ಪಾಟ್ನಾದಲ್ಲಿ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮದ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗುರುವಾರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಆಡಳಿತ ಪಕ್ಷದ ಏಕೈಕ ಗುರಿ ತನ್ನ ಕುರ್ಚಿಯನ್ನು ಉಳಿಸುವುದಾಗಿದೆ ಎಂದು ಹೇಳಿದ್ದಾರೆ. ಉದ್ಯೋಗ ಕೇಳುತ್ತಿರುವವರು ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಬಿಹಾರ ವಿದ್ಯಾರ್ಥಿಗಳ
ಬಿಹಾರ ಪಬ್ಲಿಕ್ ಸರ್ವಿಸ್ ಕಮಿಷನ್ (BPSC) ನಡೆಸಿದ ಡಿಸೆಂಬರ್ 13 ರ ಸಂಯೋಜಿತ ಪ್ರಾಥಮಿಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ ಪಾಟ್ನಾದಲ್ಲಿ ಬುಧವಾರ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಹಿಂಸಾಚಾರ ನಡೆದಿದ್ದು, ಪೊಲೀಸರು ಉದ್ಯೋಗ ಆಕಾಂಕ್ಷಿ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ.
ಪೊಲೀಸರು ನಡೆಸಿದ ಲಾಠಿ ಚಾರ್ಜ್ ವೇಳೆ ಹಲವಾರು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳಿದ್ದು, ಆದರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಆರೋಪವನ್ನು ನಿರಾಕರಿಸಿದ್ದಾರೆ. ಬಿಹಾರ ವಿದ್ಯಾರ್ಥಿಗಳ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಕೈ ಕಟ್ಟಿ ನಿಂತ ಯುವಕರ ಮೇಲೆ ಲಾಠಿ ಚಾರ್ಜ್ ಕ್ರೌರ್ಯದ ಪರಮಾವಧಿಯಾಗಿದೆ. ಬಿಜೆಪಿ ಆಡಳಿತದಲ್ಲಿ ಉದ್ಯೋಗಕ್ಕಾಗಿ ಬೇಡಿಕೆಯಿರುವ ಯುವಕರನ್ನು ಲಾಠಿಯಿಂದ ಥಳಿಸಲಾಗುತ್ತದೆ. ಉತ್ತರ ಪ್ರದೇಶ, ಬಿಹಾರ ಅಥವಾ ಮಧ್ಯಪ್ರದೇಶ ಇರಲಿ ಯುವಕರು ಧ್ವನಿ ಎತ್ತಿದರೆ, ಅವರನ್ನು ಅಮಾನುಷವಾಗಿ ಥಳಿಸಲಾಗುತ್ತದೆ” ಎಂದು ಪ್ರಿಯಾಂಕಾ ಹೇಳಿದ್ದಾರೆ.
ಬಿಹಾರ ಲೋಕಸೇವಾ ಆಯೋಗದ (ಬಿಪಿಎಸ್‌ಸಿ) ಆಕಾಂಕ್ಷಿಗಳ ಮೇಲೆ ಪೊಲೀಸರು ಬುಧವಾರ ಲಾಠಿ ಚಾರ್ಜ್ ಮಾಡಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನಲೆ ಆಕಾಂಕ್ಷಿಗಳು ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪಟ್ನಾದಲ್ಲಿರುವ ಆಯೋಗದ ಕಚೇರಿಗೆ “ಘೇರಾವ್” ಮಾಡಲು ಜಮಾಯಿಸಿದ ಪೊಲೀಸರು ಆಕಾಂಕ್ಷಿಗಳ ಮೇಲೆ ದಾಳಿ ಮಾಡಿದ್ದಾರೆ. ಲಾಠಿ ಚಾರ್ಜ್ ನಂತರ ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಪೊಲೀಸರು, ಆಕಾಂಕ್ಷಿಗಳ ಮೇಲೆ “ಸೌಮ್ಯ ಬಲ”ವನ್ನು ಪ್ರಯೋಗಿಸಿರುವುದಾಗಿ ಹೇಳಿದ್ದು, ಯಾವುದೆ ವಿದ್ಯಾರ್ಥಿಗಳಿಗೆ ಗಾಯಗಳಾಗಿಲ್ಲ ಎಂದು ಹೇಳಿದ್ದಾರೆ.
ಅದಾಗ್ಯೂ, ಕೋಚಿಂಗ್ ಶಿಕ್ಷಕರು ಆಕಾಂಕ್ಷಿಗಳನ್ನು ಪ್ರತಿಭಟನೆಗೆ ಪ್ರೇರೇಪಿಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಆರೋಪಿಸಿದ್ದು, ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಹಲವಾರು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹೆಸರಿಸಿದ್ದಾರೆ.
ಮಂಗಳವಾರ, BPSC ಅಧ್ಯಕ್ಷ ಪರ್ಮಾರ್ ರವಿ ಮನುಭಾಯಿ ಅವರು ಈ ತಿಂಗಳ ಆರಂಭದಲ್ಲಿ ನಡೆದ 70 ನೇ ಇಂಟಿಗ್ರೇಟೆಡ್ ಕಂಬೈನ್ಡ್ ಸ್ಪರ್ಧಾತ್ಮಕ ಪರೀಕ್ಷೆ (CCE) 2024 ರ ರದ್ದತಿಯನ್ನು ತಳ್ಳಿಹಾಕಿದ್ದರು. ಮಂಗಳವಾರ, ಖಾನ್ ಸರ್ ಎಂದು ಜನಪ್ರಿಯರಾಗಿರುವ ಯೂಟ್ಯೂಬರ್ ಮತ್ತು ಶಿಕ್ಷಣತಜ್ಞ ಫೈಸಲ್ ಖಾನ್ ಅವರು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ್ದಾರೆ.
ಬಿಹಾರ ಲೋಕಸೇವಾ ಆಯೋಗದ (ಬಿಪಿಎಸ್‌ಸಿ) ಅಧ್ಯಕ್ಷ ಪರ್ಮಾರ್ ರವಿ ಮನುಭಾಯಿ ಮಂಗಳವಾರ (ಡಿಸೆಂಬರ್ 24, 2024) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದಲ್ಲಿ ಸಿಲುಕಿರುವ ಈ ತಿಂಗಳ ಆರಂಭದಲ್ಲಿ ನಡೆದ 70ನೇ ಇಂಟಿಗ್ರೇಟೆಡ್ ಕಂಬೈನ್ಡ್ ಸ್ಪರ್ಧಾತ್ಮಕ ಪರೀಕ್ಷೆ (ಸಿಸಿಇ) 2024 ರ ರದ್ದತಿಯನ್ನು ತಳ್ಳಿಹಾಕಿದ್ದಾರೆ.
ಡಿಸೆಂಬರ್ 13 ರಂದು ಬಾಪು ಪರೀಕ್ಷಾ ಪರಿಸರ ಪರೀಕ್ಷಾ ಕೇಂದ್ರಕ್ಕೆ ನಿಯೋಜಿಸಲಾದ ಅಭ್ಯರ್ಥಿಗಳ ಮರುಪರೀಕ್ಷೆ ನಡೆಸುತ್ತೇವೆ ಎಂದು BPSC ಸ್ಪಷ್ಟಪಡಿಸಿದ್ದು, ಮರು ಪರೀಕ್ಷೆಯನ್ನು ಜನವರಿ 4, 2025 ರಂದು ನಡೆಸಲಾಗುವುದು ಎಂದು ಹೇಳಿದೆ.
ಇದನ್ನೂ ಓದಿ: ಬಿಹಾರ ಪ್ರಶ್ನೆ ಪತ್ರಿಕೆ ಸೋರಿಕೆ | ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್; ಸೌಮ್ಯ ಬಲ ಪ್ರಯೋಗ ಎಂದ ಪೊಲೀಸ್!
ಬಿಹಾರ ಪ್ರಶ್ನೆ ಪತ್ರಿಕೆ ಸೋರಿಕೆ | ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್; ಸೌಮ್ಯ ಬಲ ಪ್ರಯೋಗ ಎಂದ ಪೊಲೀಸ್!


