ರಾಜ್ಯಸಭೆಯಲ್ಲಿ ಅಂಬೇಡ್ಕರ್ ಕುರಿತು ಅಮಿತ್ ಶಾ ನೀಡಿರುವ ವಿವಾದಾತ್ಮಕ ಹೇಳಿಕೆಯ ವಿಡಿಯೋವನ್ನು ತೆಗೆದು ಹಾಕುವಂತೆ ಸಾಮಾಜಿಕ ಜಾಲತಾಣ ಎಕ್ಸ್‌ಗೆ ಕೇಂದ್ರ ಸರ್ಕಾರ ಸೂಚಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ದೆಹಲಿಯ ವಿಜಯ್ ಚೌಕ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ವಕ್ತಾರೆ ಹಾಗೂ ಪಕ್ಷದ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್ ವಿಭಾಗದ ಅಧ್ಯಕ್ಷೆ ಸುಪ್ರಿಯಾ ಶ್ರಿನೇಟ್, ” ಅಮಿತ್ ಶಾ ಅವರ ಭಾಷಣದ ವಿಡಿಯೋವನ್ನು ಡಿಲಿಟ್ ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿರುವುದಾಗಿ ಕಾಂಗ್ರೆಸ್ ಸಂಸದರು, ಪದಾಧಿಕಾರಿಗಳು, ಪಕ್ಷದ ಅಧಿಕೃತ ಹ್ಯಾಂಡಲ್ ಮತ್ತು ವಿಪಕ್ಷದ ಕೆಲ ನಾಯಕರಿಗೆ ಎಕ್ಸ್‌ನಿಂದ ಈ-ಮೇಲ್ ಬಂದಿದೆ” ಎಂದು ಹೇಳಿದರು.
कल रात हमारे सांसदों, नेताओं, पदाधिकारियों, विपक्ष के बहुत सारे लोगों और कांग्रेस के ऑफिशियल हैंडल को Twitter (X) की तरफ से एक मेल आया है
जिसमें सरकार ने X को अमित शाह का वीडियो हटाने के लिए निर्देशित किया है
Twitter ने हमें इसकी सूचना दी है
लेकिन उस वीडियो ने किसी कानून का… pic.twitter.com/lWWj6rFsX4
— Supriya Shrinate (@SupriyaShrinate) December 19, 2024
“ಬಾಬಾ ಸಾಹೇಬರ ಕುರಿತು ಅಮಿತ್ ಶಾ ಅವರು ನೀಡಿರುವ ಹೇಳಿಕೆ ಅಕ್ಷ್ಯಮ್ಯ ಅಪರಾಧ. ಅವರು ಈ ಪಾಪಕೃತ್ಯಕ್ಕೆ ಕ್ಷಮೆ ಯಾಚಿಸಬೇಕು. ಅವರನ್ನು ಗೃಹಮಂತ್ರಿ ಹುದ್ದೆಯಿಂದ ವಜಾ ಮಾಡಬೇಕು ಎಂದು ದೇಶ ಆಗ್ರಹಿಸುತ್ತಿದೆ. ಈ ನಡುವೆ ಪ್ರಧಾನಿ ಮೋದಿ ಮತ್ತು ಇಡೀ ಆಡಳಿತಯಂತ್ರ ಅವರನ್ನು ರಕ್ಷಣೆ ಮಾಡುತ್ತಿದೆ” ಎಂದು ವಾಗ್ದಾಳಿ ನಡೆಸಿದರು.
“ಅಮಿತ್ ಶಾ ಅವರು ಅಂಬೇಡ್ಕರ್ ಕುರಿತು ನೀಡಿರುವ ಅವಮಾನಕರ ಹೇಳಿಕೆಯ ವಿಡಿಯೋವನ್ನು ಪೋಸ್ಟ್ ಮಾಡುವುದು ದೇಶದ ಕಾನೂನಿನ ಉಲ್ಲಂಘನೆಯಾಗಿದೆ. ಅದನ್ನು ತೆಗೆದು ಹಾಕಬೇಕು ಎಂದು ಎಕ್ಸ್‌ಗೆ ಸರ್ಕಾರ ಸೂಚನೆ ನೀಡಿದೆ. ಆದರೆ, ಎಕ್ಸ್ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದು ವಿಡಿಯೋ ಡಿಲಿಟ್ ಮಾಡಲು ನಿರಾಕರಿಸಿದೆ. ಈ ಸಂಬಂಧ ನಮಗೆ ಈ-ಮೇಲ್ ಕಳುಹಿಸಿದೆ” ಎಂದು ತಿಳಿಸಿದರು.
“ನೀವು ವಿಡಿಯೋ ಡಿಲಿಟ್ ಮಾಡಲು ಏಕೆ ಸೂಚಿಸುತ್ತಿದ್ದೀರಿ? ನೀವು ಯಾವ ಮುಖ ಇಟ್ಟುಕೊಂಡು ವಿಡಿಯೋ ಕಾನೂನು ಉಲ್ಲಂಘಿಸುತ್ತಿದೆ ಎಂದಿದ್ದೀರಿ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ‘ಬಿಜೆಪಿ ಸಂಸದರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ’ : ತನಿಖೆಗೆ ಆಗ್ರಹಿಸಿ ಸ್ಪೀಕರ್‌ಗೆ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆ


