Homeಮುಖಪುಟಮಾಲಿನ್ಯ ತಡೆಗಾಗಿ ಇಂದಿನಿಂದ ದೆಹಲಿಯಲ್ಲಿ ಬೆಸ-ಸಮ ನಿಯಮ ಜಾರಿ: ಬಿಜೆಪಿ ವಿರೋಧ

ಮಾಲಿನ್ಯ ತಡೆಗಾಗಿ ಇಂದಿನಿಂದ ದೆಹಲಿಯಲ್ಲಿ ಬೆಸ-ಸಮ ನಿಯಮ ಜಾರಿ: ಬಿಜೆಪಿ ವಿರೋಧ

- Advertisement -
- Advertisement -

ಮೂರು ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ತಲುಪಿರುವ ದೆಹಲಿಯ ಮಾಲಿನ್ಯವನ್ನು ತಗ್ಗಿಸುವ ನಿಟ್ಟಿನಲ್ಲಿ ಇಂದಿನಿಂದ ದೆಹಲಿಯಲ್ಲಿ ಬೆಸ-ಸಮ ನಿಯಮ ಜಾರಿಗೆ ಬಂದಿದೆ. ಅಂದರೆ  ನವೆಂಬರ್‌ 15ರವರೆಗೆ ದೆಹಲಿಯ ಕಾರು ಚಾಲಕರು ವಾರದಲ್ಲಿ ನಾಲ್ಕು ದಿನ ಮಾತ್ರ ತಮ್ಮ ಕಾರುಗಳನ್ನು ಬಳಸಲು ಸಾಧ್ಯವಿದ್ದು ಉಳಿದ ದಿನಗಳಲ್ಲಿ ಬಳಸುವಂತಿಲ್ಲ.

ಬೆಸ-ಸಮ ನಿಯಮಗಳ ಪ್ರಕಾರ, ದಿನಾಂಕ ನವೆಂಬರ್ 4, 6, 8, 12 ಮತ್ತು 14 ರಂದು 1, 3, 5, 7, 9 ರಂತಹ ಬೆಸ ಅಂಕೆಗಳೊಂದಿಗೆ ಕೊನೆಗೊಳ್ಳುವ ನೋಂದಣಿಯುಳ್ಳ ವಾಹನಗಳು ರಸ್ತೆಗಿಳಿಯುವಂತಿಲ್ಲ. ಅದೇ ರೀತಿ, ನವೆಂಬರ್ 5, 7, 9, 11, 13 ಮತ್ತು 15 ರಂದು 0, 2, 4, 6, 8  ಅಂಕೆಗಳೊಂದಿಗೆ ಕೊನೆಗೊಳ್ಳುವ ನೋಂದಣಿಯುಳ್ಳ ವಾಹನಗಳು ದೆಹಲಿಯ ರಸ್ತೆಗಿಳಿಯುವಂತಿಲ್ಲ. ನವೆಂಬರ್‌ 10ರ ಭಾನುವಾರ ಮಾತ್ರ ಎಲ್ಲಾ ಕಾರುಗಳು ಸಂಚರಿಸಬಹುದಾಗಿದೆ.

ಈ ನಿಯಮಗಳನ್ನು ಉಲ್ಲಂಘಿಸುವವರಿಗೆ ರೂ. 4,000 ದಂಡ ವಿಧಿಸಲಾಗುತ್ತದೆ. ಇದು ಬೆಸ-ಸಮ-ಯೋಜನೆಯ ಹಿಂದಿನ ಆವೃತ್ತಿಗಳಲ್ಲಿ ವಿಧಿಸಿದ ಮೊತ್ತಕ್ಕಿಂತ ದುಪ್ಪಟ್ಟಾಗಿದೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಇಬ್ಬರು ಕ್ಯಾಬಿನೆಟ್ ಸಹೋದ್ಯೋಗಿಗಳೊಂದಿಗೆ ಕೆಲಸ ಮಾಡಲು ಅವರ ಕಾರಿನಲ್ಲಿ ತೆರಳಿದರು. “ಕಾರುಗಳನ್ನು ಹಂಚಿಕೊಳ್ಳಿ. ಇದು ಸ್ನೇಹವನ್ನು ಬೆಳೆಸುತ್ತದೆ, ಸಂಬಂಧಗಳನ್ನು ಬಲಪಡಿಸುತ್ತದೆ, ಪೆಟ್ರೋಲ್ ಅನ್ನು ಉಳಿಸುತ್ತದೆ ಮತ್ತು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.” ಎಂದು ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಟ್ವೀಟ್ ಮಾಡಿದ್ದಾರೆ. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ತಮ್ಮ ಕಚೇರಿಗೆ ಸೈಕಲ್‌ನಲ್ಲಿ ತೆರಳಿದರು.

“ದೆಹಲಿಯಲ್ಲಿ ಪ್ರತಿದಿನ 30 ಲಕ್ಷ ಕಾರುಗಳು ರಸ್ತೆಗಿಳಿಯುತ್ತಿವೆ. ನಿಯಮದಂತೆ ಇಂದು 15 ಲಕ್ಷ ಕಾರುಗಳು ರಸ್ತೆಗಳಲ್ಲಿ ಇರುವುದಿಲ್ಲ. 15 ಲಕ್ಷ ಕಾರುಗಳಿಂದ ಹೊಗೆ ಕಡಿಮೆಯಾಗುತ್ತದೆ … ಎಂದು ಮುಖ್ಯಮಂತ್ರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನಿಯಮದಿಂದಾಗಿ ಇಂದು ಬೆಳಿಗ್ಗೆ ದೆಹಲಿ ಟ್ರಾಫಿಕ್‌ ಕಡಿಮೆಯಿತ್ತು ಮತ್ತು ಚಾಲಕರು ನಿಯಮವನ್ನು ಪಾಲಿಸುತ್ತಿರುವುದು ಕಂಡುಬಂತು. ನವೆಂಬರ್ 10 ರ ಭಾನುವಾರ ಈ ನಿಯಮವು ಜಾರಿಯಾಗುವುದಿಲ್ಲ. ಇತರ ರಾಜ್ಯಗಳ ನೋಂದಣಿ ಸಂಖ್ಯೆಗಳನ್ನು ಹೊಂದಿರುವ ವಾಹನಗಳಿಗೂ ಈ ನಿರ್ಬಂಧಗಳು ಅನ್ವಯವಾಗುತ್ತವೆ.

ಈ ಯೋಜನೆ ನವೆಂಬರ್ 15 ರಂದು ಕೊನೆಗೊಳ್ಳಲಿದೆ ಮತ್ತು ಮಾಲಿನ್ಯದ ಮಟ್ಟವು ಇದೇ ರೀತಿ ತೀವ್ರವಾಗಿ ಇದ್ದರೆ ಅದನ್ನು ವಿಸ್ತರಿಸುವ ಸಾಧ್ಯತೆಯಿದೆ.

ಪ್ರತಿಪಕ್ಷ ಬಿಜೆಪಿಯ ವಿಜಯ್ ಗೋಯೆಲ್‌ರವರು ಈ ನಿಯಮವನ್ನು ವಿರೋಧಿಸಿ ಸಾಂಕೇತಿಕ ಪ್ರತಿಭಟನೆಯನ್ನು ದಾಖಲಿಸಿದ್ದಾರೆ. ಇಂದು ಬೆಸ ಸಂಖ್ಯೆಯಿಂದ ಕೊನೆಗೊಳ್ಳುವ ವಾಹನಗಳಗೆ ನಿರ್ಭಂದವಿದ್ದರೂ ಸಹ ಅವರು ತಮ್ಮ ಬೆಸ ಸಂಖ್ಯೆಯ ವಾಹನವನ್ನು ಚಲಾಯಿಸಿದ್ದಾರೆ. ಅವರು ಈ ಯೋಜನೆಯನ್ನು “ಚುನಾವಣಾ ಗಿಮಿಕ್” ಮತ್ತು “ನಾಟಕ” ಎಂದು ಕರೆದಿದ್ದಾರೆ. ಆದರೆ ಇದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದು ವಿಜಯ್‌ ಗೋಯೆಲ್‌ರವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ಪರಿಸರ ಮಾಲಿನ್ಯ (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಪ್ರಾಧಿಕಾರವು ಗಾಳಿಯ ಗುಣಮಟ್ಟ ಕುಸಿಯುತ್ತಿದ್ದಂತೆ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಿಸಿದ ನಂತರ ದೆಹಲಿ ಸರ್ಕಾರ ಶುಕ್ರವಾರ ಶಾಲೆಗಳಿಗೆ ನವೆಂಬರ್‌ 5ರವರೆಗೆ ರಜೆ ನೀಡಿದೆ. ಜೊತೆಗೆ ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸಿದೆ.

ದ್ವಿಚಕ್ರ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿದೆ. ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗೆ ಬಳಸಲಾಗುವ ವಾಹನಗಳು ಮತ್ತು ಶಾಲಾ ಮಕ್ಕಳ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ. ವಿಐಪಿ ವಾಹನಗಳು, ಮಹಿಳೆಯರು, 12 ವರ್ಷ ವಯಸ್ಸಿನ ಮಕ್ಕಳು ಮತ್ತು ದೈಹಿಕವಾಗಿ ಅಂಗವಿಕಲರು ಹೊಂದಿರುವ ವಾಹನಗಳಿಗೆ ಮಾತ್ರ ವಿನಾಯಿತಿ ನೀಡಲಾಗುವುದು.

ನಿಯಮಪಾಲನೆಯನ್ನು ಖಚಿತಪಡಿಸಿಕೊಳ್ಳಲು ಸುಮಾರು 200 ಸಂಚಾರ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸಲು ಸುಮಾರು 5,000 ನಾಗರಿಕ ರಕ್ಷಣಾ ಸ್ವಯಂಸೇವಕರಿಗೆ ತರಬೇತಿ ನೀಡಲಾಗಿದೆ. ಬೆಸ-ಸಮ ಯೋಜನೆ ಜಾರಿಯಲ್ಲಿರುವಾಗ ದೆಹಲಿ ಮೆಟ್ರೋ 61 ಹೆಚ್ಚುವರಿ ಟ್ರಿಪ್‌ಗಳನ್ನು ನಿರ್ವಹಿಸಲಿದೆ. ಕ್ಯಾಬ್ ಅಗ್ರಿಗೇಟರ್ಗಳಾದ ಉಬರ್ ಮತ್ತು ಓಲಾ ಬೆಸ-ಸಮ-ಯೋಜನೆಯ ಅವಧಿಯಲ್ಲಿ ದರ ಹೆಚ್ಚಳಮಾಡದಂತೆ ನಿರ್ದೇಶನ ನೀಡಲಾಗಿದೆ.

ದೆಹಲಿಯಲ್ಲಿನ ವಾಯುಮಾಲಿನ್ಯ ಅತಿರೇಕಕ್ಕೆ ಹೋಗಲು ಪಕ್ಕದ ಪಂಜಾಬ್‌ ಮತ್ತು ಹರಿಯಾಣ ರಾಜ್ಯಗಳಲ್ಲಿ ರೈತರು ಭತ್ತ ಮತ್ತು ಗೋಧಿಯ ತ್ಯಾಜ್ಯವನ್ನು ಸುಡುತ್ತಾರೆ. ಮುಂದಿನ ಕೃಷಿಗಾಗಿ ಭೂಮಿಯನ್ನು ಸಿದ್ದಪಡಿಸಲು ಅಲ್ಲಿರುವ ತ್ಯಾಜ್ಯವನ್ನು ಸುಡುವುದು ಅವರ ವಾಡಿಕೆ. ಇದರಿಂದ ಹೊಮ್ಮುವ ಹೊಗೆಯು ದೆಹಲಿಯನ್ನು ಆವರಿಸುತ್ತಿದ್ದು ಮಾಲಿನ್ಯಕ್ಕೆ ಕಾರಣವಾಗಿದೆ. ಜೊತೆಗೆ ಪಟಾಕಿ ಮತ್ತು ವಾಹನಗಳು ಹೊಗೆಯೂ ಸೇರಿಕೊಂಡು ದೆಹಲಿಯಲ್ಲಿ ಮಾಲಿನ್ಯವನ್ನು ಹೆಚ್ಚು ಮಾಡಿವೆ.

ಮಾಹಿತಿ: ಎನ್‌ಡಿಟಿವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ: ಸಾಮಾಜಿಕ ಮಾಧ್ಯಮದಲ್ಲಿ 200-500 ರೂ.ಗೆ ಮಾರಾಟ: ಆರು ಶಿಕ್ಷಕರು, ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳ ಬಂಧನ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ. ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗವಾಗಿ ಜಾಹೀರಾತು ಮಾಡಿ ಖಾಸಗಿ ಸಂದೇಶಗಳ ಮೂಲಕ 200 ರಿಂದ...

ಕರೂರ್ ಕಾಲ್ತುಳಿತ : ಸಿಬಿಐ ಮುಂದೆ ವಿಚಾರಣೆಗೆ ಹಾಜರಾದ ನಟ ವಿಜಯ್

ಕರೂರ್ ಕಾಲ್ತುಳಿತ ಘಟನೆಗೆ ಸಂಬಂಧಪಟ್ಟಂತೆ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್ ಸೋಮವಾರ (ಜ.12) ದೆಹಲಿಯ ಕೇಂದ್ರ ತನಿಖಾ ದಳ (ಸಿಬಿಐ) ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಚಾರ್ಟರ್ಡ್ ವಿಮಾನದಲ್ಲಿ...

ಜೂನ್‌ ಅಂತ್ಯದೊಳಗೆ ಜಿಬಿಎ ವ್ಯಾಪ್ತಿಯ ಪಾಲಿಕೆಗಳಿಗೆ ಚುನಾವಣೆ : ಗಡುವು ವಿಧಿಸಿದ ಸುಪ್ರೀಂ ಕೋರ್ಟ್

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಜೂನ್ ಅಂತ್ಯದೊಳಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ (ಜ.12) ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಸುಪ್ರೀಂ ಕೋರ್ಟ್ ನಲ್ಲಿ ಮಮತಾ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ ಇಡಿ

ನವದೆಹಲಿ: ಐ-ಪಿಎಸಿ ವಿರುದ್ಧದ ಬಹು-ರಾಜ್ಯ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖೆಗೆ ಅಡ್ಡಿಪಡಿಸಿದ, ಸಾಕ್ಷ್ಯಗಳನ್ನು ತಿರುಚಿದ ಮತ್ತು ನಾಶಪಡಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಜಿಪಿ ಮತ್ತು ಕೋಲ್ಕತ್ತಾ ಪೊಲೀಸ್...

ಭಾರತಕ್ಕಿಂತ ಯಾವುದೇ ಪಾಲುದಾರ ದೇಶ ಮುಖ್ಯವಲ್ಲ, ವ್ಯಾಪಾರ ಮಾತುಕತೆ ಪುನರಾರಂಭ: ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್

"ವಾಷಿಂಗ್ಟನ್‌ಗೆ ಭಾರತಕ್ಕಿಂತ ಅಗತ್ಯವಾದ ದೇಶ ಇನ್ನೊಂದಿಲ್ಲ ಮತ್ತು ಎರಡೂ ಕಡೆಯವರು ವ್ಯಾಪಾರ ಒಪ್ಪಂದವನ್ನು ದೃಢೀಕರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ" ಎಂದು ಅಮೆರಿಕದ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಸೋಮವಾರ ಹೇಳಿದ್ದಾರೆ. ಅಮೆರಿಕ ರಾಯಭಾರ ಕಚೇರಿಯ ನೌಕರರು...

ಬಿಷಪ್ ಫ್ರಾಂಕೊ ಮುಲಕ್ಕಲ್ ಅತ್ಯಾಚಾರ ಪ್ರಕರಣ : ಒಂಬತ್ತು ವರ್ಷಗಳ ಬಳಿಕ ಮೌನ ಮುರಿದ ಸಂತ್ರಸ್ತೆ, ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿಕೆ

ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ದದ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಕ್ರೈಸ್ತ ಸನ್ಯಾಸಿನಿ ಒಂಬತ್ತು ವರ್ಷಗಳ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದು, ಫ್ರಾಂಕೊ ಮುಲಕ್ಕಲ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದ್ದಕ್ಕೆ ನಾನು ದಂಗಾಗಿದ್ದೇನೆ. ನ್ಯಾಯಕ್ಕಾಗಿ...

‘ವೆನೆಜುವೆಲಾದ ಹಂಗಾಮಿ ಅಧ್ಯಕ್ಷ’ ಎಂದು ಘೋಷಿಸಿಕೊಂಡ ಡೊನಾಲ್ಡ್ ಟ್ರಂಪ್ 

ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ತಮ್ಮದೇ ಆದ ವಿಕಿಪೀಡಿಯಾ ಪುಟದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ "ವೆನೆಜುವೆಲಾದ ಹಂಗಾಮಿ ಅಧ್ಯಕ್ಷ" ಎಂಬ ಹುದ್ದೆಯನ್ನು ಹೊಂದಿರುವ ಅವರ ಚಿತ್ರವಿದೆ. ಪೋಸ್ಟ್‌ನಲ್ಲಿ ಟ್ರಂಪ್...

ಪೊಲೀಸ್ ತುರ್ತು ವಾಹನದ ಚಾಲಕ ಸೇರಿ ಐವರಿಂದ ಯುವತಿ ಮೇಲೆ ಅತ್ಯಾಚಾರ!

ಪೊಲೀಸ್ ತುರ್ತು ಸೇವೆ (112) ವಾಹನದ ಚಾಲಕ ಸೇರಿದಂತೆ ಐವರು ಪುರುಷರು 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್‌ಗಢದ ಕೋರ್ಬಾ ಜಿಲ್ಲೆಯ ಬಂಕಿಮೊಂಗ್ರ ಪ್ರದೇಶದಲ್ಲಿ ನಡೆದಿದೆ. ಜನವರಿ...

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...