಯಲ್ಲಿ 10ನೇ ತರಗತಿಯ ಅಪ್ರಾಪ್ತ ಬಾಲಕ ಮತ್ತು ಬಾಲಕಿಯನ್ನು ರಸ್ತೆಯಲ್ಲಿ ತಡೆದು ಪುರುಷರ ಗುಂಪೊಂದು ಕಿರುಕುಳ ನೀಡಿದೆ ಎಂದು ಆರೋಪಿಸಲಾದ ವೈರಲ್ ವಿಡಿಯೋ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ...

ನಕಲಿ ಔಷಧಗಳ ವಿತರಣೆ ಜಾಲದೊಂದಿಗೆ ನಂಟು; 16 ಫಾರ್ಮಸಿಗಳ ಪರವಾನಗಿ ರದ್ದು

ಬಿಡದಿಯ ಫಾರ್ಮ್‌ಹೌಸ್ (ತೋಟದ ಮನೆ) ಒಂದರಲ್ಲಿ ಪತ್ತೆಯಾದ ನಕಲಿ ಔಷಧಗಳ ವಿತರಣೆಯ ಜಾಲದೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (ಎಫ್‌ಡಿಎ) ಸಂಸ್ಥೆಯು 16 ಫಾರ್ಮಸಿಗಳ...

ಚಾಮರಾಜನಗರ: ಬಂಡಿ ಪೂಜೆ ಹಬ್ಬದಲ್ಲಿ ದಲಿತ ಮಕ್ಕಳಿಗೆ ಅಸ್ಪೃಶ್ಯತೆ ಆಚರಣೆ – ಊಟ ನೀಡದೆ ಅಪಮಾನಿಸಿದ ಆರೋಪ

ಸಮಾಜದಲ್ಲಿ ಜಾತಿಪದ್ದತಿ ಇಂದಿಗೂ ಜೀವಂತವಾಗಿದೆಯೇ ಎಂದು ಪ್ರಶ್ನಿಸುವವರಿಗೇನು ಕಡಿಮೆ ಇಲ್ಲ.ಆದರೆ ಜಾತಿ ಕಾರಣಕ್ಕೆ ಪುಟಾಣಿ ಮಕ್ಕಳಿಗೆ ಊಟವನ್ನು ನಿರಾಕರಿಸಿ ಅಸ್ಪೃಶ್ಯತೆ ಆಚರಣೆ ಮಾಡಿರುವುದು ನಾಗರಿಕ ಸಮಾಜ ನಿಜಕ್ಕೂ ತಲೆತಗ್ಗಿಸುವಂತೆ ಮಾಡಿದೆ. ಹೌದು ಚಾಮರಾಜನಗರ ಜಿಲ್ಲೆಯ...

ಥಾಣೆ ಗಣೇಶೋತ್ಸವ 2026: ತಿಟ್ವಾಲಾದಲ್ಲಿ ಗಣಪತಿ ವಿಸರ್ಜನೆ ವೇಳೆ 2 ಗುಂಪುಗಳ ಘರ್ಷಣೆ, ಬಿಜೆಪಿ ಮಾಜಿ ಉಪಮೇಯರ್ ಸೇರಿ 70-80 ಜನರ ವಿರುದ್ಧ ಪ್ರಕರಣ

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ತಿಟ್ವಾಲಾದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿಯ ಮಾಜಿ ಉಪಮೇಯರ್ ಹಾಗೂ ಹಾಲಿ ಕಾರ್ಪೊರೇಟರ್ ಉಪೇಕ್ಷಾ ಭೋಯಿರ್...

ಬಿಜೆಪಿ ಆಡಳಿತದಲ್ಲಿ 151 ಅಂಬೇಡ್ಕರ್ ಪ್ರತಿಮೆಗಳ ಧ್ವಂಸ: ಅಖಿಲೇಶ್ ಯಾದವ್ ಆರೋಪ

ಉತ್ತರ ಪ್ರದೇಶದಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿ 72 ಜಿಲ್ಲೆಗಳಲ್ಲಿ ಬಾಬಾಸಾಹೇಬ್ ಬಿ.ಆರ್. ಅಂಬೇಡ್ಕರ್ ಅವರ 151 ಪ್ರತಿಮೆಗಳನ್ನು ಧ್ವಂಸಗೊಳಿಸಲಾಗಿದೆ. ಆದರೆ ಈವರೆಗೆ ಕೇವಲ 14 ಮಂದಿಯನ್ನು ಮಾತ್ರ ಬಂಧಿಸಲಾಗಿದೆ ಎಂದು ಸಮಾಜವಾದಿ ಪಕ್ಷದ...

ಜಾತಿ ತಾರತಮ್ಯ ಹಿಂದೂ ಸಮಾಜಕ್ಕಂಟಿದ ‘ಕಳಂಕ’: ಆರ್‌ಎಸ್‌ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ

"ಜಾತಿ ಆಧಾರಿತ ತಾರತಮ್ಯವು ಹಿಂದೂ ಸಮಾಜಕ್ಕಂಟಿದ ಕಳಂಕ, ಕೇವಲ ಕಾನೂನುಗಳಿಂದ ಜಾತೀಯತೆ ಮತ್ತು ಅಸ್ಪೃಶ್ಯತೆಯನ್ನು ಕೊನೆಗೊಳಿಸಲು ಸಾಧ್ಯವಿಲ್ಲ, ಇದಕ್ಕೆ ಪ್ರತಿಯೊಬ್ಬ ವ್ಯಕ್ತಿಯ ನಡವಳಿಕೆಯಲ್ಲಿ ಬದಲಾವಣೆಯಾಗುವ ಅಗತ್ಯವಿದೆ" ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌)...

ಎಸ್‌ಐಆರ್‌ನ ಮೂರು ಹಂತಗಳಲ್ಲಿ 13.98 ಕೋಟಿ ಮತದಾರರು ಹೊರಕ್ಕೆ; 5.43 ಕೋಟಿ ಮತದಾರರಿಗೆ ಅಳಿಸುವಿಕೆಯ ಭೀತಿ: ಕಾಂಗ್ರೆಸ್ 

ನವದೆಹಲಿ: ಭಾರತೀಯ ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ದೇಶದ ಕೋಟ್ಯಂತರ ಮತದಾರರ ಹಕ್ಕಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. SIRನ...