Homeಮುಖಪುಟ'ಬಿಜೆಪಿ ಸಂಸದರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ' : ತನಿಖೆಗೆ ಆಗ್ರಹಿಸಿ ಸ್ಪೀಕರ್‌ಗೆ ಪತ್ರ ಬರೆದ...

‘ಬಿಜೆಪಿ ಸಂಸದರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ’ : ತನಿಖೆಗೆ ಆಗ್ರಹಿಸಿ ಸ್ಪೀಕರ್‌ಗೆ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆ

- Advertisement -
- Advertisement -

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ಖಂಡಿಸಿ ಇಂದು (ಡಿ.19) ಬೆಳಿಗ್ಗೆ ಸಂಸತ್ ಭವನದ ಬಳಿ ನಡೆದ ಪ್ರತಿಭಟನೆ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ನಡುವೆ ಗಂಭೀರ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ.

“ಸಂಸತ್ತಿನ ಮಕರ ದ್ವಾರದ ಬಳಿ ಬಿಜೆಪಿ ಸಂಸದರು ನನ್ನನ್ನು ತಳ್ಳಿದ್ದಾರೆ. ಈ ಹಲ್ಲೆಯ ಕುರಿತು ತನಿಖೆ ನಡೆಸಬೇಕು” ಎಂದು ಆಗ್ರಹಿಸಿ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೋಕಸಭಾ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ.

“ರಾಜ್ಯಸಭೆಯಲ್ಲಿ ಡಿ.17ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಂಬೇಡ್ಕರ್ ಕುರಿತು ನೀಡಿರುವ ಹೇಳಿಕೆ ಖಂಡಿಸಿ ಇಂದು (ಡಿ.19) ಬೆಳಿಗ್ಗೆ ಸಂಸತ್ತಿನ ‘ಅಂಬೇಡ್ಕರ್ ಪ್ರೇರಣಾ ಸ್ಥಳ’ದಿಂದ ಮಕರ ದ್ವಾರದವರೆಗೆ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಸಂಸದರು ಪ್ರತಿಭಟನೆ ಹಮ್ಮಿಕೊಂಡಿದ್ದರು” ಎಂದು ಖರ್ಗೆ ಅವರು ಸ್ಪೀಕರ್‌ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

“ನಾನು ಇಂಡಿಯಾ ಮೈತ್ರಿಕೂಟದ ಸಂಸದರ ಜೊತೆ ಮಕರ ದ್ವಾರದ ಬಳಿಗೆ ತಲುಪಿದಾಗ, ನನ್ನನ್ನು ಬಿಜೆಪಿ ಸಂಸದರು ತಳ್ಳಿದರು. ಇದರಿಂದ ಆಯತಪ್ಪಿ ನೆಲಕ್ಕೆ ಬಿದ್ದೆ. ಈ ವೇಳೆ ಈಗಾಗಲೇ ಸರ್ಜರಿ ಆಗಿರುವ ನನ್ನ ಮೊಣಕಾಲಿಗೆ ಗಾಯಗಳಾಗಿವೆ. ತಕ್ಷಣ ಕಾಂಗ್ರೆಸ್ ಸಂಸದರು ಕುರ್ಚಿ ತಂದರು. ನನ್ನ ಸಹೋದ್ಯೋಗಿಗಳ ಸಹಾಯದಿಂದ ತುಂಬಾ ಕಷ್ಟಪಟ್ಟು ನಾನು ಅದರ ಮೇಲೆ ಕುಳಿತೆ. ನಂತರ ಕುಂಟುತ್ತಾ 11 ಗಂಟೆಯ ಸುಮಾರಿಗೆ ನಾನು ಸಂಸತ್‌ಗೆ ತೆರಳಿದೆ ” ಎಂದು ಖರ್ಗೆ ಪತ್ರದಲ್ಲಿ ವಿವರಿಸಿದ್ದಾರೆ.

“ನನ್ನ ಮೇಲೆ ನಡೆದಿರುವುದು ಸಾಮಾನ್ಯ ಹಲ್ಲೆಯಲ್ಲ. ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷರ ಮೇಲೆ ನಡೆದ ಹಲ್ಲೆಯಾಗಿದೆ. ಹಾಗಾಗಿ, ಈ ಘಟನೆಯ ಕುರಿತು ತನಿಖೆ ನಡೆಸುವಂತೆ ನಾನು ನಿಮ್ಮಲ್ಲಿ ಆಗ್ರಹಿಸುತ್ತಿದ್ದೇನೆ” ಎಂದು ಖರ್ಗೆ ಹೇಳಿದ್ದಾರೆ.

ಇದನ್ನೂ ಓದಿ : ಅಮಿತ್ ಶಾ ಹೇಳಿಕೆ ವಿರೋಧಿಸಿ ಪ್ರತಿಭಟನೆ; ಅಂಬೇಡ್ಕರ್‌ ಚಿತ್ರಗಳಿಂದ ಕಂಗೊಳಿಸಿದ ಸುವರ್ಣ ವಿಧಾನಸೌಧ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಅನ್ಯಧರ್ಮೀಯರು ಹೊರಹೋಗಿ’: ಗುಜರಾತ್ ಗರ್ಬಾ ಉತ್ಸವಗಳಲ್ಲಿ ಹಿಂದುತ್ವ ಸಂಘಟನೆಗಳಿಂದ ಕಿರುಕುಳ, ಬೆದರಿಕೆ!

ಗುಜರಾತ್‌ನಾದ್ಯಂತ ನಡೆಯುತ್ತಿರುವ ನವರಾತ್ರಿ ಗರ್ಬಾ ಉತ್ಸವಗಳಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸೇರಿದಂತೆ ಬಲಪಂಥೀಯ ಹಿಂದುತ್ವ ಸಂಘಟನೆಗಳು ಮುಸ್ಲಿಮರು ಹಾಗೂ ಮುಸ್ಲಿಮೇತರರನ್ನು ಪ್ರವೇಶಿಸದಂತೆ ತಡೆಯಲು ಹೊಸ ನಿಯಮಗಳನ್ನು ಜಾರಿಗೆ ತರುತ್ತಿವೆ ಎಂದು...

ಮಣಿಪುರ ಹಿಂಸಾಚಾರ: ಉರುವಲು ಸಂಗ್ರಹಿಸುತ್ತಿದ್ದ ಮೂವರನ್ನು ಕೊಂದ ಉಗ್ರರು; ಸಿಎಂ ನಿವಾಸದ ಮುಂದೆ ಶವಗಳನ್ನಿಟ್ಟು ಸ್ಥಳೀಯರ ಪ್ರತಿಭಟನೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಕಾಡಿನಲ್ಲಿ ಉರುವಲು ಸಂಗ್ರಹಿಸಲು ತೆರಳಿದ್ದ ಮೂವರನ್ನು ಉಗ್ರಗಾಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಇಂಫಾಲ್ ಪೂರ್ವ ಮತ್ತು ಕಾಂಗ್ಪೋಕ್ಪಿ ಜಿಲ್ಲೆಗಳ ಗಡಿಯಲ್ಲಿರುವ ಬೆಟ್ಟ ಪ್ರದೇಶದಲ್ಲಿ ಸೋಮವಾರ ಈ ದಾಳಿ ನಡೆದಿದೆ....

ಆಂಧ್ರ ಪ್ರದೇಶ | ಹಿಂಸಾಚಾರದಿಂದ ಮುನ್ಸಿಪಲ್ ಚುನಾವಣೆ ನಾಮಪತ್ರ ಸಲ್ಲಿಕೆಗೆ ಅಡ್ಡಿ ಆರೋಪ : ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವೈಎಸ್‌ಆರ್‌ ಕಾಂಗ್ರೆಸ್

ಆಂಧ್ರ ಪ್ರದೇಶದಲ್ಲಿ ನಡೆದ ವ್ಯಾಪಕ ಹಿಂಸಾಚಾರದಿಂದಾಗಿ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಮ್ಮ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ಆರೋಪಿಸಿ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷ ಸೋಮವಾರ (ಅಕ್ಟೋಬರ್ 19) ಸುಪ್ರೀಂ ಕೋರ್ಟ್‌ನ...

ಮೂಲಭೂತ ಸೌಕರ್ಯ- ವಿದ್ಯಾರ್ಥಿ ಸಂಘಕ್ಕಾಗಿ ಉಪವಾಸ ಸತ್ಯಾಗ್ರಹ; ಸಮಸ್ಯೆಗಳ ಪರಿಹಾರಕ್ಕೆ ಮುಂದಾದ ಜಾಮಿಯಾ ಆಡಳಿತ ಮಂಡಳಿ

ದೆಹಲಿಯಲ್ಲಿರುವ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಒಂದು ವಾರ ತುಂಬಿದ ಹಿನ್ನೆಲೆಯಲ್ಲಿ, ಸೋಮವಾರ (ಅ.19) ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಏಳು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ವಿದ್ಯಾರ್ಥಿಗಳು...

2027ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗುವ ಇಚ್ಛೆ: ಕೊಲೆ ಅಪರಾಧಿಯ ಶಿಕ್ಷೆಗೆ ತಡೆ ನೀಡಿದ ಅಲಹಾಬಾದ್ ಹೈಕೋರ್ಟ್!

ಉತ್ತರ ಪ್ರದೇಶದಲ್ಲಿ 2027ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಅಥವಾ ಸಾಧ್ಯವಾದರೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಟಿಕೆಟ್‌ನಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿರುವ ಕೊಲೆ ಪ್ರಕರಣದ ಅಪರಾಧಿಯ ಜೀವಾವಧಿ ಜೈಲು ಶಿಕ್ಷೆ...

SIR ವಿರೋಧಿ ಹೋರಾಟಕ್ಕೆ ಧುಮುಕಿದ ರೈತ, ದಲಿತ ಸಂಘಟನೆಗಳು : ಅ.23ರಂದು ರಾಜ್ಯದಾದ್ಯಂತ ಪ್ರತಿಭಟನೆ

ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿವಿಗಾಗಿ ಹಾಗೂ ಚುನಾವಣಾ ಆಯೋಗದ ಏಕಪಕ್ಷೀಯ ತೀರ್ಮಾನಗಳನ್ನು ವಿರೋಧಿಸಿ ಅಕ್ಟೋಬರ್ 23ರಂದು ರಾಜ್ಯದಾದ್ಯಂತ ಬೃಹತ್ ಜನತಾ ಮೆರವಣಿಗೆ ಮತ್ತು 'ಜಂತರ್ ಮಂತರ್' ಮಾದರಿಯ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದಾಗಿ ಎಸ್ಐಆರ್ ವಿರೋಧಿ...

ಸೌರವ್ ದಾಸ್ – ಆಶುತೋಶ್ ರಾಂಕಾ ಬಿಡುಗಡೆ ಕುರಿತು ಸಿಗದ ಸ್ಪಷ್ಟತೆ

ದೇಶದ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ಸೋಮವಾರ ಮಧ್ಯಾಹ್ನ ಹೊಸ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್‌ಇಎಂ) ಮುಂದೆ ಹಾಜರುಪಡಿಸಬೇಕಿತ್ತು....

ಅಸ್ಸಾಂನಲ್ಲಿ ಎರಡು ದಿನಗಳಲ್ಲಿ 1,100ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳ ಒಕ್ಕಲೆಬ್ಬಿಸಲಾಗಿದೆ: 10ಕ್ಕೂ ಹೆಚ್ಚು ಮಸೀದಿಗಳ ಧ್ವಂಸ

ಅಸ್ಸಾಂ: ಅಸ್ಸಾಂನ ಬಿಜೆಪಿ ನೇತೃತ್ವದ ಸರ್ಕಾರ ಎರಡು ದಿನಗಳ ಅತಿಕ್ರಮಣ ವಿರೋಧಿ ತೆರವು ಕಾರ್ಯಾಚರಣೆಯಲ್ಲಿ 1,100ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳನ್ನು ಒಕ್ಕಲೆಬ್ಬಿಸಿದ್ದು, 10ಕ್ಕೂ ಹೆಚ್ಚು ಮಸೀದಿಗಳನ್ನು ಧ್ವಂಸಗೊಳಿಸಿದೆ. ನಾಗಾಂವ್, ಗೋಲಾಘಾಟ್ ಮತ್ತು ಹೊಜೈ...

ಸುಳ್ಳು ಅಫಿಡವಿಟ್‌ ಸಲ್ಲಿಸಿದ ಅಭ್ಯರ್ಥಿಗಳ ವಿರುದ್ಧ ಮತದಾರರು ಖಾಸಗಿ ದೂರು ದಾಖಲಿಸಬಹುದು : ಸುಪ್ರೀಂ ಕೋರ್ಟ್

'ಜನತಾ ಪ್ರಾತಿನಿಧ್ಯ ಕಾಯ್ದೆ 1951'ರ ಸೆಕ್ಷನ್ 125A ಅಡಿಯಲ್ಲಿ ಬರುವ ಅಪರಾಧಗಳಿಗೆ ಸಂಬಂಧಿಸಿದಂತೆ, ಚುನಾಯಿತ ಅಭ್ಯರ್ಥಿಗಳು ತಮ್ಮ ಚುನಾವಣಾ ಅಫಿಡವಿಟ್‌ಗಳಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಅಥವಾ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿ, ಖಾಸಗಿ...

ಉತ್ತರ ಪ್ರದೇಶ| ಜಾಹೀರಾತು ವಿವಾದ; ಹಿಟ್ಟಿನ ಗಿರಣಿಯಲ್ಲಿ ಹಲ್ಲೆಗೊಳಗಾಗಿದ್ದ ಹಿರಿಯ ಪತ್ರಕರ್ತ ಸಾವು

ಉತ್ತರ ಪ್ರದೇಶದ ಹಪುರ್‌ನಲ್ಲಿರುವ ಹಿಂದಿ ದಿನಪತ್ರಿಕೆ 'ದೈನಿಕ್ ಜನ್ವಾಣಿ'ಯ ಪತ್ರಕರ್ತರೊಬ್ಬರು ಹಿಟ್ಟಿನ ಗಿರಣಿಯಲ್ಲಿ ಭಾಣುವಾರ ನಡೆದ ಹಲ್ಲೆಯಿಂದಾಗಿ ಮೃತಪಟ್ಟಿದ್ದಾರೆ. ಜಾಹೀರಾತು ಕೇಳಲು ತೆರಳಿದ್ದ ವೇಳೆ ಅವರನ್ನು ನಕಲಿ ಪತ್ರಕರ್ತ ಎಂದು ಆರೋಪಿಸಿ ಹಲ್ಲೆ...