ಬಿರೇನ್ ಸಿಂಗ್ ಸರ್ಕಾರ ಕರೆದ ಯಾವುದೇ ಸಭೆಗಳಿಗೆ ಹಾಜರಾಗದಂತೆ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ತನ್ನ ಸದಸ್ಯರಿಗೆ ಸೂಚನೆ ನೀಡಿದೆ. ರಾಜ್ಯಾಧ್ಯಕ್ಷ ಎನ್ ಕೈಸಿ ಅವರು ಸಹಿ ಮಾಡಿದ ಸಲಹೆಯು ಗುರುವಾರ ಹೊರಡಿಸಲಾಗಿದೆ. ಈ ಹಿಂದೆ ಬಿಜೆಪಿ ನೇತೃತ್ವದ ಎನ್‌ಡಿಎ ಭಾಗವಾಗಿದ್ದ ಎನ್‌ಪಿಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಾಸು ಪಡೆದಿತ್ತು. ಬಿರೇನ್ ಸಿಂಗ್ ಸರ್ಕಾರ
ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ನವೆಂಬರ್ 17 ರಂದು ಮಣಿಪುರದ ಬಿರೆನ್ ಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಅಧಿಕೃತವಾಗಿ ಹಿಂಪಡೆದಿದ್ದಾರೆ ಎಂದು ರಾಜ್ಯಾಧ್ಯಕ್ಷ ಎನ್ ಕೈಸಿ ಅವರು ಒತ್ತಿಹೇಳಿದ್ದಾರೆ. “ಪರಿಣಾಮವಾಗಿ, ಎಲ್ಲಾ NPP ಸದಸ್ಯರು ಈ ನಿರ್ಧಾರವನ್ನು ಅನುಸರಿಸುವ ಅಗತ್ಯವಿದೆ,” ಅವರು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡುವ ಮೊದಲು ಅಥವಾ ಈ ವಿಷಯದ ಬಗ್ಗೆ ಮಾಧ್ಯಮಗಳೊಂದಿಗೆ ತೊಡಗಿಸಿಕೊಳ್ಳುವ ಮೊದಲು ಸದಸ್ಯರು ರಾಜ್ಯ ಅಥವಾ ರಾಷ್ಟ್ರೀಯ ಅಧ್ಯಕ್ಷರಿಂದ ಅನುಮತಿ ಪಡೆಯಬೇಕು ಎಂದು ಸಲಹೆಯು ಹೇಳಿದೆ. ನವೆಂಬರ್ 18 ರಂದು ಸಿಎಂ ಸೆಕ್ರೆಟರಿಯೇಟ್‌ನಲ್ಲಿ ಬಿರೆನ್ ಸಿಂಗ್ ಕರೆದಿದ್ದ ಎನ್‌ಡಿಎ ಸಭೆಯಲ್ಲಿ ಮೂವರು ಎನ್‌ಪಿಪಿ ಶಾಸಕರು ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಪಕ್ಷದ ಈ ನಿರ್ದೇಶನ ಬಂದಿದೆ. ಬಿರೇನ್ ಸಿಂಗ್ ಸರ್ಕಾರ
ಈ ನಡುವೆ, ಶಂಕಿತ ಕುಕಿ ಉಗ್ರಗಾಮಿಗಳ ವಿರುದ್ಧ ಕೇಂದ್ರ ಸರ್ಕಾರವು “ಸಾಮೂಹಿಕ ಕಾರ್ಯಾಚರಣೆ” ಪ್ರಾರಂಭಿಸಬೇಕೆಂದು ಒತ್ತಾಯಿಸಿ ಮಣಿಪುರದ ಆಡಳಿತಾರೂಢ ಎನ್‌ಡಿಎ ಶಾಸಕರು ಅಂಗೀಕರಿಸಿದ ನಿರ್ಣಯವು “ವಿಭಜಕ, ಏಕಪಕ್ಷೀಯ ಮತ್ತು ಕೋಮುವಾದ” ಆಗಿದೆ ಎಂದು ಕುಕಿ-ಹ್ಮಾರ್-ಜೋಮಿ ಬುಡಕಟ್ಟು ಸಮುದಾಯಗಳ ಹತ್ತು ಶಾಸಕರು ಹೇಳಿದ್ದರು. ವಿಶೇಷವೆಂದರೆ, ಈ ಹತ್ತು ಶಾಸಕರಲ್ಲಿ 7 ಮಂದಿ ಬಿಜೆಪಿ ಪಕ್ಷದವರಾಗಿದ್ದು, ಒಬ್ಬರು ಪಕ್ಷೇತರ ಶಾಸಕ ಮತ್ತು ಇಬ್ಬರು ಕುಕಿ ಪೀಪಲ್ಸ್ ಅಲೈಯನ್ಸ್ ಶಾಸಕರಾಗಿದ್ದಾರೆ.
ಕೇವಲ ಒಂದು ಸಮುದಾಯದ ವಿರುದ್ಧ ಸಾಮೂಹಿಕ ಕಾರ್ಯಾಚರಣೆಯನ್ನು ಪ್ರಾರಂಭಿಸುವುದು ಪಕ್ಷಪಾತವಾಗಿದೆ ಎಂದು ಈ ಶಾಸಕರು ಹೇಳಿದ್ದಾರೆ. “ಎಲ್ಲಾ ಬಂಡುಕೋರ ಗುಂಪುಗಳಿಂದ ಎಲ್ಲಾ ಅಕ್ರಮ ಶಸ್ತ್ರಾಸ್ತ್ರಗಳನ್ನು ಮರುಪಡೆಯಲು ರಾಜ್ಯದಾದ್ಯಂತ ಸಾಮೂಹಿಕ ಕಾರ್ಯಾಚರಣೆಗಳನ್ನು ನಡೆಸಬೇಕು” ಎಂದು ಶಾಸಕರು ಹೇಳಿದ್ದಾರೆ.
10 ಮಂದಿ ಶಾಸಕರ ಹೇಳಿಕೆಗೂ ಒಂದು ದಿನ ಮುಂಚಿತವಾಗಿ, ನವೆಂಬರ್ 18 ರಂದು, ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ನೇತೃತ್ವದ 28 ಎನ್‌ಡಿಎ ಶಾಸಕರು ನವೆಂಬರ್ 11 ರಂದು ಜಿರಿಬಾಮ್‌ನಲ್ಲಿ ಆರು ಮೈತೇಯಿ ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಿ ಹತ್ಯೆಗೈದ ಶಂಕಿತ ಕುಕಿ ಉಗ್ರಗಾಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ಣಯವನ್ನು ಅಂಗೀಕರಿಸಿದ್ದರು. ಈ ನಿರ್ಣಯದಲ್ಲಿ, ಏಳು ದಿನಗಳೊಳಗೆ ಶಂಕಿತ ಉಗ್ರರನ್ನು “ಕಾನೂನುಬಾಹಿರ ಸಂಘಟನೆ” ಎಂದು ಘೋಷಿಸುವಂತೆ ಕೇಂದ್ರವನ್ನು ಒತ್ತಾಯಿಸಲಾಗಿದೆ.
ರಾಜ್ಯದಲ್ಲಿ ಹಿಂಸಾಚಾರ ಹೆಚ್ಚುತ್ತಿರುವ ಕಾರಣ ರಾಜ್ಯದ ಐದು ಕಣಿವೆ ಜಿಲ್ಲೆಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯಿದೆ (AFSPA)ಯನ್ನು ಜಾರಿಗೊಳಿಸಿರುವುದನ್ನು ಪರಿಶೀಲಿಸುವಂತೆ ಎನ್‌ಡಿಎ ಶಾಸಕರು ಒತ್ತಾಯಿಸಿದ್ದರು. “ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆ” ಗಾಗಿ ಶೋಧನೆ ನಡೆಸಲು, ಜನರನ್ನು ಬಂಧಿಸಲು ಮತ್ತು ಗುಂಡಿನ ದಾಳಿ ನಡೆಸಲು ಸೇನಾ ಸಿಬ್ಬಂದಿಗೆ AFSPA ಕಾಯಿದೆಯು ಅಧಿಕಾರವನ್ನು ನೀಡುತ್ತದೆ. ಒಂದು ವೇಳೆ ಈ ದಾಳಿಯಲ್ಲಿ ವ್ಯಕ್ತಿಯು ಮೃತಪಟ್ಟರೆ ಕಾಯಿದೆ ಸೇನಾ ಸಿಬ್ಬಂದಿಗೆ ರಕ್ಷಣೆ ನೀಡುತ್ತದೆ.
ಇದನ್ನೂ ಓದಿ: ಕಾರ್ಮಿಕರ ಕಳ್ಳ ಸಾಗಾಣಿಕೆ ತಡೆಯಲು ಪ್ರಸ್ತಾವನೆ ರೂಪಿಸಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ
ಕಾರ್ಮಿಕರ ಕಳ್ಳ ಸಾಗಾಣಿಕೆ ತಡೆಯಲು ಪ್ರಸ್ತಾವನೆ ರೂಪಿಸಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ


