1991ರ ಆರಾಧನಾ ಸ್ಥಳಗಳ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನ ವಿಶೇಷ ಪೀಠವು ಡಿಸೆಂಬರ್ 12ರಂದು ಮಧ್ಯಾಹ್ನ 3:30 ಕ್ಕೆ ನಡೆಸಲಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ನೇತೃತ್ವದ ಪೀಠವು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ ವಿ ವಿಶ್ವನಾಥನ್ ಅವರನ್ನು ಒಳಗೊಂಡಿರುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
1991ರ ಆರಾಧನಾ ಸ್ಥಳಗಳ ಕಾಯ್ದೆಯು ಯಾವುದೇ ಆರಾಧನಾ ಸ್ಥಳಗಳ ಸ್ವರೂಪ ಬದಲಾವಣೆಯನ್ನು ನಿಷೇಧಿಸಿದೆ. ಬಾಬರಿ ಮಸೀದಿಯೊಂದನ್ನು ಬಿಟ್ಟು, ಆಗಸ್ಟ್ 15, 1947ರಂದು ಅಸ್ತಿತ್ವದಲ್ಲಿದ್ದ ಸ್ವರೂಪದಲ್ಲೇ ಮುಂದುವರಿಯುವಂತೆ ಕಾಯ್ದೆಯು ಹೇಳುತ್ತದೆ. ಜೊತೆಗೆ, ಯಾವುದೇ ಬಾಕಿ ಉಳಿದಿರುವ ಪ್ರಕ್ರಿಯೆಯು ಸ್ಥಗಿತಗೊಳ್ಳುತ್ತದೆ. ಡಿಸೆಂಬರ್ 12ರಂದು
ಕಾಯ್ದೆಯು ಸಂವಿಧಾನದ ಮೂಲಭೂತ ಲಕ್ಷಣವಾದ ನ್ಯಾಯಾಂಗ ಪರಿಶೀಲನೆಯ ಪರಿಹಾರವನ್ನು ಇದು ನಿರ್ಬಂಧಿಸುತ್ತದೆ ಮತ್ತು ಸಂಸತ್ತಿನ ಶಾಸಕಾಂಗ ಸಾಮರ್ಥ್ಯದಿಂದ ಹೊರಗಿದೆ ಎಂದು ಹಲವಾರು ಅರ್ಜಿಗಳು ಕಾಯ್ದೆಯನ್ನು ಪ್ರಶ್ನಿಸಿವೆ. ಈ ಕಾಯ್ದೆಯು ಜಾತ್ಯತೀತತೆಯ ತತ್ವವನ್ನೂ ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ.
ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಅಝೀಝ್ ಮುಶಬ್ಬರ್ ಅಹ್ಮದಿ ಅವರ ಸ್ಮರಣಾರ್ಥ ಸ್ಥಾಪಿಸಲಾದ ಅಹ್ಮದಿ ಫೌಂಡೇಶನ್‌ನ ಉಪನ್ಯಾಸ ಕಾರ್ಯಕ್ರಮದಲ್ಲಿ ಇತ್ತಿಚೆಗೆ ಮಾತನಾಡಿದ್ದ ನ್ಯಾಯಮೂರ್ತಿ ನಾರಿಮನ್, ಅಯೋಧ್ಯೆ ತೀರ್ಪನ್ನು ‘ಜಾತ್ಯತೀತತೆಗೆ ನ್ಯಾಯದ ಅಪಹಾಸ್ಯ’ ಎಂದು ಬಣ್ಣಿಸಿದ್ದು, 1991ರ ಆರಾಧನಾ ಸ್ಥಳಗಳ ಕಾಯ್ದೆಯನ್ನು ಎತ್ತಿ ಹಿಡಿದ ಭಾಗವನ್ನು ಅವರು ಪ್ರಶಂಸಿಸಿದ್ದರು.
ಅಯೋಧ್ಯೆ ವಿವಾದದ ಕುರಿತು ಸಂವಿಧಾನ ಪೀಠದ ತೀರ್ಪಿನ ಐದು ಪುಟಗಳು ಈ ಹಿಂದೆ ದೇವಾಲಯಗಳ ಮೇಲೆ ನಿರ್ಮಿಸಲಾಗಿದೆ ಎಂದು ಆರೋಪಿಸಲಾದ ಮಸೀದಿಗಳ ಸಮೀಕ್ಷೆಯನ್ನು ಕೋರಿ ದೇಶದಾದ್ಯಂತ ನಡೆಯುತ್ತಿರುವ ವ್ಯಾಜ್ಯಗಳಿಗೆ ಉತ್ತರವಾಗಿದೆ. ಈ ಐದು ಪುಟಗಳು, ದೇಶದಾದ್ಯಂತ ಮಸೀದಿಗಳನ್ನು ಗುರಿಯಾಗಿಸಿಕೊಂಡು ಹೆಚ್ಚುತ್ತಿರುವ ಪ್ರಕರಣಗಳನ್ನು ಪರಿಹರಿಸಲು ನಿರ್ಣಾಯಕ ಸಾಧನವಾಗಿ ಕಾರ್ಯನಿರ್ವಹಿಸಬಹುದು ಎಂದು ನ್ಯಾಯಮೂರ್ತಿ ನಾರಿಮನ್ ಹೇಳಿದ್ದರು.
1991ರ ಆರಾಧನಾ ಸ್ಥಳಗಳ ಕಾಯ್ದೆಯು ಯಾವುದೇ ಆರಾಧನಾ ಸ್ಥಳಗಳ ಸ್ವರೂಪ ಬದಲಾವಣೆಯನ್ನು ನಿಷೇಧಿಸಿದೆ. ಆಗಸ್ಟ್ 15, 1947ರಂದು ಅಸ್ತಿತ್ವದಲ್ಲಿದ್ದ ಸ್ವರೂಪದಲ್ಲೇ ಮುಂದುವರಿಯುವಂತೆ ಹೇಳುತ್ತದೆ. ಇದು ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ಸವಾಲಾಗಿದೆ. ಇದನ್ನು ತಡೆಗಟ್ಟುವ ಏಕೈಕ ಮಾರ್ಗವೆಂದರೆ ಅಯೋಧ್ಯೆಯ ತೀರ್ಪಿನ ಐದು ಪುಟಗಳನ್ನು ರಾಷ್ಟ್ರವ್ಯಾಪಿ ನ್ಯಾಯಾಲಯಗಳಲ್ಲಿ ಅನ್ವಯಿಸುವುದಾಗಿದೆ ಎಂದು ಹೇಳಿದ್ದಾರೆ.
ಬಾಬರಿ ಮಸೀದಿ ಧ್ವಂಸ ಕ್ರಿಮಿನಲ್ ಪಿತೂರಿ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಧೀಶರು ನಿವೃತ್ತಿಯ ನಂತರ ಉತ್ತರ ಪ್ರದೇಶದ ಉಪ ಲೋಕಾಯುಕ್ತರಾಗಿ ನೇಮಕಗೊಂಡರು ಎಂದು ಹೇಳಿರುವ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್, ʼಕೊಡು-ಕೊಳ್ಳುವಿಕೆʼ ನೇಮಕಾತಿಗಳ ಬಗ್ಗೆ ಗಮನಸೆಳೆದಿದ್ದಾರೆ.
ಇದನ್ನೂ ಓದಿ: ದ್ವೇಷ, ಹಿಂಸೆಯ ಮೇಲೆ ನಿರ್ಮಾಣವಾದ ಆರಾಧನಾ ಸ್ಥಳವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ: ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ


