ಕಳೆದ ತಿಂಗಳು ಉತ್ತರ ಪ್ರದೇಶದಲ್ಲಿ ನಡೆದ ಏಳು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತಗಟ್ಟೆಗಳ ಭದ್ರತಾ ಕ್ಯಾಮೆರಾ ದೃಶ್ಯಗಳು ಮತ್ತು ವಿಡಿಯೋ ರೆಕಾರ್ಡಿಂಗ್‌ಗಳನ್ನು ಬಿಡುಗಡೆ ಮಾಡುವಂತೆ ಕೋರಿ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿರುವುದಾಗಿ ಸಮಾಜವಾದಿ ಪಕ್ಷ ಗುರುವಾರ ತಿಳಿಸಿದೆ. ಮತಗಟ್ಟೆಗಳ ಭದ್ರತಾ ಕ್ಯಾಮರಾ
ಕತೇಹಾರಿ, ಕುಂದರ್ಕಿ, ಫುಲ್‌ಪುರ್, ಮಜವಾನ್, ಮೀರಾಪುರ, ಖೈರ್ ಮತ್ತು ಗಾಜಿಯಾಬಾದ್ ಕ್ಷೇತ್ರಗಳಿಂದ ವೀಡಿಯೊ ದೃಶ್ಯಾವಳಿಗಳನ್ನು ನೀಡುವಂತೆ ಕೋರಲಾಗಿದೆ ಎಂದು ಪಕ್ಷವು ಹೇಳಿಕೆಯಲ್ಲಿ ತಿಳಿಸಿದೆ. ನವೆಂಬರ್ 13 ರಂದು ನಡೆದ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಈ ಎಲ್ಲಾ ಏಳು ಸ್ಥಾನಗಳನ್ನು ಕಳೆದುಕೊಂಡಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ನವೆಂಬರ್ 23 ರಂದು ಪ್ರಕಟವಾದ ಫಲಿತಾಂಶಗಳ ಪ್ರಕಾರ ಪಕ್ಷವು ಸಿಶಾಮ್ ಮತ್ತು ಕರ್ಹಾಲ್ ಕ್ಷೇತ್ರಗಳನ್ನು ಗೆದ್ದಿದೆ. ಈ ಉಪಚುನಾವಣೆಯಲ್ಲಿ ಬಿಜೆಪಿ ಆರು ಸ್ಥಾನಗಳನ್ನು ಗೆದ್ದರೆ, ಅದರ ಮಿತ್ರಪಕ್ಷವಾದ ರಾಷ್ಟ್ರೀಯ ಲೋಕದಳ ಒಂದು ಸ್ಥಾನವನ್ನು ಗಳಿಸಿತ್ತು. ಮತಗಟ್ಟೆಗಳ ಭದ್ರತಾ ಕ್ಯಾಮರಾ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 1961 ರ ಚುನಾವಣಾ ನಿಯಮಗಳನ್ನು ತಿದ್ದುಪಡಿ ಮಾಡಿತ್ತು. ಡಿಸೆಂಬರ್ 20 ರಂದು ಮಾಡಿದ್ದ ತಿದ್ದುಪಡಿಯಲ್ಲಿ, ಮತದಾನಕ್ಕೆ ಸಂಬಂಧಿಸಿದ ದಾಖಲೆಗಳು ಸಾರ್ವಜನಿಕ ಲಭ್ಯವಾಗುವುದನ್ನು ಕೇಂದ್ರ ಸರ್ಕಾರವು ನಿರ್ಬಂಧಿಸಿತ್ತು. ಇದಾಗಿ ಕೆಲವು ದಿನಗಳ ನಂತರ ಸಮಾಜವಾದಿ ಪಕ್ಷವು ಈ ಜ್ಞಾಪಕ ಪತ್ರವನ್ನು ಸಲ್ಲಿಸಿದೆ.
ಹಳೆಯ ನಿಯಮವು, ಚುನಾವಣಾ ನಿಯಮಗಳ ನಿಯಮ 93(2)(ಎ) “ಚುನಾವಣೆಗೆ ಸಂಬಂಧಿಸಿದ ಎಲ್ಲಾ ಇತರ ದಾಖಲೆಗಳು ಸಾರ್ವಜನಿಕ ತಪಾಸಣೆಗೆ ಲಭ್ಯವಿರುತ್ತವೆ” ಎಂದು ಹೇಳುತ್ತದೆ. ಆದರೆ, ತಿದ್ದುಪಡಿ ಮಾಡಿದ ನಿಯಮವು, “ಚುನಾವಣೆಗೆ ಸಂಬಂಧಿಸಿದ ನಿಯಮಗಳಲ್ಲಿ ‘ನಿರ್ದಿಷ್ಟ’ಪಡಿಸಿದ ಎಲ್ಲಾ ಇತರ ದಾಖಲೆಗಳು ಸಾರ್ವಜನಿಕ ತಪಾಸಣೆಗೆ ಲಭ್ಯವಿರುತ್ತವೆ.” ಎಂದು ಹೇಳುತ್ತದೆ.
ಈ ಬದಲಾವಣೆಯೊಂದಿಗೆ, ಭದ್ರತಾ ಕ್ಯಾಮರಾ ಮತ್ತು ವೆಬ್‌ಕಾಸ್ಟಿಂಗ್ ದೃಶ್ಯಗಳು ಮತ್ತು ಅಭ್ಯರ್ಥಿಗಳ ವೀಡಿಯೊ ರೆಕಾರ್ಡಿಂಗ್‌ಗಳು ಸೇರಿದಂತೆ ಎಲ್ಲಾ ಚುನಾವಣೆಗೆ ಸಂಬಂಧಿತ ದಾಖಲೆಗಳನ್ನು ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ. ಚುನಾವಣಾ ನಿಯಮಗಳ ನಡವಳಿಕೆಯಲ್ಲಿ ನಿರ್ದಿಷ್ಟಪಡಿಸಿದ ದಾಖಲೆಗಳನ್ನು ಮಾತ್ರ ಸಾರ್ವಜನಿಕರು ಪರಿಶೀಲಿಸಬಹುದಾಗಿದೆ. ಈ ತಿದ್ದುಪಡಿಯನ್ನು ಸುಪ್ರಿಂಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಮಂಗಳವಾರ ಕಾಂಗ್ರೆಸ್ ಹೇಳಿದೆ.
ಇದನ್ನೂ ಓದಿ: ಉಗುಳಲು ಆಗದ ಇತ್ತ ನುಂಗಲು ಆಗದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕುರಿತು ಒಂದೆರಡು ಮಾತು
ಉಗುಳಲು ಆಗದ ಇತ್ತ ನುಂಗಲು ಆಗದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕುರಿತು ಒಂದೆರಡು ಮಾತು….


