ಸಿನಿಮಾ ಥಿಯೇಟರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಬಂಧನದ ಕುರಿತು ತೆಲಂಗಾಣದ ಆಡಳಿತಾರೂಢ ಕಾಂಗ್ರೆಸ್ ಅನ್ನು ಬಿಆರ್‌ಎಸ್ ನಾಯಕ ಕೆಟಿ ರಾಮರಾವ್ ಟೀಕಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕೆಟಿಆರ್, “ಇದು ಆಡಳಿತಗಾರರ ಅಭದ್ರತೆಯ ಪರಾಕಾಷ್ಠೆ, ಅಲ್ಲು ಅರ್ಜುನ್ ಅವರನ್ನು ಸಾಮಾನ್ಯ ಕ್ರಿಮಿನಲ್ ಎಂದು ಪರಿಗಣಿಸುವುದು; ವಿಶೇಷವಾಗಿ, ಅವರು ನೇರವಾಗಿ ಜವಾಬ್ದಾರರಲ್ಲದ ಕಾರಣಕ್ಕಾಗಿ ಆರೋಪಿ ಎಂದು ಕರೆಯಲಾಗುವುದಿಲ್ಲ” ಎಂದು ಹೇಳಿದ್ದಾರೆ.
ಇದಾದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ರೇವಂತ್ ರೆಡ್ಡಿ,, ನಟನ ಬಂಧನದಲ್ಲಿ ತಮ್ಮ ಅಥವಾ ತಮ್ಮ ಸರ್ಕಾರದ ಯಾವುದೇ ಪಾತ್ರವಿಲ್ಲ. ಯಾವುದೇ ರಾಜಕೀಯ ಕಾರಣವನ್ನು ಹುಡುಕಬೇಕಾಗಿಲ್ಲ.. ಕಾನೂನಿನ ಮುಂದೆ ಎಲ್ಲರೂ ಸಮಾನರು” ಎಂದು ಅವರು ಹೇಳಿದರು.
ಗಂಟೆಗಳ ಹಿಂದೆ ಅಲ್ಲು ಅರ್ಜುನ್ ಅನ್ನು ಹೈದರಾಬಾದ್ ಥಿಯೇಟರ್‌ನ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಬಂಧಿಸಲಾಯಿತು. ಅಲ್ಲಿ ಅವರ ‘ಪುಷ್ಪಾ 2: ದಿ ರೂಲ್’ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತಿತ್ತು. ಘಟನೆಯಲ್ಲಿ ಕಳೆದ ವಾರ ಒಬ್ಬ ಮಹಿಳೆ ಸಾವನ್ನಪ್ಪಿ, ಆಕೆಯ ಪುತ್ರನಿಗೆ ಗಂಭೀರವಾಗಿ ಗಾಯಗಳಾಗಿವೆ. ಹೆಚ್ಚಿನ ವಿಚಾರಣೆಗಾಗಿ ಅಲ್ಲು ಅರ್ಜುನ್ ಅವರನ್ನು ಜುಬಿಲಿ ಹಿಲ್ಸ್‌ನಲ್ಲಿರುವ ಅವರ ಮನೆಯಿಂದ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
“ಸರ್ಕಾರದ ವರ್ತನೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ರಾಷ್ಟ್ರಪ್ರಶಸ್ತಿ ವಿಜೇತ ತಾರೆಯ ಬಂಧನ ಆಡಳಿತಗಾರರ ಅಭದ್ರತೆಯ ಪರಮಾವಧಿ!” ಎಂದು ಕೆಟಿಆರ್ ಟೀಕಿಸಿದ್ದಾರೆ.
ನನ್ನ ಬೆಡ್‌ರೂಮಿಗೆ ಪೊಲೀಸರು ನುಗ್ಗಿದರು: ಅಲ್ಲು ಅರ್ಜುನ್
ಕಳೆದ ವಾರ ಮಹಿಳೆಯೊಬ್ಬರು ಸಾವನ್ನಪ್ಪಿದ ಕಾಲ್ತುಳಿತ ಪ್ರಕರಣದಲ್ಲಿ ತನ್ನನ್ನು ಬಂಧಿಸಲು ಪೊಲೀಸರು ತಮ್ಮ ಬೆಡ್‌ರೂಂಗೆ ನುಗ್ಗಿದರು ಎಂದು ಅಲ್ಲು ಅರ್ಜುನ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ತನ್ನ ಬಂಧನವನ್ನು ಸೋಮವಾರದವರೆಗೆ ಮುಂದೂಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ಅರ್ಜುನ್ ಈ ಹೇಳಿಕೆ ನೀಡಿದ್ದಾರೆ. ಅವರು ತಮ್ಮ ಖಾಸಗಿ ಜಾಗವನ್ನು ಪ್ರವೇಶಿಸಿದ್ದು ತಪ್ಪು ಎಂದು ಪೊಲೀಸರಿಗೆ ತಿಳಿಸಿದ್ದರು ಎಂದು ವರದಿಯಾಗಿದೆ.
ಅವರ ಎಲ್ಲ ವಿನಂತಿಗಳನ್ನು ನಾವು ಗೌರವಿಸುತ್ತಿದ್ದೇವೆ ಎಂದು ಪೊಲೀಸರು ನಟನಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ನಟನ ಹೇಳಿಕೆ ಭಿನ್ನವಾಗಿದೆ. “ಸರ್, ನೀವು ಏನನ್ನೂ ಗೌರವಿಸಿಲ್ಲ, ನಾನು ನನ್ನ ಬಟ್ಟೆಗಳನ್ನು ಬದಲಾಯಿಸಲು ಮತ್ತು ನನ್ನೊಂದಿಗೆ ಒಬ್ಬ ವ್ಯಕ್ತಿಯನ್ನು ಕಳುಹಿಸಲು ಬಯಸುತ್ತೇನೆ ಎಂದು ನಾನು ನಿಮಗೆ ಹೇಳಿದೆ. ನೀವು ನನ್ನನ್ನು ಕರೆದೊಯ್ಯುವುದು ತಪ್ಪಲ್ಲ. ಆದರೆ, ನನ್ನ ಮಲಗುವ ಕೋಣೆ ಒಳಗೆ ಬರದಿದ್ದರೆ ಒಳ್ಳೆಯದು” ಎಂದು ಹೇಳಿದ್ದಾರೆ.
ನಟನ ಬಂಧನದ ನಂತರ ವೀಡಿಯೊಗಳು ವೈರಲ್ ಆಗಿದ್ದು, ಪೊಲೀಸರೊಂದಿಗೆ ಮಾತನಾಡುತ್ತಿರುವ ನಟ ಕಾಫಿ ಮಗ್ ಹಿಡಿದು ಮಾತನಾಡುತ್ತಿರುವುದು ಕಾಣಬಹುದು. ನಂತರ, ಪೊಲೀಸರು ಬೆಂಗಾವಲು ವಾಹನಗೊಂದೊಗೆ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಅವರ ಪತ್ನಿ ಅಲ್ಲು ಸ್ನೇಹಾ ರೆಡ್ಡಿ, ಸಹೋದರ ಅಲ್ಲು ಸಿರೀಶ್ ಮತ್ತು ತಂದೆ ಅಲ್ಲು ಅರವಿಂದ್ ಸಹ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ; ಸಿನಿಮಾ ಥಿಯೇಟರ್ ಕಾಲ್ತುಳಿದ ಪ್ರಕರಣದಲ್ಲಿ ಬಂಧನ; ನಟ ಅಲ್ಲು ಅರ್ಜುನ್ ಮೇಲಿನ ಆರೋಪಗಳೇನು?


