ಲೈಂಗಿಕ ಕಳ್ಳಸಾಗಣೆಯ ಸಂತ್ರಸ್ತರಿಗೆ ಸಮಗ್ರ ಪುನರ್ವಸತಿ ಚೌಕಟ್ಟನ್ನು ಸ್ಥಾಪಿಸಲು ಸುಪ್ರಿಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಹೇಳಿದ್ದು, ಈ ವಿಚಾರವನ್ನು ಪರಿಗಣಿಸಿ ಅಫಿಡವಿಟ್ ಸಲ್ಲಿಸುವಂತೆ ಶುಕ್ರವಾರ ಸೂಚಿಸಿದೆ. ಇಂತಹ ಅಪರಾಧಗಳ ಬಲಿಪಶುಗಳು ತಮ್ಮ ಕಳ್ಳಸಾಗಣೆದಾರರಿಂದ ಹೆಚ್ಚಾಗಿ ದೌರ್ಜನ್ಯಕ್ಕೊಳಗಾಗುತ್ತಾರೆ ಮತ್ತು ಅವರ ಮೇಲೆ ಹೇರಲಾಗುವ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಲೈಂಗಿಕ ಕಳ್ಳಸಾಗಣೆ
“ಮಾನವ ಮತ್ತು ಲೈಂಗಿಕ ಕಳ್ಳಸಾಗಾಣಿಕೆಯು ಬಲಿಪಶುವನ್ನು ಅಮಾನವೀಯಗೊಳಿಸುವ ಅಪರಾಧಗಳಾಗಿವೆ.ಇದು ಸಂತ್ರಸ್ತರ ಜೀವನ, ಸ್ವಾತಂತ್ರ್ಯ ಮತ್ತು ವೈಯಕ್ತಿಕ ಭದ್ರತೆಯ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಸಮಾಜದ ದುರ್ಬಲ ವರ್ಗಗಳು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಇಂತಹ ಅಪರಾಧಗಳಿಗೆ ಬಲಿಯಾಗುತ್ತಾರೆ” ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಪಂಕಜ್ ಮಿಥಾಲ್ ಅವರ ನ್ಯಾಯಪೀಠ ಹೇಳಿದೆ. ಲೈಂಗಿಕ ಕಳ್ಳಸಾಗಣೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಅವರು ಹಲವಾರು ಮಾರಣಾಂತಿಕ ಗಾಯಗಳಿಗೆ ಒಳಗಾಗುವ ಮತ್ತು ಲೈಂಗಿಕವಾಗಿ ಹರಡುವ ರೋಗಗಳು ಸೇರಿದಂತೆ ಸೋಂಕುಗಳು ಮತ್ತು ಅನಾರೋಗ್ಯಗಳಿಗೆ ಒಳಗಾಗುವ ಅಪಾಯವನ್ನು ಎದುರಿಸುತ್ತಾರೆ. ಅಷ್ಟೆ ಅಲ್ಲದೆ, ಮಾನಸಿಕ ಅನಾರೋಗ್ಯದ ಕಾರಣಕ್ಕೆ, ಭಯ, ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (PTSD), ಖಿನ್ನತೆ ಮತ್ತು ಮಾದಕ ವ್ಯಸನಗಳಿಗೆ ದಾಸರಾಗುವ ಆತಂಕ ಇರುತ್ತದೆ” ಎಂದು ಪೀಠ ಹೇಳಿದೆ.
“ಸಮಾಜದ ಮುಖ್ಯವಾಹಿನಿಯಿಂದ ದೂರವಾಗುವುದು ಮತ್ತು ಅವರನ್ನು ಬಹಿಷ್ಕರಿಸುವುದು ಕೂಡಾ ಅಂತಹ ಅಪರಾಧಗಳೊಂದಿಗೆ ಸಂಬಂಧ ಹೊಂದಿದೆ. ಕಳ್ಳಸಾಗಣೆಗೆ ಒಳಗಾದ ವ್ಯಕ್ತಿಗಳು ಅಪರಾಧಿ ಮನೋಭಾವನೆಯಿಂದ ಮತ್ತು ಅವಮಾನಪಡಬೇಕಾದ ಕಾರಣದಿಂದಾಗಿ ಸಾಮಾಜಿಕವಾಗಿ ಥಟ್ಟನೆ ದೂರವಾಗುತ್ತಾರೆ” ಎಂದು ಪೀಠ ಹೇಳಿದೆ.
“ಈ ಅಪರಾಧದ ಕಾರಣಕ್ಕಾಗಿ ಅವರು ಸಮಾಜದಿಂದ ಮತ್ತಷ್ಟು ಪ್ರತ್ಯೇಕಿಸಲ್ಪಟ್ಟು, ಏಕಾಂತ ಅನುಭವಿಸುವ ದುರದೃಷ್ಟಕರ ಸಂಭವವಿರುತ್ತದೆ. ಈ ಅಪರಾಧವು ಅಂತಹ ಸ್ವಭಾವವನ್ನು ಹೊಂದಿದ್ದು ಅದು ಅವರ ಮುಂದಿನ ಶಿಕ್ಷಣ ಮತ್ತು ಕಲಿಕೆಯನ್ನು ಗಂಭೀರವಾಗಿ ಅಡ್ಡಿಪಡಿಸುತ್ತದೆ” ಎಂದು ಪೀಠವು ಹೇಳಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ಮೇಲಿನ 2015 ರ ತೀರ್ಪಿನ ಅನುಸರಣೆ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಇದನ್ನೂ ಓದಿ: ”ಇದು ಯುಪಿ ಅಲ್ಲ” | ಆದಿತ್ಯನಾಥ್ ವಿರುದ್ಧ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಕೆ
”ಇದು ಯುಪಿ ಅಲ್ಲ” | ಆದಿತ್ಯನಾಥ್ ವಿರುದ್ಧ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಕೆ


