ಭಾರತೀಯ ಸಂವಿಧಾನದ 67(ಬಿ) ವಿಧಿಯಡಿಯಲ್ಲಿ ರಾಜ್ಯಸಭಾ ಸ್ಪೀಕರ್ ಮತ್ತು ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ವಿಪಕ್ಷಗಳ ಒಕ್ಕೂಟವಾದ ಇಂಡಿಯಾ ಸಿದ್ಧತೆ ನಡೆಸುತ್ತಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ (ಟಿಎಂಸಿ), ಆಮ್ ಆದ್ಮಿ ಪಕ್ಷ (ಎಎಪಿ), ಮತ್ತು ಸಮಾಜವಾದಿ ಪಕ್ಷದ 70 ಸಂಸದರು ಈ ನಿರ್ಣಯವನ್ನು ಬೆಂಬಲಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ರಾಜ್ಯಸಭಾ ಸ್ಪೀಕರ್ ಧಂಖರ್
ವಿಪಕ್ಷಗಳ ಸಂಸದರು ಧಂಖರ್ ಅವರ ರಾಜ್ಯಸಭೆಯ ಕಲಾಪಗಳನ್ನು ನಿಭಾಯಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಅವಿಶ್ವಾಸ ನಿರ್ಣಯ ಮಂಡನೆಯು ಸ್ಪೀಕರ್ ನಡವಳಿಕೆಯ ಬಗ್ಗೆ ವಿರೋಧ ಪಕ್ಷಗಳೊಳಗೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಪ್ರತಿಬಿಂಬಿಸುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ರಾಜ್ಯಸಭಾ ಸ್ಪೀಕರ್ ಜಗದೀಪ್ ಧಂಖರ್ ಅವರು ಆಡಳಿತ ಪಕ್ಷದ ಕಡೆಗೆ ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆ ಎಂದು ಇಂಡಿಯಾ ಒಕ್ಕೂಟದ ವಿರೋಧ ಪಕ್ಷದ ಸಂಸದರು ಪದೇ ಪದೇ ಆರೋಪಿಸುತ್ತಿದ್ದಾರೆ. ಅವರು ವಿಪಕ್ಷಗಳ ಭಾಷಣಗಳಿಗೆ ಆಗಾಗ್ಗೆ ಅಡ್ಡಿಪಡಿಸುತ್ತಿದ್ದು, ಪ್ರಮುಖ ವಿಷಯಗಳ ಮೇಲಿನ ಚರ್ಚೆಯನ್ನು ನಿರ್ಬಂಧಿಸುತ್ತಾರೆ ಮತ್ತು ಮೇಲ್ಮನೆಯಲ್ಲಿ ವಿವಾದಾತ್ಮಕ ಚರ್ಚೆಗಳ ಸಮಯದಲ್ಲಿ ಸರ್ಕಾರದ ಪರವಾಗಿರುತ್ತಾರೆ ಎಂದು ಅವರು ಆರೋಪಿಸಿದ್ದಾರೆ.
ರಾಜ್ಯಸಭಾ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಪ್ರತಿಪಕ್ಷಗಳು ಪರಿಗಣಿಸುತ್ತಿವೆ ಎಂದು ಈ ವರ್ಷದ ಆರಂಭದಲ್ಲಿ ವರದಿಗಳು ಸೂಚಿಸಿದ್ದವು. ಬಜೆಟ್ ಅಧಿವೇಶನದಲ್ಲಿ, ವಿರೋಧ ಪಕ್ಷದ ಸಂಸದರು ರಾಜ್ಯಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಕಡಿಮೆ ಸಮಯ ಮತ್ತು ಸ್ಥಳಾವಕಾಶದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೈಕ್ ಸ್ವಿಚ್ ಆಫ್ ಆಗಿರುವ ಆರೋಪದ ಜೊತೆಗೆ ಪದೇ ಪದೇ ಭಾಷಣಕ್ಕೆ ಅಡ್ಡಿಪಡಿಸಿದ ನಿದರ್ಶನಗಳನ್ನು ವಿರೋಧ ಪಕ್ಷದ ಸಂಸದರು ಎತ್ತಿ ತೋರಿಸಿದ್ದಾರೆ. ಅಂತಹ ಕ್ರಮಗಳು ತಮ್ಮ ಅಭಿಪ್ರಾಯಗಳ ನ್ಯಾಯಯುತ ಅಭಿವ್ಯಕ್ತಿಗೆ ಅಡ್ಡಿಯಾಗುತ್ತವೆ ಎಂದು ಅವರು ವಾದಿಸಿದ್ದಾರೆ. ಜೊತೆಗೆ ಅವರು ಸದಸ್ಯರ ವಿರುದ್ಧ ವೈಯಕ್ತಿಕ ಟೀಕೆಗಳನ್ನು ಮಾಡಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದು, ಇದು ಸಂಸದೀಯ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: 2024 ರಲ್ಲಿ ಶೇ.42% ರಷ್ಟು ಹೆಚ್ಚಾಯ್ತು ಭಾರತದ ಬಿಲಿಯನೇರ್‌ಗಳ ಸಂಪತ್ತು: ವರದಿ
2024 ರಲ್ಲಿ ಶೇ.42% ರಷ್ಟು ಹೆಚ್ಚಾಯ್ತು ಭಾರತದ ಬಿಲಿಯನೇರ್‌ಗಳ ಸಂಪತ್ತು: ವರದಿ


