ಕೋಟ್ಯಾಧಿಪತಿ ಕೈಗಾರಿಕೋದ್ಯಮಿ ಒಳಗೊಂಡಿರುವ ಅಮೆರಿಕದ ಲಂಚ ಪ್ರಕರಣದ ತನಿಖೆಗೆ ಒತ್ತಾಯಿಸಿ ಪ್ರತಿಪಕ್ಷ ನಾಯಕರು ಸಂಸತ್ತಿನಲ್ಲಿ ಇಂದು ಕೂಡ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಸಂಸದರಾದ ಮಾಣಿಕ್ಕಂ ಟ್ಯಾಗೋರ್ ಮತ್ತು ಸಪ್ತಗಿರಿ ಶಂಕರ್ ಉಲಕ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಮುಖವಾಡಗಳನ್ನು ಧರಿಸಿ ಸಂಸತ್ ಆವರಣದಲ್ಲಿ ಒಟ್ಟಿಗೆ ಓಡಾಡಿದರು.
ಕಾಂಗ್ರೆಸ್ ಸಂಸದ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಟ್ಯಾಗೋರ್ ಮತ್ತು ಉಲಕ ಅವರನ್ನು ವಿಡಿಯೋ ಮಾಡುವ ಮೂಲಕ ಅದಾನಿ ಮತ್ತು ಪ್ರಧಾನಿ ಅವರ “ಸಂಬಂಧ”ವನ್ನು ವಿವರಿಸುವಂತೆ ಕೇಳಿದರು.
ಅದಕ್ಕೆ ಪ್ರತಿಯಾಗಿ, “ಹಮ್ ದೋನೋ ಮಿಲ್ಕೆ ಸಬ್ ಕರೇಂಗೆ (ಎಲ್ಲವನ್ನೂ ಒಟ್ಟಿಗೆ ಮಾಡುತ್ತೇವೆ) ನಾವು ವರ್ಷಗಳ ಸಂಬಂಧವನ್ನು ಹೊಂದಿದ್ದೇವೆ” ಎಂದು ಇಬ್ಬರೂ ಲೇವಡಿ ಮಾಡಿದರು.
यह एक ख़ास और पुराना रिश्ता है! #ModiAdaniEkHai pic.twitter.com/s6iF1YeCcX
— Rahul Gandhi (@RahulGandhi) December 9, 2024
ಅವರಿಂದಲೇ ಸಂಸತ್ ಕಲಾಪ ಏಕೆ ಸ್ಥಗಿತಗೊಂಡಿತು ಎಂದು ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ ಸಂಸದರು, “ಅವರು ಇಂದು ನಾಪತ್ತೆಯಾಗಿದ್ದಾರೆ, ಅಮಿತ್ ಭಾಯ್ (ಕೇಂದ್ರ ಗೃಹ ಸಚಿವ ಅಮಿತ್ ಶಾ) ಇಂದು ಸದನಕ್ಕೆ ಬಂದಿಲ್ಲ” ಎಂದು ಹೇಳಿದರು.
ಅದಾನಿಯಂತೆ ನಟಿಸಿದ ಸಂಸದರು, “ನಾನು ಏನು ಹೇಳಿದರೂ ಅವರು ಅದನ್ನು ಮಾಡುತ್ತಾರೆ” ಎಂದು ಪ್ರಧಾನಿ ಮೋದಿಯ ಮುಖವಾಡ ಧರಿಸಿದ್ದ ತನ್ನ ಸಹೋದ್ಯೋಗಿಯನ್ನು ತೋರಿಸಿದರು.
ನವೆಂಬರ್ 20 ರಂದು ಅಧಿವೇಶನ ಪ್ರಾರಂಭವಾದಾಗಿನಿಂದ, ಅದಾನಿ ವಿರುದ್ಧ ಯುಎಸ್‌ನಲ್ಲಿ ಲಂಚದ ಆರೋಪದ ಬಗ್ಗೆ ಚರ್ಚೆಗೆ ಒತ್ತಾಐಇಸಿದ್ದು, ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ಮುಂದುವರೆಸಿದರು. ಇದರಿಂದ, ಉಭಯ ಸದನಗಳು ನಿರಂತರ ಮುಂದೂಡಿಕೆಗೆ ಸಾಕ್ಷಿಯಾಗಿವೆ.
ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಆಮ್ ಆದ್ಮಿ ಪಕ್ಷದಿಂದ ಇಂಡಿಯಾ ಬ್ಲಾಕ್‌ನ ವಿರೋಧ ಪಕ್ಷದ ಸಂಸದರು, ಪ್ರಕರಣದ ಜಂಟಿ ಸಂಸದೀಯ ತನಿಖೆಯನ್ನು ಕೋರಿ ಸೋಮವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಪ್ರತಿಭಟನಾಕಾರರು ಸಂಸತ್ತಿನ ಮಕರ ದ್ವಾರದ ಹೊರಗೆ ನಿಂತು “ಮೋದಿ, ಅದಾನಿ ಏಕ್ ಹೈ” ಮತ್ತು “ನಮಗೆ ನ್ಯಾಯ ಬೇಕು” ಎಂಬ ಘೋಷಣೆಗಳನ್ನು ಎತ್ತಿದರು.
ಡಿಸೆಂಬರ್ 6 ರಂದು, ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡರು. ಅದಾನಿ ತನಿಖೆಗೆ ಹೆದರಬೇಡಿ ಮತ್ತು ಚಳಿಗಾಲದ ಅಧಿವೇಶನಕ್ಕೆ ಹಾಜರಾಗುವಂತೆ ಕೇಳಿದರು.
ಇದನ್ನೂ ಓದಿ; ಮುಂದುವರಿದ ಮ್ಯಾನ್ಯುವಲ್ ಸ್ಕ್ಯಾವೆಂಜರ್‌ಗಳ ಸಾವು; ರಾಜ್ಯಗಳಿಂದ ಉತ್ತರ ಕೇಳಿದ ಎನ್‌ಎಚ್‌ಆರ್‌ಸಿ


