ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಅಜಿತ್ ಪವಾರ್ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡದಿದ್ದರೆ ಮಹಾರಾಷ್ಟ್ರದ ಮಹಾಯುತಿ ಸರ್ಕಾರಕ್ಕೆ “ಯಾವುದೇ ಅರ್ಥವಿಲ್ಲ” ಎಂದು ಪಕ್ಷದ ವಕ್ತಾರ ಅಮೋಲ್ ಮಿಟ್ಕರಿ ಗುರುವಾರ ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಅಜಿತ್ ಪವಾರ್ ಅವರು ಕಳೆದ ಮಹಾಯುತಿ ಸರ್ಕಾರದಲ್ಲಿ ಹಣಕಾಸು ಖಾತೆಯನ್ನು ಹೊಂದಿದ್ದರು. ಅಜಿತ್ ಪವಾರ್‌ಗೆ
ನವೆಂಬರ್ 23 ರಂದು, ಮಹಾಯುತಿ ಮೈತ್ರಿಕೂಟ 288 ಸದಸ್ಯರ ಮಹಾರಾಷ್ಟ್ರ ವಿಧಾನಸಭೆಯಲ್ಲಿ 230 ಸ್ಥಾನಗಳನ್ನು ಗೆದ್ದುಕೊಂಡಿತು. ಮಹಾಯುತಿ ಮೈತ್ರಿಯಲ್ಲಿ ಬಿಜೆಪಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ಮತ್ತು ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಬಣ ಇವೆ.
ಡಿಸೆಂಬರ್ 5 ರಂದು, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಜೊತೆಗೆ ಶಿಂಧೆ ಮತ್ತು ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಮೈತ್ರಿಕೂಟವು ತನ್ನ ಅಧಿಕಾರ ಹಂಚಿಕೆಯ ಭಾಗವಾಗಿ ಪ್ರಮುಖ ಸಚಿವ ಖಾತೆಗಳ ಬಗ್ಗೆ ಇನ್ನೂ ಘೋಷಣೆಗಳನ್ನು ಮಾಡಿಲ್ಲ. ಅಜಿತ್ ಪವಾರ್‌ಗೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅಜಿತ್ ಪವಾರ್ ಅವರು ತಮ್ಮ ಪತ್ನಿ ಮತ್ತು ರಾಜ್ಯಸಭಾ ಸಂಸದೆ ಸುನೇತ್ರಾ ಪವಾರ್ ಅವರೊಂದಿಗೆ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ನಂತರ ಗುರುವಾರ ಮಿಟ್ಕರಿ ಅವರ ಹೇಳಿಕೆ ಹೊರಬಿದ್ದಿದೆ. ಈ ವೇಳೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕರಾದ ಪ್ರಫುಲ್ ಪಟೇಲ್ ಮತ್ತು ಸುನೀಲ್ ತಟ್ಕರೆ ಉಪಸ್ಥಿತರಿದ್ದರು.
2024ರ ಚುನಾವಣೆಯ ಮೊದಲು, ಇಡೀ ಮಹಾರಾಷ್ಟ್ರದಲ್ಲಿ ಲಡ್ಕಿ ಬಹಿನ್ ಯೋಜನೆ ಮತ್ತು ರೈತರ ವಿದ್ಯುತ್ ಬಿಲ್‌ಗಳ ಮನ್ನಾ ಮುಂತಾದ ಕಲ್ಯಾಣ ಯೋಜನೆಗಳ ಅನುಷ್ಠಾನವನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. “ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ, ಅಜಿತ್ ಪವಾರ್ ಅವರು ಹಣಕಾಸು ಸಚಿವರಾಗಿ ರಾಜ್ಯವು ಹೆಚ್ಚುವರಿ ಆರ್ಥಿಕ ಹೊರೆಗೆ ಸಿಲುಕದಂತೆ ನೋಡಿಕೊಳ್ಳುತ್ತಾರೆ.” ಎಂದು ಅವರು ಹೇಳಿದ್ದಾರೆ.
“ಮಹಾರಾಷ್ಟ್ರದಲ್ಲಿ ಆರ್ಥಿಕ ಶಿಸ್ತು ಖಾತ್ರಿಪಡಿಸಬೇಕಾದರೆ” ಹಣಕಾಸು ಖಾತೆ ಅಜಿತ್ ಪವಾರ್ ಅವರಿಗೆ ಹೋಗಬೇಕು ಎಂದು ಮಿಟ್ಕರಿ ಹೇಳಿದ್ದಾರೆ. ಗೃಹ ಸಚಿವಾಲಯವು “ಬಿಜೆಪಿಗೆ ಸರಿಹೊಂದುತ್ತದೆ” ಎಂದು ಅವರು ಹೇಳಿದ್ದು, ಹಣಕಾಸು ಸಚಿವಾಲಯವು “ಎನ್ಸಿಪಿಗೆ ಸರಿಹೊಂದುತ್ತದೆ” ಎಂದು ತಿಳಿಸಿದ್ದಾರೆ.
ಈ ಮಧ್ಯೆ, ಕಬ್ಬಿನ ಬೆಲೆಗೆ ಸಂಬಂಧಿಸಿದ ವಿಷಯಗಳನ್ನು ಅಮಿತ್ ಶಾ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಅಜಿತ್ ಪವಾರ್ ಹೇಳಿದ್ದಾರೆ. “ಕಬ್ಬು ದರವನ್ನು ಹೆಚ್ಚಿಸಲು ನಾನು ಅಮಿತ್ ಶಾಗೆ ಮನವಿ ಮಾಡಿದ್ದೇನೆ” ಎಂದು ಅವರು ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಉಲ್ಲೇಖಿಸಿದೆ. “ಅವರು ಜನವರಿಯೊಳಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಕುರಿತು ಶನಿವಾರ ಚರ್ಚೆ ನಡೆಯಲಿದೆ ಎಂದು ಉಪಮುಖ್ಯಮಂತ್ರಿಯು ಆಗಿರುವ ಅವರು ತಿಳಿಸಿದ್ದಾರೆ.
ಆದರೆ, ದೆಹಲಿಯಲ್ಲಿದ್ದ ಫಡ್ನವೀಸ್ ಅವರು, ಸಚಿವ ಸಂಪುಟ ವಿಸ್ತರಣೆಯ ದಿನಾಂಕವನ್ನು ನಿರ್ಧರಿಸಲಾಗಿಲ್ಲ ಎಂದು ಹೇಳಿದ್ದಾರೆ. ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಫಡ್ನವೀಸ್ ಹೇಳಿದ್ದಾರೆ. “ನಾನು ನನ್ನ ಪಕ್ಷದ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ಬಂದಿದ್ದೇನೆ. ನಮ್ಮ ಪಕ್ಷದ ನಾಯಕತ್ವದೊಂದಿಗೆ ನಮ್ಮ ಸಂಭಾವ್ಯ ಸಚಿವರ ಬಗ್ಗೆ ಚರ್ಚಿಸುತ್ತೇನೆ.” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆಯ ವೇಳೆ ಬಳಸಿದ ‘ವೋಟ್ ಜಿಹಾದ್’ ನಂತಹ ಪದಗಳ ಬಗ್ಗೆ ವಿಶ್ಲೇಷಿಸಲಾಗುತ್ತಿದೆ: ಚುನಾವಣಾ ಅಧಿಕಾರಿ
ಮಹಾರಾಷ್ಟ್ರ ಚುನಾವಣೆಯ ವೇಳೆ ಬಳಸಿದ ‘ವೋಟ್ ಜಿಹಾದ್’ ನಂತಹ ಪದಗಳ ಬಗ್ಗೆ ವಿಶ್ಲೇಷಿಸಲಾಗುತ್ತಿದೆ: ಚುನಾವಣಾ ಅಧಿಕಾರಿ


