ಪತ್ನಿಯ ದೇಹದ ಬಗ್ಗೆ ಪತಿ ಅಥವಾ ಅವರ ಕುಟುಂಬದ ಸದಸ್ಯರು ಅವಮಾನಿಸುವುದು (ಬಾಡಿ ಶೇಮಿಂಗ್) ಕೂಡಾ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 498A ಅಡಿಯಲ್ಲಿ ವೈವಾಹಿಕ ದೌರ್ಜನ್ಯಕ್ಕೆ ಸಮಾನವಾಗಿರುತ್ತದೆ ಎಂದು ಕೇರಳ ಹೈಕೋರ್ಟ್ ಹೇಳಿದೆ. ಪತಿ & ಸಂಬಂಧಿಕರಿಂದ
ಬಾಡಿ ಶೇಮಿಂಗ್ ಮಾಡುವ ಕ್ರಿಯೆಗಳನ್ನು IPC ಯ ಸೆಕ್ಷನ್ 498A ಯ ವಿವರಣೆ (ಎ) ವ್ಯಾಪ್ತಿಗೆ ಒಳಪಡಿಸಲಾಗುತ್ತದೆ ಎಂದು ನ್ಯಾಯಮೂರ್ತಿ ಎ. ಬದರುದ್ದೀನ್ ಅವರ ಏಕಸದಸ್ಯ ಪೀಠ ತೀರ್ಪು ನೀಡಿದೆ. ಮಹಿಳೆಯೊಬ್ಬರು ತನ್ನ ಪತಿ, ಅವನ ತಂದೆ ಮತ್ತು ಅವನ ಸಹೋದರನ ಹೆಂಡತಿಯಿಂದ ವೈವಾಹಿಕ ಕ್ರೌರ್ಯ ಅನುಭವಿಸಿದ್ದಾಗಿ ಸಲ್ಲಿಸಲಾಗಿದ್ದ ಪ್ರಕರಣದ ತೀರ್ಪಿನಲ್ಲಿ ಹೈಕೋರ್ಟ್ ಈ ಬಗ್ಗೆ ಹೇಳಿದೆ. ಪತಿ & ಸಂಬಂಧಿಕರಿಂದ
ನಾನುಗೌರಿ ವಾಟ್ಸಾಪ್ ಗುಂಪಿಗೆ ಸೇರಿ
https://chat.whatsapp.com/BWTnQl3NBxtBGD0tyXHaPm3
ಬಾಡಿ ಶೇಮಿಂಗ್ ಮಾಡುವ ಕ್ರಿಯೆಗಳನ್ನು IPC ಯ ಸೆಕ್ಷನ್ 498A ಗೆ ವಿವರಣೆ (ಎ) ವ್ಯಾಪ್ತಿಗೆ ಒಳಪಡಿಸಲಾಗುತ್ತದೆ. ಇದು ಮಹಿಳೆಯನ್ನು ಆತ್ಮಹತ್ಯೆಗೆ ಪ್ರೇರೇಪಿಸುವ ಅಥವಾ ಗಂಭೀರವಾದ ಗಾಯ ಅಥವಾ ಜೀವಕ್ಕೆ ಅಪಾಯವನ್ನುಂಟುಮಾಡುವಂತಹ ಸ್ವಭಾವದ ಯಾವುದೇ ಉದ್ದೇಶಪೂರ್ವಕ ನಡವಳಿಕೆಯನ್ನು ಹೊಂದಿದೆ ಎಂದು ಕೋರ್ಟ್ ಹೇಳಿದೆ.
ಈ ಅರ್ಜಿಯ ವಿರುದ್ಧ ಮತ್ತೊಬ್ಬ ಮಹಿಳೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ತಾನು ಸಂತ್ರಸ್ತ ಮಹಿಳೆಯ ಗಂಡನ ಅಣ್ಣನ ಹೆಂಡತಿಯಾಗಿರುವುದರಿಂದ ಸೆಕ್ಷನ್ 498ಎ ಅಡಿಯಲ್ಲಿ ‘ಸಂಬಂಧಿ’ ಪದದ ವ್ಯಾಪ್ತಿಗೆ ಬರುವುದಿಲ್ಲ ಎಂಬ ವಾದವನ್ನು ಅವರು ಮಂಡಿಸಿದ್ದರು. ಆದರೆ ಕೋರ್ಟ್ ಈ ವಾದವನ್ನು ನಿರಾಕರಿಸಿದ್ದು ಅರ್ಜಿಯನ್ನು ವಜಾಗೊಳಿಸಿದೆ.
ಸಂತ್ರಸ್ತ ಮಹಿಳೆಯ ದೇಹದ ಆಕಾರಕ್ಕಾಗಿ ಅಪಹಾಸ್ಯ ಮಾಡಲಾಗುತ್ತಿತ್ತು ಮತ್ತು ಅವರ ಪತಿ ಈ ಮಹಿಳೆಗಿಂತ ಹೆಚ್ಚು ಸುಂದರ ಮತ್ತು ಹೆಚ್ಚು ಸೂಕ್ತವಾದ ಬೇರೆ ಮಹಿಳೆಯರನ್ನು ಹುಡುಕಬಹುದಿತ್ತು ಎಂದು ಹೇಳಿ ಅವಮಾನಿಸುತ್ತಿದ್ದರು ಎಂಬ ಆರೋಪವನ್ನು ನ್ಯಾಯಾಲಯವು ಎಫ್‌ಐಆರ್‌ನಲ್ಲಿ ಇರುವ ಬಗ್ಗೆ ಗಮನಿಸಿತ್ತು. ಜೊತೆಗೆ ಸಂತ್ರಸ್ತ ಮಹಿಳೆಯ ವೈದ್ಯಕೀಯ ಪದವಿಯ ಸತ್ಯಾಸತ್ಯತೆಯನ್ನು ಪ್ರಶ್ನಿಸಲಾಗುತ್ತಿತ್ತು ಎಂದು ನ್ಯಾಯಾಲಯ ಹೇಳಿದೆ.
ಈ ಆರೋಪಗಳು ಪ್ರಾಥಮಿಕವಾಗಿ ಸೆಕ್ಷನ್ 498A ಅಡಿಯಲ್ಲಿ ವೈವಾಹಿಕ ಕ್ರೌರ್ಯದ ಅಪರಾಧವಾಗಿದೆ ಎಂದು ನ್ಯಾಯಾಲಯವು ತೀರ್ಪು ನೀಡಿದ್ದು, ಸಂತ್ರಸ್ತ ಮಹಿಳೆಯ ಗಂಡನ ಅಣ್ಣನ ಅರ್ಜಿಯನ್ನು ವಜಾಗೊಳಿಸಿದೆ.
ಇದನ್ನೂ ಓದಿ: ಛತ್ತೀಸ್‌ಗಢ | ಆದಿವಾಸಿ ಸಮುದಾಯದ ಸಂಘಟನೆಯನ್ನು ನಿಷೇಧಿಸಿದ ಬಿಜೆಪಿ ಸರ್ಕಾರ
ಛತ್ತೀಸ್‌ಗಢ | ಆದಿವಾಸಿ ಸಮುದಾಯದ ಸಂಘಟನೆಯನ್ನು ನಿಷೇಧಿಸಿದ ಬಿಜೆಪಿ ಸರ್ಕಾರ


