Homeಅಂಕಣಗಳು`ಅರೆರೆ, ನಮ್ದು ಕುತ್ತೆ ನಮಿಗೇ ಬೌ..ಬೌ..’

`ಅರೆರೆ, ನಮ್ದು ಕುತ್ತೆ ನಮಿಗೇ ಬೌ..ಬೌ..’

- Advertisement -
- Advertisement -

ಕೇಳುಗರಿಗೆಲ್ಲ ಸ್ವಾಗತ, ಆಘಾತವಾಣಿ ವಾರ್ತೆಗಳು, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ.
ಬ್ಲೂಜೆಪಿಯೆಂಬ ಕೊಳಕುಮಂಡಲ ಪಾರ್ಟಿಯು ದೇಶದ ತುಂಬೆಲ್ಲ ಕಾರ್ಯಕರ್ತರ ಹೆಸರಿನಲ್ಲಿ ಮಿಡಿನಾಗರಗಳನ್ನು ಸಾಕಿ, ವಿರೋಧಿಗಳ ಮೇಲೆ ಎಸೆಯುತ್ತಿರುವುದು ಗೊತ್ತೇ ಇದೆ. ಕಂಡಕಂಡವರಿಗೆಲ್ಲ ಕಚ್ಚಿ ಕಚ್ಚಿ ಅಭ್ಯಾಸವಾಗಿರುವ ಈ ಹಾವುಗಳು ಕಚ್ಚಲು ಬೇರೆ ಯಾರೂ ಸಿಗದೆ ಇತ್ತೀಚೆಗೆ ಬ್ಲೂಜೆಪಿ ಪಕ್ಷದವರನ್ನೇ ಅಗಿಯುತ್ತಿರುವುದು ಹೊಸ ಸಮಾಚಾರ. ಅಂತರ್ಧರ್ಮೀಯ ಮದುವೆಯಾದ ದಂಪತಿಗಳಿಗೆ ಪಾಸ್ ಪೋರ್ಟ್ ಕೊಡಲ್ಲ ಎಂದ ಸರ್ಕಾರಿ ಅಧಿಕಾರಿಯೊಬ್ಬನನ್ನು ಕೇಂದ್ರ ವಿದೇಶಾಂಗ ಮಂತ್ರಿ ಚೆಷ್ಮಾ ಸುರಾಜಮ್ಮ ಒದೆಯಬಾರದ ಜಾಗಕ್ಕೆ ಒದ್ದು ಕೆಲಸದಿಂದ ಓಡಿಸಿದ್ದರು. ಇಷ್ಟಕ್ಕೇ ರೊಚ್ಚಿಗೆದ್ದ ಬ್ಲೂಜೆಪಿಯ ಕಾರ್ಯಕರ್ತ ಸರ್ಪಗಳ ಪಡೆಯು ಚೆಶ್ಮಮ್ಮನನ್ನು ಕೊಲೆ ಮಾಡಲು, ತುಳಿದು ಸಾಯಿಸಲು ಕರೆ ಕೊಟ್ಟಿದ್ದವು. ಮುದ್ದು ಮಾಡಿ, ತಲೆಸವರಿ, ವಿಷವುಣಿಸಿ ಬೆಳೆಸಿದ ತಮ್ಮ ಸ್ವಂತ ಸರ್ಪಗಳೇ ತಿರುಗಿ ಬಿದ್ದು ಕಚ್ಚುತ್ತಿರುವುದರಿಂದ ಘಾಸಿಗೊಂಡ ಚೆಷ್ಮಮ್ಮ `ಅರೆರೆ, ನಮ್ದು ಕುತ್ತಾ ನಮಿಗೇ ಬೌ..ಬೌ..’ ಎಂದು ಕನವರಿಸುತ್ತಾ ಜೀವನದಲ್ಲಿ ಜಿಗುಪ್ಸೆ ಹುಟ್ಟಿಸಿಕೊಂಡಿದ್ದಾರೆಂದು ಅನಧಿಕೃತ ಮೂಲಗಳು ತಿಳಿಸಿವೆ.

******

ಬ್ರದಾನಮಂತ್ರಿ ಫಕೀರಪ್ಪನನ್ನು ರೋಡ್ ಶೋ ಟೈಮಿನಲ್ಲಿ ಆನೆಪಟಾಕಿ ಸರಕ್ಕೆ ಬೆಂಕಿಹಚ್ಚಿ ಎಸೆದು ಉಡೀಸ್ ಮಾಡಲು ದುಷ್ಕರ್ಮಿಗಳು ಹೊಂಚು ಹಾಕುತ್ತಿದ್ದಾರೆಂದು ಹಗಲುಕನಸು ಕಂಡ ಮಹಾರಾಷ್ಟ್ರ ಪೊಲೀಸರು ಈ ಕೆಟ್ಟಕನಸಿನ ಬಗ್ಗೆ ಬ್ರಧಾನಮಂತ್ರಿ ಕಚೇರಿಗೆ ಮಾಹಿತಿ ತಲುಪಿಸಿದ್ದಾರೆ. ಈ ತಳಬುಡವಿಲ್ಲದ ದುಸ್ವಪ್ನದ ಆಧಾರದ ಮೇಲೆ ಪಿ.ಎಂ ಫಕೀರಪ್ಪನಿಗೆ ಸೆಕ್ಯುರಿಟಿಯನ್ನು ಟೈಟ್ ಮಾಡಲಾಗಿದೆಯಂತೆ. ಹೊಸ ಆದೇಶದ ಪ್ರಕಾರ ಫಕೀರಪ್ಪನನ್ನು ದೇಶದ ಎಂ.ಎಲ್.ಎ, ಎಂಪಿಗಳು, ಅಧಿಕಾರಿಗಳೂ ಸಹ ಭೇಟಿ ಮಾಡಲು ನಿಬರ್ಂಧ ಹೇರಲಾಗಿದೆ. ಫಕೀರಪ್ಪನನ್ನು ಒಂದು ಪುರಿಮೂಟೆಯೊಳಗೆ ತುಂಬಿ, ಲಾರಿಯೊಂದಕ್ಕೆ ಎಸೆದು, ಆ ಲಾರಿಯ ಸುತ್ತ ಎಸ್.ಪಿ.ಜಿ ಕಮ್ಯಾಂಡೋಗಳು ಬಂದೂಕು ಹಿಡಿದು ಪಹರೆ ಕಾಯುತ್ತಿದ್ದಾರೆ ಎನ್ನಲಾಗಿದೆ. ತಿಂಡಿ, ಊಟ, ಸುಸ್ಸು ಮಾಡಲಷ್ಟೇ ಪುರಿಮೂಟೆಯಿಂದ ಹೊರಬರುವ ಫಕೀರಪ್ಪ, ಬಂದ ಕೆಲಸ ಮುಗಿಯುತ್ತಿದ್ದಂತೆ ಪುಸುಕ್ ಅಂತ ಲಾರಿ ಹತ್ತಿ ವಾಪಸ್ ಪುರಿಮೂಟೆಯೊಳಗೆ ಹೋಗಿ ಅವಿತು ಕುಳಿತುಕೊಳ್ಳುತ್ತಿದ್ದಾರೆಂದು ಅನಧಿಕೃತ ಮೂಲಗಳು ಸ್ಪಷ್ಟಪಡಿಸಿವೆ.

******

ರಾಜ್ಯ ರಾಜಕಾರಣದ ಕಲಬೆರಕೆ ಸರ್ಕಾರದಲ್ಲಿ ದಿನಕ್ಕೊಂದು ಧೀಂತಕಿಟತೋಂ ಅವಾಂತರಗಳನ್ನು ನೋಡಿ ನೋಡಿ ಕಣ್ಣು ಬೇನೆ ಬರಿಸಿಕೊಂಡಿರುವ ಸಮಾಜವಾದಿ ಸಿದ್ದಣ್ಣನವರು ಧರ್ಮಸ್ಥಳದ ಆಯುರ್ವೇದ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆದೂ ಪಡೆದೂ ಬೇಜಾರಾಗಿರೋ ಸಿದ್ದಣ್ಣ ‘ಬೆರಕೆ ಸರ್ಕಾರದ ಆಯುಸ್ಸು ಇಷ್ಟು ತಿಂಗಳು, ಆಮೇಲಿದು ಕಾಲೆತ್ತಿಕೊಂಡು ಮಲಗುತ್ತದೆ’ ಅಂತ ದಿನಕ್ಕೊಂದು ಆಡಿಯೋ ರೆಕಾಡಿರ್ಂಗ್, ವಿಡಿಯೋ ಕ್ಲಿಪಿಂಗ್ ರಿಲೀಸ್ ಮಾಡುತ್ತ ಕುಮಾರಣ್ಣನ ಬೋಳುಮಂಡೆಯ ಮೇಲೆ ಟುಕುಟುಕು ಕುಟ್ಟಿಕೊಂಡು ಎಂಜಾಯ್ ಮಾಡುತ್ತಿರುವುದು ಕೈಕಮಾಂಡ್ ತಲೆ ಕೆಡಿಸಿದೆ. ಈ ಬಗ್ಗೆ ಚಿಂತಾಕ್ರಾಂತರಾದ ಕೈಕಮ್ಯಾಂಡ್ ಮುಖ್ಯಸ್ಥರು ಪೇಟದ ಹೆಗ್ಗಡೆಯವರಿಗೆ ಫೋನು ಮಾಡಿ, ಸಿದ್ದಣ್ಣನವರ ಚಿಕಿತ್ಸೆ ಮುಗಿಯುವವರೆಗೆ ಅವರು ಮಾತನಾಡಲು ಸಾಧ್ಯವಾಗದಂತೆ ಯಾವುದಾದರೂ ಬೇರನ್ನು ಅರೆದು ಸಿದ್ದಣ್ಣನಿಗೆ ಬಲವಂತವಾಗಿ ಕುಡಿಸುವಂತೆ ವಿನಂತಿ ಮಾಡಿಕೊಂಡಿದ್ದಾರೆಂದು ಸೋರಿಕೆ ಸುದ್ದಿಗಳು ತಿಳಿಸಿವೆ.

******

ಬೀದಿಬೀದಿಗಳಲ್ಲಿ ನಾಯಿಕೊಡೆಗಳಂತೆ ತಲೆಯೆತ್ತಿರುವ ಮೊಬೈಲ್ ರಿಪೇರಿ ಅಂಗಡಿಗಳ ಹುಡುಗರಿಗಿಂತ ಕಡಿಮೆ ಕಾಮನ್ ಸೆನ್ಸ್ ಮತ್ತು ಸೈನ್ಸ್ ತಿಳುವಳಿಕೆಯಿರೋ ‘ಪವನಜ್ಜ’ ಎಂಬ ವಯೋವೃದ್ಧ ಚೆಡ್ಡಿಯೊಂದು ತನ್ನ ಮಾನವನ್ನು ತಾನೇ ತೆಗೆದುಕೊಂಡಿರೋ ಘಟನೆ ವರದಿಯಾಗಿದೆ. ಮೊಬೈಲ್‍ಗಳಲ್ಲಿ ಅದಿದೆ, ಇದು ಹಂಗೆ ಕೆಲ್ಸ ಮಾಡುತ್ತೆ, ಅದು ಹಿಂಗೆ ಕೆಲ್ಸ ಮಾಡುತ್ತೆ ಅಂತ ಪತ್ರಿಕೆಗಳಲ್ಲಿ ಪುಂಗುವ ಈ ಹಳೇ ದೊಗಳೆಚೆಡ್ಡಿಯು ಪುಸ್ತಕ ನೋಡಿ ಪರೀಕ್ಷೆ ಬರೆಯುವ ಶಿಕ್ಷಣ ಇಲಾಖೆಯ ಹೊಸ ಆಲೋಚನೆಯನ್ನು ಮೀಸಲಾತಿಗೆ ಗಂಟುಹಾಕಿ ತನ್ನ ಪುಳಚಾರ್ ಪಾಲಿಟಿಕ್ಸನ್ನು ಬಟಾಬಯಲು ಮಾಡಿಕೊಂಡಿದೆ. ಮೀಸಲಾತಿ ಅನುಪಾತದ ಹಿಂದುಮುಂದು ಗೊತ್ತಿಲ್ಲದೆ ಕೆಕರುಮಕರು ಪಟ್ಟಿಯೊಂದನ್ನು ಫೇಸ್ಬುಕ್ಕಲ್ಲಿ ಪೋಸ್ಟ್ ಮಾಡಿರುವ ಪವನಜ್ಜ.. ತಾನೆಂಥ ಶ್ರೇಷ್ಟಜಾತಿಯ ಹುಳ ಎಂಬುದನ್ನು ಅಂಡು ತಟ್ಟಿಕೊಂಡು ಘೋಷಿಸಿ ಜನರಿಂದ ಛೀಥೂ ಎಂದು ಉಗಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ.

******

ಬಿಹಾರದಲ್ಲಿ ಲಲ್ಲೂ ಯಾದವ್ ಜೊತೆಗೆ ನೆಟ್ಟಗೆ ನಡೆಯುತ್ತಿದ್ದ ಕೂಡುಸಂಸಾರದ ಸರ್ಕಾರಕ್ಕೆ ಕೈ ಕೊಟ್ಟು ಬ್ಲೂಜೆಪಿಯೆಂಬ ಮಾನಸಿಕ ಅಸ್ವಸ್ಥ ಕತ್ತೆಯೊಂದರ ಜೊತೆಗೆ ಹೊಸ ಸಂಸಾರದ ಸರ್ಕಾರ ಮಾಡಿಕೊಂಡಿದ್ದ ನಿತೀಶ್ ಕುಮಾರ್‍ಗೆ ತಾನು ಓತಿಕ್ಯಾತಕ್ಕೆ ಹೆದರಿ ಹೆಬ್ಬಾವನ್ನು ತಬ್ಬಿಕೊಂಡಿದ್ದೇನೆ ಅಂತ ತಡವಾಗಿ ಅರಿವಾಗಿದೆಯತೆ. ಬ್ಲೂಜೆಪಿ ತಿಕ್ಕಲರು ಕೊಡ್ತಿರೋ ಚಿತ್ರಹಿಂಸೆಯಿಂದ ಹೇಗಾದರೂ ಸರಿ ತಪ್ಪಿಸಿಕೊಳ್ಳಲು ಹೆಣಗುತ್ತಿರೋ ನಿತೀಶ್, ಹಳೇ ಹಸ್ಬೆಂಡಿನ ಲೆಗ್ಗೇ ಗತಿ ಎಂಬ ತೀರ್ಮಾನಕ್ಕೆ ಬಂದು “ಲಲ್ಲೂ ಮಾಮ, ಐ ಲವ್ ಯೂ ಮಾಮಾ “ ಎಂದು ಲಲ್ಲೂ ಯಾದವ್‍ಗೆ ಮೆಸೇಜು ಪಾಸ್ ಮಾಡ್ತಿದ್ದಾರೆಂದು ಗೊತ್ತಾಗಿದೆ. ಹೋದ ಬಂದಲ್ಲೆಲ್ಲ ಮಕಮೂತಿಗೆ ಇಕ್ಕಿಸಿಕೊಂಡು ಏದುಸಿರು ಬಿಡುತ್ತಿರೋ ಹಮೀದ್ ಷಾ ಎಂಬ ಹಳೇ ಕ್ರಿಮಿನಲ್ ಗಿರಾಕಿಗೆ ಈ ಬೆಳವಣಿಗೆಯಿಂದ ಹೊಸದಾಗಿ ಬೇಧಿ ಕಿತ್ಕೊಂಡಿದೆಯೆಂದು ಗುಪ್ತಮೂಲಗಳು ತಿಳಿಸಿವೆ. ಬಿಹಾರದಲ್ಲೇನಾದ್ರೂ ಎಡವಟ್ಟಾದರೆ ಅಕ್ಕಪಕ್ಕದ ರಾಜ್ಯಗಳೂ ಕೈಗೆ ಕೆರ ಎತ್ತಿಕೊಳ್ತವೆ ಅಂತ ಗಾಬರಿಯಾಗಿರುವ ಡ್ರಾಮಾ ಮಾಸ್ಟರ್ ಫಕೀರಪ್ಪ ಪಕೋಡೇಂದ್ರನು ನಿತೀಶ್ ಕುಮಾರ್‍ಗೆ ತಕ್ಷಣ ಫೋನ್ ಮಾಡಿ “ಬಾ.. ಮುತ್ತು ಕೊಡುವೆ ಕಂದನೆ, ನನ್ನ ಮುದ್ದು ರಾಜ” ಎಂಬ ಹಾಡನ್ನು ಹಾಡಿದರಂತೆ.. ಇದಕ್ಕೆ ಉತ್ತರಿಸಿದ ನಿತೀಶ್ ಕುಮಾರ್ “ನಾನು ಆ ಟೈಪ್‍ನವನಲ್ಲ… ಮುಚ್ಕೊಂಡ್ ಫೋನ್ ಮಡಗು” ಎಂದು ಖಡಕ್‍ಆಗಿ ಹೇಳಿ ಫೋನು ಕುಕ್ಕಿದರೆಂದು ಬಲ್ಲ ಮೂಲಗಳು ತಿಳಿಸಿವೆ.

******

ಕಳೆದ ಮುವ್ವತ್ತು ವರ್ಷಗಳಿಂದಲೂ ‘ಮಂದಿರ್ ವಹೀ ಬನಾಯೇಂಗೆ, ಇಟ್ಟಿಗೆ ಕೊಡಿ, ಚಪ್ಪಡಿ ಕೊಡಿ, ಮಣ್ಣು ಕೊಡಿ, ಸಿಮೆಂಟು ಕೊಡಿ’ ಅಂತ ಗಂಟಲು ಹರಿದುಕೊಳ್ತಿದ್ದ ದೊಗಳೆಚಡ್ಡಿಗಳು 2014ರಲ್ಲಿ ತಮ್ಮದೇ ಮೆಜಾರಿಟಿ ಸರ್ಕಾರ ಬಂದ ತಕ್ಷಣ ತಮ್ಮ ನವರಂಧ್ರಗಳಿಗೂ ಮಂದಿರದ ಹೆಸರಿನಲ್ಲಿ ಕಲೆಕ್ಷನ್ ಮಾಡಿದ ಐಟಂಗಳನ್ನು ಇಟ್ಟುಕೊಂಡು ಗಪ್ ಚುಪ್ ಆಗಿದ್ದರು. 4 ವರ್ಷ ಇದೇ “ಗಪ್ ಚುಪ್ಪಾಸನ” ಮಾಡುತ್ತಿದ್ದ ಇದೇ ದೊಗಳೆಚಡ್ಡಿಗಳು, ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ. ಮತ್ತೆ “ಮಂದಿರ್ ವಹೀ ಬನಾಯೇಂಗೆ” ಎಂದು ಥಕಥಕ ಕುಣಿಯುತ್ತಿವೆ. ನಿಮ್ಮದೇ ಸರ್ಕಾರ, ನಿಮ್ಮದೇ ಕಾನೂನು, ನಿಮ್ಮದೇ ಆಡಳಿತ, ನಿಮ್ಮದೇ ರಾಜ್ಯ, ನಿಮ್ಮದೇ ಮುಖ್ಯಮಂತ್ರಿ, ಇಷ್ಟೆಲ್ಲ ಇದ್ದು ಮಂದಿರ ಕಟ್ಟದೇ ಇಷ್ಟು ವರ್ಷ ಎಲ್ಲಿ ಎಂಜಲೆತ್ತೋಕೆ ಹೋಗಿದ್ರಿ ಅಂತ ದೊಗಳೆ ಚಡ್ಡಿಗಳಿಗೆ ಜನ ಉಗಿಯುತ್ತಿದ್ದಾರೆ. ಇದನ್ನು ಕೇರು ಮಾಡದ ದೊಗಳೆಚಡ್ಡಿಗಳು ಅದೇ ಚಡ್ಡಿಯಲ್ಲಿ ಉಗುಳುಬಿದ್ದ ಮುಖವನ್ನು ಒರೆಸಿಕೊಂಡು “ಮಂದಿರ್ ವಹೀ….” ಅಂತ ತಲೆ ಮೇಲೆ ಟವೆಲ್ ಹಾಕಿಕೊಂಡು ಹತ್ತಿರದ ವೈನ್ ಸ್ಟೋರ್ ಕಡೆಗೆ ಠೀವಿಯಿಂದ ಹೆಜ್ಜೆಹಾಕಿದರು ಎಂಬ ಸುದ್ದಿ ಲಭ್ಯವಾಗಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ ಅಂತ ಹೇಳುತ್ತ, ವಾರ್ತಾಪ್ರಸಾರಕ್ಕೆ ಮಂಗಳ ಹಾಡುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....