“ಲೂಟಿ ಮಾಡಿದ ಶಸ್ತ್ರಾಸ್ತ್ರಗಳನ್ನು ಮರುಪಡೆಯಲು ಇಡೀ ರಾಜ್ಯಕ್ಕೆ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ (ಎಎಫ್‌ಎಸ್‌ಪಿಎ) ವಿಸ್ತರಿಸಬೇಕು” ಎಂದು ರಾಜ್ಯದ ಆಡಳಿತಾರೂಢ ಬಿಜೆಪಿ ನೇತೃತ್ವದ ಮೈತ್ರಿಕೂಟದ ಏಳು ಶಾಸಕರು ಸೇರಿದಂತೆ ಮಣಿಪುರ ವಿಧಾನಸಭೆಯ 10 ಕುಕಿ ಶಾಸಕರು ಒತ್ತಾಯಿಸಿದ್ದಾರೆ.
ಹಿಂಸಾಚಾರ ಪೀಡಿತ ಜಿರಿಬಾಮ್ ಸೇರಿದಂತೆ ಮಣಿಪುರದ ಆರು ಪೊಲೀಸ್ ಠಾಣೆ ಪ್ರದೇಶಗಳಲ್ಲಿ ಕೇಂದ್ರವು ನವೆಂಬರ್ 14 ರಂದು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ (ಎಎಫ್‌ಎಸ್‌ಪಿಎ) ಅನ್ನು ಪುನಃ ಜಾರಿಗೊಳಿಸಿತು. ಕೇಂದ್ರ ಗೃಹ ಸಚಿವಾಲಯವು ಅಲ್ಲಿನ ನಿರಂತರ ಅಸ್ಥಿರ ಪರಿಸ್ಥಿತಿ ಹಾಗೂ ಜನಾಂಗೀಯ ಕಲಹವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರತಿಪಾದಿಸಿತು.
10 ಕುಕಿ ಶಾಸಕರು ತಮ್ಮ ಜಂಟಿ ಹೇಳಿಕೆಯಲ್ಲಿ, “14 ನವೆಂಬರ್, 2024 ರ ಆದೇಶಗಳ ಪ್ರಕಾರ ಎಎಫ್‌ಎಸ್‌ಪಿಎ ಹೇರಿಕೆಯು ಉಳಿದ 13 ಪೊಲೀಸ್ ನ್ಯಾಯವ್ಯಾಪ್ತಿಯಲ್ಲಿ ಕಾಯಿದೆಯನ್ನು ವಿಸ್ತರಿಸಲು ತಕ್ಷಣದ ಪರಿಶೀಲನೆಯ ಅಗತ್ಯವಿದೆ” ಎಂದು ಹೇಳಿದರು.
ಕಳೆದ ವರ್ಷ ಮೇ 3 ರಿಂದ ಮೈತೇಯಿಗಳು ಲೂಟಿ ಮಾಡಿದ “6,000 ಕ್ಕೂ ಹೆಚ್ಚು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು” ಮರುಪಡೆಯಲು ಅನುಕೂಲವಾಗುವಂತೆ ಇಡೀ ರಾಜ್ಯದಲ್ಲಿ ಎಎಫ್‌ಎಸ್‌ಪಿಎ ಅನ್ನು ವಿಧಿಸಬೇಕು ಎಂದು ಅವರು ಪ್ರತಿಪಾದಿಸಿದರು. ಏಕೆಂದರೆ, ಇದು ಹಿಂಸಾಚಾರವನ್ನು ನಿಯಂತ್ರಿಸಲು ದೀರ್ಘಾವಧಿಯ ಕ್ರಮವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಮೈತೇಯಿ ಸಮುದಾಯದ ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನದ ಬೇಡಿಕೆಯನ್ನು ಪ್ರತಿಭಟಿಸಲು ರಾಜ್ಯದ ಗುಡ್ಡಗಾಡು ಜಿಲ್ಲೆಗಳಲ್ಲಿ ‘ಬುಡಕಟ್ಟು ಒಗ್ಗಟ್ಟಿನ ಮಾರ್ಚ್’ ಅನ್ನು ಆಯೋಜಿಸಿದ ನಂತರ ಮೇ 3, 2023 ರಂದು ಮೈತೇಯಿಗಳು ಮತ್ತು ಕುಕಿಗಳ ನಡುವೆ ಜನಾಂಗೀಯ ಹಿಂಸಾಚಾರ ಪ್ರಾರಂಭವಾಯಿತು. ಅಂದಿನಿಂದ ಇಲ್ಲಿಯವರೆಗೆ ಹಿಂಸಾಚಾರದಲ್ಲಿ 220 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಬಿಜೆಪಿಯ ಐವರು ಮತ್ತು ಜೆಡಿಯುನ ಇಬ್ಬರು ಸೇರಿದಂತೆ ಕುಕಿ ಶಾಸಕರ ಹೇಳಿಕೆಯ ಪ್ರಕಾರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಣಿಪುರದಲ್ಲಿ ಶಾಂತಿ ಮತ್ತು ಸಹಜ ಸ್ಥಿತಿಗೆ ಮರಳಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು, ಪ್ರಕ್ಷುಬ್ಧ ಪ್ರದೇಶದಲ್ಲಿ ಶಾಶ್ವತ ಶಾಂತಿಯನ್ನು ತರಲು ರಾಜಕೀಯ ಸಂವಾದವನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಣಿಪುರದಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಶಾಸಕರು ಅಂಗೀಕರಿಸಿದ ನಿರ್ಣಯವನ್ನು 10 ಬುಡಕಟ್ಟು ಶಾಸಕರು ಟೀಕಿಸಿದರು. ಏಳು ದಿನಗಳಲ್ಲಿ ಜಿರಿಬಾಮ್ ಜಿಲ್ಲೆಯಲ್ಲಿ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳನ್ನು ಕೊಂದ ಕುಕಿ ಉಗ್ರಗಾಮಿಗಳ ವಿರುದ್ಧ ಸಾಮೂಹಿಕ ಕಾರ್ಯಾಚರಣೆಗೆ ಕರೆ ನೀಡಿದರು.
ಈ ನಿರ್ಣಯವು ಒಡೆದು ಆಳುವ, ಏಕಪಕ್ಷೀಯ ಮತ್ತು ಕೋಮುವಾದ ಎಂದು ಕುಕಿ ಶಾಸಕರು ಆರೋಪಿಸಿದರು.
ಆರು ನಾಗರಿಕರ ಸಾವಿಗೆ ಸಂಬಂಧಿಸಿದ ಪ್ರಕರಣಗಳನ್ನು ಎನ್‌ಐಎಗೆ ಹಸ್ತಾಂತರಿಸುವ ನಿರ್ಣಯವು “ಕೋಮುವಾದಿ ರಾಜ್ಯದ ಸ್ಮ್ಯಾಕ್ಸ್” ಎಂದು ಅವರು ಹೇಳಿದ್ದಾರೆ.
“ಮೇ 3, 2023 ರಿಂದ ಕಣಿವೆ ಮತ್ತು ಬೆಟ್ಟಗಳಲ್ಲಿ ನಡೆದ ಎಲ್ಲಾ ನಾಗರಿಕ ಹತ್ಯೆಗಳನ್ನು ಎನ್ಐಎಗೆ ಹಸ್ತಾಂತರಿಸಬೇಕೆಂದು ನಾವು ಶಿಫಾರಸು ಮಾಡುತ್ತೇವೆ” ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ; ಬಿರೇನ್ ಸಿಂಗ್ ಸರ್ಕಾರ ಕರೆದ ಸಭೆಗೆ ಹಾಜರಾಗದಿರಿ – ತನ್ನ ಸದಸ್ಯರಿಗೆ ಎನ್‌ಪಿಪಿ ಸೂಚನೆ


