ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರ ಮತ್ತು ಅದಾನಿ ಗ್ರೂಪ್ ಒಳಗೊಂಡಿರುವ ಆಪಾದಿತ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಅಮೆರಿಕಾ ಸಲ್ಲಿಸಿರುವ ಚಾರ್ಜ್‌ಶೀಟ್ ವರದಿಗಳ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಶುಕ್ರವಾರ ಹೇಳಿದ್ದಾರೆ.
ಉದ್ಯಮಿ ಮತ್ತು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಸೌರ ವಿದ್ಯುತ್ ಒಪ್ಪಂದಗಳಿಗೆ ಅನುಕೂಲಕರವಾದ ಷರತ್ತುಗಳಿಗೆ ಬದಲಾಗಿ ಭಾರತೀಯ ಅಧಿಕಾರಿಗಳಿಗೆ $250 ಮಿಲಿಯನ್ ಲಂಚ ನೀಡುವ ವರ್ಷಗಳ ಯೋಜನೆಯಲ್ಲಿ ಅವರ ಪಾತ್ರದ ಬಗ್ಗೆ ಯುಎಸ್ ನ್ಯಾಯಾಂಗ ಇಲಾಖೆಯು ಆರೋಪ ಹೊರಿಸಿದೆ.
ಹಿಂದಿನ ವೈಎಸ್‌ಆರ್‌ಸಿಪಿ ಆಡಳಿತವು ಅದಾನಿ ಗ್ರೂಪ್‌ನಿಂದ ಸರ್ಕಾರಿ ಅಧಿಕಾರಿಗಳು ಲಂಚ ಪಡೆದಿದ್ದಾರೆ ಎಂಬ ಆರೋಪದ ಹಗರಣದಲ್ಲಿ ಸಿಲುಕಿಕೊಂಡಿದೆ. ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ತಮ್ಮ ಸರ್ಕಾರವು ಆ ಆರೋಪಗಳನ್ನು ಅಧ್ಯಯನ ಮಾಡಿ ಅವುಗಳ ಮೇಲೆ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
“ಅಲ್ಲಿ (ಯುಎಸ್) ಸಲ್ಲಿಸಲಾದ ಎಲ್ಲ ಆರೋಪಪಟ್ಟಿ ವರದಿಗಳು ನನ್ನ ಬಳಿ ಇವೆ. ಅದು ಸಾರ್ವಜನಿಕ ಡೊಮೇನ್‌ನಲ್ಲಿದೆ. ಅದನ್ನು ಅಧ್ಯಯನ ಮಾಡುತ್ತೇನೆ (ಆರೋಪಗಳು ಮತ್ತು ದೋಷಾರೋಪಣೆ) ಅದರ ಬಗ್ಗೆ ಕ್ರಮವಹಿಸಿ ನಿಮಗೆ ತಿಳಿಸುತ್ತೇನೆ” ಎಂದು ನಾಯ್ಡು ಹೇಳಿದರು.
ವೈಎಸ್‌ಆರ್‌ಸಿಪಿಯು ತನ್ನ ನೇತೃತ್ವದ ಸರ್ಕಾರದ ವಿರುದ್ಧ ಮಾಡಿದ ಆರೋಪಗಳನ್ನು ಗುರುವಾರ ತಳ್ಳಿಹಾಕಿದೆ. ಅದಾನಿ ಗುಂಪಿನೊಂದಿಗೆ ಯಾವುದೇ ನೇರ ಒಪ್ಪಂದವಿಲ್ಲ ಎಂದು ಹೇಳಿದೆ.
ವೈಎಸ್‌ಆರ್‌ಸಿಪಿ ಆಡಳಿತ ಮತ್ತು ಅದಾನಿ ಗುಂಪನ್ನು ಒಳಗೊಂಡಿರುವ ಆರೋಪಗಳು ದಕ್ಷಿಣ ರಾಜ್ಯದ ಪ್ರತಿಷ್ಠೆ ಮತ್ತು ಬ್ರಾಂಡ್ ಇಮೇಜ್‌ಗೆ ಧಕ್ಕೆ ತಂದಿವೆ ಎಂದು ಹೇಳಿದ ನಾಯ್ಡು, “ಇದು ಅತ್ಯಂತ ದುಃಖದ ಬೆಳವಣಿಗೆ” ಎಂದು ಬಣ್ಣಿಸಿದರು.
ಇದನ್ನೂ ಓದಿ; ಅದಾನಿಯ ಬಂಧನ ಏಕಿಲ್ಲ, ರಕ್ಷಿಸುತ್ತಿರುವವರು ಯಾರು? ಸಿಎಂ ಸಿದ್ದರಾಮಯ್ಯ


