ಪ್ರಜಾಪ್ರಭುತ್ವ ನಾಶವಾದರೆ ಮೊದಲ ದಾಳಿ ನಡೆಯುವುದು ಬಡವರು, ದಲಿತರು ಮತ್ತು ಕಾರ್ಮಿಕರ ಮೇಲೆಯಾಗಿದೆ ಎಂದು ಸಿಪಿಐ(ಎಂ) ಪೊಲೀಟ್ ಬ್ಯೋರೋ ಸದಸ್ಯ ಬಿ.ವಿ ರಾಘವಲು ಸೋಮವಾರ ತಿಳಿಸಿದ್ದಾರೆ. ಸಿಪಿಐ(ಎಂ) 24 ನೇ ರಾಜ್ಯ ಸಮ್ಮಳೇನದ ಪ್ರತಿನಿಧಿ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸಂಸತ್ತಿನಲ್ಲಿ ಸಂವಿಧಾನದ 75 ವರ್ಷದ ಸಂದರ್ಭದಲ್ಲಿ ವಿಶೇಷ ಚರ್ಚೆ ನಡೆಯುತ್ತಿದೆ. ಸಂವಿಧಾನದ ಮಹತ್ವವನ್ನು ಅರಿಯದ ಕಾಂಗ್ರೆಸ್ ಮತ್ತು ಬಿಜೆಪಿ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದನ್ನು ದೇಶದ ಜನ ಗಮನಿಸಿದ್ದಾರೆ. ಸಂವಿಧಾನವನ್ನು ಅರ್ಥ ಮಾಡಿಕೊಂಡು, ಮೂಲಭೂತ ತತ್ವಗಳನ್ನು ಅರಿಯಬೇಕಿದೆ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಸಂವಿಧಾನದ ನಿರ್ಮಾತ್ರುಗಳು ಪ್ರತಿಪಾದಿಸಿದ ಆಧಾರದಲ್ಲಿ 5 ಮೂಲಭೂತ ತತ್ವಗಳನ್ನು ಸಂವಿಧಾನವು ನಿರೂಪಿಸಿದೆ. ಪ್ರಜಾಪ್ರಭುತ್ವ, ಜಾತ್ಯಾತೀತತೆ, ಸಾಮಾಜಿಕ ನ್ಯಾಯ, ಒಕ್ಕೂಟ ತತ್ವ ಮತ್ತು ಸಮಾಜವಾದ ಇವುಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ದಾಳಿಯನ್ನು ನಾವು ತಡೆಗಟ್ಟಬೇಕಿದೆ ಎಂದು ಅವರು ಹೇಳಿದ್ದಾರೆ.
“ಪ್ರಜಾಪ್ರಭುತ್ವ ನಾಶವಾದರೆ ಅದರ ಮೊದಲ ದಾಳಿ ಬಡವರು, ದುರ್ಬಲರು, ಕಾರ್ಮಿಕರು, ದಲಿತರ ಮೇಲೆ ನಡೆಯುತ್ತದೆ. ಉದಾಹರಣೆಗೆ ಕಾರ್ಮಿಕ ಸಂಹಿತೆಗಳನ್ನು ಬಿಜೆಪಿ ತಂದಿದೆ. ಈ ಹಿಂದೆ ಕಾಂಗ್ರೆಸ್ ಕೂಡಾ ಜಾರಿಗೆ ಪ್ರಯತ್ನಿಸಿತ್ತು. ಈ ನೀತಿಗಳು ಸಂಘ ಕಟ್ಟುವ ಹಕ್ಕು, ಕೆಲಸದ ಅವಧಿ, ಗುತ್ತಿಗೆ ಪದ್ದತಿ, ಬೇಕೆಂದಾಗ ಕೆಲಸಕ್ಕೆ ತೆಗೆದುಕೊಳ್ಳುವುದು, ತೆಗೆದು ಹಾಕುವುದನ್ನು ಬೆಂಬಲಿಸುತ್ತದೆ. ಇಂತಹ ಕಾರ್ಮಿಕ ವಿರೋಧಿ ನೀತಿಗಳನ್ನು ಸಂಹಿತೆಗಳು ಹೇಳುತ್ತಿವೆ. ಇದ್ದಕ್ಕೆ ನಿಯಮಗಳನ್ನು ರೂಪಿಸಲು ಮುಂದಾಗಿದೆ. ಇವೆಲ್ಲವೂ ಪ್ರಜಾಪ್ರಬುತ್ಬದ ಮೌಲ್ಯಗಳಾಗಿವೆ, ಇವೆಲ್ಲ ನಾಶವಾದರೆ ಪ್ರಜಾಪ್ರಭುತ್ವದಕ್ಕೆ ದಕ್ಕೆಯಾಗುತ್ತದೆ” ಎಂದು ಅವರು ಹೇಳಿದ್ದಾರೆ.
“ಒಂದು ದೇಶ ಒಂದು ಚುನಾವಣೆ ಪ್ರಜಾಪ್ರಭುತ್ವ ನಾಶಮಾಡಿ ಫ್ಯಾಸಿಸಂ ಜಾರಿ ಮಾಡುವ ಹುನ್ನಾರವಾಗಿದೆ. ಇದು ಏಕ ವ್ಯಕ್ತಿಯ ಆಡಳಿತ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡಲಿದೆ. ಆರ್‌ಎಸ್‌ಎಸ್ ಫ್ಯಾಸಿಸಂನ್ನು ಬೆಂಬಲಿಸುತ್ತಿರುವ ಕಾರಣ ಈ ದಾಳಿ ನಡೆಸುತ್ತಿದೆ. ಇಂತಹ ದಾಳಿಗಳ ವಿರುದ್ದ ಹೋರಾಟಗಳನ್ನು ಸಂಘಟಿಸಿ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಿದೆ” ಎಂದು ಅವರು ಹೇಳಿದ್ದಾರೆ.
“ಜಾತ್ಯಾತೀತಯನ್ನು ನಾಶ ಮಾಡುವುದಕ್ಕಾಗಿ ಬಿಜೆಪಿ ಮತೀಯ ಕೋಮುಗಲಭೆಗಳನ್ನು ಹೆಚ್ಚಿಸುತ್ತಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ 1991ರ ಪೂಜಾ ಸಂರಕ್ಷಣಾ ಕಾಯ್ದೆಯು ದೇಶದಲ್ಲಿರುವ ಎಲ್ಲಾ ಪೂಜಾ ಸ್ಥಳಗಳನ್ನು 1947ರ ಆಗಸ್ಟ್ 15ರ ಸ್ಥಿತಿಯಲ್ಲಿ ಕಾಪಾಡಬೇಕೆಂದುನ್ನು ಎತ್ತಿ ಹಿಡಿದಿದೆ. ಆರ್‌ಎಸ್‌ಎಸ್ ಚಾರಿತ್ರಿಕ ತಪ್ಪುಗಳನ್ನು ಸರಿಪಡಿಸುವ ನೆಪದಲ್ಲಿ ಮಸೀದಿಗಳ ಕೆಳಗ ದೇವಸ್ಥಾನ ಇದೆ ಎಂದು ಗುಲ್ಲೆಬ್ಬಿಸಿ ಪೂಜಾಕಾಯ್ದೆಯನ್ನು ಉಲ್ಲಂಘಿಸುತ್ತದೆ. ಇದೇ ವಾದವನ್ನು ದಲಿತ ವಿಭಾಗಗಳು ಪ್ರತಿಪಾದಿಸಿದರೆ 3 ಸಾವಿರ ವರ್ಷಗಳಿಂದ ಅಸ್ಪೃಶ್ಯತೆ, ಜಾತಿ ತಾರತಮ್ಯವನ್ನು ಅನುಸರಿಸಿರುವ ಜಾತಿಗಳ ವಿರುದ್ಧ ಅಂತಹದ್ದೇ ದೌರ್ಜನ್ಯಗಳನ್ನು ನಡೆಸುವಂತಾಗಬಹುದು” ಎಂದು ಅವರು ಹೇಳಿದ್ದಾರೆ.
ಆದ್ದರಿಂದ ಚಾರಿತ್ರಿಕ ತಪ್ಪುಗಳನ್ನು ಸರಿಪಡಿಸುವ ಬದಲಿಗೆ ಅದರಿಂದ ಪಾಠಗಳನ್ನು ಕಲಿತು ಸಮಾನತೆಯ ಆಧಾರದಲ್ಲಿ ಜಾತ್ಯಾತೀತ ತತ್ವವನ್ನು ಅಳವಡಿಸಿಕೊಳ್ಳುವುದನ್ನು ಸಂವಿಧಾನ ಪ್ರತಿಪಾದಿಸುತ್ತದೆ. ಇದಕ್ಕಾಗಿ ನಾವು ಹೋರಾಟ ಮಾಡಬೇಕಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಟ್ರಾವೆಲ್ ಏಜೆನ್ಸಿ ವಂಚನೆ – ಮದೀನಾದಲ್ಲಿ ಪರದಾಡುತ್ತಿರುವ ಕರಾವಳಿಯ 160 ಉಮ್ರಾ ಯಾತ್ರಾರ್ಥಿಗಳು
ಟ್ರಾವೆಲ್ ಏಜೆನ್ಸಿ ವಂಚನೆ – ಮದೀನಾದಲ್ಲಿ ಪರದಾಡುತ್ತಿರುವ ಕರಾವಳಿಯ 160 ಉಮ್ರಾ ಯಾತ್ರಾರ್ಥಿಗಳು


