ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡಿ, ರಾಜ್ಯದ 5,600ಕ್ಕೂ ಹೆಚ್ಚು ಜನರು ಇಸ್ರೇಲ್‌ನಲ್ಲಿ ನಿರ್ಮಾಣ ಕಾರ್ಯದ ಉದ್ಯೋಗಿಯಾಗಿದ್ದಾರೆ. ಆದರೆ ಮುಖ್ಯಮಂತ್ರಿಯ ಹೇಳಿಕೆಗೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಜನರನ್ನು ಯುದ್ಧ ವಲಯಕ್ಕೆ ಕಳುಹಿಸುವುದನ್ನು ಸಾಧನೆ ಎಂದು ಹೇಗೆ ಉಲ್ಲೇಖಿಸುತ್ತೀರಿ ಎಂದು ಪ್ರಶ್ನಿಸಿವೆ. ಯುದ್ಧ ಪೀಡಿತ
ಉತ್ತರ ಪ್ರದೇಶ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಆದಿತ್ಯನಾಥ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಉಲ್ಲೇಖಿಸಿ, “ನಾವು ನಮ್ಮ ಯುವಕರನ್ನು ಇಸ್ರೇಲ್‌ಗೆ ಅವಕಾಶಗಳಿಗಾಗಿ ಕಳುಹಿಸುತ್ತಿರುವಾಗ, ನಿನ್ನೆ ಕಾಂಗ್ರೆಸ್ ನಾಯಕರೊಬ್ಬರು ಪ್ಯಾಲೆಸ್ತೀನ್ ಚೀಲವನ್ನು ಹಿಡಿದುಕೊಂಡು ಸಂಸತ್ತಿನಲ್ಲಿ ನಡೆಯುತ್ತಿರುವುದು ಕಂಡುಬಂದಿದೆ.” ಎಂದು ಹೇಳಿದ್ದಾರೆ.
ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿರುವವರಿಗೆ ಉಚಿತ ಊಟ ಮತ್ತು ವಸತಿ, ಜೊತೆಗೆ ಮಾಸಿಕ 1.5 ಲಕ್ಷ ರೂಪಾಯಿ ಸಂಬಳ ಸಿಗುತ್ತದೆ ಎಂದು ಆದಿತ್ಯನಾಥ್ ಹೇಳಿದ್ದು, ಜೊತೆಗೆ “ಸುರಕ್ಷತೆಯ ಸಂಪೂರ್ಣ ಗ್ಯಾರಂಟಿಯೂ ಇದೆ” ಎಂದು ಅವರು ಹೇಳಿದ್ದಾರೆ. ಈ ಕಾರ್ಮಿಕರು ಮನೆಗೆ ಹಣವನ್ನು ಕಳುಹಿಸಿದಾಗ ಅದು ರಾಜ್ಯದ ಆರ್ಥಿಕತೆಗೆ ಕೊಡುಗೆ ನೀಡುತ್ತದೆ ಎಂದು ಅವರು ವಾದಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಉತ್ತರ ಪ್ರದೇಶದಲ್ಲಿ ಕಾರ್ಮಿಕರು ಕೇವಲ 20,000 ರಿಂದ 30,000 ರೂ.ಗಳವರೆಗೆ ಗಳಿಸುತ್ತಿದ್ದರು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ರಾಜ್ಯದ ಕಡಿಮೆ ತಲಾ ಆದಾಯಕ್ಕೆ ಹಿಂದಿನ ಸರ್ಕಾರಗಳನ್ನು ಅವರು ದೂಷಿಸಿದ್ದಾರೆ. ಇಸ್ರೇಲಿ ಅಧಿಕಾರಿಗಳ ತಂಡವು ಇತ್ತೀಚೆಗೆ ಉತ್ತರ ಪ್ರದೇಶಕ್ಕೆ ಭೇಟಿ ನೀಡಿ ರಾಜ್ಯದಿಂದ ಹೆಚ್ಚಿನ ಯುವಕರನ್ನು ನೇಮಿಸಿಕೊಳ್ಳಲು ಆಸಕ್ತಿಯನ್ನು ವ್ಯಕ್ತಪಡಿಸಿದೆ ಎಂದು ಹೇಳಿದ ಆದಿತ್ಯನಾಥ್ , ಅವರ “ಅತ್ಯುತ್ತಮ ಕೆಲಸದ ನೀತಿ ಮತ್ತು ಕೌಶಲ್ಯ” ವನ್ನು ಶ್ಲಾಘಿಸಿದ್ದಾರೆ.
कांग्रेस की एक नेत्री कल संसद में 'फिलिस्तीन' का बैग लेकर घूम रही थीं… pic.twitter.com/OfNH3LRAQp
— Yogi Adityanath (@myogiadityanath) December 17, 2024
ಕಳೆದ ವರ್ಷ 2023ರ ಅಕ್ಟೋಬರ್‌ನಲ್ಲಿ ಗಾಜಾದ ಮೇಲೆ ಇಸ್ರೇಲ್‌ನ ಯುದ್ಧ ಪ್ರಾರಂಭವಾದ ನಂತರ ಪ್ಯಾಲೆಸ್ತೀನಿ ಕಾರ್ಮಿಕರ ಬದಲು ಸುಮಾರು 12,000 ಭಾರತೀಯ ಕಾರ್ಮಿಕರನ್ನು ಇಸ್ರೇಲ್ ನೇಮಿಸಿಕೊಂಡಿದೆ. ಒಟ್ಟು ಸುಮಾರು 90,000 ಪ್ಯಾಲೆಸ್ಟೀನಿಯನ್ನರನ್ನು ಬದಲಿಸಿ ಅಲ್ಲಿಗೆ ವಿದೇಶಿ ಉದ್ಯೋಗಿಗಳನ್ನು ಇಸ್ರೇಲ್ ನೇಮಿಸಿಕೊಂಡಿತ್ತು. ಹಾಗಾಗಿ ನವೆಂಬರ್‌ನಲ್ಲಿ ನೇಮಕಾತಿ ಅಭಿಯಾನವನ್ನು ನಡೆಸಲು ಭಾರತದೊಂದಿಗೆ ಇಸ್ರೇಲ್ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿತ್ತು.
ನೇಮಕಗೊಂಡ ಕಾರ್ಮಿಕರಲ್ಲಿ, ಅಗತ್ಯವಿರುವ ಕೌಶಲ್ಯಗಳ ಕೊರತೆ ಮತ್ತು ಭಾಷಾ ಅಡೆತಡೆಗಳನ್ನು ಎದುರಿಸಿದ ಕಾರಣಕ್ಕೆ ಸುಮಾರು 220 ಜನರನ್ನು ಇಸ್ರೇಲ್‌ನಿಂದ ವಾಪಸ್ ಕಳುಹಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ನವೆಂಬರ್‌ನಲ್ಲಿ ದೃಢಪಡಿಸಿದೆ. ಭಾರತಕ್ಕೆ ಮರಳಬೇಕಾದ ಕಾರ್ಮಿಕರ ಸಂಖ್ಯೆ 500 ರಿಂದ 600 ರಷ್ಟಿದೆ ಎಂದು ಸೆಪ್ಟೆಂಬರ್‌ನಲ್ಲಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ಕಾರ್ಮಿಕ ಏಜೆನ್ಸಿಗಳನ್ನು ಉಲ್ಲೇಖಿಸಿ ವರದಿ ಮಾಡಿತ್ತು. ಹಿಂದಿರುಗಿದವರಲ್ಲಿ ಹೆಚ್ಚಿನವರು ಸರ್ಕಾರದ ಮೂಲಕ ನೇಮಕಗೊಂಡಿದ್ದಾರೆ ಎಂದು ಹೇಳಲಾಗಿದೆ.
ಉತ್ತರ ಪ್ರದೇಶದ ಕಾರ್ಮಿಕರಿಗೆ ತಿಂಗಳಿಗೆ 1.37 ಲಕ್ಷ ರೂ.ನಿಂದ 1.92 ಲಕ್ಷ ರೂ.ಗಳ ವರೆಗೆ ಗಳಿಸುವ ನಿರೀಕ್ಷೆಯಿದ್ದು, ಹಾಗಾಗಿ ಜನರು ಇಸ್ರೇಲ್‌ನಲ್ಲಿ ಕೆಲಸ ಹುಡುಕಲು ಮುಂದಾಗಿದ್ದಾರೆ ಎಂದು ದಿ ವೈರ್ ವರದಿ ಮಾಡಿದೆ. “ನಿರುದ್ಯೋಗವು ಇಲ್ಲಿ ನಮ್ಮನ್ನು ಕೊಲ್ಲುತ್ತಿದೆ. ನಾನು ದಿನಕ್ಕೆ ಕೇವಲ 500 ರೂ ಗಳಿಸುತ್ತೇನೆ ಮತ್ತು ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿರುವಾಗ, ಇಲ್ಲಿನ ಉದ್ಯೋಗದಿಂದ ಬದುಕುವುದು ಅಸಾಧ್ಯ.” ಎಂದು ಕೆಲಸಗಾರರೊಬ್ಬರು ಈ ಹಿಂದೆ ಹೇಳಿದ್ದರು. ಯುದ್ಧ ಪೀಡಿತ
ಅವಮಾನದ ವಿಷಯ, ಹೆಮ್ಮೆಯಲ್ಲ: ಪ್ರಿಯಾಂಕಾ ವಾದ್ರಾ
ಆದಿತ್ಯನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಗಾಂಧಿ, ಯುದ್ಧ ಪೀಡಿತ ದೇಶದಲ್ಲಿ ಕೆಲಸ ಮಾಡಲು ಯುವಕರನ್ನು ಕಳುಹಿಸುವುದು “ಬೆನ್ನು ತಟ್ಟಿಕೊಳ್ಳುವ ಸಾಧನೆಯಲ್ಲ” ಬದಲಾಗಿ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳಿದ್ದಾರೆ. ಆದಿತ್ಯನಾಥ್ ನೇತೃತ್ವದ ಸರ್ಕಾರಕ್ಕೆ ನಿರುದ್ಯೋಗದ ಸ್ಥಿತಿಯ ಬಗ್ಗೆ ಅಥವಾ ಯುವಜನರು ಮತ್ತು ಅವರ ಕುಟುಂಬದ ನೋವಿನ ಬಗ್ಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.
ಯುದ್ಧದ ನಡುವೆ ಇಸ್ರೇಲ್‌ನಲ್ಲಿ ಕಾರ್ಮಿಕರು ಬಂಕರ್‌ಗಳಲ್ಲಿ ಅಡಗಿಕೊಳ್ಳಬೇಕಾಗಿತ್ತು ಮತ್ತು ಅವರನ್ನು ನೇಮಕ ಮಾಡಿಕೊಂಡ ಕಂಪನಿಗಳಿಂದ ಅವರು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ವಾದ್ರಾ ವರದಿಗಳನ್ನು ಉಲ್ಲೇಖಿಸಿದ್ದಾರೆ. “ಅವರ ಕುಟುಂಬಗಳು ಯಾವಾಗಲೂ ಭಯಭೀತರಾಗಿದ್ದಾರೆ. ನಮ್ಮ ಯುವಕರು ಉದ್ಯೋಗಕ್ಕಾಗಿ ತಮ್ಮ ಪ್ರಾಣವನ್ನು ಪಣಕ್ಕಿಡಲು ಮುಂದಾಗಿದ್ದಾರೆ. ಏಕೆಂದರೆ ನೀವು [ಸರ್ಕಾರ] ಅವರಿಗೆ ಉದ್ಯೋಗಗಳನ್ನು ನೀಡಲು ಸಾಧ್ಯವಾಗಿಲ್ಲ.” ಎಂದು ಅವರು ಎಕ್ಸ್‌ನಲ್ಲಿ ಹೇಳಿದ್ದಾರೆ.
यूपी के युवाओं को यहां रोजगार देने की जगह उन्हें युद्धग्रस्त इजराइल भेजने वाले इसे अपनी उपलब्धि बता रहे हैं। उन्हें न तो प्रदेश की बेरोजगारी का हाल पता है, न ही उन युवाओं और उनके परिवारों की पीड़ा।
खबरों के मुताबिक, इजराइल में काम करने गए युवा बंकरों में छुपकर अपनी जान बचा रहे… pic.twitter.com/UdUgMOl9yu
— Priyanka Gandhi Vadra (@priyankagandhi) December 17, 2024
ಉತ್ತರ ಪ್ರದೇಶದಲ್ಲಿ ಉದ್ಯೋಗಾವಕಾಶಗಳಿದ್ದರೆ ಯಾರಾದರೂ ಇಸ್ರೇಲ್‌ಗೆ ಕೆಲಸಕ್ಕಾಗಿ ಯಾಕೆ ಹೋಗುತ್ತಾರೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಪ್ರಶ್ನಿಸಿದ್ದಾರೆ.
भारत सरकार खुद भारतीयों को सलाह दे रही है कि वे इज़राइल की यात्रा न करें। यह तो भाजपा के राज्य और केंद्रीय सरकारों की नाकामी का ठोस सबूत है कि मजबूर गरीब लोगों को इज़राइल जैसी जगह काम पर जाना पड़ रहा है। अगर यहाँ रोजगार के अवसर होते तो कोई इज़राइल मजदूरी करने क्यों जाता? योगी… https://t.co/SvscR265Gt
— Asaduddin Owaisi (@asadowaisi) December 17, 2024
ಇಸ್ರೇಲ್‌ಗೆ ಪ್ರಯಾಣಿಸದಂತೆ ಭಾರತೀಯರಿಗೆ ಭಾರತ ಸರ್ಕಾರವೇ ಸಲಹೆ ನೀಡಿತ್ತು ಎಂದು ಓವೈಸಿ ಗಮನಸೆಳೆದಿದ್ದಾರೆ. “ಬಡ ಜನರು ಇಸ್ರೇಲ್‌ನಂತಹ ಸ್ಥಳಗಳಿಗೆ ಕೆಲಸ ಮಾಡಲು ಹೋಗುತ್ತಿರುವುದು ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳ ವೈಫಲ್ಯಕ್ಕೆ ಸ್ಪಷ್ಟ ಪುರಾವೆಯಾಗಿದೆ” ಎಂದು ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಅಂಬೇಡ್ಕರ್ ಕುರಿತು ಅವಮಾನಕರ ಹೇಳಿಕೆ: ಅಮಿತ್ ಶಾ ವಿರುದ್ಧ ಸಿಎಂ ಸಿದ್ದರಾಮಯ್ಯ, ಸಚಿವ ಮಹದೇವಪ್ಪ ವಾಗ್ದಾಳಿ
ಅಂಬೇಡ್ಕರ್ ಕುರಿತು ಅವಮಾನಕರ ಹೇಳಿಕೆ: ಅಮಿತ್ ಶಾ ವಿರುದ್ಧ ಸಿಎಂ ಸಿದ್ದರಾಮಯ್ಯ, ಸಚಿವ ಮಹದೇವಪ್ಪ ವಾಗ್ದಾಳಿ


