ಜಮ್ಮು ಕಾಶ್ಮೀರದ ಕೇಂದ್ರಾಡಳಿತ ಸ್ಥಾನಮಾನವು ತಾತ್ಕಾಲಿಕ ಹಂತವಾಗಿದ್ದು, ಅದರ ರಾಜ್ಯತ್ವವನ್ನು ಮರುಸ್ಥಾಪಿಸುವ ಭರವಸೆಯನ್ನು ಕೇಂದ್ರ ಸರ್ಕಾರ ಈಡೇರಿಸುತ್ತದೆ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಗುರುವಾರ ಭರವಸೆ ವ್ಯಕ್ತಪಡಿಸಿದ್ದಾರೆ. ಶೀಘ್ರವೆ ರಾಜ್ಯತ್ವ
“ನಾವು ಅಧಿಕಾರಕ್ಕೆ ಬಂದು ಎರಡು ತಿಂಗಳಾಗಿದೆ. ಕೇಂದ್ರಾಡಳಿತ ಸರ್ಕಾರ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಮಯ ಹಿಡಿಯಿತು. ನಾವು ಈ ಹಿಂದೆ ಕೂಡಾ ಸರ್ಕಾರ ರಚನೆ ಮಾಡಿದ್ದೇವೆ. ಆದರೆ ಅದಕ್ಕೂ ಪ್ರಸ್ತುತ ಕೇಂದ್ರಾಡಳಿತದ ಸ್ವರೂಪಕ್ಕೂ ಅಜಗಜಾಂತರ ವ್ಯತ್ಯಾಸವಿದೆ” ಎಂದು ಶೇರ್-ಇ-ಕಾಶ್ಮೀರ್ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಸೆಂಟರ್ (ಎಸ್‌ಕೆಐಸಿಸಿ) ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಶೀಘ್ರವೆ ರಾಜ್ಯತ್ವ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ನಾವು ನಮ್ಮ ಚುನಾವಣಾ ಭರವಸೆಗಳಿಗೆ ಬದ್ಧರಾಗಿದ್ದೇವೆ. ಕೆಲವು ಭರವಸೆಗಳನ್ನು ಜಾರಿಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ. ಜೊತೆಗೆ ಇತರ ಭರವಸೆಗಳ ಈಡೇರಿಕೆಗಳಿಗಾಗಿ ನಮಗೆ ವ್ಯವಸ್ಥೆಯಲ್ಲಿ ಬದಲಾವಣೆಯ ಅಗತ್ಯವಿದೆ. ಜಮ್ಮು ಕಾಶ್ಮೀರ ಕೇಂದ್ರಾಡಳಿತ ಆಗಿರುವುದು ತಾತ್ಕಾಲಿಕ ಹಂತ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
VIDEO | Srinagar: "We hope that Jammu and Kashmir remaining a Union Territory is just a temporary phase… We also hope that since people here have participated actively in elections, they should receive something in return. One of the major promises made to the people of Jammu… pic.twitter.com/5mP7LicNNF
— Press Trust of India (@PTI_News) January 2, 2025
“ನಾವು ಈಗ ನೀಡಿದ ಭರವಸೆಗಳನ್ನು ಈಡೇರಿಸಬಹುದೆಂಬ ನಿರೀಕ್ಷೆಯಲ್ಲಿದ್ದೇವೆ. ರಾಜ್ಯದ ಸ್ಥಾನಮಾನದ ಮರುಸ್ಥಾಪನೆ ನಮ್ಮ ಅತಿದೊಡ್ಡ ಭರವಸೆಯಾಗಿದೆ. ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ರಾಜ್ಯ ಸ್ಥಾನಮಾನವನ್ನು ಆದಷ್ಟು ಬೇಗ ಮರುಸ್ಥಾಪಿಸಬೇಕು ಎಂದು ಹೇಳಿದೆ. ಅಂದಿನಿಂದ ಒಂದು ವರ್ಷ ಕಳೆದಿದೆ, ಹಾಗಾಗಿ ಈ ಒಂದು ವರ್ಷ ಅದಕ್ಕೆ ಸಾಕಾಗುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಜನರ ಭಾವನೆಗಳನ್ನು ಗೌರವಿಸಬೇಕು ಅವರ ಆಶಯಗಳನ್ನು ಈಡೇರಿಸಬೇಕು ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ಇದು ಸಂವಾದವೇ ಹೊರತು, ಪತ್ರಿಕಾಗೋಷ್ಠಿಯಲ್ಲ ಎಂದು ಹೇಳಿದ್ದಾರೆ.
“ಸಾಮಾಜಿಕ ಮಾಧ್ಯಮದ ಊಹಾಪೋಹದಂತೆ ನಾವು ಯಾವುದೇ ದೊಡ್ಡ ಘೋಷಣೆಗಳನ್ನು ಮಾಡುತ್ತಿಲ್ಲ. ನಾವು ಕೇವಲ ಸಂವಾದವನ್ನು ಹೊಂದಲು ಬಯಸಿದ್ದು, ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ನಾವು ಪ್ರಯತ್ನಿಸುತ್ತೇವೆ. ವರ್ಷಕ್ಕೆ ಎರಡು ಬಾರಿ ಯಾವುದೇ ಅಜೆಂಡಾ ಇಲ್ಲದೆ ಈ ರೀತಿಯ ಸಂವಾದವನ್ನು ಹೊಂದಲು ಬಯಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕಾನೂನು ಬಾಹಿರವಾಗಿ ಪತ್ರಕರ್ತನ ಮನೆ ಕೆಡವಿದ ಪ್ರಕರಣ : ಮಾಜಿ ಜಿಲ್ಲಾಧಿಕಾರಿ ಸೇರಿ 26 ಮಂದಿಯ ವಿರುದ್ಧ ಎಫ್‌ಐಆರ್
ಕಾನೂನು ಬಾಹಿರವಾಗಿ ಪತ್ರಕರ್ತನ ಮನೆ ಕೆಡವಿದ ಪ್ರಕರಣ : ಮಾಜಿ ಜಿಲ್ಲಾಧಿಕಾರಿ ಸೇರಿ 26 ಮಂದಿಯ ವಿರುದ್ಧ ಎಫ್‌ಐಆರ್


