ತಾರತಮ್ಯ ಸೇರಿದಂತೆ ಜಾತಿಯ ಆಧಾರದ ಮೇಲೆ ಕೈದಿಗಳನ್ನು ಪ್ರತ್ಯೇಕಿಸುವುದನ್ನು ನಿಷೇಧಿಸಲು ಕೇಂದ್ರ ಗೃಹ ಸಚಿವಾಲಯವು ಜೈಲು ಕೈಪಿಡಿ ನಿಯಮಗಳನ್ನು ತಿದ್ದುಪಡಿ ಮಾಡಿದೆ ಎಂದು ವರದಿಯಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೋಮವಾರ ಪತ್ರ ಬರೆದಿರುವ ಸಚಿವಾಲಯ, ಕೈದಿಗಳ ವಿರುದ್ಧ ನಡೆಯುವ ತಾರತಮ್ಯವನ್ನು ಎದುರಿಸಲು 2016 ರ ಮಾದರಿ ಜೈಲು ಕೈಪಿಡಿ ಮತ್ತು 2023 ರ ಮಾದರಿ ಕಾರಾಗೃಹಗಳು ಮತ್ತು ತಿದ್ದುಪಡಿ ಸೇವೆಗಳ ಕಾಯಿದೆಗೆ ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದೆ. ಜೈಲುಗಳಲ್ಲಿ ಜಾತಿ ತಾರತಮ್ಯ
ಜೈಲುಗಳನ್ನು ನಿಯಂತ್ರಿಸುವ ಮೂಲ ತತ್ವಗಳಲ್ಲಿ ಏಕರೂಪತೆಯನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ಜನವರಿ 2016 ರಲ್ಲಿ ಮಾದರಿ ಕೈಪಿಡಿಯನ್ನು ಸಿದ್ಧಪಡಿಸಿತ್ತು. ಜೈಲಿನ ಆಡಳಿತವನ್ನು ನಿಯಂತ್ರಿಸುವ ಸ್ವಾತಂತ್ರ್ಯ ಪೂರ್ವದ ಕಾನೂನುಗಳನ್ನು ಬದಲಿಸಲು ಮೇ 2023 ರಲ್ಲಿ ಮಾದರಿ ಕಾಯಿದೆಯನ್ನು ಪರಿಚಯಿಸಲಾಯಿತು. ಜೈಲುಗಳಲ್ಲಿ ಜಾತಿ ತಾರತಮ್ಯ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಕಾರಾಗೃಹಗಳು ರಾಜ್ಯ ಪಟ್ಟಿಯಲ್ಲಿರುವುದರಿಂದ, ಅವುಗಳ ಆಡಳಿತ ಮತ್ತು ನಿರ್ವಹಣೆಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜವಾಬ್ದಾರಿಯಾಗಿದೆ.
ಅಕ್ಟೋಬರ್ 3 ರಂದು ಸುಪ್ರೀಂ ಕೋರ್ಟ್ ಜೈಲು ಕೈಪಿಡಿ ನಿಯಮಗಳನ್ನು ತಳ್ಳಿಹಾಕಿತ್ತು. ಅದಾಗಿ ಎರಡು ತಿಂಗಳ ನಂತರ ಕೇಂದ್ರ ಸರ್ಕಾರ ನಿಯಮಗಳಿಗೆ ಬದಲಾವಣೆಗಳನ್ನು ತಂದಿದೆ. ”ತುಳಿತಕ್ಕೊಳಗಾದ ಸಮುದಾಯಗಳ ಕೈದಿಗಳನ್ನು ಜೈಲುಗಳಲ್ಲಿ ಸಣ್ಣ ಕೆಲಸಗಳಿಗೆ ನಿಯೋಜಿಸುವ ಮೂಲಕ ಜೈಲುಗಳಲ್ಲಿ ಜಾತಿ ತಾರತಮ್ಯವನ್ನು ಉತ್ತೇಜಿಸಲಾಗುತ್ತಿದೆ” ಎಂದು ಸುಪ್ರಿಂಕೋರ್ಟ್ ಹೇಳಿತ್ತು.
ಕೇಂದ್ರ ಸರ್ಕಾರ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದ ಪತ್ರದಲ್ಲಿ, ಜೈಲು ಅಧಿಕಾರಿಗಳು ಯಾವುದೇ ತಾರತಮ್ಯ, ವರ್ಗೀಕರಣ ಮತ್ತು ಜಾತಿಯ ಆಧಾರದ ಮೇಲೆ ಕೈದಿಗಳನ್ನು ಪ್ರತ್ಯೇಕಿಸದಂತೆ ಕಟ್ಟುನಿಟ್ಟಾಗಿ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ.
“ಜೈಲುಗಳಲ್ಲಿ ಕೈದಿಗಳ ಜಾತಿಯ ಆಧಾರದ ಮೇಲೆ ಯಾವುದೇ ಕರ್ತವ್ಯ ಅಥವಾ ಕೆಲಸದ ಹಂಚಿಕೆಯಲ್ಲಿ ತಾರತಮ್ಯ ಇರಬಾರದು” ಎಂದು ಸಚಿವಾಲಯ ಹೇಳಿದೆ. ಸಚಿವಾಲಯವು ಜೈಲುಗಳೊಳಗಿನ ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕ್ ಅನ್ನು ಮ್ಯಾನುವಲ್ ಸ್ಕ್ಯಾವೆಂಜಿಂಗ್ ಅಥವಾ ಅಪಾಯಕಾರಿ ಶುಚಿಗೊಳಿಸುವಿಕೆಯನ್ನು ನಿರ್ಬಂಧಿಸಿದೆ.
ಇದನ್ನೂ ಓದಿ: ಭೀಮಾ ಕೋರೆಗಾಂವ್ ಪ್ರಕರಣದಿಂದ ಕೈಬಿಡುವಂತೆ ಬಾಂಬೆ ಹೈಕೋರ್ಟ್‌ಗೆ ಆನಂದ್ ತೇಲ್ತುಂಬ್ಡೆ ಅರ್ಜಿ
ಭೀಮಾ ಕೋರೆಗಾಂವ್ ಪ್ರಕರಣದಿಂದ ಕೈಬಿಡುವಂತೆ ಬಾಂಬೆ ಹೈಕೋರ್ಟ್‌ಗೆ ಆನಂದ್ ತೇಲ್ತುಂಬ್ಡೆ ಅರ್ಜಿ


