ಮಾಜಿ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಅವರ ಸರ್ಕಾರವನ್ನು ಪತನಗೊಳಿಸಿದ ನಂತರ ಸಿರಿಯಾದಲ್ಲಿನ ಅಶಾಂತಿಯ ನಡುವೆ ಜಮ್ಮು ಕಾಶ್ಮೀರದ 44 ಯಾತ್ರಿಕರು ಸೇರಿದಂತೆ ಸಿರಿಯಾದಿಂದ ಭಾರತವು ತನ್ನ 75 ನಾಗರಿಕರನ್ನು ಬುಧವಾರ ಸ್ಥಳಾಂತರಿಸಿದೆ ಎಮದು ವರದಿಯಾಗಿದೆ. ಭಾರತೀಯ ಪ್ರಜೆಗಳು ಸುರಕ್ಷಿತವಾಗಿ ಲೆಬನಾನ್ ಅನ್ನು ದಾಟಿದ್ದಾರೆ ಮತ್ತು ವಾಣಿಜ್ಯ ವಿಮಾನಗಳ ಮೂಲಕ ಭಾರತಕ್ಕೆ ಮರಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ. ಸಿರಿಯಾ
ಡಮಾಸ್ಕಸ್ ಮತ್ತು ಬೈರುತ್‌ನಲ್ಲಿರುವ ಭಾರತದ ರಾಯಭಾರ ಕಚೇರಿಗಳು “ಭದ್ರತಾ ಪರಿಸ್ಥಿತಿಯ ಮೌಲ್ಯಮಾಪನ ಮತ್ತು ಸಿರಿಯಾದಲ್ಲಿನ ಭಾರತೀಯ ಪ್ರಜೆಗಳ ವಿನಂತಿಗಳ ನಂತರ” ಸ್ಥಳಾಂತರಿಸುವಿಕೆಯನ್ನು ಸಂಘಟಿಸಲಾಗಿದೆ ಎಂದು ತಿಳಿಸಿದೆ. “ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಗೆ ಕೇಂದ್ರವು ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ” ಎಂದು ಸರ್ಕಾರದ ಹೇಳಿಕೆಯು ತಿಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸಿರಿಯಾದಲ್ಲಿರುವ ಭಾರತೀಯ ಪ್ರಜೆಗಳು ತುರ್ತು ಸಹಾಯವಾಣಿ ಸಂಖ್ಯೆ ಮತ್ತು ಇಮೇಲ್ ವಿಳಾಸದ ಮೂಲಕ ಡಮಾಸ್ಕಸ್‌ನಲ್ಲಿರುವ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಒತ್ತಾಯಿಸಲಾಗಿತ್ತು. “ಸರ್ಕಾರವು ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತದೆ” ಎಂದು ಸಚಿವಾಲಯ ಹೇಳಿದೆ.
ಭಾನುವಾರ, ಹಯಾತ್ ತಹ್ರೀರ್ ಅಲ್-ಶಾಮ್ ಮುಖ್ಯಸ್ಥ ಅಬು ಮೊಹಮ್ಮದ್ ಅಲ್-ಜೋಲಾನಿ ನೇತೃತ್ವದ ಸಶಸ್ತ್ರ ಬಂಡಾಯ ಪಡೆಗಳು ಸಿರಿಯಾದ ರಾಜಧಾನಿ ಡಮಾಸ್ಕಸ್ ಅನ್ನು ಅವಿರೋಧವಾಗಿ ಪ್ರವೇಶಿಸಿ ಅಸ್ಸಾದ್ ಸರ್ಕಾರವನ್ನು ಉರುಳಿಸಿ, ದೇಶದಲ್ಲಿ ಅವರ ಕುಟುಂಬದ 50 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿತು. ಅಸ್ಸಾದ್ ತನ್ನ ಕುಟುಂಬದೊಂದಿಗೆ ರಷ್ಯಾಕ್ಕೆ ಓಡಿಹೋಗಿದ್ದು, ಅಲ್ಲಿ ಅವರಿಗೆ ಮಾನವೀಯ ಆಧಾರದ ಮೇಲೆ ಮಾಸ್ಕೋ ಆಶ್ರಯ ನೀಡಿದೆ.
ರಷ್ಯಾವು ಇರಾನ್ ಜೊತೆಗೆ, ದೇಶದ 13 ವರ್ಷಗಳ ಅಸ್ಸಾದ್ ಆಡಳಿತವನ್ನು ಬೆಂಬಲಿಸಿತ್ತು. ಸರ್ವಾಧಿಕಾರಿಯ ಆಡಳಿತದ ಪತನವು ಈ ಎರಡೂ ರಾಷ್ಟ್ರಗಳಿಗೆ ಹೊಡೆತವಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. 1971 ರಿಂದ ದೇಶದ ಅಧ್ಯಕ್ಷರಾಗಿದ್ದ ಅವರ ತಂದೆ ಹಫೀಜ್ ಅಲ್-ಅಸ್ಸಾದ್ ಅವರ ಮರಣದ ನಂತರ ಜುಲೈ 2000 ರಲ್ಲಿ ಪ್ರಾರಂಭವಾದ ಸುಮಾರು 25 ವರ್ಷಗಳ ಕಾಲ ಅಸ್ಸಾದ್ ಸಿರಿಯಾ ಸರ್ಕಾರದ ಮುಖ್ಯಸ್ಥರಾಗಿದ್ದರು.
ಅಸ್ಸಾದ್ ಸರ್ಕಾರವನ್ನು ಉರುಳಿಸಿದ ಸಶಸ್ತ್ರ ಬಂಡುಕೋರ ಪಡೆಗಳು ಮೊಹಮ್ಮದ್ ಅಲ್-ಬಶೀರ್ ಅವರನ್ನು ಸಿರಿಯಾದ ಹಂಗಾಮಿ ಪ್ರಧಾನಿಯಾಗಿ ನೇಮಿಸಿವೆ ಎಂದು ಅಲ್ ಜಜೀರಾ ವರದಿ ಮಾಡಿದೆ. ಇಡ್ಲಿಬ್‌ನಲ್ಲಿ ಹಯಾತ್ ತಹ್ರೀರ್ ಅಲ್-ಶಾಮ್ ನೇತೃತ್ವದ ಸರ್ಕಾರದ ನಾಯಕ ಬಶೀರ್ ಅವರು ಮಾರ್ಚ್ 1, 2025 ರವರೆಗೆ ಮಧ್ಯಂತರ ಸರ್ಕಾರವನ್ನು ಮುನ್ನಡೆಸುವುದಾಗಿ ಮಂಗಳವಾರ ಘೋಷಿಸಿದ್ದಾರೆ.
ಸಿರಿಯನ್ನರು “ಸ್ಥಿರತೆ ಮತ್ತು ಶಾಂತತೆಗೆ” ಅರ್ಹರಾಗಿದ್ದು, ಸಾರ್ವಜನಿಕ ಸೇವೆಗಳು ಮತ್ತು ಸಂಸ್ಥೆಗಳನ್ನು ಪುನಃಸ್ಥಾಪಿಸಲು ಅಸ್ಸಾದ್ ಆಡಳಿತದ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿರುವುದಾಗಿ ಬುಧವಾರ ಬಶೀರ್ ಅವರು ಹೇಳಿದ್ದಾರೆ. ಅಸ್ಸಾದ್ ಸರ್ಕಾರದ ಪತನದ ಮೂರು ದಿನಗಳ ನಂತರ ಬುಧವಾರ ಡಮಾಸ್ಕಸ್‌ನಲ್ಲಿ ಬ್ಯಾಂಕುಗಳು ಮತ್ತು ಅಂಗಡಿಗಳು ಪುನಃ ತೆರೆಯಲ್ಪಟ್ಟವು.
ಈ ನಡುವೆ, ಕಳೆದ 48 ಗಂಟೆಗಳಲ್ಲಿ ಸಿರಿಯಾದ ಮೇಲೆ 480 ದಾಳಿಗಳನ್ನು ನಡೆಸಲಾಗಿದೆ ಎಂದು ಇಸ್ರೇಲ್‌ನ ಮಿಲಿಟರಿ ಬುಧವಾರ ತಿಳಿಸಿದೆ. ಈ ದಾಳಿಯಲ್ಲಿ ಹಲವಾರು ನಗರಗಳ 15 ನೌಕಾ ಹಡಗುಗಳು, ವಿಮಾನ ವಿರೋಧಿ ಬ್ಯಾಟರಿಗಳು ಮತ್ತು ಶಸ್ತ್ರಾಸ್ತ್ರ ಉತ್ಪಾದನಾ ತಾಣಗಳನ್ನು ನಾಶಪಡಿಸಲಾಗಿದೆ ಎಂದು ಅದು ಹೇಳಿದೆ.
ಇದನ್ನೂ ಓದಿ: ಸಮುದ್ರದಲ್ಲಿ ಮುಳುಗಿ ನಾಲ್ವರು ವಿದ್ಯಾರ್ಥಿನಿಯರು ಸಾವು : ವಸತಿ ಶಾಲೆಯ ಪ್ರಾಂಶುಪಾಲೆ ಅಮಾನತು, ಅತಿಥಿ ಶಿಕ್ಷಕರು ವಜಾ
ಸಮುದ್ರದಲ್ಲಿ ಮುಳುಗಿ ನಾಲ್ವರು ವಿದ್ಯಾರ್ಥಿನಿಯರು ಸಾವು : ವಸತಿ ಶಾಲೆಯ ಪ್ರಾಂಶುಪಾಲೆ ಅಮಾನತು, ಅತಿಥಿ ಶಿಕ್ಷಕರು ವಜಾ


